Subscribe to Gizbot

ಪೋಲಾಗುವ ದುಡ್ಡಿಗೆ ಬ್ರೇಕ್ ಹಾಕುವ ಸೂಪರ್ ಅಪ್ಲಿಕೇಶನ್

Posted By:

ನಿಮ್ಮ ದುಡ್ಡನ್ನು ಉಳಿಸಿ ನಿಮ್ಮ ಆರ್ಥಿಕ ವ್ಯವಸ್ಥೆಯನ್ನು ಇನ್ನಷ್ಟು ಸುಧಾರಿಸುವ ಅಪ್ಲಿಕೇಶನ್ ಒಂದಿದ್ದರೆ ಎಷ್ಟು ಒಳ್ಳೆಯದು ಅಲ್ಲವೇ? ಚಿಂತಿಬಿಡಿ. ತಂತ್ರಜ್ಞಾನ ಇಂತಹುದೇ ದುಡ್ಡು ಉಳಿಸುವ ಅಪ್ಲಿಕೇಶನ್‌ಗಳ ಜೊತೆ ಬಂದಿದ್ದು ಪೋಲಾಗುತ್ತಿರುವ ದುಡ್ಡಿಗೆ ಇದು ಬ್ರೇಕ್ ಹಾಕುತ್ತದೆ. [ಹೆಚ್ಚು ಇಂಟರ್ನೆಟ್ ಬಳಕೆಗೆ ಕಡಿವಾಣ ಹಾಕಲಿರುವ ಅಪ್ಲಿಕೇಶನ್‌ಗಳು]

ಐಓಎಸ್ ಮತ್ತು ಆಂಡ್ರಾಯ್ಡ್ ಅಪ್ಲಿಕೇಶನ್ ಎರಡರಲ್ಲೂ ಕಾರ್ಯನಿರ್ವಹಿಸುವ ಈ ಅಪ್ಲಿಕೇಶನ್‌ಗಳು ಪೋಲಾಗುತ್ತಿರುವ ದುಡ್ಡಿಗೆ ಕಡಿವಾಣ ಹಾಕುತ್ತದೆ. ಬನ್ನಿ ಆ ಅಪ್ಲಿಕೇಶನ್‌ಗಳ ಬಗ್ಗೆ ಹೆಚ್ಚಿನ ಮಾಹಿತಿ ಕೆಳಗಿನ ಸ್ಲೈಡರ್‌ಗಳಲ್ಲಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮಿಂಟ್

ಪೋಲಾಗುವ ದುಡ್ಡಿಗೆ ಬ್ರೇಕ್ ಹಾಕುವ ಸೂಪರ್ ಅಪ್ಲಿಕೇಶನ್

ನಿಮ್ಮ ಎಲ್ಲಾ ಖಾತೆಗಳಿಂದ ಆರ್ಥಿಕ ಚಟುವಟಿಕೆಯ ಮೇಲೆ ನಿಗಾ ಇರಿಸಲು ಈ ಅಪ್ಲಿಕೇಶನ್ ಸಹಕಾರಿ. ನಿಮ್ಮ ಹಣ ವರ್ಗಾವಣೆಯು ಈ ಅಪ್ಲಿಕೇಶನ್‌ನಲ್ಲಿ ಸ್ವಯಂಚಾಲಿತವಾಗಿ ದಾಖಲಾಗಿರುತ್ತದೆ ಮತ್ತು ವರ್ಗೀಕರಣಕ್ಕೆ ಒಳಪಡುತ್ತದೆ. ಐಓಎಸ್ ಮತ್ತು ಆಂಡ್ರಾಯ್ಡ್ ಎರಡರಲ್ಲೂ ಇದು ಲಭ್ಯವಿದೆ.ಡೌನ್‌ಲೋಡ್ ಲಿಂಕ್

ಬಿಲ್ ಟ್ರ್ಯಾಕರ್

ಪೋಲಾಗುವ ದುಡ್ಡಿಗೆ ಬ್ರೇಕ್ ಹಾಕುವ ಸೂಪರ್ ಅಪ್ಲಿಕೇಶನ್

ಸ್ನ್ಯಾಪ್‌ಟ್ಯಾಪ್‌ನ ಬಿಲ್ ಪಾವತಿಸುವ ಈ ಉತ್ತಮ ಅಪ್ಲಿಕೇಶನ್ ಅನ್ನು ಎಂದೂ ಮಿಸ್ ಮಾಡದಿರಿ. ಪಾಸ್ ಕೋಡ್ ಸಂರಕ್ಷಿತ ಬಿಲ್ ಟ್ರ್ಯಾಕರ್ ಡ್ಯು ದಿನಾಂಕಗಳ ಮೇಲೆ ನಿಗಾಇರಿಸುತ್ತದೆ ಅಲ್ಲದೆ ಬಾಕಿಯಾಗಿರುವ ಪಾವತಿಗಳ ಬಗ್ಗೆ ನಿಮ್ಮನ್ನು ನೆನಪಿಸುತ್ತದೆ. ಐಓಎಸ್‌ಗೆ ಲಭ್ಯ.ಡೌನ್‌ಲೋಡ್ ಲಿಂಕ್

ಯು ನೀಡ್ ಎ ಬಜೆಟ್

ಪೋಲಾಗುವ ದುಡ್ಡಿಗೆ ಬ್ರೇಕ್ ಹಾಕುವ ಸೂಪರ್ ಅಪ್ಲಿಕೇಶನ್

ನಿಮ್ಮ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸುತ್ತಾ ಒತ್ತಡ ರಹಿತಿ ವಾತಾವರಣವನ್ನು ಇದು ಸೃಷ್ಟಿಸುತ್ತದೆ. ಐಓಎಸ್ ಮತ್ತು ಆಂಡ್ರಾಯ್ಡ್ ಎರಡಕ್ಕೂ ಲಭ್ಯ. ಡೌನ್‌ಲೋಡ್ ಲಿಂಕ್

ಶಾಪ್ ಕಿಕ್

ಪೋಲಾಗುವ ದುಡ್ಡಿಗೆ ಬ್ರೇಕ್ ಹಾಕುವ ಸೂಪರ್ ಅಪ್ಲಿಕೇಶನ್

ಈಗಾಗಲೇ 6 ಮಿಲಿಯನ್‌ನಷ್ಟು ಜನರು ಈ ಅಪ್ಲಿಕೇಶನ್ ಅನ್ನು ಬಳಸುತ್ತಿದ್ದು ಉತ್ಪನ್ನಗಳನ್ನು ಬ್ರೌಸ್ ಮಾಡಲು ಇದು ಅತ್ಯುತ್ತಮ ಎಂದೆನಿಸಿದೆ. ಖರೀದಿಗಳನ್ನು ಮಾಡುವ ಮೂಲಕ ಬಳಕೆದಾರರು ಪಾಯಿಂಟ್‌ಗಳನ್ನು ಗಳಿಸಬಹುದಾಗಿದ್ದು ಸ್ನೇಹಿತರನ್ನು ಇದಕ್ಕೆ ಆಮಂತ್ರಿಸಬಹುದಾಗಿದೆ. ಐಓಎಸ್ ಮತ್ತು ಆಂಡ್ರಾಯ್ಡ್ ಎರಡಕ್ಕೂ ಲಭ್ಯ.ಡೌನ್‌ಲೋಡ್ ಲಿಂಕ್

ಇಬೋಟ್ಟಾ

ಪೋಲಾಗುವ ದುಡ್ಡಿಗೆ ಬ್ರೇಕ್ ಹಾಕುವ ಸೂಪರ್ ಅಪ್ಲಿಕೇಶನ್

ಉತ್ಪನ್ನ ಗ್ಯಾಲರಿಯಲ್ಲಿರುವ ವಿವಿಧ ಕೊಡುಗೆಗಳನ್ನು ಆಯ್ಕೆಮಾಡುವ ಮೂಲಕ ನಿಮಗೆ ಆಸಕ್ತಿ ಇರುವ ಒಂದನ್ನು ಆರಿಸಿ. ಶಾಪಿಂಗ್‌ನಿಂದ ನೈಜ ಹಣ (ರಿಯಲ್ ಮನಿ) ಯನ್ನು ಗಳಿಸುವ ಅಪ್ಲಿಕೇಶನ್ ಇದಾಗಿದೆ. ಐಓಎಸ್ ಮತ್ತು ಆಂಡ್ರಾಯ್ಡ್ ಎರಡಕ್ಕೂ ಲಭ್ಯ.ಡೌನ್‌ಲೋಡ್ ಲಿಂಕ್

ರೀಟೈಲ್ ಮಿ ನೋಟ್

ಪೋಲಾಗುವ ದುಡ್ಡಿಗೆ ಬ್ರೇಕ್ ಹಾಕುವ ಸೂಪರ್ ಅಪ್ಲಿಕೇಶನ್

ಇದು ಐಓಎಸ್ ಮತ್ತು ಆಂಡ್ರಾಯ್ಡ್‌ಗೆ ಲಭ್ಯವಾಗಿದೆ. ನಿಮ್ಮ ಹತ್ತಿರದ ಸ್ಟೋರ್‌ಗಳಿಂದ ಡೀಲ್‌ಗಳನ್ನು ನಿಮಗೆ ಇದನ್ನು ಬಳಸಿ ಹುಡುಕಬಹುದಾಗಿದೆ.ಡೌನ್‌ಲೋಡ್ ಲಿಂಕ್

ಸ್ನಿಪ್ ಸ್ನ್ಯಾಪ್

ಪೋಲಾಗುವ ದುಡ್ಡಿಗೆ ಬ್ರೇಕ್ ಹಾಕುವ ಸೂಪರ್ ಅಪ್ಲಿಕೇಶನ್

ರೀಟೈಲ್ ಮಿ ನೋಟ್‌ನಂತೆಯೇ, ಇದು ಮೊಬೈಲ್ ಕೂಪನ್ ಉಳ್ಳ ಅಪ್ಲಿಕೇಶನ್ ಆಗಿದ್ದು, ಇದು ರೀಟೈಲರ್‌ಗಳಿಂದ ಮುದ್ರಿತ ಕೂಪನ್‌ಗಳ ಚಿತ್ರವನ್ನು ತೆಗೆಯುತ್ತದೆ ಮತ್ತು ಅದನ್ನು ಡಿಜಿಟಲ್‌ಗೆ ಪರಿವರ್ತಿಸುತ್ತದೆ.ಡೌನ್‌ಲೋಡ್ ಲಿಂಕ್

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Apps don’t just have to be time wasting or money draining. Check out these 7 money saving apps that will not only help you save you money, but also better manage your finances.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot