ಪ್ರಖ್ಯಾತ ಟೆಕ್ ಲೋಗೋಗಳ ರಹಸ್ಯ ಸಂದೇಶಗಳು ಏನು ಗೊತ್ತೇ?
ಅತಿ ಹೆಚ್ಚು ಅಭಿವೃದ್ದಿಗೊಂಡ ಕ್ಷೇತ್ರ ಅಂದ್ರೆ ಟೆಕ್ನಾಲಜಿ ಕ್ಷೇತ್ರ. ಅವುಗಳಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರವು ಆಗಿರಬಹುದು. ನಿಮಗೆಲ್ಲಾ ಗೊತ್ತೇ. ಇಂದು ದಿನನಿತ್ಯ ಹೆಚ್ಚು ಬಳಕೆದಾರರನ್ನು ಹೊಂದಿರುವ ಸಾಮಾಜಿಕ ಜಾಲತಾಣ, ಗೂಗಲ್, ವಾಟ್ಸಾಪ್, ಮೊಜಿಲ್ಲಾ ಫೈಯರ್‌ಫಾಕ್ಸ್, ಅಮೇಜಾನ್ ಆನ್‌ಲೈನ್ ಸೈಟ್‌ಗಳು ಪ್ರತಿಯೊಂದು ವಿಶೇಷವಾದ ತಮ್ಮದೇ ಲೋಗೋವನ್ನು ಇಟ್ಟಿಕೊಂಡಿವೆ. ಲೋಗೋ ಬಗ್ಗೆ ಯಾಕೆ ಹೀಗೆ ಹೇಳ್ತಿದ್ದೀವಿ ಅಂದ್ರೆ ಇಂದು ಪ್ರಖ್ಯಾತ ಟೆಕ್ ಕಂಪನಿಗಳು ತಮ್ಮ ಲೋಗೋಗಳಲ್ಲಿ ವಿಶಿಷ್ಟವಾದ ಸಂದೇಶಗಳನ್ನು ಇಟ್ಟುಕೊಂಡಿವೆ. ಅದನ್ನು ಇಂದು ಟೆಕ್ ಪ್ರಿಯರಾದ ಎಲ್ಲರೂ ಸಹ ತಿಳಿಯಲೇ ಬೇಕಾಗಿದೆ.
ಓದಿರಿ :ಫೇಸ್‌ಬುಕ್‌ನ 12ನೇ ಹುಟ್ಟುಹಬ್ಬ ಅಚ್ಚರಿ ವೀಡಿಯೋದಿಂದ

ಆಪಲ್
ಆಪಲ್ ಲೋಗೋವನ್ನು ಬೈಬಲ್‌ನ Adam ಮತ್ತು Eve ಕಥೆಯಿಂದ ಪಡೆಯಲಾಗಿದೆ. ಆಪಲ್ ಲೋಗೋ ಒಂದು ಹಣ್ಣನ್ನು ಪ್ರತಿನಿಧಿಸುತ್ತಿದ್ದು, ಅದು "Tree of Knowledge" ಎಂಬ ಸಂದೇಶವನ್ನು ಪ್ರತಿನಿಧಿಸುತ್ತಿದೆ.

ಗೂಗಲ್
ಗೂಗಲ್ ತನ್ನ ಲೋಗೋದಲ್ಲಿ ಪ್ರಾಥಮಿಕ 4 ಬಣ್ಣಗಳನ್ನು ಹೊಂದಿದೆ. ಇದು ಸಹಜವಾಗಿ ಉದ್ದೇಶ ಪೂರ್ವಕವಾಗಿದೆ. ಅಂದರೆ ಇದು ಮಾಹಿತಿ ಹುಡುಕಲು ಯಾವುದೇ ನಿಯಮಗಳನ್ನು ಏರುವುದಿಲ್ಲ. ಅಲ್ಲದೇ ಯಾವುದೇ ಚಿಹ್ನೆಗಳನ್ನು ಬಳಸಿ ತನ್ನ ಬಳಕೆದಾರರಿಗೆ ಗೊಂದಲ ಪಡಿಸಲು ಇಚ್ಚಿಸುವುದಿಲ್ಲ ಎಂಬ ಸಂದೇಶ ಒಳಗೊಂಡಿದೆ.

ಸನ್ ಮೈಕ್ರೋಸಿಸ್ಟಮ್
ಸನ್ ಮೈಕ್ರೋಸಿಸ್ಟಮ್ ಕಂಪನಿಯು ಕಂಪ್ಯೂಟರ್ ಕಂಪ್ಯೂಟರ್‌ನ ಬಿಡಿಭಾಗಗಳು, ಸಾಫ್ಟ್‌ವೇರ್ ಅನ್ನು ಮಾರಾಟ ಮಾಡುವ ಕಂಪನಿಯಾಗಿದೆ. ಕೆಲವೊಂದು ಬೋರಿಂಗ್ ಕಂಪನಿಗಳು ಅರ್ಥವಿಲ್ಲದ ಹೆಸರು ಲೋಗೋಗಳನ್ನು ಹೊ೦ದಿರುತ್ತವೆ. ಆದರೆ ಸನ್ ಮೈಕ್ರೋಸಿಸ್ಟಮ್ ಕಂಪನಿಯ ಲೋಗೋ ನೋಡಿ. ಅದು ತನ್ನ ಕಂಪನಿಯ ಲೋಗೋದಲ್ಲಿ ಸೂರ್ಯ (ಸನ್) ಎಲ್ಲಾ ದಿಕ್ಕುಗಳ್ಲಲಿಯೂ ಇರುವ ಬಗ್ಗೆ ಸಂದೇಶವನ್ನು ಇಟ್ಟುಕೊಂಡಿದೆ.

IBM
ಇಡಿ ಪ್ರಪಂಚದಾದ್ಯಂತ ತನ್ನ ಕಂಪನಿ ಲೋಗೋ ಸಂದೇಶವನ್ನು ಸೂಕ್ಷ್ಮವಾಗಿ ಬಚ್ಚಿಟ್ಟಿರುವ ದೊಡ್ಡ ನೀಲಿ ಲೋಗೋ ಕಂಪನಿ ಎಂದರೆ ಅದು IBM. IBM ತನ್ನ ಲೋಗೋದಲ್ಲೇ ಕಂಪನಿಯನ್ನು ಪ್ರತಿನಿಧಿಸುತ್ತದೆ. ಲೋಗೋದಲ್ಲಿನ ಬಿಳಿ ಸಾಲುಗಳು ಪ್ರತಿ ಚಿಹ್ನೆಯಲ್ಲು ಸಮಾನತೆಯನ್ನು ಪ್ರತಿನಿಧಿಸುತ್ತವೆ.

ಅಮೆಜಾನ್
ಅಮೆಜಾನ್ ಲೋಗೋವನ್ನು ಯಾರೇ ನೋಡಿದರು ಸಹ ಅದರಲ್ಲಿರುವ ಬಾಣದ ಚಿಹ್ನೆ ನಗುವ ಮುಖವನ್ನು ಪ್ರತಿನಿಧಿಸುತ್ತದೆ. ಅಲ್ಲದೇ ಅಮೆಜಾನ್ ಲೋಗೋ ಸಂದೇಶವೆಂದರೆ ತನ್ನ ಗ್ರಾಹಕರನ್ನು ಯಾವಾಗಲು ಸಂತೋಷದಿಂದ ಇರಿಸುವ ಸಂದೇಶವಾಗಿದೆ. ಅಲ್ಲದೇ ಬಾಣದ ಗುರುತು A ಅಕ್ಷರದಿಂದ ಪ್ರಾರಂಭವಾಗಿ Z ಅಕ್ಷರದಲ್ಲಿ ಕೊನೆಗೊಂಡಿರುವ ಅರ್ಥವೆಂದರೆ ಅಮೆಜಾನ್‌ನಲ್ಲಿ A ಇಂದ Z ವರೆಗಿನ ಎಲ್ಲಾ ರೀತಿಯ ವಸ್ತುಗಳನ್ನು ಗ್ರಹಾಕರಿಗೆ ಸೇವೆಸಲ್ಲಿಸುತ್ತದೆ. ಎಂದು ಅರ್ಥ.

VAIO
ಕಂಪನಿಯೂ ಪರ್ಸನಲ್ ಕಂಪ್ಯೂಟರ್ ನಿರ್ಮಾಣಕ್ಕೆ ಹೆಸರುವಾಸಿಯಾಗಿದೆ. ಇದರ ಲೋಗೋವನ್ನು ಎಡಭಾಗದ ಚಿತ್ರದಲ್ಲಿ ನೋಡಿ. ಲೋಗೋದಲ್ಲಿ ಮೊದಲ ಎರಡು ಅಕ್ಷರಗಳು ಅನಾಲಾಗ್ ಚಿಹ್ನೆಗಳನ್ನು ಪ್ರದರ್ಶಿಸಿದರೆ, ನಂತರದ ಎರಡು ಅಕ್ಷರಗಳು ಬೈನರಿ ಅಕ್ಚರಗಳನ್ನು ಪ್ರದರ್ಶಿಸುತ್ತವೆ.

ಗಿಜ್‌ಬಾಟ್

ಗಿಜ್‌ಬಾಟ್
ಗಿಜ್‌ಬಾಟ್‌ನ ಲೇಖನಗಳನ್ನು ಫೇಸ್‌ಬುಕ್‌ನಲ್ಲಿ ಓದಲು ಲೈಕ್ ಮಾಡಿ ಫೇಸ್‌ಬುಕ್ ಪೇಜ್ ಮತ್ತು ಓದಿರಿ ವೆಬ್‌ಸೈಟ್ ಗಿಜ್‌ಬಾಟ್.ಕನ್ನಡ.ಕಾಂ


Click it and Unblock the Notifications








