PVR ಸಿನಿಮಾದಿಂದ ಈ ಟಿಕೆಟ್‌ನಲ್ಲಿ 50% ರಿಯಾಯಿತಿ: ಟಿಕೆಟ್ ಬುಕ್ ಮಾಡೋದೇಗೆ?
ಪಿವಿಆರ್‌ನಲ್ಲಿ (PVR) ಇಷ್ಟದ ನಟನ ಅಥವಾ ನಟಿಯ ಸಿನಿಮಾ ನೋಡುವುದೇ ಒಂದು ಮಜಾ. ಈ ನಡುವೆ ದೇಶದ ಅತಿದೊಡ್ಡ ಮಲ್ಟಿಪ್ಲೆಕ್ಸ್ ಸರಣಿಗಳಲ್ಲಿ ಒಂದಾದ ಪಿವಿಆರ್ ಸಿನಿಮಾ ಎಲ್ಲಾ ಡಿಸಿ ಅಭಿಮಾನಿಗಳಿಗೆ ವಿಶೇಷ ಕೊಡುಗೆಯನ್ನು ಘೋಷಣೆ ಮಾಡಿದ್ದು, ಈ ಮೂಲಕ ಕೇವಲ ಅರ್ಧ ಬೆಲೆಗೆ ಟಿಕೆಟ್ ಖರೀದಿ ಮಾಡಬಹುದಾಗಿದೆ.
ಹೌದು, ಮುಂಬರುವ ಡಿಸಿ ಚಿತ್ರ ದಿ ಫ್ಲ್ಯಾಶ್ ಗಾಗಿ ಟಿಕೆಟ್‌ಗಳ ಮೇಲೆ ಶೇಕಡಾ 50 ರಷ್ಟು ರಿಯಾಯಿತಿಯನ್ನು ನೀಡುತ್ತಿದೆ. ಹಾಗೆಯೇ ಈ ಸಿನಿಮಾ ಜೂನ್ 15 ರಂದು ಭಾರತದ ಥಿಯೇಟರ್‌ಗಳಲ್ಲಿ ಲಾಂಚ್ ಆಗಲಿದ್ದು, ಪ್ರತಿದಿನ ಸೀಮಿತ ಸಂಖ್ಯೆಯ ಚಲನಚಿತ್ರ ಟಿಕೆಟ್‌ಗಳಿಗೆ ಮಾತ್ರ ಈ ರಿಯಾಯಿತಿ ಲಭ್ಯ ಇರಲಿದೆ. ಹಾಗಿದ್ರೆ, ನೀವು ಖರೀದಿ ಮಾಡುವ ಟಿಕೆಟ್‌ನಲ್ಲಿ 50 ರಷ್ಟು ರಿಯಾಯಿತಿ ಪಡೆಯುವುದು ಹೇಗೆ ಎಂಬ ಬಗ್ಗೆ ತಿಳಿಯಲು ಈ ಲೇಖನ ಓದಿರಿ.

'ದಿ ಫ್ಲ್ಯಾಶ್' ಚಿತ್ರದ ಮೇಲೆ ಸೀಮಿತ ಅವಧಿಗೆ ಮತ್ತು ಸೀಮಿತ ಸಂಖ್ಯೆಯ ಟಿಕೆಟ್‌ಗಳಿಗೆ ರಿಯಾಯಿತಿ ನೀಡುವುದಾಗಿ ಪಿವಿಆರ್ ಘೋಷಣೆ ಮಾಡಿದ್ದು, ಇದು ಜೂನ್ 12 ರಿಂದ ಜೂನ್ 14 ರವರೆಗೆ ದಿನಕ್ಕೆ ಎರಡು ಬಾರಿ ಲೈವ್ ಆಗುತ್ತದೆ. ಪ್ರತಿ ಮಾರಾಟವು 20 ನಿಮಿಷಗಳವರೆಗೆ ಇರಲಿದೆ. ಖರೀದಿದಾರರು ಪ್ರತಿ ಫ್ಲ್ಯಾಶ್ ಸೇಲ್ ಸಮಯದಲ್ಲಿ ಪ್ರತಿದಿನ 50 ಟಿಕೆಟ್‌ಗಳ ಮೇಲೆ ಶೇಕಡಾ 50 ರಷ್ಟು ರಿಯಾಯಿತಿಯನ್ನು ಪಡೆದುಕೊಳ್ಳಬಹುದಾಗಿದೆ.
50% ರಿಯಾಯಿತಿ ಪಡೆಯುವುದು ಹೇಗೆ?: ಈ ರಿಯಾಯಿತಿಯನ್ನು ಪಡೆಯಲು ಜನರು ಅಧಿಕೃತ PVR ಆಪ್ ಅನ್ನು ಇನ್‌ಸ್ಟಾಲ್ ಮಾಡಿಕೊಳ್ಳಬೇಕಾಗುತ್ತದೆ. ಇದರೊಂದಿಗೆ ಕಂಪೆನಿಯ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳನ್ನು ಫಾಲೋ ಮಾಡಬೇಕಿದೆ. ಬನ್ನಿ 'ದಿ ಫ್ಲ್ಯಾಶ್' ಚಲನಚಿತ್ರ ಟಿಕೆಟ್‌ಗಳಲ್ಲಿ ಶೇಕಡಾ 50% ರಿಯಾಯಿತಿಯನ್ನು ಪಡೆಯುವುದು ಹೇಗೆ ಎಂಬುದರ ಕುರಿತು ಸರಳ ಹಂತದ ಮೂಲಕ ತಿಳಿಯೋಣ.
ಹಂತ 1 : ಮೊದಲು ನಿಮ್ಮ ಫೋನ್‌ನಲ್ಲಿ PVR ಅಪ್ಲಿಕೇಶನ್ ಅನ್ನು ಇನ್‌ಸ್ಟಾಲ್ ಮಾಡಿಕೊಳ್ಳಬೇಕಿದೆ. ಇದಕ್ಕಾಗಿ ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಆಪ್ ಸ್ಟೋರ್‌ಗೆ ಭೇಟಿ ನೀಡಿ. ಇದಾದ ಬಳಿಕ ಫ್ಲ್ಯಾಶ್ ಸೇಲ್ ಬಗ್ಗೆ ನವೀಕರಣಗಳು ಮತ್ತು ಅಧಿಸೂಚನೆಗಳನ್ನು ಪಡೆದುಕೊಳ್ಳಲು ಪುಶ್ ಅಧಿಸೂಚನೆಗಳನ್ನು ಆನ್ ಮಾಡಿ.
ಹಂತ 2: ನಂತರದಲ್ಲಿ ಫ್ಲ್ಯಾಶ್ ಸೇಲ್ ಟೈಮ್ ಸ್ಲಾಟ್‌ಗಳ ಬಗ್ಗೆ ಮಾಹಿತಿ ಪಡೆಯಲು PVR ನ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಫಾಲೋ ಮಾಡಬೇಕಾಗುತ್ತದೆ. ಈ ಫ್ಲ್ಯಾಶ್ ಸೇಲ್ 2023 ರ ಜೂನ್ 12, 13 ಮತ್ತು 14 ರಂದು ನಡೆಯಲಿದ್ದು, ಪ್ರತಿ ಸ್ಲಾಟ್‌ಗೆ 20 ನಿಮಿಷಗಳ ಅವಧಿಗೆ ದಿನಕ್ಕೆ ಎರಡು ಬಾರಿ ಲೈವ್ ಆಗುತ್ತದೆ.
ಹಂತ 3: ಪ್ರತಿ ಸ್ಲಾಟ್‌ನ ನಿಖರವಾದ ಸಮಯವನ್ನು ಆಪ್‌ನಲ್ಲಿ ಪುಶ್ ನೋಟಿಫಿಕೇಶನ್ ಮೂಲಕ ತಿಳಿದುಕೊಳ್ಳಬಹುದು. ನಿರ್ದಿಷ್ಟ ಸಮಯಕ್ಕಿಂತ ಕೆಲವು ನಿಮಿಷಗಳ ಮೊದಲು ಫ್ಲ್ಯಾಶ್ ಸೇಲ್‌ನಲ್ಲಿ ಭಾಗವಹಿಸಲು ಸಹ ಅನುಕೂಲ ಮಾಡಿಕೊಡಲಾಗಿದೆ. ಜೊತೆಗೆ ಆಪ್‌ನಲ್ಲಿ ಗೊತ್ತುಪಡಿಸಿದ ಫ್ಲ್ಯಾಶ್ ಸೇಲ್ ಪೇಜ್‌ಗೆ ನ್ಯಾವಿಗೇಟ್ ಮಾಡಲು ಇದು ಬಳಕೆದಾರರಿಗೆ ಸಾಕಷ್ಟು ಸಮಯವನ್ನು ಒದಗಿಸುತ್ತದೆ.
ಹಂತ 4 : ಫ್ಲ್ಯಾಶ್ ಸೇಲ್ ಆರಂಭ ಆಗಿದೆ ಎಂದು ತಿಳಿದ ತಕ್ಷಣ PVR ಆಪ್ ಅನ್ನು ಓಪನ್ ಮಾಡಬೇಕು. ಜೊತೆಗೆ ಮೀಸಲಾದ ಫ್ಲ್ಯಾಶ್ ಸೇಲ್ ಪುಟಕ್ಕೆ ನ್ಯಾವಿಗೇಟ್ ಮಾಡಬೇಕಾಗುತ್ತದೆ. ನೋಟಿಫಿಕೇಶನ್‌ನಲ್ಲಿ ನಮೂದಿಸಲಾದ ನಿರ್ದಿಷ್ಟ ಸಮಯದ ಸ್ಲಾಟ್‌ಗಳಲ್ಲಿ ಮಾತ್ರ ಈ ಪೇಜ್‌ಗೆ ಎಂಟ್ರಿ ಆಗಬಹುದು.

ಹಂತ 5 : ಇಷ್ಟೆಲ್ಲಾ ಮಾಡಿದ ಮೇಲೆ ಫ್ಲ್ಯಾಶ್ ಸೇಲ್ ಪೇಜ್‌ನಲ್ಲಿ ಲಭ್ಯವಿರುವ ಆಯ್ಕೆಗಳಿಂದ ದಿ ಫ್ಲ್ಯಾಶ್ ಚಲನಚಿತ್ರವನ್ನು ಆಯ್ಕೆಮಾಡಿ. ಟಿಕೆಟ್ ಖರೀದಿಯೊಂದಿಗೆ ಮುಂದುವರಿಯುವ ಮೊದಲು, ಗೊತ್ತುಪಡಿಸಿದ ಕ್ಷೇತ್ರದಲ್ಲಿ ನೀವು ರಿಯಾಯಿತಿ ಕೋಡ್ FLASHSALE ಅನ್ನು ಎಂಟ್ರಿ ಮಾಡಿ. ಈ ಕೋಡ್ ಚಲನಚಿತ್ರ ಟಿಕೆಟ್‌ಗಳ ಮೇಲೆ 50% ರಿಯಾಯಿತಿಯನ್ನು ಪಡೆಯಲು ನಿಮಗೆ ಅನುವು ಮಾಡಿಕೊಡುತ್ತದೆ.
ಇಲ್ಲಿ ಗಮನಿಸಬೇಕಾದ ವಿಷಯ ಏನೆಂದರೆ ಪ್ರತಿ ಸ್ಲಾಟ್‌ಗೆ ಮೊದಲ 50 ಟಿಕೆಟ್‌ಗಳು ಮಾತ್ರ ರಿಯಾಯಿತಿ ನೀಡಲಾಗುತ್ತದೆ. ನಿರ್ದಿಷ್ಟ ಸ್ಲಾಟ್ ಸಮಯದಲ್ಲಿ ಎಲ್ಲಾ 50 ಟಿಕೆಟ್‌ಗಳನ್ನು ಈಗಾಗಲೇ ಬುಕ್ ಮಾಡಿದ್ದರೆ ರಿಯಾಯಿತಿ ಕೋಡ್ ಅನ್ವಯಿಸುವುದಿಲ್ಲ. ಈ ಮೂಲಕ ರಿಯಾಯಿತಿ ಕೋಡ್ ಅನ್ನು ಅನ್ವಯಿಸಿದ ನಂತರ ಮತ್ತು ರಿಯಾಯಿತಿಯ ಟಿಕೆಟ್‌ಗಳ ಲಭ್ಯತೆಯನ್ನು ಖಚಿತಪಡಿಸಿದ ನಂತರ ನಿಯಮಿತ ಬುಕಿಂಗ್ ಪ್ರಕ್ರಿಯೆಯೊಂದಿಗೆ ಮುಂದುವರಿಯಬೇಕಾಗುತ್ತದೆ.
ಬುಕಿಂಗ್ ಪ್ರಕ್ರಿಯೆಯು ಪೂರ್ಣಗೊಂಡ ನಂತರ, ರಿಯಾಯಿತಿಯ ಟಿಕೆಟ್‌ನ ವಿವರಗಳನ್ನು ಒಳಗೊಂಡಿರುವ ದೃಢೀಕರಣ ಸಂದೇಶ ಅಥವಾ ಇಮೇಲ್ ಅನ್ನು ನೀವು ಪಡೆದುಕೊಂಡು ಅರ್ಧ ಬೆಲೆಗೆ ಖರೀದಿ ಮಾಡಿದ ಟಿಕೆಟ್‌ನಲ್ಲಿ ಪಿವಿಆರ್‌ನಲ್ಲಿ ಸಿನಿಮಾ ವೀಕ್ಷಣೆ ಮಾಡಬಹುದು.


Click it and Unblock the Notifications








