ಭಾರತದಲ್ಲಿ ಪೋರ್ನ್ ವೀಕ್ಷಣೆಯ ಸಂಖ್ಯೆ ಹೆಚ್ಚಳ : ಪೋರ್ನ್‌ಹಬ್ ವರದಿ!
ಸ್ಮಾರ್ಟ್‌ಫೋನ್ ಕೈಯಲ್ಲಿದ್ದರೇ ಲೋಕವೇ ಅಂಗೈಯಲ್ಲಿದ್ದಂತೆ ಎನ್ನುವ ಪರಿಸ್ಥಿತಿ ಇಂದಿನದು. ಏಕೆಂದರೇ ಇಂತಹದ್ದೇ ವಿಷಯ ಎನ್ನದೇ ಏನೇ ಮಾಹಿತಿ ಬೇಕಿದ್ದರೂ ಕ್ಷಣ ಮಾತ್ರದಲ್ಲಿಯೇ ಗೂಗಲ್‌ನಲ್ಲಿ ಚೆಕ್ ಮಾಡಿಬಿಡಬಹುದು. ಅವುಗಳಲ್ಲಿ ವಯಸ್ಕರಿಗೆ ಸಂಬಂಧಿಸದ ಪೋರ್ನ್ ವೆಬ್‌ಸೈಟ್‌ಗಳು ಸಾಕಷ್ಟಿವೆ. 2019ರಲ್ಲಿ ಭಾರತದಲ್ಲಿ ಪೋರ್ನ್ ವೆಬ್‌ಸೈಟ್ ವೀಕ್ಷಣೆಯ ಸಂಖ್ಯೆಯಲ್ಲಿ ಏರಿಕೆ ಆಗಿದೆ ಎಂದು ಅಡಲ್ಟ್ ವೈಬ್‌ಸೈಟ್ ಪೋರ್ನ್‌ಹಬ್ ಹೇಳಿದೆ.

ಹೌದು, 2019ರಲ್ಲಿ ದೇಶದಲ್ಲಿ ಶೇ.89% ಪರ್ಸೆಂಟ್ ನಷ್ಟು ಜನರು ಸ್ಮಾರ್ಟ್‌ಫೋನಿನಲ್ಲಿ ನೀಲಿಚಿತ್ರ ವೀಕ್ಷಣೆ ಮಾಡಿದ್ದಾರೆ ಎನ್ನುವ ಮಾಹಿತಿಯನ್ನು ಪೋರ್ನ್ ಹಬ್ ನೀಡಿದೆ. 2017ರಲ್ಲಿ ನೀಲಿಚಿತ್ರ ವೀಕ್ಷಣೆಯ ಸಂಖ್ಯೆಗೆ ಹೋಲಿಸಿದರೇ, 2019ರಲ್ಲಿ ಶೇ.3% ಪರ್ಸೆಂಟ್ ಹೆಚ್ಚಳ ಕಂಡುಬಂದಿದೆ..ಇನ್ನು 2017ರಲ್ಲಿ ಮೊಬೈಲ್‌ನಲ್ಲಿ ನೀಲಿಚಿತ್ರ ವೀಕ್ಷಣೆಯ ಅಂಕಿಅಂಶವು 86% ಪರ್ಸೆಂಟ್ ಆಗಿತ್ತು.

ಈ ಅಧ್ಯಯನದ ಪ್ರಕಾರ, ವಿಶ್ವದಲ್ಲಿಯೇ ಪ್ರತಿ ನಾಲ್ಕು ಜನರಲ್ಲಿ ಮೂರು ಜನರು ಸ್ಮಾರ್ಟ್‌ಫೋನ್‌ನಲ್ಲಿ ನೀಲಿಚಿತ್ರ ವೀಕ್ಷಣೆ ಮಾಡುತ್ತಾರೆ. ಹಾಗೆಯೇ ಡೆಸ್ಕ್‌ಟಾಪ್, ಲ್ಯಾಪ್‌ಟಾಪ್ ಡಿವೈಸ್‌ಗಳು ಸೆಕೆಂಡರಿ ಆಯ್ಕೆಗಳಾಗಿವೆ ಎನ್ನುವ ಅಂಶಗಳನ್ನು ತಿಳಿಸಿದೆ. 2019ರಲ್ಲಿ ಒಟ್ಟಾರೆ ಶೇ.77% ಪರ್ಸೆಂಟ್ ಗೂಗಲ್ನಲ್ಲಿ ನೀಲಿಚಿತ್ರ /ಪೋರ್ನ್ ಸರ್ಚ್ ಟ್ರಾಫಿಕ್ ಕಂಡುಬಂದಿದೆ. ಈ ಪ್ರಮಾಣವು 2018ಕ್ಕಿಂತ ಶೇ.10% ಅಧಿಕವಾಗಿದೆ.

ಮೊಬೈಲ್‌ನಲ್ಲಿ ನೀಲಿಚಿತ್ರ ವೀಕ್ಷಣೆಯಲ್ಲಿ ಭಾರತ ಮೊದಲಿದೆ. ಇನ್ನು ಯುಎಸ್ ನಲ್ಲಿ ನೀಲಿಚಿತ್ರ ವೀಕ್ಷಣೆಯ ಸಂಖ್ಯೆಯು ಶೇ.81 % ಆಗಿದ್ದು, ಎರಡನೇ ಸ್ಥಾನದಲ್ಲಿದ್ದರೇ, ಬ್ರೆಜಿಲ್ ದೇಶವು ಶೇ.79 % ಪರ್ಸೆಂಟ್ ವೀಕ್ಷಣೆಯ ಸಂಖ್ಯೆ ಹೊಂದಿ ತೃತೀಯ ಸ್ಥಾನದಲ್ಲಿದೆ. ಹಾಗೆಯೇ ಜಪಾನನಲ್ಲಿ ಶೇ.70 % ಮತ್ತು ಯುಕೆನಲ್ಲಿ ಶೇ.74 % ಪರ್ಸೆಂಟ್ ಮೊಬೈಲ್‌ನಲ್ಲಿ ನೀಲಿಚಿತ್ರ ವೀಕ್ಷಣೆ ಮಾಡಿದ್ದಾರೆ.

ಭಾರತದಲ್ಲಿ ನೀಲಿಚಿತ್ರ ವೀಕ್ಷಣೆಯ ಸಂಖ್ಯೆ ಹೆಚ್ಚಳವಾಗಿರುವುದಕ್ಕೆ, ಅಗ್ಗದ ಬೆಲೆಯಲ್ಲಿ ಲಭ್ಯ ಇರುವ ಡೇಟಾ ಪ್ಲ್ಯಾನ್‌ಗಳು ಕಾರಣ ಎನ್ನುವ ಅಂಶಗಳನ್ನು ತಿಳಿಸಿದೆ. ಹಾಗೆಯೇ ಇತ್ತೀಚಿಗೆ ಕೆಲವು ಹೈಎಂಡ್ ಫೋನ್‌ಗಳು ಹಾಗೂ ಮೀಡ್‌ರೇಂಜ್ ಫೋನ್‌ಗಳ ಬೆಲೆಯಲ್ಲಿ ಇಳಿಕೆ ಆಗಿರುವುದು ಕಾರಣ ಎಂದಿದೆ.


Click it and Unblock the Notifications