Subscribe to Gizbot

ಸಣ್ಣ ಪೋರ ಅಯಾನ್‌ನ ಹೆಮ್ಮೆಯ ಸಾಧನೆ

Posted By:

ಇಂಗ್ಲೆಂಡ್‌ನ ಬರ್ಮಿಂಗ್ ಹ್ಯಾಮ್ ಇಂಗ್ಲೆಂಡ್ ಕಾನ್ಫರೆನ್ಸ್ ಕೇಂದ್ರಕ್ಕೆ ಭೇಟಿ ಇತ್ತಾಗ ಅಯಾನ್ ಕುರೇಶಿಗೆ ಬರೇ ಐದು ವರ್ಷಗಳು. ಮೈಕ್ರೋಸಾಫ್ಟ್ ವಿಂಡೋಸ್ ಆಪರೇಟಿಂಗ್ ಸಿಸ್ಟಮ್‌ ಅನ್ನು ಇನ್‌ಸ್ಟಾಲ್ ಮಾಡಲು ಹಾಗೂ ಕಾನ್ಫಿಗರ್ ಮಾಡಲು ಆತ ಅರ್ಹನಾಗಿದ್ದ.

ಮೈಕ್ರೋಸಾಫ್ಟ್ ಪ್ರಮಾಣೀಕರಿಸಿದ ವೃತ್ತಿಪರರಲ್ಲಿ ಅಯಾನ್ ಕುರೇಶಿ ತುಂಬಾ ಸಣ್ಣವನಾಗಿದ್ದಾನೆ. ಮೈಕ್ರೋಸಾಫ್ಟ್‌ನ ಬಿಟ್‌ಲಾಕರ್ ಎನ್‌ಕ್ರಿಪ್ಶನ್ ಸಾಫ್ಟ್‌ವೇರ್ ಅನ್ನು ಬಳಸಿಕೊಂಡು ರಿಮೂವೇಬಲ್ ಡ್ರೈವ್ ಅನ್ನು ಎನ್‌ಕ್ರಿಪ್ಟ್ ಮಾಡುವುದು ಅಥವಾ ಇಂಟರ್ನೆಟ್ ಎಕ್ಸ್‌ಪ್ಲೋರರ್ ಬಗ್ಸ್‌ಗಳನ್ನು ಟ್ರಬಲ್ ಶೂಟ್ ಮಾಡುವಲ್ಲಿ ಈತ ನಿಸ್ಸೀಮನಾಗಿದ್ದಾನೆ.

ಐದರ ಹರೆಯದಲ್ಲೇ ಕಂಪ್ಯೂಟರ್ ನಿಷ್ಣಾತನೀತ

ಇದನ್ನೂ ಓದಿ: ಹೊಚ್ಚ ಹೊಸ ರೆಡ್ಮೀ ನೋಟ್ ಫ್ಯಾಬ್ಲೆಟ್‌ನೊಂದಿಗೆ ಅತ್ಯುತ್ತಮ ಏಕ್ಸಸರೀಸ್

ಸಪ್ಟೆಂಬರ್‌ನಂದು 6 ವರ್ಷಕ್ಕೆ ಕಾಲಿರಿಸಿರುವ ಅಯಾನ್, ಮೂರು ವರ್ಷಗಳ ಹಿಂದೆಯೇ ಕಂಪ್ಯೂಟರ್ ಆಟದಲ್ಲಿ ಮಗ್ನನಾಗಿದ್ದ. ಅಯಾನ್‌ನ ತಂದೆ ಅಸೀಮ್ ಕುರೇಶಿ ಐಟಿ ವೃತ್ತಿಪರರಾಗಿದ್ದು ತಮ್ಮ ಮಗನ ಸಾಧನೆಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. "ನಾನು ಕಂಪ್ಯೂಟರ್‌ನಲ್ಲಿ ಕೆಲಸ ಮಾಡುತ್ತಿರುವಾಗ ಯಾವಾಗಲೂ ಅವನು ನನ್ನ ಬಳಿಯೇ ಕುಳಿತಿರುತ್ತಿದ್ದ ನನ್ನನ್ನು ಜಾಗರೂಕತೆಯಿಂದ ವೀಕ್ಷಿಸುತ್ತಿದ್ದ" ಎಂಬುದು ಅಸೀಮ್ ಹೇಳಿಕೆಯಾಗಿದೆ.

ಮಗನಿಗಾಗಿ ಅವರು ಸಣ್ಣ ಕಂಪ್ಯೂಟರ್ ಲ್ಯಾಬ್ ಅನ್ನು ನಿರ್ಮಿಸಿದ್ದು ತನ್ನ ಹೆಚ್ಚಿನ ಸಮಯವನ್ನು ಇಲ್ಲೇ ಕಳೆಯುತ್ತಿದ್ದ. ಇವನ ವಯಸ್ಸಿನ ಮಕ್ಕಳು ವೀಡಿಯೊ ಗೇಮ್, ಟಿವಿ ನೋಡುವುದು ಮೊದಲಾದ ಚಟುವಟಿಕೆಗಳಲ್ಲಿ ತಲ್ಲೀನರಾಗಿದ್ದರೆ ಅಯಾನ್ ಕಂಪ್ಯೂಟರ್‌ನಲ್ಲಿ ತನ್ನ ಪ್ರತಿಭೆಯನ್ನು ಒರೆಗೆ ಹಚ್ಚುತ್ತಿದ್ದ. ಅಯಾನ್ ಅಷ್ಟು ಪ್ರತಿಭಾವಂತನಾಗಿದ್ದ ಎಂಬುದು ಅಸೀಮ್ ಮಾತು.

ಬರಿಯ ಕಂಪ್ಯೂಟರ್ ಜ್ಞಾನವಿಲ್ಲದೆ ಶಾಲೆಯ ಕಲಿಕೆಯ ಕಡೆಗೂ ಅಯಾನ್ ಗಮನ ಹರಿಸಬೇಕಾದ ಸಮಯ ಇದಾಗಿದೆ. ಆದರೂ ಕಂಪ್ಯೂಟರ್ ಸಾಧನೆಯಲ್ಲಿ ಈ ಪುಟ್ಟ ಬಾಲಕ ಮಾಡಿದ ಸಾಧನೆ ನಿಜಕ್ಕೂ ಅದ್ಭುತವಾಗಿದೆ.

English summary
This article tells about 5-Year-Old Becomes Youngest Person Ever Qualified to Install Microsoft Windows.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot