ಅಮೆಜಾನ್ 5G ಸೇಲ್: ರೆಡ್ಮಿ ನೋಟ್ 12 5G ಮೊಬೈಲ್ ಸಖತ್ ರಿಯಾಯಿತಿ!
ಪ್ರಮುಖ ಇ ಕಾಮರ್ಸ್ ಪ್ಲಾಟ್‌ಫಾರ್ಮ್ ಅಮೆಜಾನ್ ಆನ್‌ಲೈನ್ ಶಾಪಿಂಗ್ ಪ್ರಿಯರಿಗಾಗಿ ಏನಾದರೊಂದು ಸೇಲ್ ಆಯೋಜಿಸುತ್ತಾ ಮುನ್ನಡೆದಿದೆ. ಅದೇ ರೀತಿ ಜೂನ್ 21 ರಿಂದ ಶುರುವಾಗಿರುವ, 5G ರೆವಲ್ಯೂಷನ್ ಸೇಲ್ (5G Revolution Sale) ಮೇಳದ ಮೂಲಕ ಮೊಬೈಲ್ ಪ್ರಿಯ ಗ್ರಾಹಕರನ್ನು ಸೆಳೆದಿದೆ. ಈ ಮಾರಾಟದಲ್ಲಿ 5G ಫೋನ್‌ಗಳಿಗೆ ಬೊಂಬಾಟ್ ಕೊಡುಗೆ ಸಿಗಲಿದೆ.
ಹಭದು, ಅಮೆಜಾನ್ ಪ್ಲಾಟ್‌ಫಾರ್ಮ್ ಆಯೋಜಿಸಿರುವ, 5G ರೆವಲ್ಯೂಷನ್ ಸೇಲ್ (5G Revolution Sale) ನಲ್ಲಿ ಇತ್ತೀಚಿನ ಆಯ್ದ 5G ಫೋನ್‌ಗಳಿ ಬಿಗ್ ರಿಯಾಯಿತಿ ಪಡೆದಿದೆ. ಬಜೆಟ್ ದರದ 5G ಓನ್‌ಗಳು ಸೇರಿದಂತೆ ದುಬಾರಿ ದರದ ಫೋನ್‌ಗಳು ಡಿಸ್ಕೌಂಟ್ ಬೆಲೆಗೆ ಕಾಣಿಸಿಕೊಂಡಿವೆ. ಅಂದಹಾಗೆ ಈ ಮಾರಾಟ ಮೇಳವು ಇದೇ ಜೂನ್ 25 ರ ವರೆಗೂ ಚಾಲ್ತಿ ಇರಲಿದೆ.

ಈ ಸೇಲ್‌ನಲ್ಲಿ ಶಿಯೋಮಿ ಸಂಸ್ಥೆಯ ರೆಡ್ಮಿ ನೋಟ್ 12 5G ಮೊಬೈಲ್ ಸಹ ಸಖತ್ ರಿಯಾಯಿತಿ ಪಡೆದಿದೆ. 4GB RAM + 128 GB ವೇರಿಯಂಟ್ ಫೋನ್ 15% ರಷ್ಟು ರಿಯಾಯಿತಿ ಪಡೆದಿದ್ದು, 16,999ರೂ. ಗಳಿಗೆ ಖರಿದಿಗೆ ಲಭ್ಯ. ಇದರೊಂದಿಗೆ ಸುಮಾರು 2000ರೂ. ವರೆಗೂ ಬ್ಯಾಂಕ್ ಆಫರ್ ಲಭ್ಯವಾಗಲಿದೆ. ಜೊತೆಗೆ ನೋ ಕಾಸ್ಟ್ ಇಎಮ್‌ಐ ಸೌಲಭ್ಯದ ಆಯ್ಕೆಗಳು ಸಹ ಸಿಗುತ್ತವೆ. ಹಾಗಾದರೆ ರೆಡ್ಮಿ ನೋಟ್ 12 5G ಫೋನಿನ ಇತರೆ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ರೆಡ್ಮಿ ನೋಟ್ 12 5G ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ : ರೆಡ್ಮಿ ನೋಟ್ 12 5G ಸ್ಮಾರ್ಟ್‌ಫೋನ್ 6.67 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಸೂಪರ್ AMOLED ಡಿಸ್‌ಪ್ಲೇ ಪಡೆದಿದೆ. ಈ ಡಿಸ್‌ಪ್ಲೇ 2,400 x 1,080 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದಿದೆ. ಇದು 120Hz ರಿಫ್ರೆಶ್ ರೇಟ್ ಮತ್ತು 240Hz ಟಚ್ ಸ್ಯಾಂಪ್ಲಿಂಗ್ ರೇಟ್ ಅನ್ನು ಬೆಂಬಲಿಸಲಿದ್ದು, ಈ ಡಿಸ್‌ಪ್ಲೇ 1200nits ಬ್ರೈಟ್ನೆಸ್ ಹೊಂದಿದೆ.
ರೆಡ್ಮಿ ನೋಟ್ 12 5G ಪ್ರೊಸೆಸರ್ ಪವರ್ ಬಲ : ರೆಡ್ಮಿ ನೋಟ್ 12 5G ಸ್ಮಾರ್ಟ್‌ಫೋನ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 4 ಜೆನ್ 1 SoC ಪ್ರೊಸೆಸರ್ ಪವರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ 4GB + 128GB, 4GB RAM + 128GB ಮತ್ತು 6GB RAM + 128 GB ಸ್ಟೋರೇಜ್ ಆಯ್ಕೆಗಳನ್ನು ಹೊಂದಿದೆ. ಈ ಫೋನ್ ಆಂಡ್ರಾಯ್ಡ್ 12 ಓಎಸ್ ಆಧಾರಿತ MIUI 13 ನಲ್ಲಿ ಕೆಲಸ ಮಾಡಲಿದೆ.
ರೆಡ್ಮಿ ನೋಟ್ 12 5G ತ್ರಿವಳಿ ಕ್ಯಾಮೆರಾ ರಚನೆ : ರೆಡ್ಮಿ ನೋಟ್ 12 5G ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಪಡೆದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾ ಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ 8 ಮೆಗಾ ಪಿಕ್ಸೆಲ್ ಅಲ್ಟ್ರಾ ವೈಡ್ ಲೆನ್ಸ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಅನ್ನು ಹೊಂದಿದೆ. ಇದಲ್ಲದೆ 13 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.
ರೆಡ್ಮಿ ನೋಟ್ 12 5G ಬ್ಯಾಟರಿ ಮತ್ತು ಇತರೆ ಆಯ್ಕೆಗಳು : ರೆಡ್ಮಿ ನೋಟ್ 12 5G ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಪಡೆದಿದ್ದು, ಇದು 33W ವೇಗದ ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡುತ್ತದೆ. ಆಡಿಯೊಗಾಗಿ, ಹೈ-ರೆಸ್ ಆಡಿಯೊ ಬೆಂಬಲದೊಂದಿಗೆ ಫೋನ್ ಒಂದೇ ಸ್ಪೀಕರ್ ಅನ್ನು ಒಳಗೊಂಡಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಫೋನ್ ವೈಫೈ ಮತ್ತು ಬ್ಲೂಟೂತ್ v5.1 ಮತ್ತು USB ಟೈಪ್-ಸಿ ಸೇರಿವೆ.
ರೆಡ್ಮಿ ನೋಟ್ 12 5G ಮೆಮೊರಿ ಎಷ್ಟು ಹಾಗೂ ಕಲರ್ ಆಯ್ಕೆ : ರೆಡ್ಮಿ ನೋಟ್ 12 5G ಸ್ಮಾರ್ಟ್‌ಫೋನ್ 4GB + 128GB ವೇರಿಯಂಟ್ ಹಾಗೂ 6GB RAM + 128GB ವೇರಿಯಂಟ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ.


Click it and Unblock the Notifications








