Home
ಸುದ್ದಿಜಾಲ

ಭಾರತದಲ್ಲಿ ಟ್ರೆಂಡಿಂಗ್‌ನಲ್ಲಿರುವ ಟಾಪ್‌ 5 OTT ಆಪ್ಸ್‌ಗಳು!

ಮನರಂಜನೆಗೆ ಪ್ರಬಲ ಸಾಧನವಾಗಿದ್ದ ಟಿವಿ ಇಂದು ಮಹತ್ತರ ತಿರುವುಗಳನ್ನು ಪಡೆದಿದೆ. ಸದ್ಯ ಇಂಟರ್ನೆಟ್ ಆಧಾರಿತವಾಗಿ ಸ್ಮಾರ್ಟ್‌ಟಿವಿಗಳು ಕಾರ್ಯನಿರ್ವಹಿಸುವ ಸೌಲಭ್ಯಗಳನ್ನು ಹೊಂದಿವೆ. ಅವುಗಳಿಗೂ ಪೂರಕವಾಗಿ ಇಂದು ಹಲವು ವಿಡಿಯೊ ಸ್ಟ್ರೀಮಿಂಗ್ ಅಪ್ಲಿಕೇಶನ್‌ಗಳು(OTT) ಮನರಂಜನೆ ಒದಗಿಸುವ ತಾಣಗಳಾಗಿವೆ. ಹೊಸತನದ ಕಾರ್ಯಕ್ರಮ ಮಾದರಿಗಳನ್ನು ಪರಿಚಯಿಸುತ್ತ ಸಾಗಿರುವ ಈ ಆಪ್ಸ್‌ಗಳು ಭಾರತದಲ್ಲಿ ಗಟ್ಟಿಯಾಗಿ ಬೇರೂರುತ್ತಿವೆ.

ಓಟಿಟಿ-OTT

ಹೌದು, ದೇಶದಲ್ಲಿ ಓಟಿಟಿ-OTT ಅಪ್ಲಿಕೇಶನ್‌ಗಳು ಹೊಸ ಜಮಾನ ಹುಟ್ಟುಹಾಕಿವೆ. ಅವುಗಳಲ್ಲಿ ನೆಟ್‌ಫ್ಲಿಕ್ಸ್‌, ಅಮೆಜಾನ್ ಪ್ರೈಮ್ ವಿಡಿಯೊ, ಹಾಟ್‌ಸ್ಟಾರ್, ವೂಟ್, ಎಎಲ್‌ಟಿ ಬಾಲಾಜಿ ಸೇರಿದಂತೆ ಇನ್ನೂ ಅನೇಕ ಆಪ್ಸ್‌ಗಳು ಲೀಡಿಂಗ್‌ನಲ್ಲಿ ಕಾಣಿಸಿಕೊಂಡಿವೆ. ಈ ವಿಡಿಯೊ ಸ್ಟ್ರೀಮಿಂಗ್ ಆಪ್ಸ್‌ಗಳು ಇಂಟರ್ನೆಟ್ ಆಧಾರಿತವಾಗಿ ಕಾರ್ಯನಿರ್ವಹಿಸುತ್ತವೆ. ಚಂದಾದಾರರು ಈ ಆಪ್ಸ್‌ನಲ್ಲಿ ಸಿನಿಮಾ, ವೆಬ್‌ ಸೀರಿಸ್, ಕ್ರೀಡೆ, ಸಂಗೀತ ಸೇರಿದಂತೆ ಭಿನ್ನ ಬಗೆಯ ಕಾರ್ಯಕ್ರಮಗಳನ್ನು ವೀಕ್ಷಣೆ ಮಾಡಬಹುದಾಗಿದೆ.

ಭಾರತದಲ್ಲಿ ಯಾವ OTT ಅಪ್ಲಿಕೇಶನ್‌ ಟಾಪ್‌ನಲ್ಲಿದೆ?

ಭಾರತದಲ್ಲಿ ಯಾವ OTT ಅಪ್ಲಿಕೇಶನ್‌ ಟಾಪ್‌ನಲ್ಲಿದೆ?

ಪ್ರಸ್ತುತ ಭಾರತದಲ್ಲಿ OTT ಅಪ್ಲಿಕೇಶನ್‌ಗಳು ಸಾಕಷ್ಟು ಜನಪ್ರಿಯತೆ ಪಡೆದುಕೊಳ್ಳುತ್ತಿವೆ. ಅವುಗಳಲ್ಲಿ ಬಳಕೆದಾರರಲ್ಲಿ ಥಟ್‌ ಅಂತಾ ಕಾಣಿಸಿಕೊಳ್ಳುವುದು ನೆಟ್‌ಫ್ಲಿಕ್ಸ್‌ ಹಾಗೂ ಅಮೆಜಾನ್ ಪ್ರೈಮ್‌ ವಿಡಿಯೊ ಆಪ್ಸ್‌ಗಳು. ಅವುಗಳನ್ನು ಹೊರತಪಡಿಸಿ ಇನ್ನೂ ಅನೇಕ ವಿಡಿಯೊ ಸ್ಟ್ರೀಮಿಂಗ್ ಅಪ್ಲಿಕೇಶನ್‌ಗಳು ಇವೆ. ಅವುಗಳು ಸಹ ಜನರನ್ನು ಸೆಳೆಯಲು ಹಲವು ಮನರಂಜನೆಯ ಪ್ರೋಗ್ರಾಂ ರೂಪಿಸುತ್ತಿವೆ. ಸದ್ಯ ಮುಂಚೂಣಿಯಲ್ಲಿ ಕಾಣಿಸಿಕೊಂಡಿರುವ ಟಾಪ್‌ OTT ಅಪ್ಲಿಕೇಶನ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ. ಮುಂದೆ ಓದಿರಿ.

ನೆಟ್‌ಫ್ಲಿಕ್ಸ್‌ OTT ಆಪ್‌

ನೆಟ್‌ಫ್ಲಿಕ್ಸ್‌ OTT ಆಪ್‌

ನೆಟ್‌ಫ್ಲಿಕ್ಸ್‌ ತಾಣ ನಿಮಗೆಲ್ಲಾ ತಿಳಿದಿರುವ ಪ್ರಮುಖ ಓಟಿಟಿ ಅಪ್ಲಿಕೇಶನ್ ಆಗಿದೆ. ಈ ತಾಣದಲ್ಲಿ ಚಲನಚಿತ್ರಗಳು ಮತ್ತು ವೆಬ್‌ ಸರಣಿಗಳು, ಸೇಕ್ರೆಡ್ ಗೇಮ್ಸ್, ಸ್ಟ್ರೇಂಜರ್ ಥಿಂಗ್ಸ್, ಡೇರ್‌ಡೆವಿಲ್, ಪನಿಷರ್, ಆರೆಂಜ್ ಈಸ್ ದಿ ನ್ಯೂ ಬ್ಲ್ಯಾಕ್, ನಾರ್ಕೋಸ್, ಹೌಸ್ ಆಫ್ ಕಾರ್ಡ್ಸ್, ಕಾರ್ಯಕ್ರಮಗಳು ಹೆಚ್ಚು ಅಟ್ರ್ಯಾಕ್ಟ್ ಆಗಿವೆ. ಈ ಆಪ್‌ ನಾಲ್ಕು ವಿಭಿನ್ನ ಚಂದಾದಾರಿಕೆ ಯೋಜನೆಗಳನ್ನು ಹೊಂದಿದ್ದು, ಒಂದು ಸಮಯದಲ್ಲಿ 4 ಡಿವೈಸ್‌ಗಳ ಸ್ಕ್ರೀನ್‌ಗಳಲ್ಲಿ ಈ ಆಪ್ ಬಳಸುವ ಚಂದಾದಾರಿಕೆಯ ಪ್ಲ್ಯಾನ್ ಸಹ ಇದೆ.

ಅಮೆಜಾನ್ ಪ್ರೈಮ್‌ ವಿಡಿಯೊ

ಅಮೆಜಾನ್ ಪ್ರೈಮ್‌ ವಿಡಿಯೊ

ನೆಟ್‌ಫ್ಲಿಕ್ಸ್‌ಗೆ ನೇರ ಪೈಪೋಟಿ ನೀಡುತ್ತಿರುವ ಪ್ರಮುಖ ಓಟಿಟಿ ಆಪ್ ಅಂದ್ರೇ ಅದು ಅಮೆಜಾನ್ ಪ್ರೈಮ್‌ ವಿಡಿಯೊ ಆಗಿದೆ. ಈ ತಾಣದಲ್ಲಿ ಬಳಕೆದಾರರು ಚಲನಚಿತ್ರಗಳ ಜೊತೆಗೆ ಭಿನ್ನ ಕಾರ್ಯಕ್ರಮಗಳನ್ನು ವೀಕ್ಷಣೆ ಮಾಡಬಹುದು. ದಿ ಮ್ಯಾನ್ ಇನ್ ದಿ ಹೈ ಕ್ಯಾಸಲ್, ಮೇಡ್ ಇನ್ ಹೆವನ್ ಹಾಗೂ ಹಾಸ್ಯ ಕಾರ್ಯಕ್ರಮಗಳು ಈ ಆಪ್‌ನಲ್ಲಿ ಸೇರಿವೆ. ಅಮೆಜಾನ್ ಪ್ರೈಮ್ ವಿಡಿಯೊ ಎರಡು ಚಂದಾದಾರಿಕೆ ಆಯ್ಕೆಗಳನ್ನು ಹೊಂದಿದ್ದು, ಮಾಸಿಕ ಮತ್ತು ವಾರ್ಷಿಕ.

ಹಾಟ್‌ಸ್ಟಾರ್ OTT ಆಪ್‌

ಹಾಟ್‌ಸ್ಟಾರ್ OTT ಆಪ್‌

ಕ್ರೀಡಾ ಅಭಿಮಾನಿಗಳಿಂಗತೂ ಹಾಟ್‌ಸ್ಟಾರ್ ಹಾಟ್‌ ಫೇವರೇಟ್ ಆಗಿದೆ. ಯಾಕಂದ್ರೆ ಈ ಆಪ್ ಕ್ರಿಕೆಟ್, ಐಪಿಎಲ್ ಮ್ಯಾಚ್‌ ಸೇರಿದಂತೆ ಇತರೆ ಕ್ರೀಡೆಗಳ ನೇರ ಪ್ರಸಾರಗಳನ್ನು ಪ್ರದರ್ಶನ ಮಾಡುತ್ತದೆ. ಜೊತೆಗೆ ಸಿನಿಮಾ ಹಾಗೂ ವಿಶೇಷ ಕಾರ್ಯಕ್ರಮಗಳ ಪ್ರಸಾರದ ಆಯ್ಕೆಗಳನ್ನು ಈ ತಾಣವು ಹೊಂದಿದೆ. ಇನ್ನು ಹಾಟ್‌ಸ್ಟಾರ್ ಭಿನ್ನ ಚಂದಾದಾರಿಕೆಯ ಆಯ್ಕೆಗಳನ್ನು ಒಳಗೊಂಡಿದೆ.

ALTಬಾಲಾಜಿ OTT ಆಪ್‌

ALTಬಾಲಾಜಿ OTT ಆಪ್‌

ALTಬಾಲಾಜಿ OTT ಆಪ್‌ ಜನಪ್ರಿಯ ಬಾಲಾಜಿ ಟೆಲಿಫಿಲ್ಮ್ ಸಂಸ್ಥೆಯ ಅಂಗಸಂಸ್ಥೆಯಾಗಿದೆ. ಈ ಆಪ್‌ನಲ್ಲಿ ಬಳಕೆದಾರರು ಚಲನಚಿತ್ರಗಳು, ಭಿನ್ನ ಪ್ರದರ್ಶನಗಳು ಮತ್ತು ಮಕ್ಕಳ ವಿಶೇಷತೆಯ ಕಾರ್ಯಕ್ರಮಗಳನ್ನು ವೀಕ್ಷಿಸಬಹುದಾಗಿದೆ. ಈ ಸಂಸ್ಥೆಯು ಹೆಚ್ಚಿನ ಕಂಟೆಂಟ್ ಸಂಗ್ರಹಗಳನ್ನು ಹೊಂದಿದೆ. ಇನ್ನು ಈ ಆಪ್ ಎರಡು ಪ್ರಮುಖ ಚಂದಾದಾರಿಕೆಯ ಆಯ್ಕೆಗಳನ್ನು ಹೊಂದಿದ್ದು, ಅವುಗಳು ಮಾಸಿಕ ಮತ್ತು ವಾರ್ಷಿಕ ಆಗಿವೆ.

Best Mobiles in India

English summary
In India the most dominant ones are still Netflix and Amazon Prime.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+