ಚಾಲಕ ರಹಿತ ಸೆಲ್ಫ್ ಡ್ರೈವಿಂಗ್ ಕಾರು ವಿಶೇಷತೆಗಳೇನು?

By Shwetha
|

ಸೆನ್ಸಾರ್ ಮತ್ತು ಕಂಪ್ಯೂಟಿಂಗ್ ಶಕ್ತಿಯನ್ನು ಬಳಸಿಕೊಂಡು ಕ್ಯಾಲಿಫೋರ್ನಿಯಾ ಟ್ರಾಫಿಕ್‌ನಲ್ಲಿ ಸಂಚರಿಸುವ ಸೆಲ್ಫ್ ಡ್ರೈವಿಂಗ್ ಕಾರು ಭಾರತಕ್ಕೆ ಸದ್ಯದಲ್ಲೇ ಬರಲಿದೆ ಎಂಬುದು ವದಂತಿಗಳಿಂದ ತಿಳಿದು ಬಂದಿರುವ ಅಂಶವಾಗಿದೆ. ಈ ಕಾರು ಚಾಲಕ ರಹಿತನಾಗಿದ್ದು, ಹೊಗೆಯುಗುಳುವುದಿಲ್ಲ ಮತ್ತು ಪರಿಸರ ಸ್ನೇಹಿಯಾಗಿದೆ ಎಂಬುದು ಗೂಗಲ್ ಮಾತು.

ಓದಿರಿ: ಹಾಟ್ ಆಫರ್: ದುಬಾರಿ ಫೋನ್‌ಗಳ ಮೇಲೆ ವಿನಿಮಯ ಕೊಡುಗೆ

ಇಂದಿನ ಲೇಖನದಲ್ಲಿ ಈ ಕಾರುಗಳ ಕುರಿತಾದ ಅತಿ ವಿಶೇಷ ವೈಶಿಷ್ಟ್ಯಗಳನ್ನು ನಾವು ನಿಮಗೆ ತಿಳಿಸಲಿದ್ದು ಇದು ಹೆಚ್ಚು ಆಸಕ್ತಿಕರ ಎಂದೆನಿಸಿದೆ.

ಅಪಘಾತಗಳು

ಅಪಘಾತಗಳು

2009 ರಲ್ಲಿ ಈ ಕಾರು 4 ಬಾರಿ ಅಪಘಾತಕ್ಕೀಡಾಗಿದ್ದು ಆರು ವರ್ಷಗಳಲ್ಲಿ ಇದು 1 ಮಿಲಿಯನ್ ಮೈಲುಗಳಷ್ಟು ಸಂಚರಿಸಿದೆ. 48 ಕಾರುಗಳಿಗೆ ಪರವಾನಿಗೆಯನ್ನು ನೀಡಲಾಗಿತ್ತು.

ಕಂಪೆನಿಗಳು

ಕಂಪೆನಿಗಳು

ಸಿಲಿಕಾನ್ ವಾಲ್ಲಿಯ ಬಿಲಿಯನೇರ್‌ಗಳು ಈ ಕಾರನ್ನು ಚಲಾಯಿಸುತ್ತಿದ್ದು ಗೂಗಲ್ ಬೇರೆ ಬೇರೆ ಕಾರು ತಯಾರಿಕಾ ಕಂಪೆನಿಗಳಿಗೆ ಸೆಲ್ಫ್ ಡ್ರೈವಿಂಗ್ ಕಾರನ್ನು ಉತ್ಪಾದಿಸಲು ಅನುಮತಿಯನ್ನು ನೀಡಿದೆ. ತೆಲ್ಸಾ ಮೋಟಾರ್ಸ್ 12 ವಾಹನಗಳನ್ನು ಹೊಂದಿದೆ. ಆಡಿ, ಮರ್ಸಿಡಸ್, ಬೆಂಜ್ ಮತ್ತು ನಿಸಾನ್ ಮೂರು ವಾಹನಗಳನ್ನು ಹೊಂದಿದೆ.

ಮನುಷ್ಯರು

ಮನುಷ್ಯರು

ಇನ್ನು ಕಾರಿನ ಟೆಸ್ಟಿಂಗ್ ಸಂದರ್ಭದಲ್ಲಿ 255 ಜನರಿಗೆ ಹಿಂಭಾಗದಲ್ಲಿ ಕುಳಿತುಕೊಳ್ಳುವ ಅವಕಾಶವನ್ನು ಕಂಪೆನಿ ಕಲ್ಪಸಿದೆ. ಆಡಿ 30 ಪರವಾನಗಿಯುಳ್ಳ ಚಾಲಕರನ್ನು ಹೊಂದಿದೆ.

ಚಾಲನೆ

ಚಾಲನೆ

ಆರು ವರ್ಷಗಳಿಂದ 700,000 ಮೈಲುಗಳನ್ನು ಈ ಕಾರು ಕ್ರಮಿಸಿದ್ದು, ಫ್ರಿವೇ ಮತ್ತು ನಗರ ರಸ್ತೆಗಳಲ್ಲಿ ಈ ಕಾರು ಸಂಚರಿಸಿದೆ.

ಬೇರೆ ದೇಶಗಳಿಗೂ ಕಾರು

ಬೇರೆ ದೇಶಗಳಿಗೂ ಕಾರು

ಗೂಗಲ್‌ನ ಸೆಲ್ಫ್ ಡ್ರೈವಿಂಗ್ ಕಾರು ಬೇರೆ ದೇಶಗಳಿಗೂ ಕಾಲಿಡಲಿದ್ದು ಇದರಿಂದ ಅಪಘಾತದ ಪ್ರಮಾಣ ತಗ್ಗಲಿದೆ ಅಂತೆಯೇ ಪರಿಸರಕ್ಕೆ ಉಂಟಾಗುವ ಹಾನಿ ಕೂಡ ನಿಯಂತ್ರಣವಾಗಲಿದೆ.

Best Mobiles in India

English summary
A small fleet of self-driving cars is maneuvering through traffic in California using an array of sensors and computing power. Drivers are required to be along for the ride, but much of the time, they keep their hands off the steering wheel and brake and gas pedals.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X