ನಿಮ್ಮ ಆಫೀಸಿನಲ್ಲಿ ನಿರ್ದಿಷ್ಟ ವೆಬ್ ಪುಟಗಳನ್ನು ಅನ್ ಬ್ಲಾಕ್ ಮಾಡಲು ಐದು ಸರಳ ತಂತ್ರಗಳು.
ಅಂತರ್ಜಾಲವು ಅಗಾಧ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಉಣಬಡಿಸುತ್ತದೆ. ವಿಜ್ಞಾನ, ಇತಿಹಾಸ, ಗಣಿತ, ಪ್ರಸ್ತುತ ವಿಚಾರಗಳು, ಕ್ರೀಡೆ, ಸಂಗೀತ ಮತ್ತು ಇನ್ನೂ ಅನೇಕ ವಿಷಯಗಳ ಗಣಿ ಅಂತರ್ಜಾಲ. ನಿಮಗೆ ಬೇಕಾದ ಮಾಹಿತಿಯೆಲ್ಲವೂ ಇಲ್ಲಿ ಲಭ್ಯ.

ಬಹುತೇಕ ಮಾಹಿತಿಯು ಕಾನೂನುಬದ್ಧವಾಗಿಯೇ ಇರುತ್ತದೆಯಾದರೂ, ಕೆಲವೊಂದು ಮಾಹಿತಿಯನ್ನು ನೀವು ನಿಮ್ಮ ಕೆಲಸದ ಜಾಗದಲ್ಲಿ ಅಥವಾ ಶಾಲೆ ಕಾಲೇಜುಗಳಲ್ಲಿ ಅಂತರ್ಜಾಲದಲ್ಲಿ ಪಡೆಯುವುದು ತಪ್ಪು. ಇದರ ಪರಿಣಾಮವಾಗಿ ಕೆಲವೊಂದು ವೆಬ್ ಪುಟಗಳನ್ನು ಬ್ಲಾಕ್ ಮಾಡಲಾಗಿರುತ್ತದೆ.
ಓದಿರಿ: ಗ್ರೇಟ್ ಸೆಲ್ಫಿಗಳ ಎಡಿಟ್'ಗಾಗಿ ಟಾಪ್ 5 ಗ್ರೇಟ್ ಎಡಿಟಿಂಗ್ ಆಪ್‌ಗಳು ಇದೇ ಮೊದಲು!
ಈ ಲೇಖನದಲ್ಲಿ, ಬ್ಲಾಕ್ ಆದ ವೆಬ್ ಪುಟಗಳನ್ನು ತೆರೆಯಲು ಕೆಲವು ಸರಳ ತಂತ್ರಗಳನ್ನು ವಿವರಿಸಲಾಗಿದೆ. ಒಮ್ಮೆ ಓದಿ ನೋಡಿ.
ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅಂತರ್ಜಾಲ ಆಯ್ಕೆಗಳನ್ನು ಬದಲಿಸಿ.
ನೀವೇನಾದರೂ "ಈ ಖಾತೆಯಲ್ಲಿ ಕೆಲವು ಮಿತಿಗಳಿರುವ ಕಾರಣದಿಂದ" ಎನ್ನುವಂತಹ ಎರರ್ ಮೆಸೇಜನ್ನು ನೋಡಿದರೆ ಹೆಚ್ಚೇನನ್ನೂ ಮಾಡಲು ಸಾಧ್ಯವಿಲ್ಲ. ಆದರೆ ಈ ರೀತಿಯ ಮೆಸೇಜ್ ಬರದೇ ಇದ್ದಲ್ಲಿ, ನಿಮ್ಮ ಕಂಪ್ಯೂಟರಿನಲ್ಲಿರುವ ಅಂತರ್ಜಾಲದ ಆಯ್ಕೆಗಳನ್ನು ಬದಲಿಸಿಕೊಂಡು ವೆಬ್ ಪುಟಗಳನ್ನು ಅನ್ ಬ್ಲಾಕ್ ಮಾಡಬಹುದು.
ಇದನ್ನು ಮಾಡಲು ಕಂಟ್ರೋಲ್ ಪ್ಯಾನೆಲ್ಲಿಗೆ ಹೋಗಿ > ಸೆಕ್ಯುರಿಟಿ > ರಿಸ್ಟ್ರಿಕ್ಟೆಡ್ ಸೈಟ್ಸ್ ಗೆ ಹೋಗಿ ಸೈಟ್ಸ್ ಬಟನ್ ಮೇಲೆ ಕ್ಲಿಕ್ಕಿಸಿ. ನೀವು ತೆರೆಯಲು ಪ್ರಯತ್ನಿಸುತ್ತಿರುವ ವೆಬ್ ಪುಟದ ಯು.ಆರ್.ಎಲ್ ಅಲ್ಲಿದ್ದರೆ ಅದನ್ನು ತೆಗೆದುಹಾಕಿ. ಈಗ ವೆಬ್ ಪುಟ ತೆರೆದುಕೊಳ್ಳುತ್ತದೆ.

ಹೆಚ್.ಟಿ.ಟಿ.ಪಿಯನ್ನು ಹೆಚ್.ಟಿ.ಟಿ.ಪಿ.ಎಸ್ ಎಂದು ಬದಲಿಸಿ.
ನೀವು ತೆರೆಯಲು ಪ್ರಯತ್ನಿಸುತ್ತಿರುವ ವೆಬ್ ಪುಟದ ಯು.ಆರ್.ಎಲ್ ಅನ್ನು ಕಾಪಿ ಮಾಡಿಕೊಳ್ಳಿ, ಅದರಲ್ಲಿ ಹೆಚ್.ಟಿ.ಟಿ.ಪಿ ನಂತರ ಎಸ್ ಇದೆಯಾ ನೋಡಿ (ಹೆಚ್.ಟಿ.ಟಿ.ಪಿ.ಎಸ್), ಇದ್ದರೆ, ಅದನ್ನು ತೆಗೆದುಹಾಕಿ ವೆಬ್ ಪುಟ ತೆರೆಯಲು ಪ್ರಯತ್ನಿಸಿ. ಎಸ್ ಇಲ್ಲದೇ ಹೋದರೆ ಹೆಚ್.ಟಿ.ಟಿ.ಪಿ.ಎಸ್ ಎಂದು ಬದಲಿಸಿ ವೆಬ್ ಪುಟ ತೆರೆಯಲು ಪ್ರಯತ್ನಿಸಿ. ಸಾಮಾನ್ಯವಾಗಿ ಸಮಸ್ಯೆ ಪರಿಹಾರವಾಗುತ್ತದೆ.
ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪೋರ್ಟಬಲ್ ಪ್ರಾಕ್ಸಿ ಸರ್ವರ್ ಬಳಸಿ.
ನೆಟ್ ವರ್ಕ್ ಅಡ್ಮಿನ್ ಅಥವಾ ಐ.ಎಸ್.ಪಿ ಹಾಕಿರುವ ಅಡೆತಡೆಗಳನ್ನು ನಿವಾರಿಸಲು ಪೋರ್ಟಬಲ್ ಪ್ರಾಕ್ಸಿ ಸರ್ವರ್ ಅನ್ನು ಬಳಸಿ. ಇದು ಅಡೆತಡೆಗಳನ್ನು ಬೈಪಾಸ್ ಮಾಡಿ ವೆಬ್ ಪುಟಗಳನ್ನು ತೆರೆಯುತ್ತದೆ. ಪ್ರಾಕ್ಸಿ ಬ್ರೌಸರ್ ಗೆ ಭೇಟಿ ಕೊಟ್ಟು ವೆಬ್ ಪುಟದ ಯು.ಆರ್.ಎಲ್ ಹಾಕಿದರೆ ಆಯಿತು.

ಗೂಗಲ್ ಟ್ರಾನ್ಸ್ಲೇಟ್ ಬಳಸಿ.
ಗೂಗಲ್ ಟ್ರಾನ್ಸ್ಲೇಟ್ ತನ್ನದೇ ಸರ್ವರುಗಳನ್ನು ಬಳಸಿಕೊಂಡು ನಿಮಗೆ ಬೇಕಾದ ಮಾಹಿತಿಯನ್ನು ನೀಡುತ್ತದೆ. ವೆಬ್ ಪುಟದ ಭಾಷೆಯ ಜೊತೆಗೆ ಮತ್ತೊಂದು ಭಾಷೆಯನ್ನು ನೀವು ಸೇರಿಸಿದರೆ ಆಯಿತು. ನಂತರ ನಿಮಗೆ ಬೇಕಾದ ವೆಬ್ ಪುಟ ತೆರೆಯಲು ಪ್ರಯತ್ನಿಸಿ.
ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಿ.ಪಿ.ಎನ್ ಬಳಸಿ.
ಬ್ಲಾಕ್ ಆಗಿರುವ ಪುಟಗಳನ್ನು ತೆರೆಯಲು ವಿ.ಪಿ.ಎನ್ ಅನ್ನು ಕೂಡ ಬಳಸಬಹುದು. ವಿ.ಪಿ.ಎನ್ ಮೂಲಕ ನೀವು ಬೇರೆ ದೇಶದ ಅಥವಾ ಬೇರೆ ಪ್ರದೇಶದ ಸರ್ವರುಗಳ ಜೊತೆಗೆ ಸಂಪರ್ಕ ಸಾಧಿಸಬಹುದು, ಬ್ಲಾಕ್ ಆದ ವೆಬ್ ಪುಟಗಳನ್ನು ತೆರೆಯಬಹುದು. ಇಲ್ಲೊಂದು ತೊಂದರೆಯೆಂದರೆ ವಿ.ಪಿ.ಎನ್ ಬಳಸುವಾಗ ನಿಮ್ಮ ಅಂತರ್ಜಾಲ ವೇಗ ಕಡಿಮೆಯಾಗಬಹುದು.
ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ


Click it and Unblock the Notifications








