ಇದೇ ವರ್ಷ 5ಜಿ ಶಕ್ತಗೊಂಡ ಹೊಸ ಪ್ರೊಸೆಸರ್ ಪರಿಚಯಿಸುತ್ತಿದೆ ಕ್ವಾಲ್ಕಂ!

|
ಅಮೆಜಾನ್ ಭರ್ಜರಿ ಆಫರ್!..ಬಿಡುವಿನ ವೇಳೆಯಲ್ಲಿ ಗಂಟೆಗೆ 140 ರೂ.ಗಳಿಸಿ!!

ಅಮೆರಿಕಾ ಮೂಲದ ಜನಪ್ರಿಯ ಚಿಪ್‌ಮೇಕರ್ ಕ್ವಾಲ್ಕಂ ಕಂಪೆನಿ 5ಜಿ ಶಕ್ತಗೊಂಡ ಚಿಪ್‌ಸೆಟ್ ಅನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ ಎಂದು ವರದಿಯಾಗಿದೆ. ಒಂದು ಅಂತರ್ನಿರ್ಮಿತ 5ಜಿ ಮೋಡೆಮ್ ಮತ್ತು ಇನ್ನೊಂದು ಬಾಹ್ಯ 5ಜಿ ಮೋಡೆಮ್‌ನೊಂದಿಗೆ ಎರಡು ರೂಪಾಂತರಗಳಲ್ಲಿ ನೂತನ ಪ್ರೊಸೆಸರ್ ಬಿಡುಗಡೆಯಾಗಲಿದೆ ಎಂದು ಇತ್ತೀಚಿನ ಮಾಧ್ಯಮ ವರದಿಗಳು ತಿಳಿಸಿವೆ.

ಎಸ್‌ಎಂ 8250 ಎಂಬ ಸಂಕೇತನಾಮ ಹೊಂದಿರುವ 5ಜಿ ಚಿಪ್‌ಸೆಟ್ ಇದಾಗಿರಲಿದ್ದು, ಕ್ವಾಲ್ಕಂನಸ್ನಾಪ್‌ಡ್ರಾಗನ್ 855 ಚಿಪ್‌ಸೆಟ್‌ನ ಉತ್ತರಾಧಿಕಾರಿಯಾಗಿ ಇದನ್ನು ತರಲಾಗುತ್ತಿದೆ. ಇದಕ್ಕೆ ಸ್ನ್ಯಾಪ್‌ಡ್ರ್ಯಾಗನ್ 865 ಎಂದು ಹೆಸರಿಸಲಾಗಿದ್ದು, ಸ್ಯಾಮ್‌ಸಂಗ್‌ನ ಗ್ಯಾಲಕ್ಸಿ ಎಸ್ 10 +, ಎಸ್ 10 ಮತ್ತು ಗ್ಯಾಲಕ್ಸಿ ಫೋಲ್ಡ್‌ನಲ್ಲಿ ಬಳಸಲಾಗಿದೆ ಎಂದು ಫೋನ್‌ರಾಡರ್ ವರದಿ ಮಾಡಿದೆ.

ಇದೇ ವರ್ಷ 5ಜಿ ಶಕ್ತಗೊಂಡ ಹೊಸ ಪ್ರೊಸೆಸರ್ ಪರಿಚಯಿಸುತ್ತಿದೆ ಕ್ವಾಲ್ಕಂ!

ಸಂಯೋಜಿತ 5ಜಿ ಹೊಂದಿರುವ ಸ್ನಾಪ್‌ಡ್ರಾಗನ್ 865 ಇತ್ತೀಚಿನ ಸ್ನಾಪ್‌ಡ್ರಾಗನ್ ಎಕ್ಸ್ 55 5ಜಿ ಮೋಡೆಮ್ ಅನ್ನು ಬಳಸುತ್ತದೆ. ಇಂಟಿಗ್ರೇಟೆಡ್ 5 ಜಿ ಮೋಡೆಮ್‌ನೊಂದಿಗೆ, ಕೆಲವು ಹೆಚ್ಚುವರಿ ಸ್ಥಳಾವಕಾಶವನ್ನು ತಯಾರಕರಿಗೆ ನೀಡಲಾಗುವುದು, ಸ್ವಲ್ಪ ದೊಡ್ಡ ಬ್ಯಾಟರಿ ಅಥವಾ ಉತ್ತಮ ಕೂಲಿಂಗ್ ವ್ಯವಸ್ಥೆಯನ್ನು ಸೇರಿಸಲು ಬಳಸಬಹುದು ಎಂದು ವರದಿ ತಿಳಿಸಿದೆ.

ಮುಂಬರುವ ಸ್ನಾಪ್‌ಡ್ರಾಗನ್ 5ಜಿ ಮೊಬೈಲ್ ಪ್ಲಾಟ್‌ಫಾರ್ಮ್ ಸೆಕೆಂಡ್-ಜನ್ ಸಬ್ -6 ಜಿಹೆಚ್ ಮತ್ತು ಎಂಎಂ ವೇವ್ ಆಂಟೆನಾ ಮಾಡ್ಯೂಲ್‌ಗಳನ್ನು ಬಳಸುತ್ತದೆ ಎಂದು ಕ್ವಾಲ್ಕಂ ಈಗಾಗಲೇ ದೃಡಪಡಿಸಿದೆ. ಇದು ಹೊಸ 5ಜಿ ಪವರ್‌ಸೇವ್ ತಂತ್ರಜ್ಞಾನವನ್ನು ಹೊಂದಿದ್ದು, ಇದು 5 ಜಿ ಸ್ಮಾರ್ಟ್‌ಫೋನ್‌ಗಳ ಬ್ಯಾಟರಿ ಅವಧಿಯನ್ನು ಹೆಚ್ಚಿಸುತ್ತದೆ ಎಂದು ವರದಿ ಹೇಳಿದೆ.

ಇದೇ ವರ್ಷ 5ಜಿ ಶಕ್ತಗೊಂಡ ಹೊಸ ಪ್ರೊಸೆಸರ್ ಪರಿಚಯಿಸುತ್ತಿದೆ ಕ್ವಾಲ್ಕಂ!

ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 'ಕೋನಾ 55' ಫ್ಯೂಷನ್ SM8250 + ಬಾಹ್ಯ 5ಜಿ ಮೋಡೆಮ್ ಧ್ವನಿಸುತ್ತದೆ. ಎರಡೂ ಮಾದರಿಗಳು LPDDR5X RAM ಮತ್ತು UFS 3.0 ಬೆಂಬಲ ನೀಡಲಿವೆ. ಇದನ್ನೂ ಒದಿರಿ: ಊಹೆಗೂ ಸಿಗದ ಜೀನಿಯಸ್ ಮ್ಯಾನ್!...ಇದು 'ಐನ್‌ಸ್ಟೈನ್' ಬದುಕಿನ ರೋಚಕ ಕಥೆ!! ಅವರು ಮುಂದಿನ ಜನ್‌ನೊಂದಿಗೆ 5G ಯನ್ನು ಮುಖ್ಯ SoCಗೆ ವಿಲೀನಗೊಳಿಸಲಿದ್ದಾರೆ ಎಂದು ಭಾವಿಸಿದೆಎಂದು ಜರ್ಮನಿ ಮೂಲದ ವಿನ್‌ಫ್ಯೂಚರ್ ನ್ಯೂಸ್ ಟೆಕ್ ಎಡಿಟರ್ ಟ್ವೀಟ್ ಮಾಡಿದ್ದಾರೆ.

Best Mobiles in India

English summary
US-based chipmaker Qualcomm is expected to launch the 5G-enabled Snapdragon 865 chipset in two variants -- one with a built-in 5G modem and the other with an external 5G modem. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X