1.1 ಲಕ್ಷ ಕಿಮೀ ಕ್ರಮಿಸಿದ ಕೋಲಾರದ ಸೋಲಾರ್‌ ಕಾರು

By Suneel
|

ಕಾರಿಗೆ ಡಿಸೇಲ್‌ ಹಾಕಿಸಿ ಅಥವಾ ಬೈಕ್‌ಗೆ ಪೆಟ್ರೋಲ್‌ ಹಾಕಿಸಿ ದೆಹಲಿವರೆಗೆ ಹೇಗಪ್ಪಾ ಡ್ರೈವ್‌ ಮಾಡೋದು ಅನ್ನುವವರೇ ಹೆಚ್ಚಿರುವಾಗ, ಕೋಲಾರದ ಸಜ್ಜನ್‌ ಅಹಮ್ಮದ್‌ ರವರು ಸೋಲಾರ್‌ ಇಲೆಕ್ಟ್ರಿಕ್‌ ಕಾರಿನಿಂದ ದೆಹಲಿವರೆಗೆ ಪ್ರಯಾಣ ಬೆಳೆಸಿದ್ದಾರೆ. ಅಂದಹಾಗೆ ಅವರು ಹೋಗಿರುವುದು ಭಾರತದ ಅಂತರರಾಷ್ಟ್ರೀಯ ವಿಜ್ಞಾನ ಮೇಳದಲ್ಲಿ ಭಾಗವಹಿಸಲು. ಈ ಹಿಂದೆ ಈ ಕರ್ನಾಟಕದ ಹೆಮ್ಮೆಯ ಅಹಮ್ಮದ್‌ "ಅಬ್ದುಲ್‌ ಕಲಾಂ" ರಿಂದ 2006 ರಲ್ಲಿ ಪರಿಸರ ರಕ್ಷಣೆಗಾಗಿ ಕರ್ನಾಟಕ ಪ್ರಶಸ್ತಿ ಪಡೆದಿದ್ದರು.

ಓದಿರಿ:ಭಾರತದಲ್ಲಿ ಓಡಲಿದೆ ಸೋಲಾರ್ ರೈಲು

ಸೋಲಾರ್ ಇಲೆಕ್ಟ್ರಿಕ್‌ ಕಾರಿನಲ್ಲಿ 1.1 ಲಕ್ಷ ಪ್ರಯಾಣ ಕ್ರಮಿಸಿರುವ ಇವರ ಬಗ್ಗೆ ಕೇಳಿದ್ರೆ ಅವರ ಸಾಧನೆಗಳನ್ನು ಒಂದಿಷ್ಟು ತಿಳಿಬೇಕು ಎಂದು ಖಂಡಿತ ಅನಿಸಿರುತ್ತೆ. ಅದಕ್ಕಾಗಿ ಇವರ ಬಗ್ಗೆ ಗಿಜ್‌ಬಾಟ್‌ ಲೇಖನದಲ್ಲಿ ವಿಶೇಷ ಮಾಹಿತಿ ನೀಡಲಾಗಿದೆ.

ಭಾರತದ ಅಂತರರಾಷ್ಟ್ರೀಯ ವಿಜ್ಞಾನ ಮೇಳಕ್ಕೆ ಸೋಲಾರ್‌ ಕಾರು

ಭಾರತದ ಅಂತರರಾಷ್ಟ್ರೀಯ ವಿಜ್ಞಾನ ಮೇಳಕ್ಕೆ ಸೋಲಾರ್‌ ಕಾರು

64 ವರ್ಷದ ಹಿರಿಯರೊಬ್ಬರು ಬೆಂಗಳೂರಿನಿಂದ ದೆಹಲಿಗೆ ತಾವೇ ಅಭಿವೃದ್ದಿಗೊಳಿಸಿದ ಸೋಲಾರ್‌ ಕಾರಿನಿಂದ ಭಾರತದ ಅಂತರರಾಷ್ಟ್ರೀಯ ವಿಜ್ಞಾನ ಮೇಳಕ್ಕೆ ಬಂದಿದ್ದಾರೆ.

 ಸೋಲಾರ್ ಇಲೆಕ್ಟ್ರಿಕ್‌ ಕಾರು ಕ್ರಮಿಸಿದ ದೂರ

ಸೋಲಾರ್ ಇಲೆಕ್ಟ್ರಿಕ್‌ ಕಾರು ಕ್ರಮಿಸಿದ ದೂರ

ಒಟ್ಟಾರೆ ಸೋಲಾರ್‌ ಇಲೆಕ್ಟ್ರಿಕ್‌ ಕಾರಿನಲ್ಲಿ 64 ವರ್ಷದ ಹಿರಿಯರಾದ ಸೈಯದ್‌ ಸಜ್ಜನ್‌ ಅಹಮ್ಮದ್ ರವರು 30 ದಿನಗಳಕಾಲ 3000 ಕಿಮೀ ಕ್ರಮಿಸಿದ್ದಾರೆ.

ಸೈಯದ್ ಸಜ್ಜನ್ ಅಹಮ್ಮದ್

ಸೈಯದ್ ಸಜ್ಜನ್ ಅಹಮ್ಮದ್

ಇವರು ಬೆಂಗಳೂರಿನಿಂದ 70 ಕಿಮೀ ದೂರದಲ್ಲಿರುವ ಕೋಲಾರದವರಾಗಿದ್ದು, ದ್ವೀತೀಯ ಪಿಯುಸಿಗೆ ಕಾಲೇಜನ್ನು ತೊರೆದಿದ್ದರು. ಆದರೆ ನಂತರದಲ್ಲಿ ಹಣ್ಣಿನ ವ್ಯಾಪಾರ ಮಾಡಿಕೊಂಡಿದ್ದರು. ಸೋಲಾರ್‌ ಇಲೆಕ್ಟ್ರಿಕ್‌ ಪವರ್‌ ಕಾರು ಅಭಿವೃದ್ದಿಗೊಳಿಸಲು ಇಲೆಕ್ಟ್ರಾನಿಕ್‌ ರಿಪೇರಿ ಶಾಪ್‌ಅನ್ನು ತೆರೆದಿದ್ದಾರಂತೆ.

ಸಜ್ಜನ್‌ ಅಹಮ್ಮದ್‌ರವರ ಇಲೆಕ್ಟ್ರಿಕ್‌ ಕೆಲಸ

ಸಜ್ಜನ್‌ ಅಹಮ್ಮದ್‌ರವರ ಇಲೆಕ್ಟ್ರಿಕ್‌ ಕೆಲಸ

ಇಲೆಕ್ಟ್ರಾನಿಕ್‌ಗೂಡ್ಸ್‌, ಟ್ರ್ಯಾನ್ಸಿಸ್ಟರ್‌ಗಳು, ಟೇಪ್‌ ರೆಕಾರ್ಡರ್‌ಗಳು ಮತ್ತು ಟಿವಿ ಸೆಟ್ಟಿಂಗ್ಸ್ ಮತ್ತು ಆಂಟೆನಾಗಳ ಅಳವಡಿಸುವಿಕೆಯ ರಿಪೇರಿ ಪ್ರಾರಂಭಿಸಿದ್ದರು. ಆದರೆ ನಂತರದಲ್ಲಿ ಚಿಕ್ಕಂದಿನ ಕನಸು ಸಾಮಾಜಕ್ಕೆ ಎನಾದರೂ ಕೊಡುಗೆ ನೀಡುವ ಹಂಬಲದಿಂದ ಈಗ ಈ ಸೋಲಾರ್‌ ಕಾರು ಅಭಿವೃದ್ದಿಗೊಳಿಸಿದ್ದಾರೆ.

 ಅಹಮ್ಮದ್ ರವರು ಅಭಿವೃದ್ದಿ ಪಡಿಸಿದ ಇಲೆಕ್ಟ್ರಿಕ್‌ ಪವರ್‌ ವಾಹನಗಳು

ಅಹಮ್ಮದ್ ರವರು ಅಭಿವೃದ್ದಿ ಪಡಿಸಿದ ಇಲೆಕ್ಟ್ರಿಕ್‌ ಪವರ್‌ ವಾಹನಗಳು

ಅಹಮ್ಮದ್ ರವರು ದ್ವಿಚಕ್ರ ವಾಹನವನ್ನು ಇಲೆಕ್ಟ್ರಿಕ್‌ ಪವರ್‌ನಲ್ಲಿ ಚಾಲನೆ ಮಾಡುವಂತೆ ಮಾರ್ಪಡಿಸಿದರು. ನಂತರದಲ್ಲಿ ತ್ರಿಚಕ್ರ ವಾಹನವನ್ನು ಅದೇ ರೀತಿಯಲ್ಲಿ ಮಾರ್ಪಡಿಸಿದರು. ಈಗ ಸೋಲಾರ್ ಇಲೆಕ್ಟ್ರಿಕ್‌ ನಿಂದ ಕಾರು ಚಲಿಸುವಂತೆ ಮಾಡಿದ್ದಾರೆ.

 ಅಬ್ದುಲ್‌ ಕಲಾಂರಿಂದ ಪ್ರಶಸ್ತಿ ಪಡೆದಿದ್ದಾರೆ

ಅಬ್ದುಲ್‌ ಕಲಾಂರಿಂದ ಪ್ರಶಸ್ತಿ ಪಡೆದಿದ್ದಾರೆ

ಇವರ ಇನೋವೇಶನ್‌ನಿಂದ 2006 ರಲ್ಲಿ ಕರ್ನಾಟಕ ಸರ್ಕಾರದಿಂದ ಪರಿಸರ ಸಂರಕ್ಷಣೆಗಾಗಿ ಅಬ್ದುಲ್‌ ಕಲಾಂ ರಿಂದ ಪ್ರಶಸ್ತಿ ಪಡೆದಿದ್ದಾರೆ.

ಭಾರತದ ಅಂತರರಾಷ್ಟ್ರೀಯ ವಿಜ್ಞಾನ ಮೇಳ (IISF)

ಭಾರತದ ಅಂತರರಾಷ್ಟ್ರೀಯ ವಿಜ್ಞಾನ ಮೇಳ (IISF)

ಪ್ರಸ್ತುತದಲ್ಲಿ ಈ ತಿಂಗಳ 4-8 ವರೆಗೆ ದೆಹಲಿಯ ಐಐಟಿ ಕ್ಯಾಂಪಸ್‌ನಲ್ಲಿ ನೆಡೆಯುತ್ತಿರುವ ಭಾರತೀಯ ಅಂತರರಾಷ್ಟ್ರೀಯ ವಿಜ್ಞಾನ ಮೇಳದಲ್ಲಿ 5 ಸೋಲಾರ್‌ ಪ್ಯಾನೆಲ್‌ನಿಂದ ವ್ಯವಸ್ಥೆ ಗೊಳಿಸಲಾದ ಕಾರಿನಲ್ಲಿ ಭಾಗವಹಿಸಿದ್ದಾರೆ.

ಸಜ್ಜನ್‌ ಅಹಮ್ಮದ್ ಹೇಳಿದ್ದೇನು ?

ಸಜ್ಜನ್‌ ಅಹಮ್ಮದ್ ಹೇಳಿದ್ದೇನು ?

ಇವರು ತಮ್ಮ ಸೋದರ ಸಲೀಂ ಪಾಷಾನೊಂದಿಗೆ ಬೆಂಗಳೂರಿನ ರಾಜ ಭವನದಿಂದ ನವೆಂಬರ್‌ 1 ರಂದು ಈ ಸೋಲಾರ್ ಕಾರಿನಲ್ಲಿ ಪ್ರಯಾಣ ಆರಂಭಿಸಿ 1.1 ಲಕ್ಷ ಕಿಮೀ ಪ್ರಯಾಣ ಮಾಡಿ ದೆಹಲಿ ತಲುಪಿರುವ ಬಗ್ಗೆ ಹೇಳಿದ್ದಾರೆ.

 ಹರ್ಷ ವರ್ಧನ್‌ - ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ

ಹರ್ಷ ವರ್ಧನ್‌ - ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ

ದಿನಾಂಕ 8 ಸೋಮವಾರದಂದು ಸಜ್ಜನ್‌ ಅಹಮ್ಮದ್ ರವರು ಹರ್ಷ ವರ್ಧನ್‌ ರವರಿಗೆ ಸೋಲಾರ್‌ ಕಾರಿನ ಬಗ್ಗೆ ಮಾಹಿತಿ ನೀಡಿದ್ದಾರೆ.

ಅಹಮ್ಮದ್‌ರವರಿಗೆ ಸ್ಫೂರ್ತಿಯಾದ ಕಲಾಂ

ಅಹಮ್ಮದ್‌ರವರಿಗೆ ಸ್ಫೂರ್ತಿಯಾದ ಕಲಾಂ

ಅಹಮ್ಮದ್‌ ರವರು ಈಗ ರಾಮೇಶ್ವರಂಗೆ ಪ್ರಯಾಣ ಬೆಳೆಸುವ ಬಗ್ಗೆ ಹೇಳಿದ್ದಾರೆ. ಇವರಿಗೆ ಕಲಾಂ ರವರು ಎಲ್ಲರಿಗಿಂತ ನನಗೆ ಹೆಚ್ಚು ಸ್ಫೂರ್ತಿ ಎಂದು ಹೇಳಿದ್ದಾರೆ. ಈ ಕಾರಿನ ಬಗ್ಗೆ ಭಾರತದಾದ್ಯಂತ ಪ್ರಚಾರ ಮಾಡುವ ಬಗ್ಗೆ ಹೇಳಿದ್ದಾರೆ.

Best Mobiles in India

English summary
A 63-year-old man arrived here to participate in the first India International Science Fair (IISF) on Monday, using a self-developed solar electric-powered car to cover 3,000 km from Bangalore to Delhi.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X