Subscribe to Gizbot

ಅಮೇರಿಕಾದಲ್ಲಿ ಭಾರತದ ಹೆಮ್ಮೆಯ ಸಾಧಕರು

Written By:

ಸುಂದರ್ ಪಿಚ್ಚೈ ಗೂಗಲ್‌ನ ಅತಿ ಮೇರು ದರ್ಜೆಯ ಉನ್ನತ ಸ್ಥಾನವನ್ನು ಪಡೆದುಕೊಂಡಿದ್ದು, ಅಮೇರಿಕನ್ನರು ಭಾರತದವರೂ ಒಂದಾಗಿ ಸೇರಿ ಹೆಮ್ಮೆಯ ಭಾರತ ಪುತ್ರನಿಗೆ ಹಿರಿಮೆಯ ಗರಿಯನ್ನು ತೊಡಿಸಿದ್ದಾರೆ. ಲ್ಯಾರಿ ಪೇಜ್‌ಗೆ ಪಿಚ್ಚೈ ರಿಪೋರ್ಟ್ ಮಾಡಬೇಕಾಗಿದ್ದು, ಆಲ್ಫಾಬೆಟ್ ಇಂಕ್‌ನ ಸಿಇಒ ಆಗಿ ಇವರು ನೇಮಕಗೊಂಡಿದ್ದಾರೆ. ಆಲ್ಭಾಬೆಟ್ ಇಂಕ್ ಗೂಗಲ್‌ನ ಹೊಸ ಪೇರೆಂಟ್ ಕಂಪೆನಿಯಾಗಿದೆ. ಅಮೇರಿಕದಲ್ಲಿ ನೆಲೆಸಿರುವ ಭಾರತೀಯರ ಈ ಸಾಧನೆ ಭಾರತದ ಹಿರಿಮೆಯನ್ನು ಇನ್ನಷ್ಟು ಹೆಚ್ಚಿಸಿದೆ ಎಂದೇ ಹೇಳಬಹುದು.

ಓದಿರಿ: ಖರೀದಿಸಿ ರೂ 2,500 ಕ್ಕೆ ಬಜೆಟ್ ಫೋನ್ಸ್

ಇಂದಿನ ಲೇಖನದಲ್ಲಿ ಹೀಗೆ ಹೆಸರು ಮಾಡಿರುವ ಮತ್ತಷ್ಟು ಆಂಗ್ಲೊ ಇಂಡಿಯನ್ ಪ್ರತಿಭೆಗಳನ್ನು ಪತ್ತೆಹಚ್ಚೋಣ ಮತ್ತು ಅವರ ಸಾಧನೆಗಳನ್ನು ಸ್ಮರಿಸೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸತ್ಯ ನಡೇಲ್ಲಾ
  

47 ವಯಸ್ಸಿನ ನಡೇಲ್ಲಾ, 2014 ರಲ್ಲಿ ಮೈಕ್ರೋಸಾಫ್ಟ್‌ನ ಸಿಇಒ ಆಗಿ ನೇಮಕಗೊಂಡಿದ್ದಾರೆ. ಇವರು ಹೈದ್ರಾಬಾದ್‌ನಲ್ಲಿ ಜನಿಸಿದ್ದು ಐಎಎಸ್ ಅಧಿಕಾರಿಯ ಪುತ್ರನಾಗಿದ್ದಾರೆ.

ಶಂತನು ನಾರಾಯಣ್
  

52 ವರ್ಷ ವಯಸ್ಸಿನ ಶಂತನು ನಾರಾಯಣ್ 2005 ರಲ್ಲಿ ಅಡೋಬ್‌ನ ಸಿಇಒ ಆಗಿ ನೇಮಕಗೊಂಡಿದ್ದಾರೆ. ಪಿಕ್ಟ್ರಾದ ಸಹಸ್ಥಾಪಕರು ಆಗಿರುವ ಶಂತನು ಇಂಟರ್ನೆಟ್‌ನಾದ್ಯಂತ ಫೋಟೋ ಹಂಚಿಕೆಯ ಹರಿಕಾರರು ಎಂದೆನಿಸಿದ್ದಾರೆ.

ಪದ್ಮಶ್ರೀ ವಾರಿಯರ್
  

ಸಿಸ್ಕೊ ಸಿಸ್ಟಮ್‌ನ ಮುಖ್ಯ ತಂತ್ರಜ್ಞಾನ ಅಧಿಕಾರಿಯಾಗಿರುವ ಪದ್ಮಶ್ರೀ ವಾರಿಯರ್ 1961 ರಲ್ಲಿ ವಿಜಯವಾಡಾದಲ್ಲಿ ಜನಿಸಿದ್ದರು.

ವಿನೋಸ್ ಕೋಸ್ಲಾ
  

ವಿನೋದ್ ಕೋಸ್ಲಾ, ಸನ್ ಮೈಕ್ರೋಸಿಸ್ಟಮ್‌ನ ಸಹಸ್ಥಾಪಕರಾಗಿದ್ದು ಸಿಲಿಕಾನ್ ವಾಲ್ಲಿಗೆ ಪ್ರತಿಭಾವಂತ ಇಂಜಿನಿಯರ್‌ಗಳನ್ನು ಕೊಡುಗೆಯಾಗಿ ನೀಡಿದ್ದಾರೆ.

ಅಮಿತ್ ಸಿಂಗಲ್
  

ಗೂಗಲ್ ಸರ್ಚ್ ಎಂಜಿನ್‌ ಅನ್ನು ನಿರ್ವಹಿಸುವ ಅಮಿತ್ ಸಿಂಗಲ್ ಬುದ್ಧಿವಂತ ಅಂತೆಯೇ ಗೂಗಲ್ ಸರ್ಚ್ ನಿರ್ವಹಿಸುವ ಅಲ್ಗಾರಿದಮ್‌ಗೆ ಜವಬ್ದಾರರಾಗಿದ್ದಾರೆ.

ರುಚಿ ಸಾಂಘವಿ
  

33 ವರ್ಷ ವಯಸ್ಸಿನ ರುಚಿ ಸಾಂಘವಿ ಫೇಸ್‌ಬುಕ್ ಉತ್ಪನ್ನ ಮ್ಯಾನೇಜರ್ ಆಗಿ ನೇಮಕಗೊಂಡಿರುವ ಪ್ರಥಮ ಮಹಿಳಾ ಇಂಜಿನಿಯರ್ ಎಂದೆನಿಸಿದ್ದಾರೆ.

ದೀಪಕ್ ಅಹುಜಾ
  

ಟೆಸ್ಲಾದ ಹೆಚ್ಚು ನಂಬಿಕರ್ಹ ಉದ್ಯೋಗಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ದೀಪಕ್ ಅಹುಜಾ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಪದವಿಯನ್ನು ದೀಪಕ್ ಪಡೆದುಕೊಂಡಿದ್ದಾರೆ.

ಪೂಜಾ ಶಂಕರ್
  

ಆನ್‌ಲೈನ್ ಪ್ಲಾಟ್‌ಫಾರ್ಮ್‌ನಲ್ಲಿ ಪಿಜಾವನ್ನು ಆರಂಭಿಸಿದ ಪೂಜಾ ಶಂಕರ್, ಫೇಸ್‌ಬುಕ್ ಒರೇಕಲ್‌ನೊಂದಿಗೆ ಕಾರ್ಯನಿರ್ವಹಿಸಿದ ನಂತರ ಗುರುಗಳು ಮತ್ತು ವಿದ್ಯಾರ್ಥಿಗಳೊಂದಿಗೆ ಸಂಯೋಜನೆಯನ್ನು ಮಾಡಿತು.

ಕವಿತಾರ್ಕ್ ರಾಮ್ ಶ್ರೀರಾಮ್
  

ಶೇರ್‌ಪಾಲೊ ವೆಂಚ್ಯೂರಸ್‌ನ ಪಾಲುದಾರರು ಮತ್ತು ಮ್ಯಾನೇಜಿಂಗ್ ಪಾಲುದಾರರಾಗಿರುವ ಕವಿತಾರ್ಕ್ ಗೂಗಲ್‌ನಲ್ಲಿ ಪ್ರಥಮ ಹೂಡಿಕೆದಾರರು ಎಂದೆನಿಸಿದ್ದಾರೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Sundar Pichai's ascent to the top of Google as part of a sweeping restructuring of the company has placed him in an elite group of Indian-Americans who hold top positions in Silicon Valley. Pichai aside, here are 9 other Indian-Americans who have had considerable impact in the Valley as CEOs.
Please Wait while comments are loading...
Opinion Poll

Social Counting

ಕರ್ನಾಟಕ ವಿಧಾನಸಭೆ ಚುನಾವಣೆ 2018

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot