ಫೇಸ್‌ಬುಕ್‌ನ 12ನೇ ಹುಟ್ಟುಹಬ್ಬ ಅಚ್ಚರಿ ವೀಡಿಯೋದಿಂದ

By Suneel
|

ಸಾಮಾಜಿಕ ಜಾಲತಾಣಗಳ ಬೃಹತ್‌ ದೊಡ್ಡ ಕಂಪನಿ "ಫೇಸ್‌ಬುಕ್‌"ಗೆ ಈಗ 12 ವರ್ಷಗಳು ತುಂಬಿದ್ದು, ತನ್ನ 12 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದೆ. ತನ್ನ ಹುಟ್ಟುಹಬ್ಬದ ಪ್ರಯುಕ್ತ ಇಂದು ಫೇಸ್‌ಬುಕ್‌ ಫ್ರೆಂಡ್ಸ್‌ಶಿಪ್‌ ದಿನವನ್ನು ಸಹ ಆಚರಿಸಲಾಗುತ್ತಿದೆ. ಇದರ ಜೊತೆಗೆ ಫೇಸ್‌ಬುಕ್‌ ತನ್ನ ಹೊಸ ವೀಡಿಯೋ ಪ್ರಾಡಕ್ಟ್‌ ಅನ್ನು ಬಿಡುಗಡೆ ಮಾಡಿ ಫೇಸ್‌ಬುಕ್‌ ಬಳಕೆದಾರರಿಗೆ ಅಚ್ಚರಿಯನ್ನು ಉಂಟುಮಾಡಿದೆ. ಈ ಬಗ್ಗೆ ವಿಶೇಷ ಮಾಹಿತಿಯನ್ನು ಲೇಖನದ ಸ್ಲೈಡರ್‌ಗಳಲ್ಲಿ ಓದಿ ತಿಳಿಯಿರಿ.

ಓದಿರಿ: ಫೇಸ್‌ಬುಕ್‌ನ ಇನ್ನೊಂದು ವೆಬ್‌ಸೈಟ್‌ ರಹಸ್ಯ ಬಯಲು

ಫೇಸ್‌ಬುಕ್‌

ಫೇಸ್‌ಬುಕ್‌

ಮಾರ್ಕ್‌ ಜುಕರ್‌ಬರ್ಗ್‌ 2004 ರ ಜನವರಿ 1ರಂದು ಮೊಟ್ಟಮೊದಲು ಫೇಸ್‌ಬುಕ್‌ ಕೋಡ್‌ ಅನ್ನು ರಚಿಸಿದರು.

ಉದ್ದೇಶ

ಉದ್ದೇಶ

ಮಾರ್ಕ್‌ ಜುಕರ್‌ಬರ್ಗ್‌ ವಿದ್ಯಾರ್ಥಿಗಳಿಗೆ ಹಾಗೂ ವಿವಿಧ ಜನ ಸಮುದಾಯಗಳನ್ನು ಒಟ್ಟಿಗೆ ಸೇರಿಸುವ ದೃಷ್ಟಿಯಿಂದ ಫೇಸ್‌ಬುಕ್‌ ಸಾಮಾಜಿಕ ಜಾಲತಾಣ ಹುಟ್ಟುಹಾಕಿದರು.

 ಬಳಕೆದಾರರು

ಬಳಕೆದಾರರು

ಫೇಸ್‌ಬುಕ್‌ ಇಂದು 1.5 ಬಿಲಿಯನ್‌ ದಿನನಿತ್ಯ ಬಳಕೆದಾರರನ್ನು ಹೊಂದಿದ್ದು, ತನ್ನ 12 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದೆ.

ಫೇಸ್‌ಬುಕ್‌ ಫ್ರೆಂಡ್‌ಶಿಪ್‌ ಡೇ

ಫೇಸ್‌ಬುಕ್‌ ಫ್ರೆಂಡ್‌ಶಿಪ್‌ ಡೇ

ಕಳೆದ ತಿಂಗಳಷ್ಟೆ ಮಾರ್ಕ್‌ ಜುಕರ್‌ಬರ್ಗ್‌ ಫೇಸ್‌ಬುಕ್‌ ಬಳಕೆದಾರರಿಗೆ "ಫೇಸ್‌ಬುಕ್‌ 12 ನೇ ವರ್ಷದ ಹುಟ್ಟು ಹಬ್ಬದ ಪ್ರಯುಕ್ತ 'ಫೇಸ್‌ಬುಕ್‌ ಫ್ರೆಂಡ್‌ಶಿಪ್‌ ದಿನ'ವನ್ನು ಆಚರಿಸುವುದಾಗಿ ಹೇಳಿದ್ದರು. ಅಲ್ಲದೇ ಫೆಬ್ರವರಿ 4 ನೇ ದಿನಾಂಕದಂದು ಎಲ್ಲರೂ ಸಹ ಫ್ರೆಂಡ್‌ಶಿಪ್‌ ದಿನ ಆಚರಣೆಗೆ ಭಾಗವಹಿಸುತ್ತೀರಿ ಎಂದು ನಂಬಿಕೆ ಇದೆ ಎಂದಿದ್ದರು. ಅಲ್ಲದೇ ಆಚರಣೆ ಹೆಚ್ಚು ವಿಶೇಷವಾಗಿರುತ್ತದೆ ಎಂದು ಸಹ ಹೇಳಿದ್ದರು.

ಫೇಸ್‌ಬುಕ್‌ ವೀಡಿಯೋ ಪ್ರಾಡಕ್ಟ್‌

ಫೇಸ್‌ಬುಕ್‌ ವೀಡಿಯೋ ಪ್ರಾಡಕ್ಟ್‌

ಫೇಸ್‌ಬುಕ್‌ ಫ್ರೆಂಡ್‌ಶಿಪ್‌ ಡೇ ದಿನ ಆಚರಣೆ ಪ್ರಯುಕ್ತ ಹೊಸ ವೀಡಿಯೋ ಪ್ರಾಡಕ್ಟ್‌ ಬಿಡುಗಡೆ ಮಾಡಿದ್ದು, ಅದರಲ್ಲಿ ಫೇಸ್‌ಬುಕ್‌ ಬಳಕೆದಾರರು ಫೇಸ್‌ಬುಕ್‌ ರೆಫರ್‌ ಮಾಡಿದ ಉತ್ತಮ ಗೆಳೆಯರು ಯಾರು, ಹಾಗೂ ಅವರ ಫೇಸ್‌ಬುಕ್‌ ಚಟುವಟಿಕೆಗೆ ಸಂಬಂಧಿಸಿದ ಅಚ್ಚರಿ ವೀಡಿಯೋವನ್ನು ಎಲ್ಲರೂ ಸಹ ನೋಡಬಹುದಾಗಿದೆ.

ಫ್ರೆಂಡ್ಸ್‌ ಡೇ ವೀಡಿಯೋ ನೋಡುವುದು ಅಥವಾ ಎಡಿಟ್‌ ಮಾಡುವುದು ಹೇಗೆ ?

ಫ್ರೆಂಡ್ಸ್‌ ಡೇ ವೀಡಿಯೋ ನೋಡುವುದು ಅಥವಾ ಎಡಿಟ್‌ ಮಾಡುವುದು ಹೇಗೆ ?

https://www.facebook.com/friendsday ಯುಆರ್‌ಎಲ್‌ ಗೆ ಭೇಟಿ ನೀಡಿ. ನಂತರ ವೀಡಿಯೋ ರಚಿತವಾಗಿರುತ್ತದೆ. ನೀವು ಬೇಕಾದರೆ ನಿಮ್ಮ ಟೈಮ್‌ಲೈನ್‌ಗೆ ಶೇರ್‌ ಮಾಡಬಹುದು.

Best Mobiles in India

English summary
Facebook Celebrates 12th Birthday With Friends Day. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X