ವೈಫೈ ಬದಲಾಗಿ ಲೈಫೈ : ಸೆಕೆಂಡಿಗೆ 224ಜಿಬಿ ವೇಗ
ವೈರ್‌ಲೆಸ್ ಕಮ್ಯೂನಿಕೇಷನ್ ಕ್ಷೇತ್ರದಲ್ಲಿ ಡಾಟಾ ಬಳಕೆಗೆ ಸಂಪರ್ಕ ಕಲ್ಪಿಸುವ ವೈ-ಫೈ ದಿನದಿಂದ ದಿನಕ್ಕೆ ಹೊಸ ಬದಲಾವಣೆ ಪಡೆಯುತ್ತಲೇ ಇದೆ. ಆದರೆ ಅದರಲ್ಲಿ ಇನ್ನೆಂದು ಕಾಣದಂತ ಹೊಸ ಬದಲಾವಣೆಯನ್ನು ನೀವು ಇಂದು ಕಾಣಬಹುದಾಗಿದೆ.
ಓದಿರಿ: ವೈಫೈ ವೇಗಗೊಳಿಸಬೇಕೇ ಇಲ್ಲಿದೆ ಸಲಹೆಗಳು
ಹೌದು, ಈಗ ವೈ-ಫೈ ಬದಲಾಗಿ ಲೈ-ಫೈ ಎಂಬ ಹೊಸ ವೈರ್‌ಲೆಸ್ ಕಮ್ಯೂನಿಕೇಷನ್ ಅಭಿವೃದ್ದಿಗೊಂಡಿದ್ದು ಈಗಾಗಲೇ ಬಳಸಲಾಗುತ್ತಿದೆ. ಇದರ ವೇಗ ಸೆಕೆಂಡಿಗೆ 224 ಗಿಗಾಬೈಟ್ಸ್ ಆಗಿದ್ದು, ನಿಮಗೂ ಬಳಸುವ ಆಸಕ್ತಿ ಇದ್ದರೇ ಗಿಜ್‌ಬಾಟ್‌ನ ಈ ಲೇಖನ ಓದಿ.

Wi-Fi ಬದಲು Li-Fi
ವೈರ್‌ಲೆಸ್ ಕಮ್ಯೂನಿಕೇಷನ್ ಕ್ಷೇತ್ರದಲ್ಲಿ ವೈ-ಫೈ ಬದಲು ಈಗ ಲೈ-ಫೈ ಟೆಕ್ನಾಲಜಿ ಬರಲು ಸಿದ್ದವಾಗಿದೆ. ಈ ಟೆಕ್ನಾಲಜಿ ಪ್ರಸ್ತುತ ವೈ-ಫೈ ಟೆಕ್ನಾಲಜಿಗಿಂತ 100 ಪಟ್ಟು ವೇಗದ ಸಂಪರ್ಕ ವ್ಯವಸ್ಥೆ ಕಲ್ಪಿಸುತ್ತದೆ.

2011 ಅಭಿವೃದ್ದಿ ಪಡಿಸಲಾದ ಟೆಕ್ನಾಲಜಿ
ಲೈ-ಫೈ ಟೆಕ್ನಾಲಜಿಯನ್ನು 2011 ರಲ್ಲಿ ಅಭಿವೃದ್ದಿ ಪಡಿಸಲಾಗಿದ್ದು, ಸೆಕೆಂಡಿಗೆ 224 ಗಿಗಾಬೈಟ್ಸ್ ವೇಗವನ್ನು ಹೊಂದಿದೆ.

ಕಛೇರಿ ಮತ್ತು ಕಾರ್ಖಾನೆಗಳಲ್ಲಿ ಪರೀಕ್ಷೆ
ಪ್ರಸ್ತುತದಲ್ಲಿ ಲೈ-ಫೈ ಟೆಕ್ನಾಲಜಿಯನ್ನು ಕಛೇರಿ ಮತ್ತು ಕೈಗಾರಿಕಾ ಪ್ರದೇಶಗಳಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ.

ಗೋಚರ ಬೆಳಕಿನ ಉಪಯೋಗ
ಲೈ-ಫೈ ಟೆಕ್ನಾಲಜಿಯು ಡಾಟಾ ಪ್ರಸಾರ ಮಾಡಲು ಗೋಚರ ಬೆಳಕನ್ನು ಉಪಯೋಗಿಸಿಕೊಳ್ಳಲಿದ್ದು, ಇದು ಹೆಚ್ಚು ಸುರಕ್ಷಿತ ಎನ್ನಲಾಗಿದೆ.

ಹರಾಲ್ಡ್ ಹಾಸ್ ಸಂಶೋಧನೆ
ಸ್ಕಾಟ್ಲೆಂಡ್‌ನ ಎಡಿನ್ಬರ್ಗ್ ವಿಶ್ವವಿದ್ಯಾಲಯದ ಹರಾಲ್ಡ್ ಹಾಸ್ ಎಂಬುವವರು ಲೈ-ಫೈ ಟೆಕ್ನಾಲಜಿಯನ್ನು 2011 ರಲ್ಲಿ ಅಭಿವೃದ್ದಿಗೊಳಿಸಿದರು.

ಎಲ್‌ಇಡಿ ಲೈಟ್‌ನಿಂದ ಡಾಟಾ ಪ್ರಸಾರ
ಹರಾಲ್ಡ್ ಹಾಸ್ ರವರು ಸೆಲ್ಯುಲಾರ್ ಟವರ್‌ಗಿಂತ ಹೆಚ್ಚು ಡಾಟಾ ಪ್ರಸಾರವನ್ನು ಕೇವಲ ಎಲ್‌ಇಡಿ ಲೈಟ್ ಮೂಲಕ ಅಧಿಕ ಡಾಟಾ ಪ್ರಸಾರ ಮಾಡುವುದನ್ನು ತೋರಿಸಿಕೊಟ್ಟಿದ್ದಾರೆ.

ಕಾರ್ಯನಿರ್ವಹಣೆ ಹೇಗೆ ?
ಲೈ-ಫೈ ಟೆಕ್ನಾಲಜಿಯೂ ಮೋರ್ಸ್ ಕೋಡ್‌ಗೆ ಹೋಲುವಂತೆ, ಗೋಚರ ಬೆಳಕಿನ ಸಂವಹನದ(VLC) ಮೂಲಕ ಕಾರ್ಯನಿರ್ವಹಿಸಲಿದ್ದು, ಇದನ್ನು ಬರಿಗಣ್ಣಿನಿಂದ ಪತ್ತೆ ಮಾಡುವಷ್ಟು ವೇಗದಲ್ಲಿ ಪ್ರಸಾರವಾಗುತ್ತದೆ.

ಲ್ಯಾಬ್ ಸ್ಪೀಡ್
ಲೈ-ಫೈ ಟೆಕ್ನಾಲಜಿ 400 ರಿಂದ 800 ಟೆರಾಹರ್ಟ್ಜ್ ಗೋಚರ ಬೆಳಕನ್ನು ಉಪಯೋಗಿಸಿ, ಬೈನರಿ ಕೋಡ್ ಮೂಲಕ ಮೇಸೇಜ್ ಪ್ರಸಾರ ಮಾಡುತ್ತದೆ. ಇದು ಲ್ಯಾಬ್ ವೇಗದಲ್ಲಿ 1.5GB ಯ 18 ಸಿನಿಮಾಗಳನ್ನು ಪ್ರತಿ ಸೆಕೆಂಡಿಗೂ ಡೌನ್‌ಲೋಡ್ ಮಾಡಬಹುದು ಎನ್ನಲಾಗಿದೆ.

ದೀಪಕ್ ಸೋಲಂಕಿ-ಎಸ್ಟಾನಿಯನ್ ಟೆಕ್ ಕಂಪನಿ ಸಿಇಒ
ಲೈ-ಫೈ ಟೆಕ್ನಾಲಜಿ ಬಳಸುವಂತಹ ವಿವಿಧ ಕೈಗಾರಿಕಾ ಪ್ರದೇಶಗಳಲ್ಲಿ ಕೆಲವು ಪೈಲಟ್ ಯೋಜನೆಗಳನ್ನು ಕೈಗೊಂಡಿರುವುದಾಗಿ ಅಮೇರಿಕ ಐಬಿ ಟೈಮ್ಸ್ ಗೆ ಹೇಳಿದ್ದಾರೆ.

Oledcomm
Oledcomm ಎಂಬ ಫ್ರೆಂಚ್ ಕಂಪನಿ ಈಗಾಗಲೇ ಈ ಟೆಕ್ನಾಲಜಿಯನ್ನು ಇನ್ಸ್ಟಾಲ್ ಮಾಡಿಕೊಂಡು ಲೈ-ಫೈ ಉಪಯೋಗ ಪಡೆದುಕೊಂಡಿದೆ.

ಇಂಟರ್ನೆಟ್ ಬಳಸುವ ಕಛೇರಿಗಳಿಗೆ ಲೈ-ಫೈ
ಲೈ-ಫೈ ಟೆಕ್ನಾಲಜಿಯೂ ಇಂಟರ್ನೆಟ್ ಸೇವೆಗೆ ಗೋಚರ ಬೆಳಕನ್ನು ಉಪಯೋಗಿಸುವುದರಿಂದ ಇದನ್ನು ಕಛೇರಿಗಳು ಮತ್ತು ಕೈಗಾರಿಕೆ ಪ್ರದೇಶಗಳು ಹೆಚ್ಚು ಉಪಯೋಗ ಪಡೆದುಕೊಳ್ಳಬಹುದಾಗಿದೆ.


Click it and Unblock the Notifications








