Home
ಸುದ್ದಿಜಾಲ

smartphone ಬಳಕೆದಾರರು 1ರೂ.ಖರ್ಚು ಮಾಡಿದ್ರೆ 6ರೂ.ಗಳ ಲಾಭ ಪಡೆಯುತ್ತಾರಂತೆ!

ಇಂದಿನ ದಿನಗಳಲ್ಲಿ ಸ್ಮಾರ್ಟ್‌ಫೋನ್‌ (smartphone ) ಅನ್ನು ಯಾರು ತಾನೆ ಬಳಕೆ ಮಾಡುವುದಿಲ್ಲ ಹೇಳಿ. ಇವು ಕೇವಲ ಕರೆ ಹಾಗೂ ಮೆಸೆಜ್‌ಗಳಿಗೆ ಮಾತ್ರ ಸೀಮಿತವಾಗದೆ ಬಳಕೆದಾರರ ಎಲ್ಲಾ ಬೇಕು-ಬೇಡಗಳನ್ನು ಈಡೇರಿಸುತ್ತಿದ್ದು, ಈ ನಡುವೆ ಆರ್ಥಿಕವಾಗಿಯೂ ಈ ಸ್ಮಾರ್ಟ್‌ಫೋನ್‌ಗಳು ಬಳಕೆದಾರರಿಗೆ ಲಾಭ ತಂದುಕೊಡುತ್ತಿವೆ.

ಹೌದು, ಈ ವಿಷಯ ಕೇಳಿ ನಿಮಗೆ ಗೊಂದಲ ಆರಂಭ ಆಗಿರಬಹುದು. ಅದೇಗೆ ಸ್ಮಾರ್ಟ್‌ಫೋನ್‌ ಮೂಲಕ ಆರ್ಥಿಕ ಮೌಲ್ಯ ಪಡೆಯಬಹುದು ಎಂದು. ಆದರೆ, ಅಧ್ಯಯನವೊಂದರ ಪ್ರಕಾರ ಸ್ಮಾರ್ಟ್‌ಫೋನ್ ಬಳಕೆದಾರರು 1ರೂ. ಖರ್ಚು ಮಾಡಿದರೆ 6ರೂ.ಗಳ ಲಾಭ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ. ಹಾಗಿದ್ರೆ, ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಹೇಗೆ ಈ ರೀತಿಯ ಲಾಭ ಸಿಗುತ್ತಿದೆ?. ಅಧ್ಯಯನದಿಂದ ತಿಳಿದು ಬಂದ ಅಚ್ಚರಿ ಮಾಹಿತಿ ಏನು ಎಂಬ ಮಾಹಿತಿ ಇಲ್ಲಿದೆ ನೋಡಿ.

smartphone ಬಳಕೆದಾರರು 1ರೂ.ಖರ್ಚು ಮಾಡಿದ್ರೆ 6ರೂ.ಗಳ ಲಾಭ ಪಡೆಯುತ್ತಾರಂತೆ!

ಸ್ಮಾರ್ಟ್‌ಫೋನ್‌ನಿಂದ ಆರ್ಥಿಕ ಲಾಭ: ದೇಶದಲ್ಲಿ ಸುಮಾರು 600 ಮಿಲಿಯನ್ ಸ್ಮಾರ್ಟ್ ಫೋನ್ ಬಳಕೆದಾರರಿದ್ದು, ಅದರಲ್ಲಿ ಶಾಪಿಂಗ್, ಬುಕಿಂಗ್, ಉತ್ಪನ್ನಗಳ ಸೇವೆ ಪಡೆದುಕೊಳ್ಳುತ್ತಿದ್ದಾರೆ. ಜೊತೆಗೆ ತಮ್ಮ ಯುಟಿಲಿಟಿ ಬಿಲ್‌ಗಳನ್ನು ಪಾವತಿಸಲು ಸ್ಮಾರ್ಟ್‌ಫೋನ್‌ಗಳನ್ನು ಹೆಚ್ಚಾಗಿ ಬಳಕೆ ಮಾಡುತ್ತಿದ್ದಾರೆ. ಇನ್ನು ಸೇವೆಗಳ ಬುಕಿಂಗ್‌ ಹಾಗೂ ನೇಮಕ ವಿಭಾಗದಲ್ಲಿ ನಡೆಯುವ ವ್ಯವಹಾರ ಅತ್ಯಂತ ಲಾಭದಾಯಕ ಡಿಜಿಟಲ್ ಚಟುವಟಿಕೆಯಾಗಿದೆ ಎಂದು ತಿಳಿದುಬಂದಿದೆ.

ಚೀನೀ ಸ್ಮಾರ್ಟ್‌ಫೋನ್ ತಯಾರಕ ವಿವೋ ಮತ್ತು ಟೆಚಾರ್ಕ್‌ನಿಂದ 'ಸ್ಮಾರ್ಟ್‌ಫೋನ್‌ಗಳ ಆರ್ಥಿಕ ಮೌಲ್ಯ' ಎಂಬ ಶೀರ್ಷಿಕೆಯಡಿ ಈ ಅಧ್ಯಯನ ನಡೆಸಲಾಗಿದೆ. ಅದರಂತೆ ಇದರಲ್ಲಿ ಸ್ಮಾರ್ಟ್‌ಫೋನ್ ಬಳಕೆದಾರರ ಆದ್ಯತೆಗಳು, ನಡವಳಿಕೆ ಮತ್ತು ಜನಸಂಖ್ಯಾಶಾಸ್ತ್ರವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಲಾಗಿದೆ. ಉಳಿದಂತೆ ಮೆಟ್ರೋ ಹಾಗೂ ಮೆಟ್ರೋ ಅಲ್ಲದ 1,000 ಸ್ಮಾರ್ಟ್‌ಫೋನ್ ಬಳಕೆದಾರರನ್ನು ಈ ಅಧ್ಯಯನಕ್ಕೆ ಒಳಪಡಿಸಲಾಗಿದೆ.

ಯಾವೆಲ್ಲಾ ನಗರದ ಜನರನ್ನು ಅಧ್ಯಯನಕ್ಕೆ ಒಳಪಡಿಲಾಗಿದೆ?: ಇನ್ನು ದೆಹಲಿ ಎನ್‌ಸಿಆರ್, ಅಹಮದಾಬಾದ್, ಬೆಂಗಳೂರು, ಚಂಡೀಗಢ, ಚೆನ್ನೈ, ಹೈದರಾಬಾದ್, ಜೈಪುರ, ಕಾನ್ಪುರ್, ಕೋಲ್ಕತ್ತಾ, ಲಕ್ನೋ, ಮುಂಬೈ, ನಾಗ್ಪುರ, ಪುಣೆ ಮತ್ತು ಸೂರತ್‌ಲ್ಲಿ ಈ ಅಧ್ಯಯನ ನಡೆಸಲಾಗಿದ್ದು, 18 ರಿಂದ 60 ವರ್ಷ ವಯಸ್ಸಿನ ಉದ್ಯಮಿಗಳು, ವೃತ್ತಿಪರರು, ಸರ್ಕಾರಿ ನೌಕರರು, ಕಾರ್ಪೊರೇಟ್ ಉದ್ಯೋಗಿಗಳು ಮತ್ತು ವಿದ್ಯಾರ್ಥಿಗಳು ಹಾಗೂ ಗೃಹಿಣಿಯರು ಇದರಲ್ಲಿ ಭಾಗಿಯಾಗಿದ್ದಾರೆ.

ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಹೇಗೆ ಲಾಭ?: ಮೊದಲೇ ಹೇಳಿದಂತೆ ವಿವಿಧ ಡಿಜಿಟಲ್ ಚಟುವಟಿಕೆಗಳಿಂದಾಗಿ ಗ್ರಾಹಕರು ಆರ್ಥಿಕ ಮೌಲ್ಯವನ್ನು ಪಡೆದುಕೊಳ್ಳುತ್ತಿದ್ದಾರೆ. ಅಂದರೆ ಶಾಪಿಂಗ್, ಬುಕಿಂಗ್, ಉತ್ಪನ್ನಗಳು ಮತ್ತು ಅಪಾಯಿಟ್ಮೆಂಟ್ ಪ್ರಕ್ರಿಯೆ ಮತ್ತು ಯುಟಿಲಿಟಿ ಬಿಲ್‌ಗಳನ್ನು ಪಾವತಿಸಲು ಸ್ಮಾರ್ಟ್‌ಫೋನ್‌ ಅನ್ನು ಹೆಚ್ಚಾಗಿ ಬಳಕೆ ಮಾಡುತ್ತಿದ್ದಾರಂತೆ. ಅದರಲ್ಲೂ ಸೇವಾ ಬುಕಿಂಗ್ ಮತ್ತು ಅಪಾಯಿಟ್ಮೆಂಟ್ ವಿಭಾಗದಲ್ಲಿ ಮಾಡುವ ಹೂಡಿಕೆಯಲ್ಲಿ ಎಂಟು ಪಟ್ಟು ಹೆಚ್ಚಿನ ಲಾಭ ಸಿಗಲಿದೆಯಂತೆ.

ಇದರಲ್ಲಿ ಕಿರಾಣಿ ಖರೀದಿಗಳಲ್ಲಿ 7.9 ಪಟ್ಟು, ಯುಟಿಲಿಟಿ ಬಿಲ್‌ಗಳು ಮತ್ತು ಶಾಪಿಂಗ್‌ನಲ್ಲಿ 7.6 ಪಟ್ಟು, ಅಗತ್ಯ ವಸ್ತುಗಳಲ್ಲಿ 7.4 ಪಟ್ಟು ಮತ್ತು ಡಿಜಿಟಲ್ ನಗದಿನಲ್ಲಿ 6.9 ಪಟ್ಟು ಲಾಭ ಪಡೆದುಕೊಳ್ಳುತ್ತಿದ್ದಾರಂತೆ. ಉಳಿದಂತೆ ಈ 41 ರಿಂದ 60 ವರ್ಷ ವಯಸ್ಸಿನವರಿಗೆ 7.7 ಆರ್ಥಿಕ ಮೌಲ್ಯ ಮತ್ತು 25 ರಿಂದ 40 ವರ್ಷ ವಯಸ್ಸಿನವರಿಗೆ 7.6 ಆರ್ಥಿಕ ಮೌಲ್ಯ ಸಿಗಲಿದೆ. ಇನ್ನು ಇದರಲ್ಲಿ ಗಮನಿಸಬೇಕಾದ ವಿಷಯ ಏನೆಂದರೆ ದೇಶದ 600 ಮಿಲಿಯನ್ ಸ್ಮಾರ್ಟ್‌ಫೋನ್‌ಗಳಲ್ಲಿ ಶೇಕಡಾ 97 ರಷ್ಟು ಆಂಡ್ರಾಯ್ಡ್‌ ಫೋನ್‌ಗಳು ಬಳಕೆ ಮಾಡಲಾಗುತ್ತಿದೆ.

smartphone ಬಳಕೆದಾರರು 1ರೂ.ಖರ್ಚು ಮಾಡಿದ್ರೆ 6ರೂ.ಗಳ ಲಾಭ ಪಡೆಯುತ್ತಾರಂತೆ!

ಇನ್ನುಳಿದಂತೆ ದೇಶದಲ್ಲಿ ಸ್ಮಾರ್ಟ್‌ಫೋನ್ ರಫ್ತು ಏಪ್ರಿಲ್ ಮತ್ತು ಮೇ ತಿಂಗಳಲ್ಲಿ 20,000 ಕೋಟಿ ರೂ.ಗೆ ದ್ವಿಗುಣಗೊಂಡಿದೆ. ಆಪಲ್‌ನ ಬಿಡಿಭಾಗಗಳ ತಯಾರಿಕೆಯಲ್ಲಿ ಭಾರತದ ಪಾಲು ಸುಮಾರು ಏಳು ಪ್ರತಿಶತದಷ್ಟಿದ್ದು,. ದೇಶದಲ್ಲಿ ಉತ್ಪಾದನೆಯನ್ನು ಹೆಚ್ಚಿಸಲು ಕಂಪನಿಗಳು ಎಲ್ಲಾ ರೀತಿಯ ಸಿದ್ಧತೆಗಳನ್ನು ನಡೆಸಿವೆ. ಕೇಂದ್ರ ಸರ್ಕಾರದ ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ (ಪಿಎಲ್ ಐ) ಯೋಜನೆಯಿಂದಾಗಿ ಸ್ಮಾರ್ಟ್‌ಫೋನ್‌ಗಳ ಉತ್ಪಾದನೆ ಹೆಚ್ಚಾಗುತ್ತಿದೆ.

Best Mobiles in India

English summary
The study revealed that a smartphone user who spends Re1 and gets a benefit of Rs 6.1.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+