ಕಂಪ್ಯೂಟರ್‌ ಮತ್ತು ಮ್ಯಾಕ್‌ಗಳ ವೇಗಕ್ಕಾಗಿ ಸೂಪರ್‌ ಸಲಹೆಗಳು

By Suneel
|

ಟೆಕ್‌ಗಳು ಇಂದಿನ ಜೀವನದ ಒಂದು ಭಾಗವಾಗಿ ಪರಿಣಮಿಸಿವೆ. ಅವುಗಳಿಲ್ಲದೆ ಇಂದು ಒಂದು ದಿನ ಪೂರೈಸುವುದು ಹೇಗೆ ಎಂಬ ಕೌತುಕವು ನಮಗಿದೆ. ಆದರೆ ಕೆಲವೊಮ್ಮೆ ಇವು ನಮಗೆ ಕೆಲಸ ನಿರ್ವಹಿಸುವಾಗ ಕೈಕೊಡುವುದುಂಟು. ಇಂತಹ ಸಮಸ್ಯೆ ಬಂದಮೇಲೆ ಟೆಕ್‌ ಬುದ್ಧಿವಂತರನ್ನು ಹುಡುಕಿಕೊಂಡು ಹೋಗುವ ಬದಲು ನಾವೇ ಹಲವು ಸಲಹೆಗಳು ಮತ್ತು ತಂತ್ರಗಳನ್ನು ತಿಳಿದು ಅವುಗಳನ್ನು ವೇಗವಾಗಿ ಕಾರ್ಯನಿರ್ವಹಿಸುವಂತೆ ಕಾಪಾಡಿಕೊಳ್ಳುವುದು ಉತ್ತಮ ಕೆಲಸವಾಗಿದೆ. ಹಾಗಾದರೆ ಅಂತಹ ತಂತ್ರಗಾರಿಕೆಗಳು ಏನಿರಬಹುದು ಎಂಬ ಪ್ರಶ್ನೆ ನಿಮಗಿದ್ದರೇ ಈ ಲೇಖನ ಓದಿ.

ಓದಿರಿ: ಅಣಬೆ ಬ್ಯಾಟರಿ ಬಳಸಿ ಸ್ಮಾರ್ಟ್‌ಫೋನ್‌ ಚಾರ್ಜ್‌ ಮಾಡಿ

ಮನೆಯಲ್ಲಿ ಅಥವಾ ಕಛೇರಿಗಳಲ್ಲಿ ಕಂಪ್ಯೂಟರ್‌ ಬಳಕೆ ಮಾಡುವವರಿಗೆ ತಮ್ಮ ಗ್ಯಾಜೆಟ್‌ಗಳನ್ನು ವೇಗವಾಗಿ ಇರಿಸಿಕೊಳ್ಳಲು ಈ ಸಲಹೆ ಮತ್ತು ತಂತ್ರಗಳು

ವಿಂಡೋಸ್: ವರ್ಧಿತ ಕ್ಯಾಲ್ಕುಲೇಟರ್

ವಿಂಡೋಸ್: ವರ್ಧಿತ ಕ್ಯಾಲ್ಕುಲೇಟರ್

ಸಾಮಾನ್ಯವಾಗಿ ವಿಂಡೋಸ್ 7 ಮತ್ತು ವಿಂಡೋಸ್‌ 8 ಬೇಸಿಕ್ ವರ್ಸನ್‌ಕ್ಯಾಲ್ಕುಲೇಟರ್‌ ಅಪ್ಲಿಕೇಶನ್‌ ಹೊಂದಿರುತ್ತವೆ. ಅದನ್ನು ಮೆನುಬಾರ್‌ನಲ್ಲಿ ಪ್ರದರ್ಶಿಸುವಂತೆ ಕ್ಲಿಕ್‌ ಮಾಡಿ.

ವಿಂಡೋಸ್:  ವ್ಯವಸ್ಥೆಯ ವಿಶ್ವಾಸಾರ್ಹತೆ ಪರೀಕ್ಷಿಸಿ

ವಿಂಡೋಸ್: ವ್ಯವಸ್ಥೆಯ ವಿಶ್ವಾಸಾರ್ಹತೆ ಪರೀಕ್ಷಿಸಿ

ನಿಮ್ಮ ಮ್ಯಾಕ್‌ ಅಥವಾ ಕಂಪ್ಯೂಟರ್‌ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದಾದಲ್ಲಿ ವಿಶ್ವಾಸಾರ್ಹತೆಯನ್ನು ಪರೀಕ್ಷಿಸಿ. ಸಿಸ್ಟಮ್‌ನಲ್ಲಿ ಕಂಟ್ರೋಲ್‌ ಪ್ಯಾನೆಲ್‌> ಸಿಸ್ಟಮ್‌ ಮತ್ತು ಸೆಕ್ಯುರಿಟಿ> ಆಕ್ಷನ್‌ ಸೆಂಟರ್‌ ಗೆ ಹೋಗಿ. ಅಲ್ಲಿ ಸಿಸ್ಟಮ್‌ ಸರ್ವೀಸ್‌ಗೆ ಕಾರಣಗಳನ್ನು ಪ್ರದರ್ಶಿಸಲಾಗುತ್ತದೆ.

ವಿಂಡೋಸ್‌ : ಪ್ರಾಬ್ಲಮ್‌ ಸ್ಟೆಪ್‌ ರೆಕಾರ್ಡರ್‌

ವಿಂಡೋಸ್‌ : ಪ್ರಾಬ್ಲಮ್‌ ಸ್ಟೆಪ್‌ ರೆಕಾರ್ಡರ್‌

ನಿಮ್ಮ ಕಂಪ್ಯೂಟರ್‌ ಸಮಸ್ಯೆಯನ್ನು ಸರ್ವೀಸ್‌ ಸೆಂಟರ್‌ನಲ್ಲಿ ಹೇಳುವ ಬದಲು 'ಪ್ರಾಬ್ಲಮ್‌ ಸ್ಟೆಪ್‌ ರೆಕಾರ್ಡರ್‌' ಆನ್‌ ಮಾಡಿ'. ಈ ಟೂಲ್‌ ನೀವು ಡೆಸ್‌ಟಾಪ್‌ನಲ್ಲಿ ನಿರ್ವಹಿಸಿದ ಕೆಲಸವನ್ನು ಸ್ಕ್ರೀನ್‌ ಶಾಟ್ಸ್‌ಗಳ ಮೂಲಕ ರೆಕಾರ್ಡ್‌ ಮಾಡಿ ತೋರಿಸುತ್ತದೆ.

ವಿಂಡೋಸ್‌ : ಸಿಕ್ರೇಟ್‌ 'ಸೆಂಡ್ ಟು' ಮೆನು

ವಿಂಡೋಸ್‌ : ಸಿಕ್ರೇಟ್‌ 'ಸೆಂಡ್ ಟು' ಮೆನು

ಫೈಲ್‌ ಒಂದನ್ನು ಸೆಂಡ್‌ ಮಾಡಲು ರೈಟ್‌ ಕ್ಲಿಕ್‌ ಮಾಡುವ ಬದಲು, ಅದಕ್ಕಿಂತ ಮುನ್ನ ಶಿಪ್ಟ್‌ ಕೀ ಅನ್ನು ಪ್ರೆಸ್ ಮಾಡಿ ಹೋಲ್ಡ್‌ ಮಾಡಿ ನಂತರ ಫೈಲ್‌ ಮೇಲೆ ರೈಟ್‌ ಕ್ಲಿಕ್ ಮಾಡಿ. ಹೀಗೆ ಮಾಡಿದಲ್ಲಿ ಹೆಚ್ಚು ಆಪ್‌ಶನ್‌ ಪಡೆಯುತ್ತೀರಿ.

ವಿಂಡೋಸ್ : ಕ್ವಿಕ್‌ ಆಕ್ಸೆಸ್‌ಮೆನು

ವಿಂಡೋಸ್ : ಕ್ವಿಕ್‌ ಆಕ್ಸೆಸ್‌ಮೆನು

ವಿಂಡೋಸ್‌ 8 ಬಳಕೆದಾರರಿಗೆ ಈ ಮೆನು ಲಭ್ಯವಿದ್ದು, ಸಿಸ್ಟಮ್‌ ಮೇನೇಜ್‌ಮೆಂಟ್‌, ಡಿಸ್ಕ್‌ ಮೇನೇಜ್‌ಮೆಂಟ್‌, ಡಿವೈಸ್‌ ಮೇನೇಜ್‌ಮೆಂಟ್‌ ಮಾಡಲು ಸಹಾಯಕಾರಿಯಾಗಿದೆ.

ವಿಂಡೋಸ್‌ :ಸುಲಭವಾಗಿ ಹೆಚ್ಚು ಫೈಲ್‌ ಆಯ್ಕೆಮಾಡಿ

ವಿಂಡೋಸ್‌ :ಸುಲಭವಾಗಿ ಹೆಚ್ಚು ಫೈಲ್‌ ಆಯ್ಕೆಮಾಡಿ

ಫೋಲ್ಡರ್‌ ಆಪ್‌ಶನ್‌ ತೆಗೆದು ಅಡ್‌ವಾನ್‌ಸುಡು ಸೆಟ್ಟಿಂಗ್ಸ್ ನಲ್ಲಿ 'Use check boxes to select items'. ಎನೇಬಲ್‌ ಮಾಡಿ

 ವಿಂಡೋಸ್ :ಲೈವ್ ಟೈಲ್ಸ್  ಬ್ಯಾಂಡ್ವಿಡ್ತ್ ಬಳಕೆಯನ್ನು ಮಿತಿಗೊಳಿಸಿ

ವಿಂಡೋಸ್ :ಲೈವ್ ಟೈಲ್ಸ್ ಬ್ಯಾಂಡ್ವಿಡ್ತ್ ಬಳಕೆಯನ್ನು ಮಿತಿಗೊಳಿಸಿ

ನೆಟ್‌ವರ್ಕ್‌ ಕನೆಕ್ಷನ್‌ನಲ್ಲಿ ಚಾರ್ಮ್‌ ಬಾರ್‌ ನಲ್ಲಿನ 'Set as metered connection' option" ಸೆಲೆಕ್ಟ್ ಮಾಡಿ

ವಿಂಡೋಸ್‌: ಪ್ರೋಗ್ರಾಮ್‌ಗಳನ್ನು ಹಲವು ಸಲ ತೆರೆಯುವುದು

ವಿಂಡೋಸ್‌: ಪ್ರೋಗ್ರಾಮ್‌ಗಳನ್ನು ಹಲವು ಸಲ ತೆರೆಯುವುದು

ನೀವು ನಿರ್ವಹಿಸುತ್ತಿರುವ ಅಪ್ಲಿಕೇಶನ್‌ ಅನ್ನೇ ಕಾರಣಾಂತರಗಳಿಂದ ಇನ್ನೊಮ್ಮೆ ತೆರೆಯಬೇಕಾದಲ್ಲಿ ಶಿಪ್ಟ್ ಕೀ ಹೋಲ್ಡ್‌ ಮಾಡಿ ಐಕಾನ್‌ ಮೇಲೆ ಕ್ಲಿಕ್‌ ಮಾಡಿ.

ವಿಂಡೋಸ್: ಹೊಂದಾಣಿಕೆ ಮೋಡ್‌ ಬಳಸಿ

ವಿಂಡೋಸ್: ಹೊಂದಾಣಿಕೆ ಮೋಡ್‌ ಬಳಸಿ

ಹಲವು ಉಪಯೋಗಿ ಅಪ್ಲಿಕೇಶನ್‌ಗಳು ವಿಂಡೋಸ್‌ 8 ಮತ್ತು 7 ನಲ್ಲಿ ಕಾರ್ಯನಿರ್ವಹಿಸುತ್ತಿಲ್ಲ ಎಂದಾದಲ್ಲಿ ಪ್ರಾಪರ್ಟೀಸ್‌ ತೆರೆದು compatibility tab ಸೆಲೆಕ್ಟ್‌ ಮಾಡಿ ಪ್ರೋಗ್ರಾಮ್‌ ಅನ್ನು ವಿಂಡೋಸ್‌ 98, XP, Vista ಗಳಲ್ಲಿ ರನ್‌ ಆಗುವಂತೆ ಸೆಟ್‌ ಮಾಡಿ

Most Read Articles
Best Mobiles in India

English summary
Whether you use PC/Mac at home or office, there are useful tips that can help boost your productivity.While some of these simple tips enhance your system's performance others simply help you to work faster.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more