ನಿಮ್ಮ ಫೋನ್ ಅನುಭವವನ್ನು ಇನ್ನಷ್ಟು ಸೊಗಸಾಗಿಸುವ ಅಪ್ಲಿಕೇಶನ್‌ಗಳು

Written By:

ಅಮೇರಿಕಾದ ಅರ್ಧಕ್ಕಿಂತ ಹೆಚ್ಚು ಜನರು ಸ್ಮಾರ್ಟ್‌ಫೋನ್ ಬಳಸುತ್ತಿದ್ದು, ಇದು ಅವರ ಜೀವನದ ವಿಶೇಷ ಅಂಶವಾಗಿ ಮಾರ್ಪಟ್ಟಿದೆ. ಸ್ಮಾಟ್ಫೋನ್‌ಗಳನ್ನು ಇಂದು ನಾವು ಹೋದಲ್ಲೆಲ್ಲಾ ತೆಗೆದುಕೊಂಡು ಹೋಗುತ್ತೇವೆ. ಮತ್ತು ಇದನ್ನು ಮನರಂಜನೆಯ ಬಹು ಮುಖ್ಯವಸ್ತುವಾಗಿ ಅವಲಂಬಿಸಿದ್ದೇವೆ. ಆದ್ದರಿಂದಲೇ ಇಂದು ಸ್ಮಾರ್ಟ್‌ಫೋನ್ ಅತಿಮುಖ್ಯವಾದುದು ಎಂದು ನಾವು ಇತ್ತೀಚಿನ ದಿನಗಳಲ್ಲಿ ಅಂದುಕೊಳ್ಳುತ್ತಿದ್ದೇವೆ.

ಓದಿರಿ: ವೇಗದ ಆಂಡ್ರಾಯ್ಡ್ ಬ್ರೌಸರ್ ಯುಸಿ ಬ್ರೌಸರ್ 10 ಫೀಚರ್‌ಗಳು

ಸ್ಮಾರ್ಟ್‌ಫೋನ್‌ಗಳ ಅನುಭವ ಮತ್ತು ಅದರ ಬಳಕೆಯನ್ನು ಇನ್ನಷ್ಟು ಮನರಂಕನಾತ್ಮಕವಾಗಿ ತಿಳಿದುಕೊಳ್ಳಲು ಕೆಳಗಿನ ಸ್ಲೈಡರ್‌ಗಳಲ್ಲಿ ಮಾಹಿತಿಗಳನ್ನು ನೀಡುತ್ತಿದ್ದೇವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹವಾಮಾನ ಮಾಹಿತಿ

ಲಾಕ್ ಸ್ಕ್ರೀನ್‌ ಮೇಲೆ ಹವಾಮಾನ ಮಾಹಿತಿ

ತಂತ್ರಜ್ಞಾನ ಬೆಳವಣಿಗೆ ಆದಂತೆ ಇಂದು ನಮಗೆ ಎಲ್ಲಾ ಮಾಹಿತಿಯನ್ನು ಸ್ಮಾಟ್‌ಫೋನ್ ಕುಳಿತಲ್ಲೇ ನೀಡುತ್ತದೆ. ಅಂತೆಯೇ ಹವಾಮಾನ ಮಾಹಿತಿ ತಿಳಿಯಲು ವೆದರ್‌ ಅಪ್ಲಿಕೇಶನ್‌ ಇನ್‌ಸ್ಟಾಲ್ ಮಾಡಿ ಲಾಕ್‌ಸ್ಕ್ರೀನ್‌ ಮೇಲೆಯೇ ಹವಾಮಾನದ ಬಗ್ಗೆ ತಿಳಿಯಬಹುದು.

ಹಿನ್ನಲೆ ಬಣ್ಣ ಬದಲಿಸಿಕೊಳ್ಳಿ

ಐಕಾನ್‌ಗಳನ್ನು ಕಸ್ಟಮೈಜ್‌ ಮಾಡಿ

ನಮ್ಮ ಸ್ಮಾರ್ಟ್‌ಫೋನ್‌ನಲ್ಲಿರುವ ಅಪ್ಲಿಕೇಶನ್‌ಗಳನ್ನು ವಿಂಗಡಿಸಿ ಕಸ್ಟಮೈಜ್‌ ಮಾಡಿ. ನಿಮಗಿಷ್ಟ ಬಂದಂತೆ ಹಿನ್ನಲೆ ಬಣ್ಣ ಬದಲಿಸಿಕೊಳ್ಳಿ. ಹಾಗೂ ಅಪ್ಲಿಕೇಶನ್‌ನ ಐಕಾನ್‌ ಅನ್ನು ನಿಮಗೆ ತೋಚಿದಂತೆ ಇಟ್ಟುಕೊಳ್ಳಿ. ಇದರಿಂದ ಅಪ್ಲಿಕೇಶನ್‌ ಕಂಡುಹಿಡಿಯಲು ಸುಲಭ.

ಆನ್‌ಮಾಡಿ

ನಿಮ್ಮ ಫೋನ್‌ನಿಂದ ಕಂಪ್ಯೂಟರ್ ಆನ್‌ಮಾಡಿ

ನಿಮ್ಮಲ್ಲಿ ಸ್ಮಾರ್ಟ್‌ಫೋನ್ ಇರುವುದಾದರೆ ಅದರಿಂದ ನಿಮ್ಮ ಕಂಪ್ಯೂಟರ್‌ ಆನ್‌ ಮಾಡಿ. ಹೇಗೆ ಎಂಬುದನ್ನು ತಿಳಿಯಲು ಇಲ್ಲಿ ಕ್ಲಿಕ್‌ ಮಾಡಿ

ವಿಜೆಟ್‌ಗಳು

ನಿಮ್ಮ ಲಾಕ್‌ ಸ್ಕ್ರೀನ್‌ ಮೇಲಿರಲಿ ವಿಜೆಟ್‌ಗಳು

ನಿಮ್ಮ ನೆಚ್ಚಿನ ವಿಜೆಟ್‌ಗಳು ಲಾಕ್‌ಸ್ಕ್ರೀನ್‌ ಮೇಲಿದ್ದಲ್ಲಿ, ಅವುಗಳ ವೇಗ ಹೆಚ್ಚಿಸಲು ಗೂಗಲ್‌ ಪ್ಲೇನಲ್ಲಿ ವಿಜೆಟ್ ಲಾಕರ್‌ ಲಾಕ್‌ಸ್ಕ್ರೀನ್‌ ಅನ್ನು ಡೌನ್‌ಲೋಡ್‌ ಮಾಡಿ.

ಐಟ್ಯೂನ್ಸ್‌

ಐಟ್ಯೂನ್ಸ್‌ ಮೂಲಕ ನಿಮ್ಮ ಮನೆಯ ಸಂಗೀತವನ್ನು ನಿಯಂತ್ರಿಸಿ

ನಿಮ್ಮ ಮನೆಯ ಸಂಗೀತ ಧ್ವನಿ, ಹಾಡು ಬದಲಿಸಲು ಐಫೋನ್‌, ಐಪ್ಯಾಡ್‌ಗಳನ್ನು ರೀಮೋಟ್‌ಗಳಾಗಿ ಬಳಸುವುದರ ಮೂಲಕ ನಿಯಂತ್ರಿಸಿ.

ಹೋಮ್‌ ಥಿಯೇಟರ್‌

ಐಫೋನ್‌ ಅನ್ನು ಕೀಬೋರ್ಡ್‌ ಹಾಗೂ ಮೌಸ್‌ ಆಗಿ ಬದಲಿಸಿ

ನಿಮ್ಮ ಮನೆಯಲ್ಲಿ ಕಂಪ್ಯೂಟರ್‌ ಮತ್ತು ಹೋಮ್‌ ಥಿಯೇಟರ್‌ ಇದ್ದಲ್ಲಿ ಸ್ಮಾಟ್ ಮೊಬೈಲ್‌ ಅನ್ನು ಮೌಸ್‌ ಆಗಿ ಪರಿವರ್ತಿಸಿ. ಇಂತಹ ಹಲವು ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳಿ.

ನಿಮ್ಮ ಫೋನ್ ಅನ್ನು ಮೈಕ್ರೋಸ್ಕೋಪ್‌ನಂತೆ ಮಾರ್ಪಡಿಸಿ

ಕೆಳಗಿನ ವೀಡಿಯೋದಲ್ಲಿ ಇದನ್ನು ಮಾಡುವುದು ಹೇಗೆ ಎಂಬುದರ ಕುರಿತ ಮಾಹಿತಿಯನ್ನು ನೀಡಿದ್ದೇವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
More than half of the American public owns smartphones and it's become an enormous part of everyone's lives. We have it everywhere we go and it performs essential functions such as the ability to play hangman wherever we go.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot