Home
ಸುದ್ದಿಜಾಲ

ಬೆಂಗಳೂರಿನಲ್ಲಿ ಬಾಡಿಗೆ ಮನೆ ಪಡೆಯಬೇಕಂದ್ರೆ ಪಿಯುಸಿಯಲ್ಲಿ 90% ಅಂಕ ಪಡೆದಿರಬೇಕು...ಇದ್ಯಾವ ನಿಯಮ?

ಬೆಂಗಳೂರು ಇಂದು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರವಾಗಿದೆ. ಇಲ್ಲಿ ಹೊರ ರಾಜ್ಯ ಹಾಗೂ ವಿದೇಶಗಳಿಂದ ಬಂದು ಜೀವನ ರೂಪಿಸಿಕೊಳ್ಳುತ್ತಿದ್ದಾರೆ. ಅದರಲ್ಲೂ ಹೊಸ ಹೊಸ ಉದ್ಯೋಗಿಗಳು ಈ ಕಡೆ ಮುಖ ಮಾಡುತ್ತಿದ್ದಂತೆ ಬಾಡಿಗೆ ಮನೆಗಳಿಗೆ ಹೆಚ್ಚಿನ ಬೇಡಿಕೆ ನಿರ್ಮಾಣ ಆಗುತ್ತಿದೆ. ಈ ನಡುವೆ ಶಾಕಿಂಗ್‌ ವಿಚಾರವೊಂದು ಹೊರಬಿದ್ದಿದೆ.

ಹೌದು, ಸಾಮಾನ್ಯವಾಗಿ ಯಾರೇ ಬಾಡಿಗೆಗೆ ಮನೆ ಕೇಳಿದಾಗ ಎಲ್ಲಿ ಕೆಲಸಕ್ಕೆ ಇದ್ದೀರಾ? ಅಥವಾ ಎಷ್ಟು ಸಂಬಳ?, ಯಾವ ಊರು? ಎಂದು ಕೇಳುವುದುಂಟು. ಆದರೆ, ಇಲ್ಲೊಂದು ಘಟನೆ ಬಾಡಿಗೆಗೆ ಮನೆ ಹುಡುಕುವವರನ್ನು ದಂಗುಬಡಿಸಿದೆ. ಯಾಕೆಂದರೆ ಮನೆ ಮಾಲೀಕ ಇವರ ಬಳಿ ಲಿಂಕ್ಡ್‌ಇನ್ ಪ್ರೊಫೈಲ್‌ ಹಾಗೂ 12ನೇ ತರಗತಿಯ ಅಂಕಪಟ್ಟಿಯನ್ನು ಕೇಳಿದ್ದಾನೆ. ಅಷ್ಟಕ್ಕೂ ಏನಿದು ಘಟನೆ? ಮನೆ ಬಾಡಿಗೆ ಪಡೆದುಕೊಳ್ಳಲು ಏನಾದರೂ ನಿಯಮ ಬದಲಾಗಿದೆಯಾ? ಎಂಬಿತ್ಯಾದಿ ಮಾಹಿತಿ ಇಲ್ಲಿದೆ ನೋಡಿ.

ಬೆಂಗಳೂರಿನಲ್ಲಿ ಬಾಡಿಗೆ ಮನೆ ಪಡೆಯಬೇಕಂದ್ರೆ ಪಿಯುಸಿಯಲ್ಲಿ 90% ಅಂಕ ಪಡೆದಿರಬೇಕು..

ಬಾಡಿಗೆ ಮನೆ ಬೇಕಾದರೆ 12 ನೇ ತರಗತಿಯಲ್ಲಿ ಫಸ್ಟ್‌ ಕ್ಲಾಸ್‌ ಬಂದಿರಬೇಕು: ಈ ವಿಷಯ ಕೇಳಿದ್ರೆ ನಿಮಗೆ ವಿಚಿತ್ರ ಎನಿಸಬಹುದು. ಆದರೆ, ಈ ಘಟನೆ ಬೆಂಗಳೂರಲ್ಲಿ ಜರುಗಿದೆ. ಅದರಲ್ಲೂ ಬೆಂಗಳೂರಿನಲ್ಲಿ ಬಾಡಿಗೆಗೆ ಮನೆ ಪಡೆಯುವುದಕ್ಕಿಂತ ಐಐಟಿಯ ಪ್ರವೇಶ ಪರೀಕ್ಷೆಯನ್ನು ಪಾಸ್‌ ಮಾಡುವುದೇ ಸುಲಭ ಎಂದು ಕೆಲವರು ಹೇಳುತ್ತಾರೆ. ಇದಕ್ಕೆ ನಿದರ್ಶನ ಎಂಬಂತೆ ಇಲ್ಲೋರ್ವ ವ್ಯಕ್ತಿಗೆ ಕೊನೆಗೂ ಮನೆ ಸಿಕ್ಕಿಲ್ಲ.

ಲಿಂಕ್ಡ್‌ಇನ್ ಸದಸ್ಯರೋರ್ವರು ವಾಟ್ಸಾಪ್ ಸಂಭಾಷಣೆಯ ವೈರಲ್ ಸ್ಕ್ರೀನ್‌ಶಾಟ್ ಅನ್ನು ಶೇರ್‌ ಮಾಡಿಕೊಂಡಿದ್ದಾರೆ. ಅದರಲ್ಲಿ ಬ್ರೋಕರ್ 12 ನೇ ತರಗತಿಯ ಮಾರ್ಕ್ಸ್‌ ಕಾರ್ಡ್‌ ಅನ್ನು ಕೇಳಿದ್ದಾರೆ. ಅದರಂತೆ 12 ನೇ ತರಗತಿಯ ಮಾರ್ಕ್ಸ್‌ ಕಾರ್ಡ್‌ ಕಳುಹಿಸಲಾಗಿದ್ದು, ಅದನ್ನು ಬ್ರೋಕರ್‌ ಮನೆ ಮಾಲೀಕನಿಗೆ ಕಳುಹಿಸಿದ್ದಾನೆ. ಇದೆಲ್ಲಾ ಪ್ರಕ್ರಿಯೆ ಆದ ಮೇಲೆ ಮನೆ ಬಾಡಿಗೆಗೆ ಪಡೆಯಲು ಮುಂದಾಗಿದ್ದ ವ್ಯಕ್ತಿ ಶಾಕಿಂಗ್‌ ಉತ್ತರ ಪಡೆದಿದ್ದಾರೆ.

ಅಂದರೆ 75 % ಫಲಿತಾಂಶ ಪಡೆದಿರುವುದರಿಂದ ಮನೆ ಮಾಲೀಕ ನಿಮಗೆ ಮನೆಯನ್ನು ಕೊಡುವುದಿಲ್ಲ ಎಂದೇಳಿದ್ದಾರೆಂದು ಬ್ರೋಕರ್‌ ತಿಳಿಸಿದ್ದಾರೆ. ಅಷ್ಟು ಮಾತ್ರವಲ್ಲದೆ 90% ಮಾರ್ಕ್ಸ್ ಪಡೆದವರಿಗೆ ಮಾತ್ರ ಅವರ ಮನೆಯನ್ನು ಕೊಡುತ್ತಾರಂತೆ. ಈ ಕಾರಣಕ್ಕಾಗಿಯೇ ಈ ಸ್ಕ್ರೀನ್ ಶಾಟ್‌ ಹಂಚಿಕೊಂಡಿರುವ ಬಳಕೆದಾರರು ನಿಮ್ಮ ಎಂಬಿಎಗೆ ಮಾತ್ರವಲ್ಲದೆ ಫ್ಲಾಟ್ ಬಾಡಿಗೆಗೂ ಸಹ 12 ನೇ ತರಗತಿಯ ಅಂಕಗಳು ಬೇಕು. ಪೀಕ್ ಬೆಂಗಳೂರು ಮೂವ್‌ಮೆಂಟ್‌ ಎಂದು ಶೀರ್ಷಿಕೆ ನೀಡಿದ್ದಾರೆ.

ಇದರಲ್ಲಿ ಗಮನಿಸಬೇಕಾದ ವಿಷಯ ಏನೆಂದರೆ ಮನೆ ಮಾಲೀಕ ಈ ವೇಳೆ ಲಿಂಕ್ಡ್‌ಇನ್ ಮತ್ತು ಟ್ವಿಟ್ಟರ್ ಪ್ರೊಫೈಲ್‌ಗಳ ಲಿಂಕ್‌ ಅನ್ನು ಸಹ ಕೇಳಿದ್ದಾರೆ. ಇದರೊಂದಿಗೆ ತಮ್ಮನ್ನು ತಾವು ಪರಿಚಯಿಸುವ ಸಣ್ಣ ಬರಹವನ್ನು ಸಹ ವಿನಂತಿಸಿದ್ದಾರೆ. ಈ ರೀತಿಯ ಪ್ರಕ್ರಿಯೆ ನಿಜಕ್ಕೂ ಬೆಂಗಳೂರಿಗೆ ಹೊಸದಾಗಿ ಉದ್ಯೋಗ ಅರಸಿ ಬರುವ ಯುವ ಜನಾಂಗಕ್ಕೆ ದೊಡ್ಡ ತಲೆ ನೋವಾಗಲಿದೆ. ಅದರಂತೆ ಈ ಪೋಸ್ಟ್‌ಗೆ ಸಾಕಷ್ಟು ಜನರು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ.

ಅದರಲ್ಲಿ ಬಳಕೆದಾರರೊಬ್ಬರು, ಶೀಘ್ರದಲ್ಲೇ ಬೆಂಗಳೂರಿನ ಮಹತ್ವಾಕಾಂಕ್ಷೆಯ ಬಾಡಿಗೆದಾರರಿಗೆ CAT ಅಥವಾ GMAT ನಂತಹ ಪ್ರವೇಶ ಪರೀಕ್ಷೆಯು ನಡೆಯಲಿದೆ. ಬೆಂಗಳೂರು ಶೀಘ್ರದಲ್ಲೇ ಅಲ್ಗಾರಿದಮ್‌ಗಳ ಆಧಾರದ ಮೇಲೆ ಬಾಡಿಗೆದಾರರ ವಿವರಗಳನ್ನು ಪರಿಶೀಲಿಸಲು ಆಪ್‌ ಅನ್ನು ಅಭಿವೃದ್ಧಿಪಡಿಸಬಹುದು ಎಂದೂ ಸಹ ಬರೆದಿದ್ದಾರೆ. ಮತ್ತೊಬ್ಬರು, ಬೆಂಗಳೂರಿನಲ್ಲಿ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸುವುದಕ್ಕಿಂತಲೂ ಹೆಚ್ಚಿನ ತಯಾರಿಯನ್ನು ಬೆಂಗಳೂರಿನಲ್ಲಿ ಬಾಡಿಗೆಗೆ ಪಡೆಯಲು ತಯಾರಿ ನಡೆಸುತ್ತಿರುವಂತೆ ತೋರುತ್ತಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಬಾಡಿಗೆ ಮನೆ ಪಡೆಯಬೇಕಂದ್ರೆ ಪಿಯುಸಿಯಲ್ಲಿ 90% ಅಂಕ ಪಡೆದಿರಬೇಕು..

ಕೊರೊನಾ ಆತಂಕ ಕಡಿಮೆ ಆಗುತ್ತಿದ್ದಂತೆ ಈಗ ಟೆಕ್ಕಿಗಳು ಬೆಂಗಳೂರಿಗೆ ವಾಪಸ್‌ ಆಗುತ್ತಿದ್ದಾರೆ. ಅದರಂತೆ ಈಗ ನಗರದಲ್ಲಿ ಬಾಡಿಗೆ ಮನೆಗಳು ಮತ್ತು ಪೇಯಿಂಗ್-ಗೆಸ್ಟ್ ವಸತಿಗಾಗಿ ಬೇಡಿಕೆ ಹೆಚ್ಚಾಗುತ್ತಿದೆ. ಜೊತೆಗೆ ಬಾಡಿಗೆಯನ್ನು ಕನಿಷ್ಠ 25 ಪ್ರತಿಶತದಷ್ಟು ಹೆಚ್ಚಿಸಲು ಭೂಮಾಲೀಕರು ಮುಂದಾಗಿದ್ದು, ಅದಾಗ್ಯೂ 7-12 ರಷ್ಟು ಬಾಡಿಗೆ ಹೆಚ್ಚಾಗುವ ನಿರೀಕ್ಷೆಯಿದೆ ಇದೆ ಎಂದು ತಿಳಿದುಬಂದಿದೆ.

Best Mobiles in India

English summary
To get a house on rent in Bangalore, you must have 90% marks in class 12th. A post of this kind of chatting has gone viral on social media.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+