Home
ಸುದ್ದಿಜಾಲ

ಜೂಮ್‌ ಆಪ್‌ ಬಳಕೆಗೆ ಸುರಕ್ಷಿತವೇ?..ಇಲ್ಲಿವೆ ಅಸಲಿ ಕಾರಣಗಳು!

ಮಹಾಮಾರಿ ಕೊರೊನಾ ವೈರಸ್ ನಿಯಂತ್ರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕಟ್ಟುನಿಟ್ಟಾಗಿ ಲಾಕ್‌ಡೌನ್ ಜಾರಿ ಮಾಡಿದೆ. ಈ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಅನೇಕ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಮನೆಯಿಂದ ಕೆಲಸ ಮಾಡುವ ಸೌಲಭ್ಯ ಕಲ್ಪಿಸಿವೆ. ಇನ್ನು ಮನೆಯಿಂದ ಕೆಲಸ ನಿರ್ವಹಿಸುವಾಗ ಆನ್‌ಲೈನ್‌ ಮೀಟಿಂಗ್‌ಗಾಗಿ, ಬಹುತೇಕರು ಸದ್ಯ ಜೂಮ್ ಆಪ್‌ ಬಳಕೆ ಮಾಡುತ್ತಿದ್ದಾರೆ. ಆದರೆ ಈ ಆಪ್ ಬಳಕೆಗೆ ಸುರಕ್ಷಿತವೇ?

ಲಾಕ್‌ಡೌನ್ ಕಾರಣ

ಹೌದು, ಲಾಕ್‌ಡೌನ್ ಕಾರಣದಿಂದಾಗಿ ಹೆಚ್ಚಿನ ಜನರು ಮನೆಯಿಂದ ಕೆಲಸ ಮಾಡುತ್ತಿದ್ದು, ನೌಕರರು ತಮ್ಮ ಸಹದ್ಯೋಗಿಗಳೊಂದಿಗೆ ಸಂವಹನ ನಡೆಸಲು ಜೂಮ್ ವೀಡಿಯೊ ಕಾನ್ಫರೆನ್ಸಿಂಗ್ ಅಪ್ಲಿಕೇಶನ್ ಬಳಕೆ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಜೂಮ್ ಆಪ್ ಭಾರತದಲ್ಲಿ ಹೆಚ್ಚು ಜನಪ್ರಿಯತೆ ಪಡೆಯುತ್ತಿದ್ದು, ಡೌನ್‌ಲೋಡ್‌ ಏರಿಕೆ ಕಂಡುಬಂದಿದೆ. ಹಾಗಾದರೆ ಈ ಲಾಕ್‌ಡೌನ್ ಸಮಯದಲ್ಲಿ ವಿಡಿಯೊ ಕಾನ್ಫರೆನ್ಸಿಂಗ್‌ಗಾಗಿ ಜೂಮ್ ಅಪ್ಲಿಕೇಶನ್ ಬಳಸಬಹುದು ಅಥವಾ ಬಳಸಬಾರದೆ ಈ ಕುರಿತು ಕೆಲವು ಅಂಶಗಳನ್ನು ಈ ಲೇಖನದಲ್ಲಿ ತಿಳಿಸಲಾಗಿದೆ. ಮುಂದೆ ಓದಿರಿ.

ಪ್ಲಸ್‌ ಪಾಯಿಂಟ್‌ 1: 100 ವಿಡಿಯೊ ಕರೆಗಳ

ಪ್ಲಸ್‌ ಪಾಯಿಂಟ್‌ 1: 100 ವಿಡಿಯೊ ಕರೆಗಳ

ಜೂಮ್‌ ಅಪ್ಲಿಕೇಶನ್ ಪ್ರಮುಖ ಹೈಲೈಟ್‌ ಅಂದರೇ ಒಂದೇ ವಿಡಿಯೋ ಕರೆಯಲ್ಲಿ ಗರಿಷ್ಠ 100 ಜನರನ್ನು ಕನೆಕ್ಟ್ ಮಾಡುವ ಸೌಲಭ್ಯ ಪಡೆದಿದೆ. ಹಾಗೆಯೇ ದೀರ್ಘಾವಧಿಯ ಗ್ರೂಪ್ ಸಂವಹನ ನಡೆಸಲು ಅವಕಾಶ ಒದಗಿಸುತ್ತದೆ.

ಪ್ಲಸ್‌ ಪಾಯಿಂಟ್‌ 2: ಲಾಗ್‌ಇನ್ ಅಗತ್ಯ ಇಲ್ಲ

ಪ್ಲಸ್‌ ಪಾಯಿಂಟ್‌ 2: ಲಾಗ್‌ಇನ್ ಅಗತ್ಯ ಇಲ್ಲ

ಜೂಮ್ ವಿಡಿಯೊ ಕಾನ್ಫರೆನ್ಸ್‌ ಆಪ್‌ ಬಳಕೆ ಸುಲಭವಾಗಿದೆ. ಹಾಗೆಯೇ ಈ ಆಪ್ ಸರಳ ಮತ್ತು ಸುಲಭ ಇಂಟರ್ಫೆಸ್‌ ಸೌಲಭ್ಯ ಪಡೆದಿದ್ದು, ಮೀಟಿಂಗ್‌ಗಳಿಗೆ ಅಟೆಂಡ್‌ ಆಗಲು ಲಾಗ್‌ಇನ್ ಆಗುವ ಪ್ರಮೇಯ ಇರುವುದಿಲ್ಲ.

ಪ್ಲಸ್‌ ಪಾಯಿಂಟ್‌ 3: ಹೊಸ ಸೇರ್ಪಡೆ ಸುಲಭ

ಪ್ಲಸ್‌ ಪಾಯಿಂಟ್‌ 3: ಹೊಸ ಸೇರ್ಪಡೆ ಸುಲಭ

ಚೀನಾ ಮೂಲದ ಈ ಜೂಮ್ ಅಪ್ಲಿಕೇಶನ್‌ನ ಬಳಕೆ ಅತೀ ಸುಲಭವಾಗಿದೆ. ಈ ಆಪ್‌ ಮೂಲಕ ನಡೆಯುವ ಆನ್‌ಲೈನ್‌ ಮೀಟಿಂಗ್‌ಗೆ ಸಂಸ್ಥೆಯ ಹೊಸ ಸದಸ್ಯರು ಸುಲಭವಾಗಿ ಸೇರಬಹುದಾಗಿದೆ.

ಮೈನಸ್‌ ಪಾಯಿಂಟ್ 1: ಮಾಹಿತಿ ಸೋರಿಕೆಗೆ

ಮೈನಸ್‌ ಪಾಯಿಂಟ್ 1: ಮಾಹಿತಿ ಸೋರಿಕೆಗೆ

ವಿಡಿಯೊ ಕರೆಗಳಿಗೆ ಜನಪ್ರಿಯವಾಗಿರುವ ಜೂಮ್ ಆಪ್‌ ಸುರಕ್ಷಿತವಲ್ಲ ಎನ್ನುವ ಮಾತುಗಳಿವೆ. ಈ ಆಪ್‌ನ 'ಕಂಪನಿ ಡೈರೆಕ್ಟರಿ' ಸೆಟ್ಟಿಂಗ್‌ನಲ್ಲಿ ದೋಷ ಇದೆ ಎನ್ನಲಾಗಿದೆ. ಹೀಗಾಗಿ ಬಳಕೆದಾರರ ವೈಯಕ್ತಿಕ ಖಾಸಗಿ ಮಾಹಿತಿಗಳು, ಇಮೇಲ್‌ಗಳು ಮತ್ತು ಫೋಟೋಗಳನ್ನು ಸೋರಿಕೆ ಆಗುವ ಸಾಧ್ಯತೆಗಳಿವೆ. ಈ ದೃಷ್ಠಿಯಿಂದ ಜೂಮ್ ಆಪ್ ಬಳಕೆ ಸೂಕ್ತವಲ್ಲ.

ಮೈನಸ್‌ ಪಾಯಿಂಟ್ 2: ಸುರಕ್ಷತಾ ಫೀಚರ್‌ ಕೊರತೆ

ಮೈನಸ್‌ ಪಾಯಿಂಟ್ 2: ಸುರಕ್ಷತಾ ಫೀಚರ್‌ ಕೊರತೆ

ಜೂಮ್ ಆಪ್ನಲ್ಲಿ ನಡೆಸುವ ಸಭೆಗಳು ಎಂಡ್‌ ಡು ಎಂಡ್ ಎನ್‌ಕ್ರಿಪ್ಟ್ ಸೌಲಭ್ಯ ಪಡೆದಿಲ್ಲ ಎನ್ನಲಾಗಿದೆ. ವಿಡಿಯೊ ಕರೆಗಳು ಸುರಕ್ಷಿತ ಅನಿಸಿದರೂ ಥರ್ಡ್‌ಪಾರ್ಟ್‌ ವ್ಯಕ್ತಿಗಳಿಂದ ಸುಲಭವಾಗಿ ಮಾಹಿತಿ ಸೋರಿಕೆಯ ಆಗುವ ಸಾಧ್ಯತೆಗಳು ಅಧಿಕವಾಗಿವೆ.

ಮೈನಸ್‌ ಪಾಯಿಂಟ್ 3: ವಿಡಿಯೊ ಕರೆಯಲ್ಲಿ ಕಿರಿಕಿರಿ

ಮೈನಸ್‌ ಪಾಯಿಂಟ್ 3: ವಿಡಿಯೊ ಕರೆಯಲ್ಲಿ ಕಿರಿಕಿರಿ

ಜೂಮ್ ಆಪ್‌ನಲ್ಲಿ ವಿಡಿಯೊ ಕರೆಗಳು ನಡೆಯುವಾಗ/ ಸಭೆ ನಡೆಯುವಾಗ ಆನ್‌ಲೈನ್‌ನಲ್ಲಿನ ಅಶ್ಲೀಲತೆಗೆ ಸಂಬಂಧದಿಸಿದ ಕಂಟೆಂಟ್‌, ಸೂಕ್ತವಲ್ಲದ ವಿಷಯದ ಮಾಹಿತಿ ನಡುವೆ ಕಾಣಿಸುವ ಸಾಧ್ಯತೆಗಳು ಇವೆ. ಇದು ವಿಡಿಯೊ ಸಭೆಗೆ ಕಿರಿಕಿರಿ ಅನಿಸುತ್ತದೆ.

Best Mobiles in India

English summary
Zoom app has become immensely popular as employees look at a simple platform to collaborate with their team members.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+