ಅಣಬೆ ಬ್ಯಾಟರಿ ಬಳಸಿ ಸ್ಮಾರ್ಟ್‌ಫೋನ್‌ ಚಾರ್ಜ್‌ ಮಾಡಿ

By Suneel
|

ಸಂಶೋಧಕರು ಟೆಕ್‌ ಕ್ಷೇತ್ರದಲ್ಲಿ ಒಂದಲ್ಲಾ ಒಂದು ರೀತಿಯ ನವನವೀನ ಆವಿಷ್ಕಾರಗಳನ್ನು ಪ್ರಪಂಚಕ್ಕೆ ಪ್ರದರ್ಶಿಸುತ್ತಲೇ ಇದ್ದಾರೆ. ಇತ್ತೀಚೆಗೆ ಸಸ್ಯಗಳ ಪಾಟ್‌ನಲ್ಲಿ ಗ್ಯಾಜೆಟ್‌ಒಂದನ್ನು ಇಟ್ಟು ಇತರ ಗ್ಯಾಜೆಟ್‌ಗಳನ್ನು ಚಾರ್ಜ್‌ ಮಾಡಬಹುದಾದ ಟೆಕ್‌ ಒಂದನ್ನು ಪರಿಚಯ ಮಾಡಲಾಗಿತ್ತು. ಆದರೆ ಇದೀಗ ಸಂಶೋಧಕರು, ಅಗ್ಗದ ಬೆಲೆಯ ಅಣಬೆಗಳಿಂದ ಲಿಥಿಯಂ ಐಯಾನ್ ಬ್ಯಾಟರಿಯೊಂದನ್ನು ಆವಿಷ್ಕರಿಸಿದ್ದು, ಇದು ಪರಿಸರ ಸ್ನೇಹಿ ಮತ್ತು ಸುಲಭ ರೀತಿಯಲ್ಲಿ ಉತ್ಪಾದಿಸಲು ಸಾಧ್ಯವಾಗಿದೆ ಎಂಬ ಮಾಹಿತಿ ತಿಳಿಸಿದ್ದಾರೆ.

ಓದಿರಿ: ಇನ್ನು ನಿಮ್ಮ ಸ್ಮಾರ್ಟ್‌ಫೋನ್ ಚಾರ್ಜ್ ಮಾಡಲು ಕರೆಂಟ್ ಬೇಕಾಗಿಯೇ ಇಲ್ಲ!!!

ಈ ಲೇಖನದಲ್ಲಿ ಅಣಬೆಗಳ ಸಹಾಯದಿಂದ ತಯಾರಿಸಿರುವ ಈ ಬ್ಯಾಟರಿ ಬಗ್ಗೆ ಮಾಹಿತಿ ತಿಳಿಸಲಿದ್ದೇವೆ.

 ನ್ಯಾನೋ ಕಾರ್ಬನ್‌ ವಿನ್ಯಾಸ

ನ್ಯಾನೋ ಕಾರ್ಬನ್‌ ವಿನ್ಯಾಸ

ನ್ಯಾನೋ ಕಾರ್ಬನ್‌ ವಿನ್ಯಾಸದಲ್ಲಿ ಜೈವಿಕ ವಸ್ತುವಾದ ಅಣಬೆಗಳನ್ನು ಬಳಸಿಕೊಂಡು ಗ್ರಾಫೈಟ್‌ ಆಧಾರಿತ ಆನೋಡ್ಗಳ ಆಧಾರಿತವಾದ ಒಂದು ಸಮರ್ಥನೀಯವಾದ ಬ್ಯಾಟರಿಯನ್ನು ತಯಾರಿಸಬಹುದು ಎಂದು ಅಮೇರಿಕಾದ ಕ್ಯಾಲಿಫೋರ್ನಿಯಾ ರಿವರ್ಸೈಡ್‌ನ ಮೆಕ್ಯಾನಿಕಲ್ ಇಂಜಿನಿಯರಿಂಗ್ ಮತ್ತು ವಸ್ತುಗಳ ವಿಜ್ಞಾನ ವಿಶ್ವವಿದ್ಯಾಲಯದ ಎಂಜಿನಿಯರಿಂಗ್ ಪ್ರಾಧ್ಯಾಪಕ Cengiz Ozkan ಹೇಳಿದ್ದಾರೆ.

ಸಂಶ್ಲೇಷಿತ ಗ್ರಾಫೈಟ್‌

ಸಂಶ್ಲೇಷಿತ ಗ್ರಾಫೈಟ್‌

ರೀಚಾರ್ಜ್ ಲಿಥಿಯಂ ಐಯಾನ್ ಬ್ಯಾಟರಿ ಆನೋಡ್ಗಳ ಪ್ರಸ್ತುತ ಕೈಗಾರಿಕಾ ಗುಣಮಟ್ಟವಾಗಿದ್ದು, ಇದು ಸಂಶ್ಲೇಷಿತ ಗ್ರಾಫೈಟ್‌ ಆಗಿದೆ.

ಪರಿಸರಕ್ಕೆ ಮಾರಕ

ಪರಿಸರಕ್ಕೆ ಮಾರಕ

ಆದರೆ ಇದನ್ನು ಶುದ್ಧೀಕರಣ ಮಾಡಬೇಕಿರುವುದರಿಂದ ಹೆಚ್ಚು ಹಣ ಖರ್ಚಾಗುತ್ತದೆ. ಅಲ್ಲದೇ, ಪರಿಸರಕ್ಕೆ ಮಾರಕ ಪ್ರಕ್ರಿಯೆಗಳಾಗಿವೆ ಎನ್ನಲಾಗಿದೆ.

ಜೈವಿಕ ವಸ್ತುಗಳಲ್ಲಿ ಹೆಚ್ಚು ಕಾರ್ಬನ್‌ ಅಂಶ

ಜೈವಿಕ ವಸ್ತುಗಳಲ್ಲಿ ಹೆಚ್ಚು ಕಾರ್ಬನ್‌ ಅಂಶ

ಸಂಶ್ಲೇಷಿತ ಗ್ರಾಫೈಟ್‌ ಬದಲಾಗಿ, ಜೈವಿಕ ವಸ್ತುಗಳು ಹೆಚ್ಚು ಕಾರ್ಬನ್‌ ಅಂಶವನ್ನು ಹೊಂದಿರುವುದರಿಂದ ಇದನ್ನು ಬಳಸಬಹುದಾಗಿದೆ. ಅಲ್ಲದೇ ಇದು ಪರಿಸರ ಸ್ನೇಹಿಯಾಗಿ ಸಂಶೋಧನಾಕಾರರ ಗಮನ ಸೆಳೆದಿದೆ.

ಅಣಬೆಗಳನ್ನು ಜೀವರಾಶಿಯಾಗಿ ಬಳಸಿಕೊಳ್ಳಲು ಸಿದ್ದತೆ ರೂಪಿಸಿದ್ದಾರೆ

ಅಣಬೆಗಳನ್ನು ಜೀವರಾಶಿಯಾಗಿ ಬಳಸಿಕೊಳ್ಳಲು ಸಿದ್ದತೆ ರೂಪಿಸಿದ್ದಾರೆ

ಸಂಶೋಧನಾಕಾರರು ಅಣಬೆಗಳನ್ನು ಜೀವರಾಶಿಯಾಗಿ ಬಳಸಿಕೊಳ್ಳಲು ಸಿದ್ದತೆ ರೂಪಿಸಿದ್ದಾರೆ. ಹಿಂದಿನ ಸಂಶೋಧಕರು ಅದನ್ನು ಹೆಚ್ಚು ರಂಧ್ರಗಳಿರುವ ಹಾಗೆ ಸ್ಥಾಪಿಸಿದ್ದರು. ಅಂದರೆ, ಅವುಗಳು ಲಿಕ್ವಿಡ್‌ಗೆ ಸಣ್ಣ ರಂಧ್ರಗಳಿದ್ದು ಗಾಳಿ ಹೋಗಲು ಅವಕಾಶ ಮಾಡಲಾಗಿತ್ತು ಎನ್ನಲಾಗಿದೆ.

ಮೊಬೈಲ್‌ ಫೋನ್‌ಗಳಿಗೂ ಬಳಕೆ

ಮೊಬೈಲ್‌ ಫೋನ್‌ಗಳಿಗೂ ಬಳಕೆ

ಕಾಲಾನಂತರದಲ್ಲಿ ಈ ಬ್ಯಾಟರಿಗಳನ್ನು ಕಾರ್ಬನ್ ವಿನ್ಯಾಸದಲ್ಲಿ ಮೊಬೈಲ್‌ ಫೋನ್‌ಗಳಿಗೂ ಬಳಕೆಯಾಗುವಂತೆ ಸಕ್ರಿಯತೆ ಗೊಳಿಸಲಾಗುವುದು ಎಂದು ರಿವರ್ಸೈಡ್ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದ 'ಬ್ರೆನ್ನನ್ ಕ್ಯಾಂಪ್ಬೆಲ್ ' ವಿವರಿಸಿದ್ದಾರೆ.

ಬ್ಯಾಟರಿಗೆ ರಂಧ್ರಗಳು ಮುಖ್ಯವಾಗಿವೆ

ಬ್ಯಾಟರಿಗೆ ರಂಧ್ರಗಳು ಮುಖ್ಯವಾಗಿವೆ

ಬ್ಯಾಟರಿಗೆ ರಂಧ್ರಗಳು ಮುಖ್ಯವಾಗಿವೆ. ಏಕೆಂದರೆ, ಇವುಗಳು ಹೆಚ್ಚು ಶಕ್ತಿ ಸಂಗ್ರಹವಾಗಲು ಸಹಾಯಕವಾಗಿವೆ.

ಪೊಟ್ಯಾಸಿಯಮ್‌ ಉಪ್ಪಿನ ಸಾಂದ್ರತೆ

ಪೊಟ್ಯಾಸಿಯಮ್‌ ಉಪ್ಪಿನ ಸಾಂದ್ರತೆ

ಅಣಬೆಗಳು ಹೆಚ್ಚು ಪೊಟ್ಯಾಸಿಯಮ್‌ ಉಪ್ಪಿನ ಸಾಂದ್ರತೆಯನ್ನು ಹೊಂದಿರುವುದರಿಂದ ಎಲೆಕ್ಟ್ರೋಲೈಟ್-ಕ್ರಿಯಾಶೀಲ ಘಟಕಗಳಿಗೆ ಹೆಚ್ಚು ಅವಕಾಶನೀಡಿ ಸಾಮರ್ಥ್ಯ ಹೆಚ್ಚಾಗಲು ಕಾರಣವಾಗಿವೆ.

ಇಂಗಾಲದ ಆನೋಡ್ ತಂತ್ರಜ್ಞಾನ

ಇಂಗಾಲದ ಆನೋಡ್ ತಂತ್ರಜ್ಞಾನ

ಅಣಬೆ ಇಂಗಾಲದ ಆನೋಡ್ ತಂತ್ರಜ್ಞಾನವು, ಆಪ್ಟಿಮೈಸೇಶನ್ ಜೊತೆಗೆ ಗ್ರ್ಯಾಫೈಟ್ ಆನೋಡ್ಗಳ ಬದಲಿಸಲಿವೆ ಎಂದು ಸಂಶೋಧಕರು ಹೇಳಿದ್ದಾರೆ.

ರೂಢಿಗತ ಲಿಥಿಯಂ ಅನೋಡ್

ರೂಢಿಗತ ಲಿಥಿಯಂ ಅನೋಡ್

ರೂಢಿಗತ ಲಿಥಿಯಂ ಅನೋಡ್‌ ಎಲೆಕ್ಟ್ರೋಡ್ ಸಾಮರ್ಥ್ಯದಿಂದ ತೊಂದರೆ ಒಡ್ಡುತ್ತದೆ ಎಂದು ಹೇಳಲಾಗಿದೆ.

Best Mobiles in India

English summary
Researchers have created a new type of lithium-ion battery anode using portabella mushrooms, which are inexpensive, environmentally friendly and easy to produce.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X