Subscribe to Gizbot

15 ವರ್ಷಗಳ ಇತಿಹಾಸವಿರುವ ಟಾಪ್ 7 ಆವಿಷ್ಕಾರಗಳು

Posted By:

ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸತು ಆವಿಷ್ಕಾರಗಳು ಹಳೆಯದನ್ನು ಕೊಚ್ಚಿಕೊಂಡು ಹೋಗಿ ಹೊಸತನದ ಗರಿಮೆಯನ್ನು ನೀಡುತ್ತದೆ. ಕಾಲ ಬದಲಾದಂತೆ ಹಳತು ತೊಲಗಿ ಹೊಸತು ಅದರ ಜಾಗವನ್ನು ಆಕ್ರಮಿಸುತ್ತದೆ. ಹೀಗೆಯೇ ಹೊಸತು ಮತ್ತು ಹಳತರ ನಡುವೆ ಜಟಾಪಟಿ ನಡೆಯತ್ತಲೇ ಇರುತ್ತದೆ ಮತ್ತು ನಾವು ಹಳೆಯದನ್ನು ಮರೆತು ಹೊಸತನ್ನು ಸ್ವೀಕರಿಸುತ್ತಾ ಮುಂದುವರಿಯುತ್ತೇವೆ.

ಇದನ್ನೂ ಓದಿ: ಮನಸೆಳೆಯುವ ವಿಭಿನ್ನ ಶೈಲಿಯ ಆಪಲ್ ವಾಚ್‍ನ ವಿಶೇಷತೆ ಏನು?

ಹಳೆಯ ಉತ್ಪನ್ನದ ಮೆರುಗನ್ನು ತನ್ನಲ್ಲಿ ಉಳಿಸಿಕೊಂಡೇ ಹೊಸ ಸಂಶೋಧನೆಗಳು ಅಸ್ತಿತ್ವಕ್ಕೆ ಬರುತ್ತವೆ. ಇದನ್ನೇ ಆಧಾರವಾಗಿಟ್ಟುಕೊಂಡು ಇಂದಿನ ಲೇಖನದಲ್ಲಿ ಇದುವರಿಗೆ ನಮ್ಮನ್ನು ಹಾದು ಹೋಗಿರುವ ಟಾಪ್ ಅನ್ವೇಷಣೆಗಳತ್ತ ನಾವು ಮುಂದುವರಿಯೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಐಪೋಡ್ ಮತ್ತು ಎಮ್‌ಪಿ 3 ಪ್ಲೇಯರ್ಸ್

15 ವರ್ಷಗಳ ಇತಿಹಾಸವಿರುವ ಟಾಪ್ 7 ಆವಿಷ್ಕಾರಗಳು

ಸೋನಿಯ ವಾಕ್‌ಮೆನ್ ಅನ್ನು ಸ್ವೀಬ್ ಜಾಬ್‌ ಆಪಲ್ ಸ್ಥಾನಾಂತರಗೊಳಿಸಿತು ಎಂದರೆ ನಿಜಕ್ಕೂ ಇದು ಆಶ್ಚರ್ಯವನ್ನುಂಟು ಮಾಡುವಂಥದ್ದು. ಹೌದು ಐಪೋಡ್‌ನ ಆಗಮನ ಎಮ್‌ಪಿ 3 ಯ ಮೂಲಕ ಪಾದಾರ್ಪಣೆಗೊಂಡಿದ್ದು ಇತರ ಎಮ್‌ಪಿ 3 ಪ್ಲೇಯರ್‌ಗಳು ಮಾರುಕಟ್ಟೆಯಿಂದ ಕಾಲುಕಿತ್ತದ್ದಂತೂ ಸುಳ್ಳಲ್ಲ.

ಎಚ್‌ಡಿ ಡಿವಿಡಿ, ಜಿಪ್ ಡ್ರೈವ್ಸ್ ಮತ್ತು ಇತರ ಸ್ಟೋರೇಜ್ ಮೀಡಿಯಾ

15 ವರ್ಷಗಳ ಇತಿಹಾಸವಿರುವ ಟಾಪ್ 7 ಆವಿಷ್ಕಾರಗಳು

ಎಚ್‌ಡಿ ಡಿವಿಡಿ ಆಪ್ಟಿಕಲ್ ಡಿಸ್ಕ್ ಆಗಿದ್ದು ಹೆಚ್ಚುವರಿ ಸಂಗ್ರಹಣಾ ಸಾಮರ್ಥ್ಯವನ್ನು ಪಡೆದುಕೊಂಡು ಡಿವಿಡಿಗಳ ಸ್ಥಾನವನ್ನು ಕಿತ್ತುಕೊಂಡವು. ಇನ್ನು ಮೊದಲಿದ್ದ ಮೈಕ್ರೋಡ್ರೈವ್‌ನ ಬದಲಿಗೆ ಜಿಪ್ ಡ್ರೈವ್ ಆಗಮನವಾಯಿತು.

ಪಾಮ್ ಪೈಲೆಟ್ ಮತ್ತು ಪಿಡಿಎಗಳು

15 ವರ್ಷಗಳ ಇತಿಹಾಸವಿರುವ ಟಾಪ್ 7 ಆವಿಷ್ಕಾರಗಳು

ಪಿಡಿಎ (ಪರ್ಸನಲ್ ಡಿಜಿಟಲ್ ಅಸಿಸ್ಟೆಂಟ್) ಅಥವಾ ಪಾಕೆಟ್ ಪಿಸಿ, ಪ್ರತಿಯೊಬ್ಬ ವ್ಯವಹಾರಸ್ಥ ಹೊಂದಿರುತ್ತಿದ್ದ ಡಿವೈಸ್ ಆಗಿತ್ತು. ಇನ್ನು ಪಾಮ್ ಪೈಲೆಟ್ ಕೂಡ ಆಗ ಅಸ್ತಿತ್ವದಲ್ಲಿತ್ತು ಎಂಬುದನ್ನು ಯಾರಿಗೆ ತಾನೇ ಮರೆಯಲು ಸಾಧ್ಯ? ಇದೊಂದು ಟಚ್ ಸ್ಕ್ರೀನ್ ಪೋರ್ಟೇಬಲ್ ಡಿವೈಸ್ ಆಗಿದ್ದು ಸ್ಟೈಲಸ್ ಅನ್ನು ಹೊಂದಿತ್ತು.

ಟಿವೊ

15 ವರ್ಷಗಳ ಇತಿಹಾಸವಿರುವ ಟಾಪ್ 7 ಆವಿಷ್ಕಾರಗಳು

ನಿಮ್ಮ ಇಷ್ಟದ ಟಿವಿ ಕಾರ್ಯಕ್ರಮಗಳನ್ನು ನಿಮಗೆ ಯಾವಾಗ ಬೇಕಾದರೂ ವೀಕ್ಷಿಸಬಹುದು. ಟಿವೊ ಎಂಬುದು ಪ್ರಥಮ ದೊಡ್ಡ ಡಿವಿಆರ್ ಆಗಿದ್ದು ನಿಮ್ಮ ಇಷ್ಟದ ಟಿವಿ ಕಾರ್ಯಕ್ರಮಗಳನ್ನು ದಾಖಲಿಸಲು ಅನುವು ಮಾಡಿಕೊಡುವಂತಹ ಉಪಕರಣವಾಗಿದೆ.

ಮೈ ಸ್ಪೇಸ್ ಮತ್ತು ಆರ್ಕುಟ್

15 ವರ್ಷಗಳ ಇತಿಹಾಸವಿರುವ ಟಾಪ್ 7 ಆವಿಷ್ಕಾರಗಳು

ಫೇಸ್‌ಬುಕ್ ಮತ್ತು ಟ್ವಿಟ್ಟರ್‌ಗಿಂತಲೂ ಮುನ್ನ ಎರಡು ಸಾಮಾಜಿಕ ತಾಣಗಳು ಕಾರ್ಯಪ್ರವೃತ್ತಿಯಲ್ಲಿದ್ದವು. ಅವೇ ಮೈಸ್ಪೇಸ್ ಮತ್ತು ಆರ್ಕುಟ್. ಆದರೆ ಫೇಸ್‌ಬುಕ್‌ ಮತ್ತು ಟ್ವಿಟ್ಟರ್‌ನಂತೆ ಇದು ಜನಪ್ರಿಯತೆಯನ್ನು ಪಡೆದುಕೊಂಡಿರಲಿಲ್ಲ.

ಸೆಕೆಂಡ್ ಲೈಫ್

15 ವರ್ಷಗಳ ಇತಿಹಾಸವಿರುವ ಟಾಪ್ 7 ಆವಿಷ್ಕಾರಗಳು

ಇದನ್ನು 2003 ರಲ್ಲಿ ಲಾಂಚ್ ಮಾಡಲಾಯಿತು. ಆನ್‌ಲೈನ್ ವರ್ಚುವಲ್ ಜಗತ್ತು ಎಂದೇ ಪರಿಗಣಿಸಲಾಗಿದ್ದ ಇದು ಖಾತೆಗಳನ್ನು ಹೊಂದಿತ್ತು.

ಗೂಗಲ್ ವೇವ್

15 ವರ್ಷಗಳ ಇತಿಹಾಸವಿರುವ ಟಾಪ್ 7 ಆವಿಷ್ಕಾರಗಳು

ಗೂಗಲ್ ತನ್ನ ಹೊಸ ಸಂಶೋಧನೆಯಾದ ಗೂಗಲ್ ವೇವ್‌ನಲ್ಲಿ ಸೋತಿದ್ದರೂ ಇಮೇಲ್‌ನೊಂದಿಗೆ ಇದನ್ನು ಸಂಯೋಜನೆಗೊಳಿಸುವ ಗೂಗಲ್ ಟ್ರಿಕ್ ಇಲ್ಲಿ ಸೋತಿತು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about 7 Technologies That Came and Went in the Last 15 Years.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot