ಜಿಯೋಸಿನಿಮಾದಲ್ಲಿ IPL ವೀಕ್ಷಣೆಯ ಅಂಕಿ-ಅಂಶ ತಿಳಿದ್ರೆ, ನೀವು ಅಚ್ಚರಿ ಪಡ್ತೀರಾ!
ಮೊಬೈಲ್‌ಗಳು ಮತ್ತು ಸಂಪರ್ಕಿತ ಟಿವಿಗಳ ಮೂಲಕ ಜಿಯೋಸಿನಿಮಾದಲ್ಲಿ ಐಪಿಎಲ್-2023ರ ಡಿಜಿಟಲ್ ಸ್ಟ್ರೀಮಿಂಗ್ ನೋಡುವವರ ಸಂಖ್ಯೆಯು, ಟಿವಿಯಲ್ಲಿ ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ನೋಡುವವರ ಸಂಖ್ಯೆಗಿಂತ ಮೂರು ಪಟ್ಟು ಅಧಿಕವಾಗಿದೆ. ಸ್ಕೋರ್ (SCORE) ವರದಿಯ ಪ್ರಕಾರ, ಐಪಿಎಲ್ ವೀಕ್ಷಕರಲ್ಲಿ ಡಿಜಿಟಲ್ ಸ್ಟ್ರೀಮಿಂಗ್ ಶೇಕಡಾ 73 ರಷ್ಟು ಜನರನ್ನು ಆಕರ್ಷಿಸುತ್ತಿದೆ. ಆದರೆ ಕೇಬಲ್ ಮತ್ತು ಡಿಟಿಎಚ್ನಲ್ಲಿ ಕೇವಲ ಶೇಕಡಾ 27ರಷ್ಟು ವೀಕ್ಷಕರು ಮಾತ್ರ ಐಪಿಎಲ್ ಪಂದ್ಯಗಳನ್ನು ನೋಡುತ್ತಿದ್ದಾರೆ.
ಐಪಿಎಲ್‌ನಲ್ಲಿ ಜಾಹೀರಾತುಗಳ ಪ್ರಭಾವವನ್ನು ಅಳೆಯುವ 'ಸಿಂಕ್ರೊನಿ ಇಂಡಿಯಾ ಮತ್ತು ಯುನೋಮರ್' ಸಿದ್ಧಪಡಿಸಿರುವ 'ಸ್ಕೋರ್' ವರದಿಯಲ್ಲಿ ಈ ವಿವರಗಳನ್ನು ಬಹಿರಂಗಪಡಿಸಲಾಗಿದೆ. ಕೇಬಲ್ ಅಥವಾ ಡಿಟಿಎಚ್‌ಗಿಂತ ಸ್ಮಾರ್ಟ್ ಟಿವಿಗಳಲ್ಲಿ ಐಪಿಎಲ್ ಪಂದ್ಯಗಳನ್ನು ನೋಡುವ ವೀಕ್ಷಕರ ಸಂಖ್ಯೆಯು ಹೆಚ್ಚು ಎಂದು 'ಸ್ಕೋರ್' ವರದಿ ಬಹಿರಂಗಪಡಿಸಿದೆ.

ಕನೆಕ್ಟೆಡ್ ಟಿವಿಯಲ್ಲಿ ಶೇಕಡಾ 62 ವೀಕ್ಷಕರು ಮತ್ತು ಕೇಬಲ್/ ಡಿಟಿಎಚ್ನಲ್ಲಿ ಕೇವಲ ಶೇಕಡಾ 38ರಷ್ಟು ವೀಕ್ಷಕರು ಐಪಿಎಲ್ ಪಂದ್ಯಗಳನ್ನು ವೀಕ್ಷಿಸಿದ್ದಾರೆ. ಟಿವಿಯಲ್ಲಿ ಐಪಿಎಲ್-2023ರ ಒಟ್ಟು ವೀಕ್ಷಕರ ಸಂಖ್ಯೆ ನಿರಂತರವಾಗಿ ಕುಸಿಯುತ್ತಿದೆ ಎಂದು ವರದಿ ಹೇಳಿದೆ.
ವೀಕ್ಷಕರ ಐಪಿಎಲ್ ವೀಕ್ಷಣೆಯ ಮಾದರಿಯಲ್ಲೂ ಆಸಕ್ತಿದಾಯಕ ಬದಲಾವಣೆಗಳಾಗಿವೆ. ವರದಿಯ ಪ್ರಕಾರ, ಶೇಕಡಾ 52ರಷ್ಟು ಜನರು ಟಿವಿ ಮತ್ತು ಮೊಬೈಲ್ ಎರಡರಲ್ಲೂ ಐಪಿಎಲ್ ಪಂದ್ಯಗಳನ್ನು ವೀಕ್ಷಿಸಲು ಬಯಸುತ್ತಾರೆ. ಮೊಬೈಲ್ನಲ್ಲಿ ಮಾತ್ರ ಐಪಿಎಲ್ ನೋಡುವ ವೀಕ್ಷಕರು ಶೇಕಡಾ 30ರಷ್ಟಿದ್ದು, ಶೇಕಡಾ 18ರಷ್ಟು ಮಂದಿ ಮಾತ್ರ ಇನ್ನೂ ಟಿವಿಗೆ ಅಂಟಿಕೊಂಡಿದ್ದಾರೆ.
ಈ ಅಂಕಿ-ಅಂಶಗಳನ್ನು ಗಮನಿಸಿದರೆ, ಮೂರನೇ ಒಂದು ಭಾಗದಷ್ಟು ವೀಕ್ಷಕರು ನೇರವಾಗಿ ಜಿಯೋಸಿನಿಮಾದ ಸಂಪರ್ಕ ಹೊಂದಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ. ಶೇಕಡಾ 50ಕ್ಕಿಂತ ಹೆಚ್ಚು ವೀಕ್ಷಕರು ಮೊಬೈಲ್ ಮತ್ತು ಟಿವಿ ಎರಡನ್ನೂ ಬಳಸುತ್ತಿದ್ದಾರೆ.
ಸಿಂಕ್ರೊನಿ ಇಂಡಿಯಾ ಮತ್ತು ಯುನೊಮರ್‌ಗಾಗಿ ಸ್ಕೋರ್ ವರದಿಗಳನ್ನು ರಚಿಸಲು ಯುನೊಮರ್ ಮಾರುಕಟ್ಟೆ ಸಂಶೋಧನಾ ವೇದಿಕೆಯಲ್ಲಿ ದೈನಂದಿನ ಡೇಟಾವನ್ನು ಒಟ್ಟುಗೂಡಿಸಲಾಗುತ್ತದೆ. ಐಪಿಎಲ್‌ನ ಮೊದಲ ಎರಡು ವಾರಗಳಲ್ಲಿ ತೆಗೆದುಕೊಂಡ ಮಾದರಿಗಳ ಆಧಾರದ ಮೇಲೆ ಈ ವರದಿಯನ್ನು ಸಿದ್ಧಪಡಿಸಲಾಗಿದೆ. ಮುಂಬೈ, ದೆಹಲಿ, ಬೆಂಗಳೂರು, ಚೆನ್ನೈ, ಕೋಲ್ಕತ, ಅಹಮದಾಬಾದ್, ಹೈದರಾಬಾದ್, ಲಕ್ನೋ, ಲುಧಿಯಾನ ಮತ್ತು ಜೈಪುರದಿಂದ ಮಾದರಿಗಳನ್ನು ಸಂಗ್ರಹಿಸಲಾಗಿದೆ.

ಜಿಯೋ 2023ರೂ. ಯೋಜನೆ ಪ್ರಯೋಜನ : ರಿಲಾಯನ್ಸ್ ಜಿಯೋ 2023ರೂ. ಪ್ಲ್ಯಾನ್ ಒಟ್ಟು 252 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಈ ಅವಧಿಯಲ್ಲಿ ಪ್ರತಿದಿನ 2.5 GB ಡೇಟಾ ಪ್ರಯೋಜನ ಲಭ್ಯವಾಗಲಿದ್ದು, ಪೂರ್ಣ ವ್ಯಾಲಿಡಿಟಿ ಅವಧಿಗೆ 630 GB ಡೇಟಾ ಸಿಗಲಿದೆ. ವೇಗದಲ್ಲಿ ಇಂಟರ್ನೆಟ್ ಇರಲಿದೆ.
ಹಾಗೆಯೇ ಅನಿಯಮಿತ ಜಿಯೋ ಟು ಜಿಯೋ ಕರೆಗಳು, ಜಿಯೋ ದಿಂದ ಇತರೆ ನೆಟವರ್ಕ್ ಕರೆಗಳಿಗೂ ಅನಿಯಮಿತ ವಾಯಿಸ್ ಕರೆ ಲಭ್ಯ. ಇದರೊಂದಿಗೆ 100 ಎಸ್‌ಎಮ್‌ಎಸ್ ಸೌಲಭ್ಯ ಸಹ ಲಭ್ಯವಾಗಲಿದೆ ಜೊತೆಗೆ ಜಿಯೋ ಆಪ್ ಸೇವೆಗಳು ಸಹ ಸಿಗುತ್ತವೆ.
ಜಿಯೋ 2999ರೂ. ಯೋಜನೆ ಪ್ರಯೋಜನ : ಜಿಯೋ ಟೆಲಿಕಾಂನ 2999ರೂ. ಪ್ರೀಪೇಯ್ಡ್ ಪ್ಲ್ಯಾನ್ ವಾರ್ಷಿಕ ಅವಧಿಯ ಯೋಜನೆ ಆಗಿದ್ದು, 365 ದಿನಗಳ ವ್ಯಾಲಿಡಿಟಿ ಅವಧಿ ಯನ್ನು ಪಡೆದಿದೆ. ಆದ್ರೆ ಈಗ ಹೆಚ್ಚುವರಿಯಾಗಿ 23 ದಿನಗಳನ್ನು ನೀಡಿದ್ದು, ಒಟ್ಟು 388 ದಿನಗಳ ವ್ಯಾಲಿಡಿಟಿ ದೊರೆಯುತ್ತದೆ. ಪ್ರತಿದಿನ 2.5 GB ಡೇಟಾ ಪ್ರಯೋಜನಗಳು ಗ್ರಾಹಕರಿಗೆ ಲಭ್ಯವಾಗಲಿವೆ. ಹಾಗೆಯೇ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ. ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನ ಸಹ ದೊರೆಯುತ್ತದೆ.


Click it and Unblock the Notifications








