Home
ಸುದ್ದಿಜಾಲ

2020ರಲ್ಲಿ ಬಳಕೆದಾರರು ಯಾವ ಆಪ್‌ನಲ್ಲಿ ಹೆಚ್ಚು ಹಣ ವ್ಯಯಸಿದ್ದಾರೆ ಗೊತ್ತಾ?

ಪ್ರಸಕ್ತ 2020 ವರ್ಷದಲ್ಲಿ ಸ್ಮಾರ್ಟ್‌ಫೋನ್ ಮತ್ತು ಅಪ್ಲಿಕೇಶನ್ ವಲಯವು ಹೆಚ್ಚು ಬಳಕೆಯಲ್ಲಿ ಕಾಣಿಸಿಕೊಂಡಿದೆ. ಕೋವಿಡ್‌ನ ಸಂದರ್ಭದ ವೇಳೆ ಕೆಲವು ಅಪ್ಲಿಕೇಶನ್‌ಗಳು ಬಳಕೆದಾರರಿಗೆ ಅನುಕೂಲಕರ ಸೇವೆ ನೀಡಿವೆ. ಈ ವರ್ಷದಲ್ಲಿ ಆಪಲ್‌ ಐಓಎಸ್‌ ಹಾಗೂ ಆಂಡ್ರಾಯ್ಡ್‌ ಓಎಸ್‌ ಬಳಕೆದಾರರಿಬ್ಬರೂ ಗೇಮಿಂಗ್, ಮನರಂಜನೆ, ಸಾಮಾಜಿಕ ಜಾಲತಾಣಗಳ ಅಪ್ಲಿಕೇಶನ್‌ಗಳ ಬಳಕೆ ಮಾಡಿದ್ದು, ಹಾಗೆಯೇ ಆಪ್‌ಗಳಲ್ಲಿ ಹಣ ವ್ಯಯಸಿದ್ದಾರೆ. ಯಾವ ಆಪ್‌ಗಳಲ್ಲಿ ಹೆಚ್ಚು ವ್ಯಯಸಿದ್ದಾರೆ ಅಂತೀರಾ?

ಕೋವಿಡ್‌

ಹೌದು, 2020 ವರ್ಷವು ಕೋವಿಡ್‌ ಹೊಡೆತಕ್ಕೆ ನಲುಗಿ ಹೋಗಿದೆ ಎನ್ನಬಹುದು. ಆದರೆ ಈ ವರ್ಷದಲ್ಲಿ ಐಓಎಸ್‌ ಹಾಗೂ ಆಂಡ್ರಾಯ್ಡ್‌ ಓಎಸ್‌ ಬಳಕೆದಾರರು ಕೆಲವು ಆಪ್‌ಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಿದ್ದಾರೆ. ಐಫೋನ್‌ ಬಳಕೆದಾರರು ಹೆಚ್ಚಾಗಿ ಗೇಮ್ಸ್‌, ಫೋಟೊ, ವಿಡಿಯೊ ಹಾಗೂ ಸಾಮಾಜಿಕ ತಾಣಗಳಲ್ಲಿ ಹಣ ವ್ಯಯಸಿದ್ದಾರೆ. ಅದೇ ರೀತಿ ಆಂಡ್ರಾಯ್ಡ್‌ ಬಳಕೆದಾರರು ಗೇಮ್ಸ್‌, ಮನರಂಜನೆ ಹಾಗೂ ಸಾಮಾಜಿಕ ತಾಣಗಳಲ್ಲಿ ಹೆಚ್ಚಾಗಿ ವ್ಯಯಸಿದ್ದಾರೆ ಎಂದು ಆಪ್‌ ಅನ್ನಿ-Annie ವರದಿ ಮಾಡಿದೆ. ಹಾಗಾದರೇ 2020ರಲ್ಲಿ ಐಫೋನ್‌ ಹಾಗೂ ಆಂಡ್ರಾಯ್ಡ್‌ ಫೋನ್‌ ಬಳಕೆದಾರರು ಯಾವ ಆಪ್‌ಗಳಲ್ಲಿ ಹೆಚ್ಚು ಹಣ ವ್ಯಯಸಿದ್ದಾರೆ ಎನ್ನುವ ಬಗ್ಗೆ ಮುಂದೆ ನೋಡೋಣ ಬನ್ನಿರಿ.

Tinder- ಟಿಂಡರ್

Tinder- ಟಿಂಡರ್

ಜನಪ್ರಿಯ ಡೇಟಿಂಗ್ ಅಪ್ಲಿಕೇಶನ್ ಟಿಂಡರ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಸಂಭಾವ್ಯ ಹೊಂದಾಣಿಕೆಗಳನ್ನು ಕಂಡುಹಿಡಿಯಲು ಬಳಕೆದಾರರು ಜನರ ಪ್ರೊಫೈಲ್‌ಗಳ ಮೂಲಕ ಹೋಗಲು ಅಪ್ಲಿಕೇಶನ್ ಅನುಮತಿಸುತ್ತದೆ.

ಟಿಕ್‌ಟಾಕ್‌

ಟಿಕ್‌ಟಾಕ್‌

ಚೀನೀ ವಿಡಿಯೋ ಶೇರಿಂಗ್ ಆಪ್‌ ಟಿಕ್‌ಟಾಕ್ ಲಿಸ್ಟ್‌ನಲ್ಲಿ 2 ನೇ ಸ್ಥಾನದಲ್ಲಿದೆ. ಇದು 15 ಸೆಕೆಂಡುಗಳ ವೀಡಿಯೊಗಳನ್ನು ಮಾಡಲು ಮತ್ತು ಹಂಚಿಕೊಳ್ಳಲು ಬಳಕೆದಾರರಿಗೆ ಅನುವು ಮಾಡಿಕೊಡುತ್ತದೆ. ಕೇಂದ್ರ ಸರ್ಕಾರ ಈ ಆಪ್‌ ಬ್ಯಾನ್ ಮಾಡಿದೆ.

ಯೂಟ್ಯೂಬ್

ಯೂಟ್ಯೂಬ್

ಗೂಗಲ್ ಒಡೆತನದ ಜನಪ್ರಿಯ ವೀಡಿಯೊ ಪ್ಲಾಟ್‌ಫಾರ್ಮ್ ಅಪ್ಲಿಕೇಶನ್ ಆಗಿರುವ ಯೂಟ್ಯೂಬ್ ಮೂರನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಈ ತಾಣದಲ್ಲಿ ಎಲ್ಲ ವಿಷಯಗಳ ವಿಡಿಯೊ ಕಂಟೆಂಟ್ ಲಭ್ಯ.

ಡಿಸ್ನಿ ಪ್ಲಸ್‌

ಡಿಸ್ನಿ ಪ್ಲಸ್‌

ಜನಪ್ರಿಯ ವಿಡಿಯೊ ಸ್ಟ್ರೀಮಿಂಗ್ ಅಪ್ಲಿಕೇಶನ್ ಡಿಸ್ನಿ + ಲಿಸ್ಟ್‌ನಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಇದು ಡಿಸ್ನಿ, ಪಿಕ್ಸರ್, ಮಾರ್ವೆಲ್, ಸ್ಟಾರ್ ವಾರ್ಸ್ ಮತ್ತು ನ್ಯಾಷನಲ್ ಜಿಯಾಗ್ರಫಿಕ್ ವಿಷಯವನ್ನು ಒಳಗೊಂಡಿದೆ.

Tencent Video- ಟೆನ್ಸೆಂಟ್ ವಿಡಿಯೊ

Tencent Video- ಟೆನ್ಸೆಂಟ್ ವಿಡಿಯೊ

ಟೆನ್ಸೆಂಟ್ ವಿಡಿಯೊ ಅಪ್ಲಿಕೇಶನ್ ಲಿಸ್ಟ್‌ನಲ್ಲಿ ಐದನೇ ಸ್ಥಾನದಲ್ಲಿದೆ. ಇದು ಚಲನಚಿತ್ರಗಳು, ನಾಟಕಗಳು ಮತ್ತು ವೈವಿಧ್ಯಮಯ ಪ್ರದರ್ಶನಗಳ ಆಯ್ಕೆಯನ್ನು ನೀಡುತ್ತದೆ.

Netflix-ನೆಟ್‌ಫ್ಲಿಕ್ಸ್‌

Netflix-ನೆಟ್‌ಫ್ಲಿಕ್ಸ್‌

ಜನಪ್ರಿಯ ವಿಡಿಯೊ ಸ್ಟರೀಮಿಂಗ್ ತಾಣಗಳಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಂಡಿರುವ ನೆಟ್‌ಫ್ಲಿಕ್ಸ್‌ ತಾಣವು ಆರನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಇದು ಹಲವು ಮನರಂಜನೆಯ ಕಂಟೆಂಟ್ ಹೊಂದಿದೆ.

Best Mobiles in India

English summary
6 apps that smartphone users globally spend most on in 2020 as per App Annie’s report.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+