ಗ್ರಾಹಕರ ನಿರೀಕ್ಷೆಗಿಂತ ಕಡಿಮೆ ಬೆಲೆಗೆ ಎಂಟ್ರಿ ಕೊಡಲಿವೆ 'ರೆಡ್ಮಿ 4K' ಟಿವಿಗಳು!

|

ಚೀನಾ ಮೂಲದ ಶಿಯೋಮಿ ಈಗಾಗಲೇ ಸ್ಮಾರ್ಟ್‌ಫೋನ್‌ಗಳ ಮಾರುಕಟ್ಟೆಯಲ್ಲಿ ಹಿಡಿತ ಸಾಧಿಸಿದ್ದು, ಅದರೊಂದಿಗೆ ಇತರೆ ಉತ್ಪನ್ನಗಳನ್ನು ಪರಿಚಯಿಸಿ ಗ್ರಾಹಕರ ಮೆಚ್ಚುಗೆ ಪಡೆದಿದೆ. ಹಾಗೆಯೇ ಕಂಪನಿಯು ಅಗ್ಗದ ಬೆಲೆಯಲ್ಲಿ ಪರಿಚಯಿಸಿದ್ದ ಸ್ಮಾರ್ಟ್‌ಟಿವಿಗಳು ಹೆಚ್ಚು ಜನಪ್ರಿಯತೆ ಪಡೆದಿದ್ದು, ಇದೀಗ ಕಂಪನಿಯ ಮತ್ತೆ ಬಜೆಟ್‌ ಬೆಲೆಯಲ್ಲಿ ಹೊಸದಾಗಿ ಸ್ಮಾರ್ಟ್‌ಟಿವಿಗಳನ್ನು ಬಿಡುಗಡೆ ಮಾಡಲು ಸಜ್ಜಾಗಿದೆ.

ಗ್ರಾಹಕರ ನಿರೀಕ್ಷೆಗಿಂತ ಕಡಿಮೆ ಬೆಲೆಗೆ ಎಂಟ್ರಿ ಕೊಡಲಿವೆ 'ರೆಡ್ಮಿ 4K' ಟಿವಿಗಳು!

ಹೌದು, ಶಿಯೋಮಿ ಕಂಪನಿಯು ಹೊಸದಾಗಿ ಎರಡು ಸ್ಮಾರ್ಟ್‌ಟಿವಿಗಳನ್ನು ಬಿಡುಗಡೆ ಮಾಡಲು ತಯಾರಾಗಿದ್ದು, ಅವುಗಳನ್ನು ರೆಡ್ಮಿ ಹೆಸರಿನಡಿ ಪರಿಚಯಿಸಲಿದೆ ಎನ್ನಲಾಗಿದೆ. ಕಂಪನಿಯು 70 ಇಂಚಿನ 4K UHD ಮತ್ತು 40 ಇಂಚಿನ 4K UHD ಮಾದರಿಯ ಎರಡು ಸ್ಮಾರ್ಟ್‌ಟಿವಿಗಳನ್ನು ಲಾಂಚ್‌ ಮಾಡಲಿದ್ದು, ಇವುಗಳು ಬಜೆಟ್‌ ಬೆಲೆಯ ಪ್ರೈಸ್‌ಟ್ಯಾಗ್‌ ಅನ್ನು ಹೊಂದಿರಲಿವೆ ಎಂದು ಲೀಕ್ ಮಾಹಿತಿಗಳಿಂದ ತಿಳಿದುಬಂದಿದೆ.

ಗ್ರಾಹಕರ ನಿರೀಕ್ಷೆಗಿಂತ ಕಡಿಮೆ ಬೆಲೆಗೆ ಎಂಟ್ರಿ ಕೊಡಲಿವೆ 'ರೆಡ್ಮಿ 4K' ಟಿವಿಗಳು!

70 ಇಂಚಿನ 4K UHD ಟಿವಿಯ ಮಾಡೆಲ್‌ ನಂಬರ್ L70M5-RA ಆಗಿರಲಿದ್ದು, ಹಾಗೆಯೇ 40 ಇಂಚಿನ 4K UHD ಟಿವಿಯ ಮಾಡೆಲ್‌ ನಂಬರ್ L40M5-FA ಆಗಿರಲಿದೆ. ಕಂಪನಿಯು ಗ್ರಾಹಕರ ನಿರೀಕ್ಷೆಗೂ ಕಡಿಮೆ ಬೆಲೆಯಲ್ಲಿ ಈ ಸ್ಮಾರ್ಟ್‌ಟಿವಿಗಳನ್ನು ರಿಲೀಸ್‌ ಮಾಡುವ ಉಮೇದಿನಲ್ಲಿದೆ ಎನ್ನಲಾಗಿದೆ. ಈ ಸ್ಮಾರ್ಟ್‌ಟಿವಿಗಳ ಮೂಲಕ ಮಾರುಕಟ್ಟೆಯಲ್ಲಿ ಗಟ್ಟಿಸ್ಥಾನ ಕಂಡುಕೊಳ್ಳುವ ವಿಶ್ವಾಸ ಹೊಂದಿದೆ.

ಗ್ರಾಹಕರ ನಿರೀಕ್ಷೆಗಿಂತ ಕಡಿಮೆ ಬೆಲೆಗೆ ಎಂಟ್ರಿ ಕೊಡಲಿವೆ 'ರೆಡ್ಮಿ 4K' ಟಿವಿಗಳು!

ಈ ಎರಡು ಸ್ಮಾರ್ಟ್‌ಟಿವಿಗಳು ಸ್ಕ್ರೀನ್‌ 4K UHD ಗುಣಮಟ್ಟದಲ್ಲಿರಲಿದ್ದು, ಟಿವಿ ವೀಕ್ಷಣೆಯ ಅನುಭವವನ್ನು ಮತ್ತಷ್ಟು ರೋಚಕಗೊಳಿಸಲಿವೆ. ಅತೀ ಶೀಘ್ರದಲ್ಲಿ ಚೀನಾದಲ್ಲಿ ಈ ಎರಡು ಸ್ಮಾರ್ಟ್‌ಟಿವಿಗಳು ಬಜೆಟ್‌ ಬೆಲೆಯಲ್ಲಿ ಲಾಂಚ್ ಆಗಲಿವೆ ಎನ್ನುವ ಮಾಹಿತಿಗಳಿವೆ. ಆದರೇ ಯಾವಾಗ ಲಾಂಚ್ ಮಾಡಲಿದೆ ಎನ್ನುವ ಬಗ್ಗೆ ಕಂಪನಿಯು ಯಾವುದೇ ಅಧಿಕೃತ ಮಾಹಿತಿಯನ್ನು ಹೊರಹಾಕಿಲ್ಲ.

ಓದಿರಿ : 5180mAh ಬ್ಯಾಟರಿ ಶಕ್ತಿಯ 'ಲೆನೊವೊ ಟ್ಯಾಬ್‌ ವಿ7' ಬಿಡುಗಡೆ! ಓದಿರಿ : 5180mAh ಬ್ಯಾಟರಿ ಶಕ್ತಿಯ 'ಲೆನೊವೊ ಟ್ಯಾಬ್‌ ವಿ7' ಬಿಡುಗಡೆ!

ಕಂಪನಿಯು ಹೊಸ ಸ್ಮಾರ್ಟ್‌ಟಿವಿಗಳನ್ನು ಮೊದಲು ಚೀನಾದಲ್ಲಿ ಬಿಡುಗಡೆಗೊಳಿಸಲಿದ್ದು, ಆ ನಂತರವೇ ಭಾರತೀಯ ಮಾರುಕಟ್ಟೆಗೆ ಲಾಂಚ್‌ ಮಾಡಲಿದೆ. ಈಗಾಗಲೇ ದೇಶಿಯ ಮಾರುಕಟ್ಟೆಯಲ್ಲಿ ಕಂಪನಿಯ 32ಇಂಚಿನ, 43ಇಂಚಿನ, 49ಇಂಚಿನ ಮತ್ತು 55ಇಂಚಿನ ಸ್ಮಾರ್ಟ್‌ಟಿವಿಗಳು ಗ್ರಾಹಕರನ್ನು ಆಕರ್ಷಿಸಿದ್ದು, ಇನ್ನು ಮುಂಬರುವ ಹೊಸ 4K ಸ್ಮಾರ್ಟ್‌ಟಿವಿಗಳು ಕಂಪನಿಯ ಮಾರುಕಟ್ಟೆಯ ವ್ಯಾಪ್ತಿಯನ್ನು ವಿಸ್ತರಿಸಲಿದೆ ಎನ್ನಲಾಗುತ್ತಿದೆ.

ಓದಿರಿ : 'ವಾಟ್ಸಪ್‌ ಪೇ' ಲಾಂಚ್‌ ಕನ್ಫರ್ಮ್‌!..ಶುರುವಾಗಿದೆ ಪೇಟಿಎಮ್‌ಗೆ ನಡುಕ! </a><a class=" title="ಓದಿರಿ : 'ವಾಟ್ಸಪ್‌ ಪೇ' ಲಾಂಚ್‌ ಕನ್ಫರ್ಮ್‌!..ಶುರುವಾಗಿದೆ ಪೇಟಿಎಮ್‌ಗೆ ನಡುಕ! " loading="lazy" width="100" height="56" />ಓದಿರಿ : 'ವಾಟ್ಸಪ್‌ ಪೇ' ಲಾಂಚ್‌ ಕನ್ಫರ್ಮ್‌!..ಶುರುವಾಗಿದೆ ಪೇಟಿಎಮ್‌ಗೆ ನಡುಕ!

Best Mobiles in India

English summary
two Redmi TVs will come with 70-inch 4K UHD screen while the other one or the cheaper one will sport a 40-inch 4K UHD screen. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X