900 ದಶಲಕ್ಷ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳು ಅಪಾಯಕಾರಿಯಾಗಿವೆ; ವರದಿ
ಎಚ್ಚರ! 900 ದಶಲಕ್ಷಕ್ಕಿಂತ ಹೆಚ್ಚಿನ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳು ಕ್ವಾಡ್‌ರೂಟರ್ ನ್ಯೂನತೆ ಪರಿಣಾಮದಿಂದ ಅಪಾಯಕಾರಿಯಾಗಿವೆ ಎಂದು ಭದ್ರತಾ ಕಂಪನಿ 'ಚೆಕ್ ಪಾಯಿಂಟ್ ಸಾಫ್ಟ್‌ವೇರ್ ಟೆಕ್ನಾಲಜೀಸ್' ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಹುಷಾರಾಗಿರಿ ಎಂದು ಹೇಳಿದೆ.

ಕ್ವಾಲ್ಕಂ ಪ್ರೊಸೆಸರ್ ಚಾಲಿತ ಡಿವೈಸ್‌ಗಳು ಕ್ವಾಡ್‌ರೂಟರ್ ನ್ಯೂನತೆ ಜೊತೆಗೆ ಇತರೆ ನಾಲ್ಕು ದೋಷಗಳನ್ನು ಹೊಂದಿರುವುದನ್ನು ಪತ್ತೆಹಚ್ಚಲಾಗಿದ್ದು, ಈ ದೋಷಗಳಿಂದ ಯಾವುದೇ ಹ್ಯಾಕರ್‌ಗಳು ಸಂಪೂರ್ಣ ಸ್ಮಾರ್ಟ್‌ಫೋನ್ ಅನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಬಹುದಂತೆ. ಹ್ಯಾಕರ್‌ಗಳು ಕ್ವಾಡ್‌ರೂಟರ್ ದೋಷವಿರುವ ಸ್ಮಾರ್ಟ್‌ಫೋನ್ ಅನ್ನು ಸಂಪೂರ್ಣ ನಿಯಂತ್ರಣಕ್ಕೆ ತೆಗೆದುಕೊಂಡು ಅನಿರ್ಬಂಧಿತ ಖಾಸಗಿ ಮಾಹಿತಿಗಳನ್ನು ಮತ್ತು ಉದ್ಯಮ ಡಾಟಾವನ್ನು ಆಕ್ಸೆಸ್ ಮಾಡಬಹುದಂತೆ. ಅಷ್ಟೇ ಮಾತ್ರವಲ್ಲದೇ ದಾಳಿಕೋರರಿಗೆ ಕೀಲಾಗಿಂಗ್, ಜಿಪಿಎಸ್ ಟ್ರ್ಯಾಕಿಂಗ್, ವೀಡಿಯೊ ಮತ್ತು ಆಡಿಯೋ ರೆಕಾರ್ಡಿಂಗ್ ಆಕ್ಸೆಸ್ ಸಹ ಸಾಧ್ಯ ಎಂದು 'ಚೆಕ್ ಪಾಯಿಂಟ್' ತನ್ನ ಬ್ಲಾಗ್ ಪೋಸ್ಟ್‌ನಲ್ಲಿ ಹೇಳಿದೆ.
ಕ್ವಾಲ್ಕಂ ಪ್ರೊಸೆಸರ್ ಚಾಲಿತ ಡಿವೈಸ್‌ಗಳಲ್ಲಿ ಕ್ವಾಡ್‌ರೂಟರ್ ನ್ಯೂನತೆ ಜೊತೆಗೆ ಇತರೆ ನಾಲ್ಕು ದೋಷಗಳಿದ್ದು, ಹ್ಯಾಕರ್‌ಗಳು ಈ ದೋಷವನ್ನು ಉಪಯೋಗಿಸಿಕೊಂಡು ದೋಷಪೂರಿತ ಆಪ್‌ಗಳನ್ನು ಸ್ಮಾರ್ಟ್‌ಫೋನ್‌ಗಳಿಗೆ ಇನ್‌ಸ್ಟಾಲ್ ಮಾಡಬಹುದಾಗಿದೆ. ಆಪ್‌ಗಳನ್ನು ಇನ್‌ಸ್ಟಾಲ್ ಮಾಡಲು ಸ್ಮಾರ್ಟ್‌ಫೋನ್ ಬಳಕೆದಾರರಿಂದ ಯಾವುದೇ ಅನುಮತಿ ಬೇಕಿಲ್ಲ, ದೋಷಗಳನ್ನು ಸದುಪಯೋಗಪಡಿಸಿಕೊಂಡೇ ಹ್ಯಾಕರ್‌ಗಳು ಡಿವೈಸ್ ಬಳಕೆದಾರರಿಗೆ ತಿಳಿಯದಂತೆ ಆಪ್ ಅನ್ನು ಇನ್‌ಸ್ಟಾಲ್ ಮಾಡಬಹುದು ಎಂದು ಬ್ಲಾಗ್ ಪೋಸ್ಟ್‌ನಲ್ಲಿ ಹೇಳಲಾಗಿದೆ.

ಕ್ವಾಡ್‌ರೂಟರ್ ನ್ಯೂನತೆ ಸ್ಮಾರ್ಟ್‌ಫೋನ್‌ನಲ್ಲಿ ಹ್ಯಾಕರ್‌ಗಳು ವಿವಿಧ ಚಿಪ್‌ಸೆಟ್ ನಡುವಿನ ಸಂವಹನವನ್ನು ನಿಯಂತ್ರಿಸಬಹುದು. ಅಂದಹಾಗೆ ಕ್ವಾಲ್ಕಂ ಪ್ರೊಸೆಸರ್‌ನಲ್ಲಿ ಈ ದೋಷಗಳು ತಯಾರಕರ ಹಂತದಲ್ಲೇ ಇನ್‌ಸ್ಟಾಲ್ ಆಗಿವೆ. ಈ ಸಮಸ್ಯೆಯು ಸಾಫ್ಟ್‌ವೇರ್‌ಗೆ ಸಂಬಂಧಿಸಿದ್ದರೆ ತಯಾರಕರು ಸರಿಪಡಿಸಬಹುದು ಎನ್ನಲಾಗಿದೆ.
ಸ್ಮಾರ್ಟ್‌ಫೋನ್ ಬಳಕೆದಾರರು ಯಾವ ಯಾವ ಸ್ಮಾರ್ಟ್‌ಫೋನ್‌ಗಳು ಕ್ವಾಡ್‌ರೂಟರ್ ದೋಷಪೂರಿತವಾಗಿವೆ ಎಂಬುದಕ್ಕೆ ಮಾಹಿತಿಯನ್ನು ನೀಡಲಾಗಿದ್ದು, ' ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್7, ಗ್ಯಾಲಕ್ಸಿ ಎಸ್7 ಎಡ್ಜ್, ಒನ್‌ಪ್ಲಸ್ 3, ಗೂಗಲ್ ನೆಕ್ಸಸ್ 5ಎಕ್ಸ್, ನೆಕ್ಸಸ್ 6, ಎಲ್‌ಜಿ ಜಿ4, ಎಲ್‌ಜಿ ಜಿ5, ಎಲ್‌ಜಿ ವಿ10, ಒನ್‌ಪ್ಲಸ್ ಒನ್, ಒನ್‌ಪ್ಲಸ್ ಒನ್, ಒನ್‌ಪ್ಲಸ್ 2, ಒನ್‌ಪ್ಲಸ್ 3.

ಹಲವು ದಶಲಕ್ಷ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳು ಕ್ವಾಲ್ಕಂ ಪ್ರೊಸೆಸರ್ ಚಾಲಿತವಾಗಿದ್ದು, ಈ ಡಿವೈಸ್‌ಗಳನ್ನು ಹ್ಯಾಕರ್‌ಗಳು ಬಳಸಿಕೊಂಡು ಮಾಹಿತಿಯನ್ನು ಆಕ್ಸೆಸ್ ಮಾಡಬಹುದು ಎಂಬುದನ್ನು ಈ ವರ್ಷದ 'ಮೇ' ತಿಂಗಳಿನಲ್ಲಿ 'ಚೆಕ್ ಪಾಯಿಂಟ್ ಸಾಫ್ಟ್‌ವೇರ್ ಟೆಕ್ನಾಲಜೀಸ್' ಪತ್ತೆಹಚ್ಚಿದೆ.
5 ಅಡಿ ಎತ್ತರದಿಂದ ಬಿದ್ದರೂ ಫೋನ್ ಸುರಕ್ಷೆ ಗೊಳಿಸುವ 'ಗೊರಿಲ್ಲಾ ಗ್ಲಾಸ್ 5'


Click it and Unblock the Notifications








