Home
ಸುದ್ದಿಜಾಲ

Smartring: ಭಾರತದಲ್ಲಿ 7 ರಿಂಗ್ ಅನಾವರಣ! ಕಾಂಟ್ಯಾಕ್ಟ್‌ಲೆಸ್ ಪಾವತಿ ಆಯ್ಕೆ, ಬೆಲೆ ಎಷ್ಟು?

ಇದು ಸ್ಮಾರ್ಟ್‌ರಿಂಗ್‌ಗಳ (Smartring) ಜಮಾನವಾಗಿದೆ. ಈ ಕಾರಣಕ್ಕೆ ಪ್ರಮುಖ ಸ್ಮಾರ್ಟ್‌ ಡಿವೈಸ್‌ ತಯಾರಿಕಾ ಸಂಸ್ಥೆಗಳು ಭಿನ್ನ ಫೀಚರ್ಸ್‌ ಆಯ್ಕೆಯೊಂದಿಗೆ ಹೊಸ ಹೊಸ ಸ್ಮಾರ್ಟ್‌ರಿಂಗ್‌ಗಳನ್ನು ಲಾಂಚ್‌ ಮಾಡಿಕೊಂಡು ಬರುತ್ತಿದ್ದು, ಈ ನಡುವೆ 7 ರಿಂಗ್ ಅನ್ನು ಅನಾವರಣ ಮಾಡಲಾಗಿದೆ.

ಹೌದು, 7 ರಿಂಗ್ (7 Ring) ಅನ್ನು ಅಧಿಕೃತವಾಗಿ ಅನಾವರಣಗೊಳಿಸಲಾಗಿದೆ. ಈ ರಿಂಗ್ ಭಾರತದ ಮೊದಲ ಸಂಪರ್ಕರಹಿತ ಪಾವತಿ ಆಯ್ಕೆ (Contactless payment option) ಹೊಂದಿರುವ ಡಿವೈಸ್‌ ಎಂದು ತಿಳಿಸಲಾಗಿದೆ. ಈ ರಿಂಗ್‌ ಅನ್ನು ಮೊದಲ ಬಾರಿಗೆ ಸೆಪ್ಟೆಂಬರ್‌ನಲ್ಲಿ ಗ್ಲೋಬಲ್ ಫಿನ್‌ಟೆಕ್ ಫೆಸ್ಟ್ 2023 ನಲ್ಲಿ ಪ್ರದರ್ಶಿಸಲಾಗಿತ್ತು. ಆದರೆ, ಈಗ ನೀವು ಈಗ ರಿಂಗ್‌ ಧರಿಸುವ ಕಾಲ ಬಂದೇ ಬಿಟ್ಟಿದೆ. ಹಾಗಿದ್ರೆ, ಇದರ ಇತರೆ ಪ್ರಮುಖ ಫೀಚರ್ಸ್‌ ಹಾಗೂ ಬೆಲೆ ವಿವರ ಇಲ್ಲಿದೆ ನೋಡಿ.

ಭಾರತದಲ್ಲಿ 7 ರಿಂಗ್ ಅನಾವರಣ! ಕಾಂಟ್ಯಾಕ್ಟ್‌ಲೆಸ್ ಪಾವತಿ ಆಯ್ಕೆ, ಬೆಲೆ ಎಷ್ಟು?

7 ರಿಂಗ್: ಏರೋಸ್ಪೇಸ್-ಗ್ರೇಡ್, ಸ್ಕ್ರಾಚ್-ರೆಸಿಸ್ಟೆಂಟ್ ಜಿರ್ಕೋನಿಯಾ ಸೆರಾಮಿಕ್ (ZrO2) ನಿಂದ 7 ರಿಂಗ್ ಅನ್ನು ನಿರ್ಮಾಣ ಮಾಡಲಾಗಿದೆ. ಚರ್ಮಕ್ಕೆ ಹಾನಿಯಾಗದಂತೆ ತಡೆಯಲು ಹೈಪೋಲಾರ್ಜನಿಕ್ ರೆಸಿನ್‌ ಬ್ಯಾಂಡ್ ಆಯ್ಕೆ ನೀಡಲಾಗಿದೆ. ಇದಲ್ಲದೆ 100% ಧೂಳು ಮತ್ತು ನೀರಿನ ನಿರೋಧಕವನ್ನು ಕ್ಲೈಮ್ ಮಾಡಲಿದ್ದು, ಇದಕ್ಕಾಗಿ IP68 ರೇಟ್ ನೀಡಲಾಗಿದೆ.
7 ರಿಂಗ್ ಏಳು ವಿಭಿನ್ನ ಗಾತ್ರಗಳಲ್ಲಿ ಬಂದಿದ್ದು, ಎಲ್ಲಾ ಬೆರಳುಗಳಿಗೆ ಆರಾಮವಾಗಿ ಹೊಂದಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ.

ಈ ಸ್ಮಾರ್ಟ್ ರಿಂಗ್ ಅನ್ನು 7 ಎಂಬ ಭಾರತೀಯ ಕಂಪನಿಯು ಎನ್‌ಪಿಸಿಐ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಿದೆ. ಟ್ಯಾಪ್ ಮತ್ತು ಪೇ ವಿಧಾನದ ಮೂಲಕ ಸಾಂಪ್ರದಾಯಿಕ ಕಾರ್ಡ್‌ಗಳು, ಸ್ಯಾಮ್‌ಸಂಗ್ ಪೇ ಮತ್ತು ಆಪಲ್ ಪೇ ನೊಂದಿಗೆ ಕೆಲಸ ಮಾಡಲು 7 ರಿಂಗ್ ಎನ್‌ಎಫ್‌ಸಿ ಅನ್ನು ಬಳಕೆ ಮಾಡಲಿದೆ. ಇನ್ನು ಸಂಪರ್ಕರಹಿತ ಪಾವತಿ ವ್ಯವಸ್ಥೆಯಲ್ಲಿ ಕಲಸ ಮಾಡಲು EMVco ಪ್ರಮಾಣೀಕೃತವಾಗಿದೆ.

ಭಾರತದಲ್ಲಿ 7 ರಿಂಗ್ ಅನಾವರಣ! ಕಾಂಟ್ಯಾಕ್ಟ್‌ಲೆಸ್ ಪಾವತಿ ಆಯ್ಕೆ, ಬೆಲೆ ಎಷ್ಟು?

ಸ್ಮಾರ್ಟ್‌ರಿಂಗ್ ಅನ್ನು ಸಕ್ರಿಯಗೊಳಿಸಲು ಮತ್ತು ಪ್ರಿಪೇಯ್ಡ್ ವ್ಯಾಲೆಟ್ ಅನ್ನು ಹೊಂದಿಸಲು ಬಳಕೆದಾರರಿಗೆ ಕಂಪ್ಯಾನಿಯನ್ ಆಪ್‌ ಅನ್ನು ಫೋನ್‌ನಲ್ಲಿ ಇನ್‌ಸ್ಟಾಲ್‌ ಮಾಡಿಕೊಳ್ಳಬೇಕಾಗುತ್ತದೆ. ಪ್ರೀಪೇಯ್ಡ್ ವ್ಯಾಲೆಟ್ ಅನ್ನು ಹೊಂದಿಸಲು ಬಳಕೆದಾರರು ಕೆವೈಸಿ ದಾಖಲೆಗಳೊಂದಿಗೆ ಖಾತೆಗಳನ್ನು ಪರಿಶೀಲಿಸುವ ಅಗತ್ಯವಿದ್ದು, ಮಾಸಿಕ 10,000 ರೂ. ಗಳ ವ್ಯವಹಾರ ನಡೆಸಬಹುದು. ಜೊತೆಗೆ ವ್ಯಾಲೆಟ್, ಪಿನ್, ಒಟಿಪಿ ಇತ್ಯಾದಿಗಳ ಅಗತ್ಯವಿಲ್ಲದೇ 5,000 ರೂಗಳಿಗಿಂತ ಕಡಿಮೆ ವಹಿವಾಟುಗಳನ್ನು ನಡೆಸಲು ಅನುಕೂಲ ಮಾಡಿಕೊಡಲಾಗಿದೆ.

ಇನ್ನು ಸ್ಮಾರ್ಟ್ ರಿಂಗ್‌ಗೆ ಬ್ಯಾಟರಿಯ ಅಗತ್ಯವಿರುವುದಿಲ್ಲ. ಯಾಕೆಂದರೆ ಇದು ಯಾವುದೇ ಪಾವತಿಗಳನ್ನು ಮಾಡಲು POS ಯಂತ್ರದಿಂದ ಶಕ್ತಿಯನ್ನು ಬಳಕೆ ಮಾಡುತ್ತದೆ. ಇದರೊಂದಿಗೆ ಈ ಸಣ್ಣ ಡಿವೈಸ್‌ ಯುಪಿಐ, ಲೈವ್‌ಕ್ವಿಕ್‌, M2P ಮತ್ತು ಇತರ ಸಂಪರ್ಕರಹಿತ ಪಾವತಿ ವಿಧಾನಗಳನ್ನು ಸಹ ಬೆಂಬಲಿಸುತ್ತದೆ. ಇನ್ನು ಇದು ಯುಪಿಐನಲ್ಲಿ ಕಾರ್ಯನಿರ್ವಹಿಸುವುದರಿಂದ ಭಾರತದ ಹೊರಗೆ ಯಾವುದೇ ಪಾವತಿಗೆ ಬೆಂಬಲ ಇರುವುದಿಲ್ಲ.

7 ರಿಂಗ್ ಬೆಲೆ ಹಾಗೂ ಲಭ್ಯತೆ: ಭಾರತದಲ್ಲಿ 7 ರಿಂಗ್ ಬೆಲೆಯನ್ನು 7,000 ರೂಪಾಯಿಗಳಿಗೆ ನಿಗದಿಪಡಿಸಲಾಗಿದೆ. ಆದಾಗ್ಯೂ ಕಂಪನಿಯು ಕೊಡುಗೆಯ ಭಾಗವಾಗಿ ಕೇವಲ 4,777 ರೂಗಳಿಗೆ ಸ್ಮಾರ್ಟ್‌ರಿಂಗ್ ಅನ್ನು ಸೇಲ್‌ ಮಾಡಲಿದೆ. ಜೊತೆಗೆ ಗ್ರಾಹಕರು 6 ತಿಂಗಳವರೆಗೆ 829 ರೂಗಳಲ್ಲಿ ಇಎಮ್ಐ ಆಯ್ಕೆ ಮೂಲಕವೂ ಇದನ್ನು ಖರೀದಿ ಮಾಡಲು ಕಂಪೆನಿ ಅನುವು ಮಾಡಿಕೊಟ್ಟಿದೆ.

ಭಾರತದಲ್ಲಿ 7 ರಿಂಗ್ ಅನಾವರಣ! ಕಾಂಟ್ಯಾಕ್ಟ್‌ಲೆಸ್ ಪಾವತಿ ಆಯ್ಕೆ, ಬೆಲೆ ಎಷ್ಟು?

ಇದರೊಂದಿಗೆ 7 ರಿಂಗ್ ಖರೀದಿ ಮಾಡುವ ಗ್ರಾಹಕರಿಗೆ ಕಂಪೆನಿ ಹಲವಾರು ರೀತಿಯ ಬಹುಮಾನಗಳನ್ನು ಸಹ ನೀಡಲಿದೆ. ಇನ್ನು ಖರೀದಿಗೆ ಈ ರಿಂಗ್ ಶೀಘ್ರದಲ್ಲೇ ಲಭ್ಯವಿರುತ್ತದೆ. ಅದರಂತೆ 7 ರಿಂಗ್ ಅನ್ನು ಅಧಿಕೃತ ವೆಬ್‌ಸೈಟ್‌ನಿಂದ ಖರೀದಿ ಮಾಡಬಹುದಾಗಿದೆ. ಆಫರ್ ಪಡೆಯಲು ಈಗಾಗಲೇ ಖರೀದಿ ಮಾಡಿರುವ 7 ರಿಂಗ್ ಬಳಕೆದಾರರಿಂದ ಆಹ್ವಾನ ಕೋಡ್ ಬಳಕೆ ಮಾಡಿ ಖರೀದಿ ಮಾಡಬೇಕಿದೆ.

Best Mobiles in India

English summary
7 Ring Smartring has been officially unveiled. This ring India's first device with contactless payment option.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+