ಮನಸೆಳೆಯುವ ವಿಭಿನ್ನ ಶೈಲಿಯ ಆಪಲ್ ವಾಚ್‍ನ ವಿಶೇಷತೆ ಏನು?

By Shwetha
|

ನಿಮ್ಮ ಕೈಗಳಲ್ಲಿ ಮಿರಮಿರನೆ ಮಿಂಚುವ ಆಪಲ್ ವಾಚ್ ಅನ್ನು ಏಪ್ರಿಲ್ 10 ರಂದು ನಿಮಗೆ ಕಾಣಬಹುದು. ಆಪಲ್ ಸಿಇಒ ಟಿಮ್ ಕುಕ್ ವೇರಿಯೇಬಲ್ ಕುರಿತ ಅಂತಿಮ ಮಾತುಗಳನ್ನು ತಿಳಿಸಿದ್ದಾರೆ. ಏಪ್ರಿಲ್ 10 ಅನ್ನು ಆಪಲ್ ವೇರಿಯೇಬಲ್ ಪ್ರಕಟಣೆಗಾಗಿ ಘೋಷಿಸಿದ್ದು ಆಪಲ್ ಸ್ಟೋರ್‌ಗಳಲ್ಲಿ ಈ ವಾಚ್ ಅನ್ನು ನಿಮಗೆ ಕಾಣಬಹುದಾಗಿದೆ.

ಇನ್ನು ಆಪಲ್ ವಾಚ್ ಅನ್ನು ಐಫೋನ್ 5 ಮತ್ತು ಐಓಎಸ್ 8 ನ ನಂತರದ ಆವೃತ್ತಿಗಳಲ್ಲಿ ಕಾಣಬಹುದಾಗಿದೆ. ಇಂದಿನ ಲೇಖನದಲ್ಲಿ ಆಪಲ್ ವಾಚ್ ಕುರಿತಾದ ಟಾಪ್ 10 ವಿಶೇಷತೆಗಳನ್ನು ನಮಗೆ ಕಾಣಬಹುದಾಗಿದ್ದು ಈ ವಾಚ್ ಏಕೆ ಪ್ರಸಿದ್ಧವಾಗಿದೆ ಎಂಬುದು ನಿಮಗೆ ದಿಗ್ಭ್ರಮೆಯನ್ನು ಉಂಟುಮಾಡಬಹುದು.

ಆಪಲ್ ವಾಚ್ ವಿಶೇಷತೆ

ಆಪಲ್ ವಾಚ್ ವಿಶೇಷತೆ

ಇದು ಆರೋಗ್ಯ ಮತ್ತು ನಿಮ್ಮ ಚಟುವಟಿಕೆಗಳ ಮೇಲೆ ನಿಗಾ ಇರಿಸುತ್ತದೆ. ಇದರಲ್ಲಿರುವ ಅಪ್ಲಿಕೇಶನ್ ದಿನದಲ್ಲಿ ಎಷ್ಟು ಕ್ಯಾಲೋರಿಯನ್ನು ನೀವು ಬರ್ನ್ ಮಾಡಿದ್ದೀರಿ ಎಂಬ ಮಾಹಿತಿಯನ್ನು ನೀಡುತ್ತದೆ ಮತ್ತು ನೀವು ಮಾಡಿರುವ ವ್ಯಾಯಾಮದ ಮಾಹಿತಿಯನ್ನು ನೀಡುತ್ತದೆ.

ಆಪಲ್ ವಾಚ್ ವಿಶೇಷತೆ

ಆಪಲ್ ವಾಚ್ ವಿಶೇಷತೆ

ಆಪಲ್ ವಾಚ್‌ನ ನೋಟ ನಿಮ್ಮಲ್ಲಿ ದಿಗ್ಭ್ರಮೆಯನ್ನು ಉಂಟುಮಾಡುವುದು ಸಹಜ. ಏಕೆಂದರೆ ವಾಚ್‌ನ ಕೆಳಭಾಗದಿಂದ ಮೇಲಕ್ಕೆ ಸ್ವೈಪ್ ಮಾಡಿದರೆ ಸಾಕು ಹವಾಮಾನ, ಕ್ಯಾಲೆಂಡರ್ ಮತ್ತು ಮ್ಯೂಸಿಕ್ ನಿಯಂತ್ರಣವನ್ನು ನಿಮಗೆ ಮಾಡಬಹುದಾಗಿದೆ.

ಆಪಲ್ ವಾಚ್ ವಿಶೇಷತೆ

ಆಪಲ್ ವಾಚ್ ವಿಶೇಷತೆ

ಮೂರನೇ ವ್ಯಕ್ತಿ ಡೆವಲಪರ್‌ಗಳು ಮಾಡಿರುವ ಅಪ್ಲಿಕೇಶನ್‌ಗಳನ್ನು ಆಪಲ್ ವಾಚ್ ಬೆಂಬಲಿಸಬಹುದು. ಈ ಅಪ್ಲಿಕೇಶನ್‌ಗಳನ್ನು ಸಂಪರ್ಕಿತ ಐಫೋನ್ ಮೂಲಕ ಡೌನ್‌ಲೋಡ್ ಮಾಡಬಹುದಾಗಿದೆ. ಆಪಲ್ ವಾಚ್ ವಿಚಾಟ್‌ಗೆ ಬೆಂಬಲವನ್ನು ಒದಗಿಸುತ್ತಿದ್ದು, ಉಬರ್‌ಗೂ ಸಂಪರ್ಕವನ್ನು ನಿಮಗಿಲ್ಲಿ ಮಾಡಬಹುದಾಗಿದೆ.

ಆಪಲ್ ವಾಚ್ ವಿಶೇಷತೆ

ಆಪಲ್ ವಾಚ್ ವಿಶೇಷತೆ

ಇನ್ನು ಆಪಲ್ ಬಳಕೆದಾರರು ಈ ವಾಚ್‌ನಲ್ಲಿ ಸಿರಿಯನ್ನು ಬಳಸುವ ವ್ಯವಸ್ಥೆಯನ್ನು ಹೊಂದಿದ್ದು, ಮುಂಬರಲಿರುವ ಈವೆಂಟ್‌ಗಳನ್ನು ಕುರಿತು ನಿಮಗೆ ವಿವರವನ್ನು ನೀಡಲಿದೆ. ನಿಮ್ಮ ಆಪಲ್ ವಾಚ್‌ನಲ್ಲಿ ಮಾತನಾಡುವ ಮೂಲಕ ಪಠ್ಯ ಸಂದೇಶಗಳನ್ನು ಆಪಲ್ ವಾಚ್‌ನಲ್ಲಿ ಮಾತನಾಡುವ ಮೂಲಕ ತಿಳಿಯಪಡಿಸುತ್ತದೆ.

ಆಪಲ್ ವಾಚ್ ವಿಶೇಷತೆ

ಆಪಲ್ ವಾಚ್ ವಿಶೇಷತೆ

ನಿಮಗೆ ಅಧಿಸೂಚನೆಗಳು ಬಂದಾಗ ನಿಮ್ಮ ಮಣಿಗಂಟಿನಲ್ಲೇ ವಾಚ್ ಎಚ್ಚರಿಕೆಯನ್ನು ನೀಡುತ್ತದೆ. ಇನ್ನು ನಿಮ್ಮ ಐಫೋನ್‌ನಲ್ಲಿ ಅಧಿಸೂಚನೆಗಳು ಬಂದಾಗ ಆಪಲ್ ವಾಚ್ ಅದನ್ನು ನಿಮಗೆ ತಿಳಿಸುತ್ತದೆ.

ಆಪಲ್ ವಾಚ್ ವಿಶೇಷತೆ

ಆಪಲ್ ವಾಚ್ ವಿಶೇಷತೆ

ಇನ್ನು ಡಿವೈಸ್‌ನ ಪರದೆಯಲ್ಲಿ ಚಿತ್ರವನ್ನು ಬಿಡಿಸುವ ಮೂಲಕ ಇನ್ನೊಬ್ಬರೊಂದಿಗೆ ನಿಮಗೆ ಸಂವಹನವನ್ನು ನಡೆಸಬಹುದಾಗಿದೆ. ಇಲ್ಲಿ ಡೂಡಲ್‌ಗಳನ್ನು ಅನಿಮೇಟ್ ಮಾಡಿರುವುದರಿಂದ ನೀವು ಬರೆದಂತೆ ಅದು ಇಲ್ಲಿ ಗೋಚರವಾಗುತ್ತದೆ.

ಆಪಲ್ ವಾಚ್ ವಿಶೇಷತೆ

ಆಪಲ್ ವಾಚ್ ವಿಶೇಷತೆ

ಪಠ್ಯ ಸಂದೇಶ ನಿಮ್ಮ ಐಫೋನ್‌ನಲ್ಲಿ ಬಂದಾಗ, ನಿಮ್ಮ ಕೈಗಳಲ್ಲೇ ವಾಚ್ ನಿಮಗದನ್ನು ತೋರಿಸುತ್ತದೆ ಮತ್ತು ಇದಕ್ಕೆ ಪ್ರತ್ಯುತ್ತರವನ್ನು ತ್ವರಿತ ವಿಧಾನದಲ್ಲಿ ನಿಮಗೆ ನೀಡಲು ನಿಮಗೆ ನೆರವಾಗುತ್ತದೆ.

ಆಪಲ್ ವಾಚ್ ವಿಶೇಷತೆ

ಆಪಲ್ ವಾಚ್ ವಿಶೇಷತೆ

ನಿಮಗೆ ಬರುವ ಕರೆಗಳಿಗೆ ಉತ್ತರಿಸುವ ಸಾಮರ್ಥ್ಯ ಇದರಲ್ಲಿದ್ದು ನಿಮ್ಮ ಮಣಿಗಂಟಿನಲ್ಲಿ ಇರುವ ವಾಚ್‌ನಲ್ಲೇ ಸಂವಹನವನ್ನು ನಿಮಗೆ ನಡೆಸಬಹುದಾಗಿದೆ. ಡಿವೈಸ್ ಸ್ಪೀಕರ್ ಮತ್ತು ಮೈಕ್ರೋಫೋನ್ ಕರೆಗಳಿಗೆ ಉತ್ತರಿಸಲು ನಿಮಗೆ ನೆರವಾಗಲಿದೆ.

ಆಪಲ್ ವಾಚ್ ವಿಶೇಷತೆ

ಆಪಲ್ ವಾಚ್ ವಿಶೇಷತೆ

ಈ ವಾಚ್‌ಗಳು ವಿಭಿನ್ನ ಆಕಾರವನ್ನು ಹೊಂದಿದ್ದು ನಿಮಗೆ ಬೇಕಾದ ರೀತಿಯಲ್ಲಿ ವಾಚ್‌ನ ಆಯ್ಕೆಯನ್ನು ನಿಮಗೆ ಮಾಡಬಹುದಾಗಿದೆ.

ಆಪಲ್ ವಾಚ್ ವಿಶೇಷತೆ

ಆಪಲ್ ವಾಚ್ ವಿಶೇಷತೆ

ಈ ವಾಚ್ ಹಿಂಭಾಗದಲ್ಲಿ ಅಯಸ್ಕಾಂತ ಚಾರ್ಜರ್ ಅನ್ನು ಹೊಂದಿದ್ದು, ಇದು 18 ಗಂಟೆಗಳ ಚಾರ್ಜ್ ಅನ್ನು ನೀಡುತ್ತದೆ.

Best Mobiles in India

English summary
This article tells about Everything You Need To Know About The Apple Watch.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X