Home
ಸುದ್ದಿಜಾಲ

ಫೋನ್‌ನ ಬ್ಯಾಟರಿ ಜೀವಾಳ ಈ ಸರಳ ಟಿಪ್ಸ್‌ಗಳು

By Shwetha

ಇಂದಿನ ಆಧುನಿಕ ಸ್ಮಾರ್ಟ್‌ಫೋನ್ ಬಳಕೆದಾರರಲ್ಲಿ ತಲೆದೋರಿರು ಸಮಸ್ಯೆ ಎಂದರೆ ಬ್ಯಾಟರಿ ಸಮಸ್ಯೆಯದ್ದಾಗಿದೆ. ಇಂದಿನ ಮಾರುಕಟ್ಟೆಯನ್ನು ಆಂಡ್ರಾಯ್ಡ್ ಫೋನ್‌ಗಳು ಆಳುತ್ತಿದ್ದು, ಈ ಫೋನ್‌ಗಳೇ ಹೆಚ್ಚು ಬ್ಯಾಟರಿ ಸಮಸ್ಯೆಯನ್ನು ಅನುಭವಿಸುತ್ತಿರುವ ಡಿವೈಸ್‌ಗಳಾಗಿವೆ.

ಇದನ್ನೂ ಓದಿ: ನಿಮ್ಮ ಸ್ಮಾರ್ಟ್‌ಫೋನ್‌ನ ಬ್ಯಾಟರಿ ಬಾಳಿಕೆಗೆ ಈ ಅಪ್ಲಿಕೇಶನ್‌ಗಳು

ಅದಕ್ಕೆಂದೇ ಇಂದಿನ ಲೇಖನದಲ್ಲಿ ಅತಿ ವಿಶೇಷವಾಗಿ ಈ ಲೇಖನವನ್ನು ಪ್ರಸ್ತುತಪಡಿಸುತ್ತಿದ್ದು ಈ ಹಂತಗಳು ಫೋನ್ ಬ್ಯಾಟರಿ ಸಮಸ್ಯೆಯನ್ನು ಹೇಗೆ ನೀಗಿಸುವುದು ಎಂಬುದನ್ನು ಕುರಿತು ಸಲಹೆಗಳನ್ನು ನೀಡಲಿದೆ. ಕೆಳಗಿನ ಸರಳ ಹಂತಗಳ ಮೂಲಕ ಆ ಹಂತಗಳು ಯಾವುವು ಎಂಬುದನ್ನು ಅರಿತುಕೊಳ್ಳಿ.

ಫೋನ್‌ನ ಬ್ಯಾಟರಿ ಜೀವಾಳ ಈ ಸರಳ ಟಿಪ್ಸ್‌ಗಳು

ಫೋನ್‌ನ ಬ್ಯಾಟರಿ ಜೀವಾಳ ಈ ಸರಳ ಟಿಪ್ಸ್‌ಗಳು

ನಿಮ್ಮ ಆಂಡ್ರಾಯ್ಡ್ ಫೋನ್‌ನಲ್ಲಿ ಲೊಕೇಶನ್ ಸೆಟ್ಟಿಂಗ್ಸ್ ಅನ್ನು ಆನ್ ಮಾಡುವುದು ಹೆಚ್ಚುವರಿ ಬ್ಯಾಟರಿಯನ್ನು ತಿಂದುಹಾಕಲಿದೆ. ಆದ್ದರಿಂದ ಯಾವಾಗಲೂ ಲೊಕೇಶನ್ ಸೆಟ್ಟಿಂಗ್ಸ್ ಅನ್ನು ಆಫ್ ಮಾಡಿಟ್ಟುಕೊಳ್ಳಿ.

ಫೋನ್‌ನ ಬ್ಯಾಟರಿ ಜೀವಾಳ ಈ ಸರಳ ಟಿಪ್ಸ್‌ಗಳು

ಫೋನ್‌ನ ಬ್ಯಾಟರಿ ಜೀವಾಳ ಈ ಸರಳ ಟಿಪ್ಸ್‌ಗಳು

ನಿಮ್ಮ ಫೋನ್‌ನ ಬ್ರೈಟ್‌ನೆಸ್ ಅನ್ನು ಆದಷ್ಟು ಕಡಿಮೆ ಮಾಡಿಟ್ಟುಕೊಳ್ಳುವುದು ಬ್ಯಾಟರಿ ಜೀವನವನ್ನ ಉಳಿಸಲು ಇನ್ನೊಂದು ಸರಳ ಉಪಾಯವಾಗಿದೆ.

ಫೋನ್‌ನ ಬ್ಯಾಟರಿ ಜೀವಾಳ ಈ ಸರಳ ಟಿಪ್ಸ್‌ಗಳು

ಫೋನ್‌ನ ಬ್ಯಾಟರಿ ಜೀವಾಳ ಈ ಸರಳ ಟಿಪ್ಸ್‌ಗಳು

ನಿಮ್ಮ ಫೋನ್‌ನಲ್ಲಿ ಇರುವ ಎಲ್ಲಾ ಅಪ್ಲಿಕೇಶನ್‌ಗಳನ್ನು ನೀವು ಬಳಸಲೇಬೇಕೆಂಬ ಕಡ್ಡಾಯ ನಿಯಮವೇನಿಲ್ಲ. ಆದ್ದರಿಂದ ಬಳಕೆಯಲ್ಲಿಲ್ಲದ ಅಪ್ಲಿಕೇಶನ್‌ಗಳನ್ನು ಆಫ್ ಮಾಡಿಟ್ಟುಕೊಳ್ಳಿ.

ಫೋನ್‌ನ ಬ್ಯಾಟರಿ ಜೀವಾಳ ಈ ಸರಳ ಟಿಪ್ಸ್‌ಗಳು

ಫೋನ್‌ನ ಬ್ಯಾಟರಿ ಜೀವಾಳ ಈ ಸರಳ ಟಿಪ್ಸ್‌ಗಳು

ನಿಮ್ಮ ಫೋನ್‌ನಲ್ಲಿ ಅಪ್ಲಿಕೇಶನ್ ಹೆಚ್ಚುವರಿ ಬ್ಯಾಟರಿಯನ್ನು ಬಳಸುವುದಿಲ್ಲ ಎಂದಾದಲ್ಲಿ 3 ಜಿ ಸಂಪರ್ಕ, ಇಲ್ಲವೇ ಫೇಸ್‌ಬುಕ್ ಟ್ವಿಟ್ಟರ ಮೊದಲಾದ ಸಾಮಾಜಿಕ ತಾಣಗಳ ಹೆಚ್ಚುವರಿ ಬಳಕೆ ಅದನ್ನು ಸದಾ ಆನ್‌ನಲ್ಲಿ ಇರಿಸುವುದು ಮೊದಲಾದ ಕ್ರಿಯೆಗಳು ಬ್ಯಾಟರಿ ಉಪಯೋಗವನ್ನು ಹೆಚ್ಚು ಮಾಡುತ್ತಿವೆಯೇ ಎಂಬುದನ್ನು ಗಮನಿಸಿ.

ಫೋನ್‌ನ ಬ್ಯಾಟರಿ ಜೀವಾಳ ಈ ಸರಳ ಟಿಪ್ಸ್‌ಗಳು

ಫೋನ್‌ನ ಬ್ಯಾಟರಿ ಜೀವಾಳ ಈ ಸರಳ ಟಿಪ್ಸ್‌ಗಳು

ಸಾಧ್ಯವಾದಷ್ಟು ವೈಫೈಯನ್ನು ಬಳಕೆಯ ನಂತರ ಆಫ್ ಮಾಡಿಟ್ಟುಕೊಳ್ಳಿ. ನಿಮ್ಮ ಫೋನ್‌ನ ಬ್ಯಾಟರಿ ಜೀವನಕ್ಕೆ ತಿಲಾಂಜಲಿ ಇಡಲು ಇದೂ ಕೂಡ ಕಾರಣವಾಗಬಹುದು.

ಫೋನ್‌ನ ಬ್ಯಾಟರಿ ಜೀವಾಳ ಈ ಸರಳ ಟಿಪ್ಸ್‌ಗಳು

ಫೋನ್‌ನ ಬ್ಯಾಟರಿ ಜೀವಾಳ ಈ ಸರಳ ಟಿಪ್ಸ್‌ಗಳು

ಇಂಟರ್ನೆಟ್ ಬಳಸುವವರು ನೀವಾಗಿಲ್ಲ ಎಂದಾದಲ್ಲಿ ನಿಮ್ಮ ನೆಟ್‌ವರ್ಕ್ ಅನ್ನು 2 ಜಿ ಬಳಸಿಕೊಳ್ಳುವುದು ಉತ್ತಮ ಉಪಾಯವಾಗಿದೆ. ಸಂದೇಶ ರಚನೆ, ಕರೆ ಮಾಡಲು 2ಜಿ ಪ್ರಯೋಗ ಹೇಳಿಮಾಡಿಸಿದ್ದಾಗಿದೆ.

ಫೋನ್‌ನ ಬ್ಯಾಟರಿ ಜೀವಾಳ ಈ ಸರಳ ಟಿಪ್ಸ್‌ಗಳು

ಫೋನ್‌ನ ಬ್ಯಾಟರಿ ಜೀವಾಳ ಈ ಸರಳ ಟಿಪ್ಸ್‌ಗಳು

ನಿಮ್ಮ ಪೋನ್ ಕ್ವಾಲ್‌ಕಾಮ್ ಪ್ರೊಸೆಸರ್ ಅನ್ನು ಬಳಸುತ್ತಿದೆ ಎಂದಾದಲ್ಲಿ, ಆಂಡ್ರಾಯ್ಡ್‌ಗಾಗಿ ಕ್ವಾಲ್‌ಕಾಮ್ ಬ್ಯಾಟರಿ ಗುರು ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಿ. ಇದು ನಿಮ್ಮ ಬಳಕೆಯನ್ನು ಅವಲೋಕಿಸಿ ಫೋನ್‌ನ ಸೆಟ್ಟಿಂಗ್ಸ್ ಅನ್ನು ಅಪ್ಟಿಮೈಸ್ ಮಾಡುತ್ತದೆ.

ಫೋನ್‌ನ ಬ್ಯಾಟರಿ ಜೀವಾಳ ಈ ಸರಳ ಟಿಪ್ಸ್‌ಗಳು

ಫೋನ್‌ನ ಬ್ಯಾಟರಿ ಜೀವಾಳ ಈ ಸರಳ ಟಿಪ್ಸ್‌ಗಳು

ನಿಮ್ಮ ಫೋನ್ ಅನ್ನು ಆಗಾಗ್ಗೆ ನೀವು ಬಳಸುತ್ತಿಲ್ಲ ಎಂದಾದಲ್ಲಿ ಫೋನ್ ಡಿಸ್‌ಪ್ಲೇಯನ್ನು 15 ಸೆಕುಂಡುಗಳಿಗೆ ಇರಿಸಿಕೊಳ್ಳಿ.

ಫೋನ್‌ನ ಬ್ಯಾಟರಿ ಜೀವಾಳ ಈ ಸರಳ ಟಿಪ್ಸ್‌ಗಳು

ಫೋನ್‌ನ ಬ್ಯಾಟರಿ ಜೀವಾಳ ಈ ಸರಳ ಟಿಪ್ಸ್‌ಗಳು

ಸೋನಿ ಎಕ್ಸ್‌ಪೀರಿಯಾ ಝೆಡ್ 3, ಎಚ್‌ಟಿಸಿ ಒನ್ ಎಮ್8, ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 4 ನಂತಹ ದುಬಾರಿ ಫೋನ್‌ಗಳ ಬಳಕೆಯನ್ನು ನೀವು ಮಾಡುತ್ತಿದ್ದೀರಿ ಎಂದಾದಲ್ಲಿ ಇನ್‌ಬಿಲ್ಟ್ ಸಾಫ್ಟ್‌ವೇರ್ ಆಧಾರಿತ ಬ್ಯಾಟರಿ ವರ್ಧನೆ ಮೋಡ್‌ಗಳನ್ನು ಬಳಸಿ.

Best Mobiles in India

English summary
This article tells about 9 tips to get better battery life out of your smartphone.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+