ಸ್ಮಾರ್ಟ್‌ಫೋನ್ ಹಿಂದಿರುವ ಕಾಣದ ಕೈಗಳ ಆಟ

By Shwetha
|

ಸ್ಮಾರ್ಟ್‌ಫೋನ್ ಎಂದಾದಲ್ಲಿ ಅದರಲ್ಲಿ ಹಲವಾರು ಅಪ್ಲಿಕೇಶನ್‌ಗಳು ಅಂತೆಯೇ ಸಾಫ್ಟ್‌ವೇರ್ ಪರಿಕರಗಳು ಇದ್ದೇ ಇರುತ್ತವೆ. ಇವುಗಳೇ ನಿಮ್ಮ ಫೋನ್ ಅನ್ನು ಆಗಾಗ್ಗೆ ನವೀಕೃತಗೊಳಿಸುತ್ತಿರುತ್ತವೆ ಜೊತೆಗೆ ನಿಮಗೆ ಮನರಂಜನೆಯನ್ನು ನೀಡುತ್ತದೆ. ಆದರೆ ಇದುವೇ ಅಪ್ಲಿಕೇಶನ್‌ಗಳ ಹಿಂದಿರುವ ಕಾಣದ ಕೈಗಳ ಬಗ್ಗೆ ನಿಮಗೆ ಮಾಹಿತಿ ಇದೆಯೇ?

ಇದನ್ನೂ ಓದಿ: ಮಾರಾಟ ಕಾಣದೆ ನೆಲಕ್ಕಚ್ಚಿದ ಟಾಪ್ ಉತ್ಪನ್ನಗಳು

ಹೌದು ನಿಮ್ಮ ಫೋನ್ ಅದ್ಭುತ ಎಂದೆನಿಸುವುದು ಸಹಕಾರಿಯಾದ ಅಪ್ಲಿಕೇಶನ್‌ನಿಂದ ಮಾತ್ರ ಎಂಬುದನ್ನು ನೀವು ಮನಗಂಡಿದ್ದೀರಾ? ಆಗಿದ್ದರೆ ಇಷ್ಟೊಂದು ಉಪಕಾರಿಯಾದ ಅಪ್ಲಿಕೇಶನ್‌ಗಳನ್ನು ತಯಾರಿಸುವ ಕಂಪೆನಿಗಳ ಬಗ್ಗೆ ಮಾಹಿತಿಯನ್ನು ನಾವು ಇಂದಿನ ಲೇಖನದಲ್ಲಿ ನೀಡುತ್ತಿದ್ದೇವೆ.

ಟ್ವಿಲ್ಲೊ

ಟ್ವಿಲ್ಲೊ

ಇದೊಂದು ಕಮ್ಯುನಿಕೇಶನ್ ಸಾಫ್ಟ್‌ವೇರ್ ಆಗಿದ್ದು, ಕರೆ, ವಾಯ್ಸ್ ಮತ್ತು ಪಠ್ಯ ಸಂದೇಶ ಫೀಚರ್‌ಗಳನ್ನು ಅಪ್ಲಿಕೇಶನ್‌ಗಳಲ್ಲಿ ಅಳವಡಿಸುತ್ತದೆ. ಟ್ವಿಲ್ಲೊ ನಿಮ್ಮ ಅಪ್ಲಿಕೇಶನ್‌ನ ಜೀವಾಳವಾಗಿ ಕೆಲಸ ಮಾಡುವುದರಿಂದಲೇ ನಿಮ್ಮ ಫೋನ್‌ನಿಂದ ಪಠ್ಯ ಕರೆಗಳು ತಲುಪಬೇಕಾದವರಿಗೆ ತಲುಪುತ್ತದೆ.

ಬ್ರೈನ್ ಟ್ರಿ

ಬ್ರೈನ್ ಟ್ರಿ

ಮೊಬೈಲ್ ಹಾಗೂ ಆನ್‌ಲೈನ್ ವ್ಯವಹಾರಗಳಿಗಾಗಿ ಪಾವತಿಯನ್ನು ಸುಲಭವಾಗುವಂತೆ ಬ್ರೈನ್ ಟ್ರಿ ಸಲ್ಯೂಶನ್ ಮಾಡುತ್ತದೆ. ಉಬರ್ ಡ್ರೈವರ್‌ಗಳಿಗೆ ಪಾವತಿಯನ್ನು ಈ ಅಪ್ಲಿಕೇಶನ್ ಮಾಡುತ್ತದೆ.

ಕ್ಲೌಡ್ ಪ್ಲೇರ್

ಕ್ಲೌಡ್ ಪ್ಲೇರ್

ಕ್ಲೌಡ್ ಫೇರ್ ಒಂದು ಸಾಫ್ಟ್‌ವೇರ್ ಆಗಿದ್ದು, ಸೈಬರ್ ಅಟ್ಯಾಕ್‌ಗಳಿಂದ ನಿಮ್ಮ ವೆಬ್‌ಸೈಟ್ ಅಥವಾ ಅಪ್ಲಿಕೇಶನ್‌ಗಳನ್ನು ಇದು ರಕ್ಷಿಸುತ್ತದೆ.

ಒಯ್ಲಾ

ಒಯ್ಲಾ

ಎಲ್ಲಾ ರೀತಿಯ ಡಿವೈಸ್‌ಗಳಿಗೆ ವೀಡಿಯೊ ಪ್ಲಾಟ್‌ಫಾರ್ಮ್ ಅನ್ನು ಇದು ಒಸಗಿಸುತ್ತಿದ್ದು ಇದು ವೀಡಿಯೊಗಳನ್ನು ಹಂಚುತ್ತದೆ.

ಜಾಸ್ಪರ್

ಜಾಸ್ಪರ್

ವೆಬ್‌ಗೆ ಕಾರು ಅಥವಾ ಫ್ರಿಡ್ಜ್‌ನಂತಹ ವಿಷಯಗಳನ್ನು ಸಂಪರ್ಕಗೊಳಿಸಲು ಇದು ಅನುವು ಮಾಡಿಕೊಡುತ್ತದೆ. ಈಗಾಗಲೇ ಜಿಎಮ್ ಮತ್ತು ಫೋರ್ಡ್‌ನಂತಹ ಕಾರುಗಳು ಸ್ವಯಂಚಾಲಿತ ಅಪ್‌ಡೇಟ್‌ಗಳನ್ನು ಜಾಸ್ಪರ್ ಮೂಲಕ ಮಾಡಿಕೊಳ್ಳುತ್ತಿವೆ.

ಡಿಸ್ಕಸ್

ಡಿಸ್ಕಸ್

ಜಗತ್ತಿನಾದ್ಯಂತ 3 ಮಿಲಿಯನ್ ವೆಬ್‌ಸೈಟ್‌ಗಳ ಮೂಲಕ ಬಳಸಬಹುದಾದ ಆನ್‌ಲೈನ್ ಹಾಗೂ ಮೊಬೈಲ್ ಕಮ್ಯೂನಿಕೇಟಿಂಗ್ ಸಿಸ್ಟಮ್ ಡಿಸ್ಕಸ್ ಆಗಿದೆ.

 ಸ್ಟ್ರೈಪ್

ಸ್ಟ್ರೈಪ್

ಜಗತ್ತಿನಲ್ಲಿರುವ ಸಾವಿರಾರು ವ್ಯವಹಾರಗಳಿಗೆ ಪಾವತಿ ಪ್ರಕ್ರಿಯೆ ಸಮಸ್ಯೆಯನ್ನು ಸ್ಟ್ರೈಪ್ ಬಳಸಿ ಪರಿಹರಿಸಿಕೊಳ್ಳುತ್ತಿದ್ದಾರೆ.

ಗೂಗಲ್

ಗೂಗಲ್

ಗೂಗಲ್ ಮ್ಯಾಪ್ಸ್ ಎಪಿಐ ಮಿಲಿಯಗಟ್ಟಲೆ ಸೈಟ್‌ಗಳು ಮತ್ತು ಅಪ್ಲಿಕೇಶನ್‌ಗಳಿಗೆ ಲೊಕೇಶನ್ ಮತ್ತು ಮ್ಯಾಪ್ಸ್‌ಗಳನ್ನು ತಮ್ಮದೇ ಸೇವೆಗಳ ಮೂಲಕ ಒದಗಿಸುತ್ತಿದೆ.

ಫೋರ್ಸ್‌ಕ್ವೇರ್

ಫೋರ್ಸ್‌ಕ್ವೇರ್

ಇದೊಂದು ಸ್ಟ್ಯಾಂಡ್ ಲೋನ್ ಅಪ್ಲಿಕೇಶನ್ ಆಗಿದ್ದು ತಾವು ಎಲ್ಲಿದ್ದೇವೆ ಎಂಬುದನ್ನು ಬಳಕೆದಾರರಿಗೆ ಇದು ತಿಳಿಸುತ್ತದೆ. ಆದರೆ ಇದರ ಎಪಿಐ ಹೆಚ್ಚಿನ ಡೆವಲಪರ್‌ಗಳು ಮತ್ತು ಅಪ್ಲಿಕೇಶನ್‌ಗಳು ಬಳಸುತ್ತಿವೆ.

Best Mobiles in India

English summary
Consumer tech brands may get all the love, but there's all kinds of business software behind some of your favorite apps and sites. Here are the applications you use every day without even knowing it.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X