ಹೊಸ ವರ್ಷಕ್ಕೆ ಕಾಲಿಡುತ್ತಿವೆ ಈ ಆಶ್ಚರ್ಯಕರ ಟೆಕ್ನಾಲಜಿಗಳು

By Suneel
|

ಹೊಸ ವರ್ಷಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ. ಪ್ರತಿ ಹೊಸ ವರ್ಷಕ್ಕೂ ಸಹ ಜನರು ತಮ್ಮ ಭೌತಿಕ ಜೀವನ ಹಾಗೂ ಮಾನಸಿಕವಾಗಿ ಸಹ ಹೊಸತನವನ್ನು ನಿರೀಕ್ಷೆ ಮಾಡುತ್ತಾರೆ. ಹಾಗೆಯೇ ಟೆಕ್‌ ಜಗತ್ತಿನಲ್ಲೂ ಸಹ ನಾವು ಬೃಹತ್‌ ಬದಲಾವಣೆಯನ್ನು ನಿರೀಕ್ಷಿಸಬಹುದಾಗಿದೆ. ಇಲೆಕ್ಟ್ರಾನಿಕ್‌ ಗ್ಯಾಜೆಟ್ಸ್‌ಗಳಾಗಿರಬಹುದು, ಟೆಕ್‌ ಸಂಸ್ಥೆಗಳಾಗಿರಬಹುದು ತಮ್ಮ ಸೇವೆಯಲ್ಲಿ ಅಥವಾ ಅಭಿವೃದ್ದಿಯಲ್ಲಿ ಹೊಸತನವನ್ನು ನೀಡಲು ಪ್ರಯತ್ನಿಸುತ್ತಿರುತ್ತವೆ.

ಓದಿರಿ: ವೈಫೈ ಬದಲಾಗಿ ಲೈಫೈ : ಸೆಕೆಂಡಿಗೆ 224ಜಿಬಿ ವೇಗ

ನಾವು ಮುನ್ನೋಡುತ್ತಿರುವ ಈ ವರ್ಷಕ್ಕೆ ಟೆಕ್‌ ಜಗತ್ತಿನಲ್ಲಿ ಮಹತ್ತರ ಬದಲಾವಣೆಯನ್ನು ಕಾಣಬಹುದಾಗಿದ್ದು, ಟೆಕ್‌ ಬಳಕೆದಾರರನ್ನು ಇನ್ನಷ್ಟು ಸ್ಮಾರ್ಟ್‌ ಆಗಿ ಮಾಡಲು ಟೆಕ್‌ ಸಂಸ್ಥೆಗಳು ಮುಂದಾಗಿವೆ. ಹೌದು, ಅಂತಹ ಬದಲಾವಣೆಯ ಆವಿಷ್ಕಾರಗಳನ್ನು ನಾವು ಮುನ್ನೋಡುತ್ತಿರುವ ಹೊಸ ವರ್ಷದಲ್ಲಿ ಕಾಣಬಹುದಾಗಿದೆ. ಅವುಗಳು ಯಾವುವು ಎಂಬುದನ್ನು "ಫೋನ್‌ಅರೆನಾ" ವರದಿ ಮಾಡಿದ್ದು, ಗಿಜ್‌ಬಾಟ್‌ ಇಂದಿನ ಲೇಖನದಲ್ಲಿ ನಿಮಗೆ ಪರಿಚಯಿಸುತ್ತಿದೆ.

ಗೂಗಲ್‌ ಪ್ರಾಜೆಕ್ಟ್‌ ARA

ಗೂಗಲ್‌ ಪ್ರಾಜೆಕ್ಟ್‌ ARA

ಈ ಪ್ರಾಜೆಕ್ಟ್‌ ಗೂಗಲ್‌ ಮತ್ತು ಮೊಟೊರೊಲಾ ಕಂಪನಿಗಳು ಕೈಗೊಂಡಿದ್ದು, ARA ಪ್ರಾಜೆಕ್ಟ್‌ ಎಂಬುದು ARA ಸ್ಮಾರ್ಟ್‌ಫೋನ್‌. ಇದರಲ್ಲಿ ಫೋನ್‌ನ ಭೌತಿಕ ವಸ್ತುಗಳನ್ನು ಬಳಕೆದಾರ ಯಾವುದೇ ಸಮಸ್ಯೆ ಇಲ್ಲದೇ ಬದಲಿಸಬಹುದಾಗಿದೆ. ಉದಾಹರಣೆಗೆ ಫೋನ್‌ ಬಳಕೆದಾರ 16MP ಕ್ಯಾಮೆರಾ ಬೇಕಾದಲ್ಲಿ ಮೊದಲಿನ ಕ್ಯಾಮೆರಾವನ್ನು ಸುಲಭವಾಗಿ ತೆಗೆದು ಇದನ್ನು ಅಳವಡಿಸಬಹುದಾಗಿದೆ.

ಡ್ರೈವರ್ ಇಲ್ಲದ ಕಾರು

ಡ್ರೈವರ್ ಇಲ್ಲದ ಕಾರು

ಗೂಗಲ್‌ನ ಹೊಸ ಯೋಜನೆಯಲ್ಲಿ ಡ್ರೈವರ್ ಇಲ್ಲದ ಕಾರು ಒಂದಾಗಿದೆ. ಇದೇ ರೀತಿಯ ಕಾರನ್ನು ಆಪಲ್‌ ಸಹ ಅಭಿವೃದ್ದಿಗೊಳಿಸಲು ಯೋಜನೆ ರೂಪಿಸಿದೆ.

ಲೆನೊವೊ ಸ್ಮಾರ್ಟ್‌ ಕಾಸ್ಟ್‌ ಸ್ಮಾರ್ಟ್‌ಫೋನ್‌

ಲೆನೊವೊ ಸ್ಮಾರ್ಟ್‌ ಕಾಸ್ಟ್‌ ಸ್ಮಾರ್ಟ್‌ಫೋನ್‌

ಸ್ಮಾರ್ಟ್‌ ಕಾಸ್ಟ್‌ ಅಥವಾ ಪ್ರಾಜೆಕ್ಟರ್‌ ಕೀಬೋರ್ಡ್‌ ಹೊಂದಿರುವ ಸ್ಮಾರ್ಟ್‌ಫೋನ್‌ ಅನ್ನು ಲೆನೊವೊ ಅಭಿವೃದ್ದಿಪಡಿಸುತ್ತಿದೆ. ಇದನ್ನು ಈಗಾಗಲೇ ಹಲವು ದಿನಗಳಿಂದ ಹಲವಾರು ಜನರು ಬುಕಿಂಗ್‌ ಮಾಡಿದ್ದಾರೆ.

 ಸ್ಮಾರ್ಟ್‌ ಲೆನ್ಸ್‍

ಸ್ಮಾರ್ಟ್‌ ಲೆನ್ಸ್‍

ಇದೀಗ ತಾನೆ ಗೂಗಲ್‌ ಗ್ಲಾಸ್‌ ಬಗ್ಗೆ ಕೇಳಿದ್ದೀರಿ ಅಲ್ಲವೇ. ಆದರೆ ಈಗ ಮೈಕ್ರೋಸಾಫ್ಟ್‌ ಅದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ಸ್ಮಾರ್ಟ್‌ಲೆನ್ಸ್‌ ಅನಾವರಣ ಮಾಡಿದ್ದು, ಇದು ಹೆಡ್‌ಸೆಟ್‌ ರೀತಿ ಇದೆ. ಹಾಗೂ ವಾಸ್ತವತೆಯನ್ನು ನೀಡುತ್ತದೆ.

6ನೇ ಸೆನ್ಸ್‌

6ನೇ ಸೆನ್ಸ್‌

6ನೇ ಸೆನ್ಸ್ ಸ್ಮಾರ್ಟ್‌ ಗ್ಯಾಜೆಟ್ಸ್‌ಗಳ ಜೊತೆ ಪ್ರತಿಕ್ರಿಯಿಸಲು ಇರುವ ಹೊಸ ಮಾರ್ಗವಾಗಿದೆ. ಇದನ್ನು ಮೊದಲು TED ಟಾಕ್‌ ಶೋನಲ್ಲಿ ತರಲಾಗಿದೆ. ಸ್ಮಾರ್ಟ್‌ ಗ್ಯಾಜೆಟ್ಸ್‌ಗಳನ್ನು ಸರಳ ಸನ್ನೆಗಳಿಂದ (ಹಾವಭಾವ) ನಿಯಂತ್ರಿಸಬಹುದಾಗಿದೆ.

 ಗೂಗಲ್ ಪ್ರಾಜೆಕ್ಟ್ ಸೋಲಿ

ಗೂಗಲ್ ಪ್ರಾಜೆಕ್ಟ್ ಸೋಲಿ

ಗೂಗಲ್‌ ಪ್ರಾಜೆಕ್ಟ್‌ನಲ್ಲಿ ಹೊಸ ಟೆಕ್ನಾಲಜಿಯಾದ ಸೋಲಿ ಗ್ಯಾಜೆಟ್ ನೊಂದಿಗೆ ಮಾತನಾಡುವ ಮೂಲಕ ಪ್ರತಿಕ್ರಿಯಿಸಬಹುದಾಗಿದೆ.

ವೈರ್‌ಲೆಸ್‌ ಇಂಟರ್ನೆಟ್

ವೈರ್‌ಲೆಸ್‌ ಇಂಟರ್ನೆಟ್

ಈಡನ್‌ ಬರ್ಗ್‌ನ ಹೆರಾಲ್ಡ್‌ ಹಾಸ್ ಎಂಬ ಪ್ರೊಫೆಸರ್‌ ಒಬ್ಬರು ಲೈಪೈ ಎಂಬ ಹೊಸ ಇಂಟರ್ನೆಟ್‌ ಸಂಪರ್ಕ ಅಭಿವೃದ್ದಿಪಡಿಸಿದ್ದಾರೆ. ಇದು ಕೇವಲ ಬೆಳಕಿನ ಕಿರಣಗಳನ್ನು ಬಳಸಿಕೊಂಡು ಇಂಟರ್ನೆಟ್‌ ಸಂಪರ್ಕ ನೀಡುತ್ತದೆ.

ಜೆಟ್‌ ಪ್ಯಾಕ್‌

ಜೆಟ್‌ ಪ್ಯಾಕ್‌

ಜೆಟ್‌ ಪ್ಯಾಕ್‌ ಫ್ಯಾಂಟಸಿಯನ್ನು ಜೇಮ್ಸ್‌ ಬಾಂಡ್ ಸಿನಿಮಾಗಳಲ್ಲಿ ನೋಡಿರಬಹುದು. ಖಾಸಗಿ ವಿಮಾನಗಳಿಗಿಂತ ಮಾನವ ಅತಿವೇಗವಾಗಿ ಹೋಗಲು ಸಾಧ್ಯವಿಲ್ಲ. ಆದರೆ ದುಬೈ ಮೂಲದ ಸಂಸ್ಥೆಯೊಂದು, ಇಬ್ಬರು ಸ್ಟಂಟ್ಸ್‌ಮ್ಯಾನ್‌ಗಳು ಜೆಟ್‌ ವಿಮಾನದೊಂದಿಗೆ ಅದರ ವೇಗದಲ್ಲಿ ಹಾರಿರುವ ವೀಡಿಯೋವನ್ನು ಯೂಟ್ಯೂಬ್‌ನಲ್ಲಿ ಪೋಸ್ಟ್‌ ಮಾಡಿದೆ. ವಿಮಾನಕ್ಕಿಂತ ಜೆಟ್‌ ಮ್ಯಾನ್‌ ಅತಿವೇಗದಲ್ಲಿ ವೀಡಿಯೋ ಅಂತ್ಯದಲ್ಲಿ ಹೋಗುತ್ತಾನೆ. ಈ ಟೆಕ್ನಾಲಜಿ ಬಹಳ ಹತ್ತಿರವಿದೆ.

Best Mobiles in India

English summary
8 Most Awaited Tech Innovations in 2016.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X