ಜಿಮೇಲ್ ಬಳಕೆದಾರ ತಿಳಿಯಲೇ ಬೇಕಾದ ಭಿನ್ನತೆಗಳು

By Suneel
|

ಪ್ರಸ್ತುತ ದಿನಗಳಲ್ಲಿ ಪ್ರತಿಯೊಬ್ಬರೂ ವಯಕ್ತಿಕ ಮತ್ತು ಪ್ರೊಫೇಶನಲ್, ಎರಡು ರೀತಿಯ ಉಪಯೋಗಕ್ಕಾಗಿಯೂ ಸಹ ಜಿಮೇಲ್‌ ಬಳಕೆ ಮಾಡುತ್ತಿದ್ದಾರೆ. ಆದರೇ ಇಂಟರ್ನೆಟ್‌ ಮುಂದೆ ಕುಳಿತರೆ ಸಮಯ ಹೇಗೆ ಕಳೆಯುತ್ತೇ ಎಂಬುದೇ ತಿಳಿಯುವುದಿಲ್ಲಾ. ಆದ್ದರಿಂದ ಪ್ರತಿಯೊಬ್ಬ ಜಿ-ಮೇಲ್‌ ಬಳಕೆದಾರರು ಸಹ ತಿಳಿಯಲೇ ಬೇಕಾದ ಕೆಲವು ವೈಶಿಷ್ಟತೆಗಳನ್ನು ಗಿಜ್‌ಬಾಟ್‌ ಇಂದಿನ ಲೇಖನದಲ್ಲಿ ನಿಮಗಾಗಿ ತಿಳಿಸುತ್ತಿದೆ.

ಓದಿರಿ: ಕೈಗೆಟಕುವ ಬೆಲೆಯಲ್ಲಿ ಟಾಪ್‌ 10 ಚೀನಿ ಸ್ಮಾರ್ಟ್‌ಫೋನ್‌ಗಳು

ಗಿಜ್‌ಬಾಟ್‌ ತಿಳಿಸಲಿರುವ ಜಿಮೇಲ್‌ನಲ್ಲಿನ ಈ ವೈಶಿಷ್ಟತೆಗಳು ನಿಮಗೆ ಹೆಚ್ಚು ಸಮಯವನ್ನು ಉಳಿಸಲಿವೆ.

ಥೀಮ್‌ಗಳೊಂದಿಗೆ ನಿಮ್ಮ ಜಿಮೇಲ್‌ ಕಸ್ಟಮೈಜ್‌ ಮಾಡಿ

ಥೀಮ್‌ಗಳೊಂದಿಗೆ ನಿಮ್ಮ ಜಿಮೇಲ್‌ ಕಸ್ಟಮೈಜ್‌ ಮಾಡಿ

ನಿಮ್ಮ ಜಿಮೇಲ್‌ ಖಾತೆಯಲ್ಲಿ ಥೀಮ್‌ ಸೆಟ್‌ ಮಾಡಲು ಸೆಟ್ಟಿಂಗ್ಸ್‌ಗೆ ಹೋಗಿ ಥೀಮ್ಸ್>>ಕಸ್ಟಮ್ ಥೀಮ್ಸ್ ಗೆ ಹೋಗಿ ಅಲ್ಲಿ ನಿಮಗೆ ಬೇಕಾದ ಕಲರ್ ಸೆಲೆಕ್ಟ್‌ ಮಾಡಬಹುದು ಅಥವಾ ಆನ್‌ಲೈನ್‌ ಥೀಮ್‌ಗಳನ್ನು ಸಹ ಸೆಲೆಕ್ಟ್‌ ಮಾಡಬಹುದಾಗಿದೆ.

ಸ್ಟಾರ್‌ಗಳನ್ನು ಹೇಗೆ ಉಪಯೋಗಿಸುವುದು ಹೇಗೆ ?

ಸ್ಟಾರ್‌ಗಳನ್ನು ಹೇಗೆ ಉಪಯೋಗಿಸುವುದು ಹೇಗೆ ?

ಜಿಮೇಲ್‌ ಸೆಟ್ಟಿಂಗ್ಸ್>>ಸ್ಟಾರ್ಸ್, ಇಲ್ಲಿ ನೀವು ಹಲವು ರೀತಿಯ ಸ್ಟಾರ್ಸ್‌ಗಳನ್ನು ಹೊಂದಿಸಬಹುದು. ಸ್ಟಾರ್ಸ್‌ಗಳನ್ನೇ ಕಲರ್‌ ಕೋಡ್‌ ಆಗಿ ವ್ಯವಸ್ಥೆಗೊಳಿಸಬಹುದು.

 ಬ್ರೌಸರ್‌ನಲ್ಲಿ ಇಂಬಾಕ್ಸ್‌ ಕೌಂಟ್

ಬ್ರೌಸರ್‌ನಲ್ಲಿ ಇಂಬಾಕ್ಸ್‌ ಕೌಂಟ್

ಸೆಟ್ಟಿಂಗ್ಸ್>>ಲ್ಯಾಬ್‌>>ಅನ್‌ರೀಡ್‌ ಮೆಸೇಜ್‌ ಐಕಾನ್>>ಎನೇಬಲ್. ಹೊಸ ಮೆಸೇಜ್‌ಗಳನ್ನು ಮಾತ್ರ ನೋಡಲು ಹೊಸ ಟ್ಯಾಬ್‌ ಹೊಂದಬಹುದು.

ಫಾಸ್ಟರ್‌ ಲೋಡಿಂಗ್‌

ಫಾಸ್ಟರ್‌ ಲೋಡಿಂಗ್‌

ನಿಮ್ಮ ಜಿಮೇಲ್‌ ಅನ್ನು ಫಾಸ್ಟರ್‌ ಲೋಡ್‌ ಮಾಡಲು ಜಿಮೇಲ್‌ ಓಪೆನ್ ಮಾಡಿದ ನಂತರ ಯುಆರ್‌ಎಲ್‌ ನಂತರದಲ್ಲಿ ಸರಳವಾಗಿ ''/?ui=html'' ಎಂದು ಟೈಪ್‌ ಮಾಡಿ. ಇದು ಫಾಸ್ಟರ್‌ ಲೋಡಿಂಗ್ ತೆಗೆದುಕೊಂಡು ಸಮಯವನ್ನು ಉಳಿಸುತ್ತದೆ.

ಪ್ರಿ-ಟೈಟ್‌ ಪ್ರತಿಕ್ರಿಯೆ

ಪ್ರಿ-ಟೈಟ್‌ ಪ್ರತಿಕ್ರಿಯೆ

ನೀವು ಒಂದೇ ರೀತಿಯ ವಾಕ್ಯಗಳನ್ನು ಆಗಾಗ ಬಳಸುತ್ತಿದ್ದರೇ, ಅಂತಹ ವಾಕ್ಯಗಳನ್ನು ಉಳಿಸಬಹುದಾಗಿದೆ. ಹಾಗೆ ಮಾಡಲು ಸೆಟ್ಟಿಂಗ್ಸ್>>ಲ್ಯಾಬ್>>ಕ್ಯಾನಡ್ಡು ರೆಸ್ಪಾನ್ಸೆಸ್>> ಎನೇಬಲ್. ನೀವ ಯಾವಾಗಲಾದರು ವಾಕ್ಯ ಟೈಪ್‌ ಮಾಡಿದಾಗ ನೀವು ಉಳಿಸಿದ ವಾಕ್ಯಗಳ ಪಟ್ಟಿ ಸಿಗುತ್ತದೆ.

 ಸರ್ಚ್‌ ಅಟಾಚ್‌ಮೆಂಟ್ಸ್‌

ಸರ್ಚ್‌ ಅಟಾಚ್‌ಮೆಂಟ್ಸ್‌

ನೀವು ಕೆಲವೊಮ್ಮೆ ಕಳುಹಿಸಿದ ಅಥವಾ ಸ್ವೀಕರಿಸಿದ ಹಲವು ಮೆಸೇಜ್‌ಗಳಲ್ಲಿ ನಿರ್ಧಿಷ್ಟ ಮೆಸೇಜ್‌ಗಳನ್ನು ಹುಡುಕಲು ಸರ್ಚ್ ಬಾರ್‌ನಲ್ಲಿ ಫೈಲ್‌ ಹೆಸರು ಟೈಪ್‌ ಮಾಡುವ ಮೊದಲು''has:attachment'' ಸೇರಿಸಿ.

ಅನ್‌ಸೆಂಡ್‌ ಸೆಂಟ್‌ ಮೆಸೇಜ್

ಅನ್‌ಸೆಂಡ್‌ ಸೆಂಟ್‌ ಮೆಸೇಜ್

ನೀವು ಸೆಂಡ್‌ ಮಾಡಿದ ಮೇಸೇಜ್ ಅನ್ನು ಮತ್ತೆ ನೋಡಿ ಡ್ರಾಫ್ಟ್‌ಗೆ ಇಡಲು ಅವಕಾಶ ಒದಗಿಸುತ್ತದೆ.

ಕೀಬೋರ್ಡ್‌ ಶಾರ್ಟ್‌ಕಟ್

ಕೀಬೋರ್ಡ್‌ ಶಾರ್ಟ್‌ಕಟ್

ಈ ಫೀಚರ್ ಜಿಮೇಲ್‌ ನಿರ್ವಹಿಸುವಲ್ಲಿ ಹೆಚ್ಚು ಸರಳವಾಗಿ ಮಾರ್ಪಡಿಸುತ್ತದೆ. ಹೆಚ್ಚು ಶಾರ್ಟ್‌ಕಟ್‌ ನಿಮಗೆ ಓದಲು ಮತ್ತು ಕ್ರಿಯೇಟ್‌ ಮಾಡಲು ಲಭ್ಯವಾಗುತ್ತವೆ.

Best Mobiles in India

English summary
Everyone uses email to communicate both on a professional and personal platform, and many people use Gmail for this purpose. Whether you use Gmail already or are thinking about signing up for an account, check out these amazing tricks that will save you time and make it a lot easier to perform tasks.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X