ಆನ್ ಲೈನಿನಲ್ಲಿ ಖರೀದಿಸಿದ ವಸ್ತು ಕದ್ದಿದ್ದಾ?

|

ತಂತ್ರಜ್ಞಾನದ ಪ್ರಗತಿಯೊಂದಿಗೆ, ನಾವು ದಿನನಿತ್ಯದ ಕಾರ್ಯಗಳಲ್ಲಿ ಹಲವಾರು ಸಾಧನಗಳನ್ನು ಉಪಯೋಗಿಸುತ್ತೇವೆ. ಡಿಸ್ಕೌಂಟಿನಲ್ಲಿ ಲಭ್ಯವಿರುವ ವಸ್ತುಗಳಿಗಾಗಿ ಹುಡುಕಾಡುತ್ತೇವೆ, ಹಣವನ್ನು ಉಳಿಸಲು.

ಆನ್ ಲೈನಿನಲ್ಲಿ ಖರೀದಿಸಿದ ವಸ್ತು ಕದ್ದಿದ್ದಾ?

ಕೆಲವೊಮ್ಮೆ, ಹೊಸ ವಸ್ತುವಿನ ಬದಲಾಗಿ ನವೀಕರಣಗೊಂಡ ಸಾಧನವನ್ನು ಖರೀದಿಸುತ್ತೇವೆ, ಹೆಚ್ಚಿನ ಹಣ ಉಳಿಸುವ ಉದ್ದೇಶದಿಂದ. ಉತ್ತಮ ಡೀಲ್ ಪಡೆದುಕೊಳ್ಳುವ ಆತುರದಲ್ಲಿ, ಖರೀದಿಸುವಾಗ ಹಲವು ತಪ್ಪುಗಳನ್ನೂ ಮಾಡಿಬಿಡುತ್ತೇವೆ.

ಓದಿರಿ: ಟೊರೆಂಟ್‌ನಲ್ಲಿ ಡೌನ್‌ಲೋಡ್, 3 ಲಕ್ಷ ಜುಲ್ಮಾನೆ ಮತ್ತು 3 ವರ್ಷ ಜೈಲು

ಬಹಳಷ್ಟು ಸಲ ಕದ್ದ ಮಾಲನ್ನು ಖರೀದಿಸಿಬಿಡುತ್ತೇವೆ. ಅನೇಕ ಗ್ರಾಹಕರು ತಮಗೆ ಅರಿವಿಲ್ಲದಂತೆ ಕದ್ದ ಮಾಲನ್ನು ಖರೀದಿಸಿಬಿಡುತ್ತಾರೆ. ನವೀಕರಣಗೊಂಡ ವಸ್ತುವನ್ನು ನೀವು ಖರೀದಿಸಬೇಕೆಂದಿದ್ದರೆ, ಕದ್ದ ಮಾಲನ್ನು ಖರೀದಿಸುವುದರಿಂದ ತಪ್ಪಿಸಿಕೊಳ್ಳಬೇಕೆಂದರೆ, ಕೆಳಗಿನ ಸ್ಲೈಡ್ ಶೋ ನೋಡಿ. ನೀವು ಖರೀದಿಸುತ್ತಿರುವುದು ಕದ್ದ ಮಾಲು ಹೌದೋ ಅಲ್ವೋ ಅನ್ನೋದನ್ನು ತಿಳಿಯಲು ಕೆಲವು ಎಚ್ಚರಿಕೆಗಳಿವೆ.

ಅತಿ ಕಡಿಮೆ ಬೆಲೆಯ ಬಗ್ಗೆ ಎಚ್ಚರವಿರಲಿ.

ಅತಿ ಕಡಿಮೆ ಬೆಲೆಯ ಬಗ್ಗೆ ಎಚ್ಚರವಿರಲಿ.

ಆನ್ ಲೈನಿನಲ್ಲಿ ಖರೀದಿಸುವಾಗ, ನಿಮಗೆ ಬೇಕಾದ ದುಬಾರಿ ಮೊತ್ತದ ಸ್ಮಾರ್ಟ್ ಫೋನ್, ಟ್ಯಾಬ್ಲೆಟ್ ಅಥವಾ ಲ್ಯಾಪ್ ಟಾಪ್ ತುಂಬಾ ಕಡಿಮೆ ಬೆಲೆಗೆ ಲಭ್ಯವಿರಬಹುದು. ಆ ಸಂದರ್ಭದಲ್ಲಿ ಅದು ಕದ್ದ ಸಾಧನವಾಗಿರುವ ಸಾಧ್ಯತೆ ಅಧಿಕ. ನೀವು ಖರೀದಿಸಬೇಕೆಂದಿರುವ ಸಾಧನದ ಬಗ್ಗೆ ಅಂತರ್ಜಾಲದಲ್ಲಿ ಒಂದಷ್ಟು ಮಾಹಿತಿ ಕಲೆ ಹಾಕಿ. ಬೆಲೆ ಮಾರುಕಟ್ಟೆ ದರಕ್ಕಿಂತ ತುಂಬ ಕಡಿಮೆಯಾಗಿದ್ದರೆ ಖರೀದಿಸಬೇಡಿ.

ಉತ್ಪನ್ನದ ಮಾಹಿತಿಗಳು ಕಡಿಮೆಯಿದ್ದಲ್ಲಿ.

ಉತ್ಪನ್ನದ ಮಾಹಿತಿಗಳು ಕಡಿಮೆಯಿದ್ದಲ್ಲಿ.

ಉತ್ಪನ್ನದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲದೇ ಇದ್ದಲ್ಲಿ ಅದು ಕದ್ದ ಮಾಲು ಎಂಬುದಕ್ಕೆ ಮತ್ತೊಂದು ಸಾಕ್ಷಿ. ಮಾರಾಟಗಾರರ ಬಳಿ ಮತ್ತಷ್ಟು ವಿವರಗಳನ್ನು ಕೇಳಿ. ಆ ಉತ್ಪನ್ನವನ್ನು ಮೊದಲ ಗ್ರಾಹಕ ಎಷ್ಟು ಕಾಲ ಉಪಯೋಗಿಸಿದ್ದ ಮತ್ತೀಗ ಅದನ್ನು ಮಾರಲು ಕಾರಣವೇನು ಎನ್ನುವುದನ್ನು ಕೇಳಿ ತಿಳಿದುಕೊಳ್ಳಿ. ನ್ಯಾಯಬದ್ಧ ಮಾರಾಟಗಾರ ಉತ್ಪನ್ನದ ಬಗ್ಗೆ ನಿಮಗೆ ನೀವು ಕೇಳಿದ ಮಾಹಿತಯನ್ನು ಒದಗಿಸುತ್ತಾನೆ. ಅನುಮಾನ ಬಂದರೆ ಖರೀದಿಸಬೇಡಿ.

ಉತ್ಪನ್ನ ಸಿಕ್ಕಿರುವಂತದ್ದು ಎಂಬಂತ ವಿವರವಿದ್ದಾಗ.

ಉತ್ಪನ್ನ ಸಿಕ್ಕಿರುವಂತದ್ದು ಎಂಬಂತ ವಿವರವಿದ್ದಾಗ.

ಯಾವುದಾದರೂ ಒಂದು ವಸ್ತು 'ಸಿಕ್ಕಿದ್ದು' ಎಂಬ ವಿವರಗಳೊಂದಿಗೆ ಇದ್ದರೆ ಅದರ ನ್ಯಾಯಬದ್ಧತೆಯ ಬಗ್ಗೆ ಅನುಮಾನ ಪಡಿ. ಹಣವೆಷ್ಟೇ ಕಡಿಮೆಯಿರಲಿ, 'ಸಿಕ್ಕ' ವಸ್ತುವನ್ನು ಖರೀದಿಸುವ ಮನಸ್ಸು ಮಾಡಲೇಬೇಡಿ.

ಸೀರಿಯಲ್ ನಂಬರ್ ಮೂಲಕ ಕಳುವಾದ ವಸ್ತುವಿನ ಬಗ್ಗೆ ತಿಳಿದುಕೊಳ್ಳಿ.

ಸೀರಿಯಲ್ ನಂಬರ್ ಮೂಲಕ ಕಳುವಾದ ವಸ್ತುವಿನ ಬಗ್ಗೆ ತಿಳಿದುಕೊಳ್ಳಿ.

ಸಾಧನವೊಂದನ್ನು ಆನ್ ಲೈನ್ ಮುಖಾಂತರ ಖರೀದಿಸಲು ನೀವು ಆಸಕ್ತರಾಗಿದ್ದಾಗ, ಸಾಧನದ ಸೀರಿಯಲ್ ನಂಬರನ್ನು ಕೇಳಿರಿ. ಪ್ರಾಮಾಣಿಕ ಮಾರಾಟಗಾರ ನೀವು ಕೇಳಿದಂತಹ ಸೀರಿಯಲ್ ನಂಬರನ್ನು ನೀಡುತ್ತಾನೆ, ಯಾಕೆಂದರೆ ಆ ನಂಬರ್ ನಿಮಗೆ ನೀಡುವುದರಿಂದ ಅವರಿಗೆ ಯಾವುದೇ ಹಾನಿಯಿಲ್ಲ. ಆ ಸೀರಿಯಲ್ ನಂಬರನ್ನು ಆನ್ ಲೈನಿನಲ್ಲಿ ಪರೀಕ್ಷಿಸಿ ಅದು ಕದ್ದಿದ್ದೋ ಅಲ್ಲವೋ ಎಂದು ತಿಳಿದುಕೊಳ್ಳಿ.

ಪಾಸ್ ವರ್ಡ್ ಲಾಕ್ ಆದ ಸಾಧನವನ್ನು ಖರೀದಿಸಬೇಡಿ.

ಪಾಸ್ ವರ್ಡ್ ಲಾಕ್ ಆದ ಸಾಧನವನ್ನು ಖರೀದಿಸಬೇಡಿ.

ಪಾಸ್ ವರ್ಡ್ ಲಾಕ್ ಆದ ಸಾಧನಗಳಿಂದ ದೂರವಿರಿ. ಹರಾಜಿನಲ್ಲಿ ಗೆಲ್ಲುವವರಿಗೆ ಪಾಸ್ ವರ್ಡ್ ಅನ್ನು ತಿಳಿಸಲಾಗುವುದು ಎಂದು ಮಾರಾಟಗಾರ ಹೇಳಿರಬಹುದು, ನೀವು ಎಚ್ಚರಿಕೆಯಿಂದ ಇರುವುದು ಅವಶ್ಯ. ಮಾರಾಟಗಾರ ನಿಜಕ್ಕೂ ಪ್ರಾಮಾಣಿಕನಾಗಿದ್ದರೆ, ಎಲ್ಲಾ ಡಾಟಾವನ್ನು ಅಳಿಸಿ ಹಾಕಿ ಹೊಸತೊಂದು ಪಾಸ್ ವರ್ಡ್ ಕೊಟ್ಟಿರುವ ಸಾಧ್ಯತೆಗಳಿರುತ್ತವೆ. ಹಾಗಿದ್ದರೂ, ಕದ್ದ ಸಾಮಗ್ರಿಯನ್ನು ಮಾರುವ ಕೆಲವರಿಗೆ ಹೀಗೆ ಮಾಡುವುದು ಸಾಧ್ಯವಿರುವುದಿಲ್ಲ, ಪಾಸ್ ವರ್ಡನ್ನು ಮರೆತುಬಿಟ್ಟಿದ್ದೇನೆ ಎಂದು ಕಳ್ಳಾಟವಾಡುತ್ತಿರುತ್ತಾರೆ.

ಕೆಟ್ಟ ಇ.ಎಸ್.ಎನ್ ಇರಬಹುದು.

ಕೆಟ್ಟ ಇ.ಎಸ್.ಎನ್ ಇರಬಹುದು.

ನೀವು ಖರೀದಿಸುತ್ತಿರುವ ಸಾಧನದ ಇ.ಎಸ್.ಎನ್ (ಎಲೆಕ್ಟ್ರಾನಿಕ್ ಸೀರಿಯಲ್ ನಂಬರ್) ಕೆಟ್ಟದ್ದಾಗಿರಬಹುದು. ಕೆಟ್ಟ ಇ.ಎಸ್.ಎನ್ ಅಂದರೆ ಆ ಸಾಧನವನ್ನು ಕ್ಯಾರಿಯರ್ ಅಥವಾ ತಯಾರಕರೂ ಮತ್ತೆ ಚಾಲೂ ಮಾಡಲು ಸಾಧ್ಯವಾಗದ ಪರಿಸ್ಥಿತಿ. ಇದ್ಯಾಕೆ ಹೀಗೆ ಅಂದರೆ ಮೊದಲ ಮಾಲೀಕ ಫೀಸು ತುಂಬದೆ ಕ್ಯಾರಿಯರ್ ಅನ್ನು ಬದಲಿಸಿಬಿಟ್ಟಿರಬಹುದು ಅಥವಾ ಸಾಧನವು ಕಳೆದುಹೋಗಿರಬಹುದು ಅಥವಾ ಕದ್ದ ಸಾಧನವಾಗಿರಬಹುದು.

ಮಾರಾಟಗಾರರ ಬಗ್ಗೆ ಧನಾತ್ಮಕ ಫೀಡ್ ಬ್ಯಾಕ್ ಇಲ್ಲದೇ ಇರುವುದು

ಮಾರಾಟಗಾರರ ಬಗ್ಗೆ ಧನಾತ್ಮಕ ಫೀಡ್ ಬ್ಯಾಕ್ ಇಲ್ಲದೇ ಇರುವುದು

ಆನ್ ಲೈನಿನಲ್ಲಿ ಸಾಧನವೊಂದನ್ನು ಖರೀದಿಸುತ್ತಿರುವಾಗ, ಮಾರಾಟಗಾರರ ಬಗ್ಗೆ ಇರುವ ಫೀಡ್ ಬ್ಯಾಕನ್ನು ಒಮ್ಮೆ ಗಮನಿಸಿ. ತುಂಬಾ ಕಡಿಮೆ ಫೀಡ್ ಬ್ಯಾಕ್ ಇದ್ದರೆ ಅಥವಾ ಒಂದು ಚೂರೂ ಧನಾತ್ಮಕ ಫೀಡ್ ಬ್ಯಾಕ್ ಇಲ್ಲದೇ ಹೋದರೆ ಎಚ್ಚರಿಕೆಯಿಂದಿರಿ.

ಸ್ಥಳೀಯ ಮಾರಾಟಗಾರ ನಿಮ್ಮನ್ನು ಭೇಟಿಯಾಗಲು ಸಂದೇಹಪಡುತ್ತಿದ್ದರೆ.

ಸ್ಥಳೀಯ ಮಾರಾಟಗಾರ ನಿಮ್ಮನ್ನು ಭೇಟಿಯಾಗಲು ಸಂದೇಹಪಡುತ್ತಿದ್ದರೆ.

ಮಾರಾಟಗಾರ ನಿಮ್ಮನ್ನು ಆತನ/ಆಕೆಯ ಮನೆಗೆ ಕರೆಯಲು ಹಿಂಜರಿದರೆ ಅದಕ್ಕೆ ಅರ್ಥವಿದೆ. ಆದರೆ ಸ್ಥಳೀಯ ಮಾರಾಟಗಾರನೊಬ್ಬ ಯಾವುದಾದರೂ ಸಾರ್ವಜನಿಕ ಸ್ಥಳದಲ್ಲೂ ನಿಮ್ಮನ್ನು ಭೇಟಿಯಾಗಲು ಹಿಂಜರಿಯುತ್ತಾನೆಂದರೆ, ನೀವು ಎಚ್ಚರಿಕೆಯಿಂದರಬೇಕಾದದ್ದು ಅತ್ಯವಶ್ಯ.

ಪತ್ತೆಹಚ್ಚಲಾಗದ ರೀತಿಯಲ್ಲಿ ಹಣ ಪಾವತಿಸಲು ಹೇಳಿದರೆ.

ಪತ್ತೆಹಚ್ಚಲಾಗದ ರೀತಿಯಲ್ಲಿ ಹಣ ಪಾವತಿಸಲು ಹೇಳಿದರೆ.

ಖರೀದಿಸಿದ ವಸ್ತುವಿನ ಹಣವನ್ನು ಕೊಡುವ ಸಂದರ್ಭದಲ್ಲಿ, ನಿಮಗೆ ಅನುಕೂಲಕರವಾದ ಮಾದರಿಯನ್ನು ಆಯ್ದುಕೊಳ್ಳಿ. ಆದರೆ, ನಿಮ್ಮ ಮಾರಾಟಗಾರ ಪತ್ತೆಹಚ್ಚಲಾಗದ ರೀತಿಯ ಹಣ ಪಾವತಿ ವಿಧಾನವನ್ನು ಸೂಚಿಸಿದರೆ, ಉದಾಹರಣೆಗೆ ಪೇ ಪಾಲ್ ಅಥವಾ ಕ್ರೆಡಿಟ್ ಕಾರ್ಡ್ ಬದಲಿಗೆ ಮನಿ ವೈರ್ ಅಥವಾ ಕ್ಯಾಷಿಯರ್ಸ್ ಡೆಸ್ಕ್ ಮೂಲಕ ಹಣ ಪಾವತಿಸಲು ಹೇಳಿದರೆ, ಅದು ಎಚ್ಚರಿಕೆಯ ಘಂಟೆ. ಒಂದು ವೇಳೆ ಭವಿಷ್ಯದಲ್ಲಿ ನಿಮಗೆ ಖರೀದಿಸಿದ ವಸ್ತು ಕದ್ದಿದ್ದು ಎಂದು ತಿಳಿದರೆ ಹಣ ಕೊಟ್ಟ ಮಾರ್ಗದ ಮೂಲಕವೇ ಮಾರಾಟಗಾರನನ್ನು ಪತ್ತೆ ಹಚ್ಚಲು ಸಾಧ್ಯವಾಗಬೇಕು.

Best Mobiles in India

Read more about:
English summary
When you are buying electronics online, you need to make sure you are not investing in stolen electronics by making sure you keep these nine warning signs in mind. Take a look at these tips to know that you are not buying such products online. Read more...

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X