ಹೊಸ ತಂತ್ರಜ್ಞಾನದ ಎದುರು ಹಳತಾದ ತಂತ್ರಜ್ಞಾನಗಳು

By Ashwath
|

ಕಂಪ್ಯೂಟರ್‍ ಲೋಕದಲ್ಲಿ ಹೊಸ ಹೊಸ ತಂತ್ರಜ್ಞಾನ ಬಂದಂತೆ ಈ ಹಿಂದೆ ಬಳಸುತ್ತಿದ್ದ ತಂತ್ರಜ್ಞಾನಗಳು ಹಳೇಯದಾಗುತ್ತದೆ. ಹಿಂದೆ ಇದೇ 'ದೊಡ್ಡದು' ಎಂದು ಭಾವಿಸುತ್ತಿದ್ದ ನಾವುಗಳು,ಇಂದು ಈ ತಂತ್ರಜ್ಞಾನವನ್ನು ನೋಡಿ 'ಇಷ್ಟೇನಾ' ಎಂದು ಕರೆಯುವ ಕಾಲದಲ್ಲಿದ್ದೇವೆ.

ಹೀಗಾಗಿ ಹಿಂದೆ ನಾವೆಲ್ಲ ದೊಡ್ಡದು ಎಂದು ಕರೆಸಿಕೊಂಡಿದ್ದ, ಇಂದು ಎಲ್ಲರಿಂದ ಏನು ಇಲ್ಲ ಎಂದು ಕರೆಯಿಸಿಕೊಳ್ಳುವ ಕೆಲವು ತಂತ್ರಜ್ಞಾನ,ಗ್ಯಾಜೆಟ್‌ಗಳ ಮಾಹಿತಿ ಇಲ್ಲಿದೆ. ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ.

ಡಯಲ್‌

ಡಯಲ್‌


ಮೊಬೈಲ್‌ಗಳು ಬಂದಮೇಲೆ ಲ್ಯಾಂಡ್‌‌ಲೈನ್‌ ಫೋನ್‌‌ ಡಿಮ್ಯಾಂಡ್‌ ಕಡಿಮೆಯಾಗಿದೆ. ಅದರಲ್ಲೂ ಈಗ ಹೊಸ ತಂತ್ರಜ್ಞಾನ ಬರತ್ತಿದ್ದು ಡಯಲ್‌ ಮಾಡುವುದರ ಬದಲಾಗಿ ವಾಯ್ಸ್ ಮೂಲಕ ಫೋನ್‌ ನಂಬರ್‌ ಟೈಪಿಸಿ‌ ಕರೆ ಮಾಡಬಹುದಾಗಿದೆ.

ಎಎಸ್‌ಎಲ್‌

ಎಎಸ್‌ಎಲ್‌

ಸೋಶಿಯಲ್‌ ಮೀಡಿಯಾಗಳ ಪ್ರಚಾರಕ್ಕೆ ಬರುವ ಮೊದಲು ಇ ಮೇಲ್‌ ಚಾಟಿಂಗ್‌‌ನಲ್ಲಿ ಬಹಳಷ್ಟು ಜನ ಬೇರೆಯವರ ಜೊತೆ ಚಾಟ್‌ ಮಾಡುವಾಗ ವಯಸ್ಸು, ಲಿಂಗ, ಜಾಗವನ್ನು ಕೇಳಲು "ASL"(age, sex and location) ಪದಗಳನ್ನು ಟೈಪಿಸಿ ಅವರ ಬಗ್ಗೆ ವಿಚಾರಿಸುವ ಟ್ರೆಂಡ್‌ ಇತ್ತು. ಆದರೆ ಈಗ "ASL" ಟ್ರೆಂಡ್‌ ಕಡಿಮೆಯಾಗಿದೆ.

 ಎಸ್‌ಎಂಎಸ್‌

ಎಸ್‌ಎಂಎಸ್‌


ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಬರುವ ಮೊದಲು ಎಸ್‌ಎಂ‌ಎಸ್‌ಗಳದ್ದೇ ಅಬ್ಬರ. ವಿವಿಧ ಕಂಪೆನಿಗಳು ಎಸ್‌ಎಂಎಸ್‌ಗಳಿಗೆಂದೇ ವಿಶೇಷ ಆಫರ್‌ಗಳನ್ನು ಪ್ರಕಟಿಸುತ್ತಿದ್ದವು. ಆದರೆ ಈಗ ಮೆಸೆಂಜಿಗ್‌ ಆಪ್‌ಗಳು ಬಂದ ಮೇಲೆ ಫೋನ್‌ ಮೆಸೇಜ್‌ಗಳ ಅಬ್ಬರ ಸ್ವಲ್ಪ ಕಡಿಮೆಯಾಗಿದೆ.

WWW

WWW


ಹಿಂದೆ ಬೇಕಾದ ವೆಬ್‌ಸೈಟ್‌ನ್ನು ನೆಟ್‌ಲ್ಲಿ ಹುಡುಕಬೇಕಿದ್ದರೆ ಮೊದಲು'http:// ನಂತರ ಮೂರು ಬಾರಿ 'W ಅಕ್ಷರ ಟೈಪ್‌ ಮಾಡಿ ನಂತರ ಬೇಕಾದ ವೆಬ್‌ ವಿಳಾಸವನ್ನು ಟೈಪಿಸಬೇಕಿತ್ತು. ಆದರೆ ಈಗ ದೀರ್ಘ ಪ್ರಕ್ರಿಯೆ ಮಾಡದೇ ವೆಬ್‌ಸೈಟ್‌ನ ಹೆಸರನ್ನು ಟೈಪ್‌ ಮಾಡಿ ವೆಬ್‌ಸೈಟ್‌ನ್ನು ಸರ್ಚ್ ಮಾಡಬಹುದಾಗಿದೆ.

Emoticons

Emoticons

ಈ ಹಿಂದೆ ಸಂದೇಶಗಳಲ್ಲಿ ನಮ್ಮ ಭಾವನೆಗಳನ್ನು ಪ್ರಕಟಿಸಲು Emoticons ಬಳಸುತ್ತಿದ್ದೇವು. ಆದರೆ ಈಗ Emoticons ಜಾಗದಲ್ಲಿ smileys ಬಳಸುತ್ತಿದ್ದೇವೆ. ಇಂದು ಭಾವನೆಗಳನ್ನು ಪ್ರಕಟಿಸಲು 40ಕ್ಕೂ ಅಧಿಕ smileys ಗಳಿವೆ.

ಡಿಜಿಟಲ್‌ ಕ್ಯಾಮೆರಾ

ಡಿಜಿಟಲ್‌ ಕ್ಯಾಮೆರಾ

ಸ್ಮಾರ್ಟ್‌ಫೋನ್‌ ಬರುವ ಮೊದಲು ಡಿಜಿಟಲ್‌ ಕ್ಯಾಮೆರಾಗಳಿಗೆ ಭಾರೀ ಡಿಮ್ಯಾಂಡ್‌ ಇತ್ತು. ಆದರೆ ಈಗ ಆ ಡಿಮ್ಯಾಂಡ್‌ ಕಡಿಮೆ ಆಗಿದೆ. 41 ಎಂಪಿ ಕ್ಯಾಮೆರಾಗಳಿರುವ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಬರಲಾರಂಭಿಸಿದೆ. ಸ್ಮಾರ್ಟ್‌ಫೋನ್‌ಗಳೇ ಈಗ ಡಿಜಿಟಲ್‌ ಕ್ಯಾಮೆರಾಗಳಾಗುತ್ತಿವೆ.

ರಿಮೋಟ್‌ ಕಂಟ್ರೋಲ್‌

ರಿಮೋಟ್‌ ಕಂಟ್ರೋಲ್‌

ಸ್ಮಾರ್ಟ್‌ಫೋನ್‌ಗಳೇ</a></strong> ರಿಮೋಟ್‌ ಕಂಟ್ರೋಲ್‌ ಆಗಿ ಕೆಲಸ ಮಾಡುತ್ತಿವೆ. ಸ್ಮಾರ್ಟ್‌ ಟಿವಿಗಳು ಮಾರುಕಟ್ಟೆಗೆ ಬಂದ ಮೇಲೆ ಇದ್ದಕ್ಕೆಂದೆ ರಿಮೋಟ್‌ ಕಂಟ್ರೋಲ್‌ ಬೇಕಾಗಿಲ್ಲ. ಅಷ್ಟೇ ಅಲ್ಲದೇ <strong><a href=ಕೈ ಸನ್ನೆಗಳನ್ನು" title="ಸ್ಮಾರ್ಟ್‌ಫೋನ್‌ಗಳೇ ರಿಮೋಟ್‌ ಕಂಟ್ರೋಲ್‌ ಆಗಿ ಕೆಲಸ ಮಾಡುತ್ತಿವೆ. ಸ್ಮಾರ್ಟ್‌ ಟಿವಿಗಳು ಮಾರುಕಟ್ಟೆಗೆ ಬಂದ ಮೇಲೆ ಇದ್ದಕ್ಕೆಂದೆ ರಿಮೋಟ್‌ ಕಂಟ್ರೋಲ್‌ ಬೇಕಾಗಿಲ್ಲ. ಅಷ್ಟೇ ಅಲ್ಲದೇ ಕೈ ಸನ್ನೆಗಳನ್ನು" loading="lazy" width="100" height="56" />ಸ್ಮಾರ್ಟ್‌ಫೋನ್‌ಗಳೇ ರಿಮೋಟ್‌ ಕಂಟ್ರೋಲ್‌ ಆಗಿ ಕೆಲಸ ಮಾಡುತ್ತಿವೆ. ಸ್ಮಾರ್ಟ್‌ ಟಿವಿಗಳು ಮಾರುಕಟ್ಟೆಗೆ ಬಂದ ಮೇಲೆ ಇದ್ದಕ್ಕೆಂದೆ ರಿಮೋಟ್‌ ಕಂಟ್ರೋಲ್‌ ಬೇಕಾಗಿಲ್ಲ. ಅಷ್ಟೇ ಅಲ್ಲದೇ ಕೈ ಸನ್ನೆಗಳನ್ನು

ಡೈರೆಕ್ಟರಿ

ಡೈರೆಕ್ಟರಿ


ಹಿಂದೆ ಇಡೀ ಜಿಲ್ಲೆಯ ಲ್ಯಾಂಡ್‌ಲೈನ್‌ ಫೋನ್‌ ನಂಬರ್‌ಗಳಿಗೆಂದೇ ವಿಶೇಷ ಡೈರೆಕ್ಟರಿಗಳು ಹೊರ ಬರುತಿತ್ತು. ಆದರೆ ಈಗ ಮೊಬೈಲ್‌ನಲ್ಲಿ ಫೇಸ್‌ಬುಕ್‌‌, ಇಮೇಲ್‌ಗಳನ್ನು ಸಿಂಕ್‌ ಮಾಡುವ ಆಯ್ಕೆಗಳಿರುವುದರಿಂದ ಡೈರೆಕ್ಟರಿ ಬಳಕೆ ಕಡಿಮೆಯಾಗಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X