ಆನ್‌ಲೈನ್‌ನಲ್ಲಿ ಸರಳ ವಿವಾಹ: ಇಲ್ಲಿವೆ ಸಪ್ತ ಐಡಿಯಾಗಳು!

|

ಭಾರತದಲ್ಲಿ ವಿವಾಹ ಸಮಾರಂಭಗಳು ಬಹಳ ಪ್ರಾಮುಖ್ಯತೆ ಪಡೆದಿದ್ದು, ಬಂಧು ಬಳಗ ಕರೆದು ಸಂಭ್ರಮದಿಂದ ಮದುವೆ ಕಾರ್ಯ ಮಾಡುತ್ತಾರೆ. ಆದರೆ ಸದ್ಯ ವಿಶ್ವದಲ್ಲಿಯೇ ರಣಕೇಕೆ ಹಾಕುತ್ತಿರುವ ಮಹಾಮಾರಿ ಕೊರೊನಾ ವೈರಸ್‌ ಭಾರತದಲ್ಲಿ ಮದುವೆಯ ಪರಿಕಲ್ಪನೆಯನ್ನು ಬದಲಿಸಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮತ್ತು ಜನ ಸಂದಣಿಯಿಂದ ದೂರವಿರುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಅನಿವಾರ್ಯವಾಗಿ ಜನರು ಸರಳವಾಗಿ ವಿವಾಹ ಮಾಡಿಕೊಳ್ಳುತ್ತಿದ್ದಾರೆ.

ವಿವಾಹ

ಹೌದು, ಕೊರೊನಾ ಹಾವಳಿಯಿಂದಾಗಿ ಈಗ ವಧು-ವರರು ಮನೆಗಳಲ್ಲಿಯೇ ಸರಳ ವಿವಾಹ ಮಾಡಿಕೊಂಡು ಮಾದರಿಯಾಗುತ್ತಿದ್ದಾರೆ. ಇದರಿಂದ ವಧು-ವರರ ಕುಟುಂಬಗಳಿಗೆ ಮದುವೆ ಸಂದರ್ಭದಲ್ಲಿ ಆಗುತ್ತಿದ್ದ ದುಂದು ವೆಚ್ಚಗಳಿಗೆ ಕಡಿವಾಣ ಬಿದ್ದಿದೆ. ಮನೆಯಲ್ಲಿ ನಡೆಯುವ ಸರಳ ವಿವಾಹವನ್ನು ನಿಮ್ಮ ಬಂಧು ಮಿತ್ರರು ಆನ್‌ಲೈನ್‌ನಲ್ಲಿ ವೀಕ್ಷಿಸುವಂತೆ ವ್ಯವಸ್ಥೆ ಮಾಡಬಹುದಾಗಿದೆ. ಆನ್‌ಲೈನ್‌ ಸರಳ ವಿವಾಹವನ್ನು ಸ್ಮರಣೀಯವಾಗಿಸಬಹುದಾದ ಕೆಲವು ವಿಷಯಗಳು ಇಲ್ಲಿವೆ. ಮುಂದೆ ಓದಿರಿ.

ಆನ್‌ಲೈನ್‌ ಆಮಂತ್ರಣ

ಆನ್‌ಲೈನ್‌ ಆಮಂತ್ರಣ

ಸರಳ ವಿವಾಹವನ್ನು ಬಂಧು ಮಿತ್ರರು ನೇರವಾಗಿ ವೀಕ್ಷಿಸಲು ವಿಡಿಯೊ ಕಾಲಿಂಗ್ ಆಪ್ಸ್‌ಗಳ ಮೂಲಕ ಹೋಸ್ಟ್ ಮಾಡಬಹುದಾಗಿದೆ. ಇದಕ್ಕೆ ಲ್ಯಾಪ್‌ಟಾಪ್ ಮತ್ತು ಸ್ಥಿರ ಇಂಟರ್ನೆಟ್ ಸಂಪರ್ಕದ ಅಗತ್ಯವಿದೆ.

ಲೈವ್‌ಸ್ಟ್ರೀಮ್

ಲೈವ್‌ಸ್ಟ್ರೀಮ್

ನಿಮ್ಮ ಬಂಧು ಮಿತ್ರರು ಯಾವುದೇ ಸ್ಥಳದಲ್ಲಿ ಇರಲಿ, ಆನ್‌ಲೈನ್‌ನಲ್ಲಿ ವಿವಾಹ ವೀಕ್ಷಿಸಲು ಅವರನ್ನು ಆಮಂತ್ರಿಸಬಹುದು. ಮದುವೆಯನ್ನು ಲೈವ್‌ಸ್ಟ್ರೀಮ್ ಸಹ ಮಾಡಬಹುದಾಗಿದೆ.

ಸಮಯ ನಿಗದಿ

ಸಮಯ ನಿಗದಿ

ಮದುವೆಯ ಸಮಯವನ್ನು ನಿಗದಿ ಮಾಡಿ ಮುಂಚೆಯೇ ನಿಮ್ಮ ಬಂಧು ಮಿತ್ರರಿಗೆ ಲಿಂಕ್ ಕಳುಹಿಸಿದ್ದರೇ. ನಿಗದಿತ ಸಮಯಕ್ಕೆ ಅತಿಥಿಗಳು ಎಲ್ಲಿದ್ದರೂ ಮದುವೆಯನ್ನು ವೀಕ್ಷಿಸಬಹುದಾಗಿದೆ

ಆನ್‌ಲೈನ್ ಫುಡ್‌ ಆರ್ಡರ್

ಆನ್‌ಲೈನ್ ಫುಡ್‌ ಆರ್ಡರ್

ಮದುವೆಯ ಬಳಿಕ ವಿಶೇಷ ಊಟವು ಅತಿಥಿಗಳ ಮನೆಗೆ ತಲುಪುವಂತೆ ಆನ್‌ಲೈನ್‌ನಲ್ಲಿ ವ್ಯವಸ್ಥೆ ಮಾಡಬಹುದಾಗಿದೆ. ನೀವು ಊಟದ ಮೆನುವನ್ನು ಮೊದಲೇ ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ್ದರೇ, ಸರಿಯಾದ ವೇಳೆಗೆ ಊಟವು ಅತಿಥಿಗಳ ಮನೆಗಳಿಗೆ ತಲುಪಲು ಸಾಧ್ಯವಾಗುತ್ತದೆ.

ಆನ್‌ಲೈನ್ ಉಡುಗೊರೆ

ಆನ್‌ಲೈನ್ ಉಡುಗೊರೆ

ಅತಿಥಿಗಳು ವಧು ವರರಿಗೆ ಮದುವೆಯ ಉಡುಗೊರೆಯನ್ನು ಆನ್‌ಲೈನ್‌ ಮೂಲಕ ತಲುಪಿಸುವ ವ್ಯವಸ್ಥೆ ಮಾಡಬಹುದಾಗಿದೆ. ಮದುವೆಯ ದಿನ ಗಿಫ್ಟ್‌ ತಲುಪುವಂತೆ ಮೊದಲೇ ಪ್ಲ್ಯಾನ್ ಮಾಡಿ ಆನ್‌ಲೈನ್‌ನಲ್ಲಿ ಗಿಫ್ಟ್‌ ಆರ್ಡರ್ ಮಾಡಿಡಬಹುದಾಗಿದೆ.

ಸಂಗೀತ/ಮ್ಯೂಸಿಕ ವ್ಯವಸ್ಥೆ

ಸಂಗೀತ/ಮ್ಯೂಸಿಕ ವ್ಯವಸ್ಥೆ

ಆನ್‌ಲೈನ್‌ನಲ್ಲಿ ವಿವಾಹ ವೀಕ್ಷಿಸುವ ಸಮಯದಲ್ಲಿ ನಿಮ್ಮ ಆಪ್ತರು, ಸಂಬಂಧಿಕರಿಗೆ ವಿಶೇಷ ಸ್ಪೀಚ್/ಮ್ಯೂಸಿಕ್ ವ್ಯವಸ್ಥೆ ಮಾಡಬಹುದಾಗಿದೆ.

ಫೋಟೊ ಸ್ಲೈಡ್ಸ್‌

ಫೋಟೊ ಸ್ಲೈಡ್ಸ್‌

ವಿವಾಹ ನಡೆಯುವ ಸಂದರ್ಭದಲ್ಲಿ ಆನ್‌ಲೈನ್‌ನಲ್ಲಿ ವೆಡ್ಡಿಂಗ್ ಫೋಟೊಗಳ ಸ್ಲೈಡ್ಸ್ ವ್ಯವಸ್ಥೆ ಮಾಡಬಹುದು. ಹಾಗೂ ಪ್ರೀ ವೆಡ್ಡಿಂಗ್ ಫೋಟೊ/ವಿಡಿಯೊ ಸ್ಲೈಡ್ಸ್ ಸಹ ಕಾಣಿಸುವಂತೆ ಅರೆಂಜ್ ಮಾಡಬಹುದಾಗಿದೆ.

Most Read Articles
Best Mobiles in India

English summary
Here are seven things you can do to make an online wedding memorable.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X