Home
ಸುದ್ದಿಜಾಲ

ಐಫೋನ್ 6ಎಸ್ ಬಳಕೆದಾರರಿಗೆ ಪರಮಾಪ್ತ ಏಕೆ?

By Shwetha

ಬಹುನಿರೀಕ್ಷಿತ ಐಫೋನ್ 6ಎಸ್ ಮತ್ತು ಐಫೋನ್ 6ಎಸ್ ಪ್ಲಸ್ ಸ್ಮಾಟ್‌ಫೋನ್‌ಗಳು ಆಪಲ್‌ನ ಪ್ರಧಾನ ಅಂಶಗಳನ್ನು ಒಳಗೊಂಡು ಈ ವರ್ಷ ಸ್ಯಾನ್‌ಪ್ರ್ಯಾನ್ಸಿಸ್ಕೊದಲ್ಲಿ ಬಹಿರಂಗಗೊಂಡಿವೆ. ಕಳೆದ ವರ್ಷದ ಐಫೋನ್ 6 ನ ಅಪ್‌ಗ್ರೇಡ್‌ ಆಗಿರುವ ಮಾದರಿಯಾಗಿ ಪ್ರಸ್ತುತ ಆಪಲ್‌ ಐಫೋನ್ ಪುನರಾವರ್ತನೆಯಾಗಿದೆ. ಕಳೆದ ಭಾರಿ ಮಾರುಕಟ್ಟೆಗೆ ಬಂದಿರುವ ಐಫೋನ್‌ ಅಪ್‌ಗ್ರೇಡ್ ಎಸ್ ಗಿಂತಲೂ ಇದೀಗ ತಾನೆ ಹೊಸದಾಗಿ ಬಂದ ಐಫೋನ್ "6S" ಅಪ್‌ಗ್ರೇಡ್‌ ಆದ ಐಫೋನ್‌ಗಳಲ್ಲೇ ಅತಿ ದೊಡ್ಡ ಐಫೋನ್ ಆಗಿ ಗೋಚರಿಸುತ್ತಿದೆ. ಇತ್ತೀಚಿನ ಐಫೋನ್‌ಗಳು ಮಾರುಕಟ್ಟೆಯಲ್ಲಿ ಪ್ರಬಲ ಡಿವೈಸ್ ಆಗಿ ಗೋಚರಿಸುತ್ತಿದ್ದು, ಹೆಚ್ಚು ಉಪಯುಕ್ತ ಅಂಶಗಳನ್ನು ಒಳಗೊಂಡು ಗ್ರಾಹಕರ ಮನಸೆಳೆಯುತ್ತಿವೆ.

ಓದಿರಿ: ವಿನಾಯಕ ಚತುರ್ಥಿ: ದುಬಾರಿ ಫೋನ್ಸ್ ಮೇಲೆ ಭರ್ಜರಿ ದರಕಡಿತ

ಇಂದಿನ ಲೇಖನದಲ್ಲಿ ಆ 7 ಉಪಯುಕ್ತ ಅಂಶಗಳನ್ನು ಕಂಡುಕೊಳ್ಳೋಣ.

3 ಡಿ ಟಚ್

3 ಡಿ ಟಚ್

ಐಫೋನ್ 6 ಎಸ್‌ನ ಅದ್ಭುತ ಗುಣ ಎಂದರೆ ಅದರ 3 ಡಿ ಟಚ್ ಆಗಿದೆ. ಫೋನ್‌ನೊಂದಿಗೆ ಹೊಸ ರೀತಿಯ ಸಂವಹನವನ್ನು ಬಳಕೆದಾರರಿಗೆ ಒದಗಿಸುತ್ತಿದೆ. ಪರದೆಯ ಅಡಿಯಲ್ಲಿರುವ ಸೆನ್ಸಾರ್‌ಗಳು ಟಾಪ್ಟಿಕ್ ಎಂಜಿನ್‌ನೊಂದಿಗೆ ಸಂಯೋಜನೆಗೊಂಡು, 3 ಡಿ ಸ್ಪರ್ಶ ವೈಬ್ರೇಟಿಂಗ್ ಫೀಡ್‌ಬ್ಯಾಕ್ ಅನ್ನು ಒದಗಿಸುತ್ತದೆ.

ಹೊಸದಾದ ಉತ್ಪನ್ನಗಳು

ಹೊಸದಾದ ಉತ್ಪನ್ನಗಳು

ಇನ್ನು ಡಿವೈಸ್‌ನ ವಿನ್ಯಾಸದಲ್ಲೂ ಹೊಸ ರೀತಿಯ ಮಾರ್ಪಾಡುಗಳನ್ನು ನಮಗೆ ಕಂಡುಕೊಳ್ಳಬಹುದಾಗಿದೆ. ಹೊಸ ಐಫೋನ್‌ಗಳನ್ನು ಹೆಚ್ಚು ಡ್ಯುರೇಬಲ್ ಇರುವ 7000 ಅಲ್ಯುಮಿನಿಯಮ್‌ನಿಂದ ಮಾಡಲಾಗಿದ್ದು ಇದು ಉತ್ತಮ ಗುಣಮಟ್ಟವನ್ನು ಡಿವೈಸ್‌ಗೆ ನೀಡುತ್ತದೆ. ಐಫೋನ್ 6ಎಸ್ ಮತ್ತು ಐಫೋನ್ 6ಎಸ್ ಪ್ಲಸ್ ಸ್ವಲ್ಪ ದಪ್ಪನಾಗಿದ್ದು ಭಾರವಾಗಿದೆ.

ನವೀಕೃತ ಕ್ಯಾಮೆರಾ

ನವೀಕೃತ ಕ್ಯಾಮೆರಾ

ಐಫೋನ್ 4 ಎಸ್‌ನ ನಂತರ ಆಪಲ್ ಮಾಡಿರುವ ಅಪ್‌ಗ್ರೇಡ್ ಎಂದರೆ ಕ್ಯಾಮೆರಾಗಳಲ್ಲಾಗಿದೆ. ಐಫೋನ್ 6ಎಸ್ ಮತ್ತು 6ಎಸ್ ಪ್ಲಸ್‌ 12 ಮೆಗಾ ಪಿಕ್ಸೆಲ್ ‌ ರಿಯರ್ ಕ್ಯಾಮೆರಾ ಮತ್ತು ರೆಟಿನಾ ಫ್ಲ್ಯಾಶ್ ಹೊಂದಿರುವ 5 ಮೆಗಾಪಿಕ್ಸೆಲ್ ಮುಂಭಾಗ ಕ್ಯಾಮೆರಾವನ್ನು ಒಳಗೊಂಡಿದೆ.

ಉತ್ತಮ ಚಿಪ್‌ಸೆಟ್

ಉತ್ತಮ ಚಿಪ್‌ಸೆಟ್

80 ಶೇಕಡಷ್ಟು ವೇಗದ ಪ್ರೊಸೆಸಿಂಗ್ ಮತ್ತು 90 ಶೇಕಡಾದಷ್ಟು ಉತ್ತಮ ಗ್ರಾಫಿಕ್ಸ್ ಕಾರ್ಯಕ್ಷಮತೆಯನ್ನು ಒದಗಿಸುವ 64 ಬಿಟ್ A9 ಚಿಪ್‌ನೊಂದಿಗೆ ಐಫೋನ್ 6ಎಸ್ ಬಂದಿದೆ.

ಅಧಿಕ RAM

ಅಧಿಕ RAM

ಎಲ್ಲರ ಬೇಡಿಕೆ ಮತ್ತು ಆಸೆಗೆ ತಕ್ಕಂತೆ ಐಫೋನ್ 6 ಗೆ 1 ಜಿಬಿ ಹಾಗೂ ಐಫೋನ್ 6ಎಸ್‌ನಲ್ಲಿ 2 ಜಿಬಿ RAM ಅನ್ನು ಹೊಂದಿದೆ.

ಹೆಚ್ಚು ಕನೆಕ್ಟಿವಿಟಿ ಆಯ್ಕೆಗಳು

ಹೆಚ್ಚು ಕನೆಕ್ಟಿವಿಟಿ ಆಯ್ಕೆಗಳು

ಐಫೋನ್ 6ಎಸ್ ಮತ್ತು 6ಎಸ್ ಪ್ಲಸ್ ಉತ್ತಮ ಕನೆಕ್ಟಿವಿಟಿ ಆಯ್ಕೆಗಳನ್ನು ಹೊಂದಿದ್ದು ಇದು ಎಲ್‌ಟಿಇ-ಎ ಬೆಂಬಲವನ್ನು ಪಡೆದುಕೊಂಡಿದೆ ಇದು ವೇಗವನ್ನು ದ್ವಿಗುಣಗೊಳಿಸುವಲ್ಲಿ ಸಹಕಾರಿಯಾಗಿದೆ.

ಹೆಚ್ಚು ಬಣ್ಣಗಳು

ಹೆಚ್ಚು ಬಣ್ಣಗಳು

ಇನ್ನು ಇತರ ಬದಲಾವಣೆಗಳನ್ನು ಹೊರತುಪಡಿಸಿ ಐಫೋನ್ 6ಎಸ್ ಗುಲಾಬಿ ಬಣ್ಣದಲ್ಲಿ ಬಂದಿದೆ. ಹೆಚ್ಚಿನ ಐಫೋನ್ ಬಳಕೆದಾರರನ್ನುಇದು ಆಕರ್ಷಿಸುವುದು ಖಂಡಿತ.

Best Mobiles in India

English summary
For those who use an iPhone 6 and iPhone 6 Plus, and want to know whether they should upgrade to the newest iPhone 6S and iPhone 6S Plus, here we bring you 7 reasons why you should consider upgrading to the latest ones.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+