5 ಅಡಿ ಎತ್ತರದಿಂದ ಬಿದ್ದರೂ ಫೋನ್‌ ಸುರಕ್ಷೆ ಗೊಳಿಸುವ 'ಗೊರಿಲ್ಲಾ ಗ್ಲಾಸ್‌ 5'

Written By:

ಅಮೆರಿಕದ ಗಾಜಿನ ತಯಾರಕ ಕಂಪನಿ 'ಕಾರ್ನಿಂಗ್' ಪ್ರಸ್ತುತದಲ್ಲಿ 'ಗೊರಿಲ್ಲಾ ಗ್ಲಾಸ್‌ 5' ಅನ್ನು ತಯಾರಿಸುತ್ತಿದ್ದು, ಈ ಗಾಜನ್ನು ಹೊಂದುವ ಸ್ಮಾರ್ಟ್‌ಫೋನ್‌ಗಳು 5 ಅಡಿ ಮೇಲಿಂದ ಕೆಳಗೆ ಬಿದ್ದರೂ (1.6 ಮೀಟರ್‌) ಸಹ ಸುರಕ್ಷಿತವಾಗಿರುತ್ತವೆ ಎಂದು ಹೇಳಿದೆ.

'ಗೊರಿಲ್ಲಾ ಗ್ಲಾಸ್‌ 5' ಕಾರ್ನಿಂಗ್‌ ಗಾಜಿನ ಹೊಸ ಮಾದರಿಯ ಸುರಕ್ಷತೆ ಡಿಸ್‌ಪ್ಲೇ ಗಾಜು ಆಗಿದ್ದು, ರಾಸಾಯನಿಕ ವಸ್ತುವಿನ ಹೊದಿಕೆ ಹೊಂದಿದೆ. ಈ ಗಾಜಿನ ವಿಶೇಷತೆ ಏನು ಎಂಬುದನ್ನು ಲೇಖನದ ಸ್ಲೈಡರ್‌ನಲ್ಲಿ ಓದಿರಿ.

ವಿವಿಧ ಹೇರ್‌ ಸ್ಟೈಲ್‌ನಲ್ಲಿ ಹೇಗೆ ಕಾಣುತ್ತೀರಿ ತಿಳಿಸುವ 'ಇಮೇಜ್‌ ಸಾಫ್ಟ್‌ವೇರ್‌'

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸ್ಮಾರ್ಟ್‌ಫೋನ್‌ ಕೆಳಗೆ ಬಿದ್ದರೂ ಸುರಕ್ಷಿತ

ಸ್ಮಾರ್ಟ್‌ಫೋನ್‌ ಕೆಳಗೆ ಬಿದ್ದರೂ ಸುರಕ್ಷಿತ

ಈ ಹಿಂದೆ 2014 ರಲ್ಲಿ ಬಿಡುಗಡೆ ಮಾಡಿದ್ದ 'ಗೊರಿಲ್ಲಾ ಗ್ಲಾಸ್‌ 4' ಒಂದು ಮೀಟರ್‌ ಮೇಲಿಂದ ಕೆಳಗೆ ಬಿದ್ದರು ಸಹ ಉತ್ತಮ ಸುರಕ್ಷತೆಯನ್ನು ಸ್ಮಾರ್ಟ್‌ಫೋನ್‌ಗಳು ಹೊಂದುತ್ತಿದ್ದವು. ಆದರೆ ಪ್ರಸ್ತುತದಲ್ಲಿ ಅಭಿವೃದ್ದಿಪಡಿಸುತ್ತಿರುವ 'ಗೊರಿಲ್ಲಾ ಗ್ಲಾಸ್‌ 5' 1.6 ಮೀಟರ್‌ ಮೇಲಿಂದ ಕೆಳಗೆ ಬಿದ್ದರು ಸಹ ಸ್ಮಾರ್ಟ್‌ಫೋನ್‌ಗಳಿಗೆ ಹೆಚ್ಚಿನ ಸುರಕ್ಷತೆ ಸಿಗಲಿದೆ.

ಫೋನ್‌ ಸ್ಕ್ರೀನ್‌

ಫೋನ್‌ ಸ್ಕ್ರೀನ್‌

ಎಲ್ಲಾ ರೀತಿಯ ಡಿವೈಸ್‌ಗಳು ಸೇರಿದಂತೆ 4.5 ದಶಲಕ್ಷ ಡಿವೈಸ್‌ಗಳಿಗೆ ಕಾರ್ನಿಂಗ್‌ 'ಗೊರಿಲ್ಲಾ ಗ್ಲಾಸ್‌ 5' ಸ್ಕ್ರೀನ್‌ ಸುರಕ್ಷತೆ ನೀಡಲಿದೆಯಂತೆ.

 ಕಾರ್ನಿಂಗ್‌ ಇಂಜಿನಿಯರ್‌ಗಳಿಂದ ಪರಿಶೀಲನೆ

ಕಾರ್ನಿಂಗ್‌ ಇಂಜಿನಿಯರ್‌ಗಳಿಂದ ಪರಿಶೀಲನೆ

ಕಾರ್ನಿಂಗ್ ಇಂಜಿನಿಯರ್‌ಗಳು ಲ್ಯಾಬ್‌ನಲ್ಲಿ 'ಗೊರಿಲ್ಲಾ ಗ್ಲಾಸ್ 5' ಅನ್ನು ಪರಿಶೀಲನೆ ನಡೆಸಿದ್ದು, ನಡೆಯುವಾಗ 20 ಬಾರಿ ಕೆಳಗೆ ಬಿದ್ದರು ಸಹ ಸುರಕ್ಷತೆ ನೀಡಿದೆ. ಆದರೆ ಇತರೆ ಡಿವೈಸ್‌ಗಳು ಒಂದು ಬಾರಿ ಕೆಳಗೆ ಬಿದ್ದಗಲೇ ಸ್ಕ್ರೀನ್‌ ಸಮಸ್ಯೆ ಹೊಂದಿದೆ ಎನ್ನಲಾಗಿದೆ.

ಸ್ಮಾರ್ಟ್‌ಫೋನ್‌ ಕೆಳಗೆ ಬೀಳಿಸುವವರು ಶೇ.85

ಸ್ಮಾರ್ಟ್‌ಫೋನ್‌ ಕೆಳಗೆ ಬೀಳಿಸುವವರು ಶೇ.85

ಶೇಕಡ 85 ರಷ್ಟು ಜನರು ವರ್ಷಕ್ಕೆ ಒಂದು ಬಾರಿಯಾದರೂ ಸ್ಮಾರ್ಟ್‌ಫೋನ್‌ ಅನ್ನು ಕೆಳಗೆ ಬೀಳಿಸುತ್ತಾರೆ. ಅವರಲ್ಲಿ ಶೇಕಡ 66 ರಷ್ಟು ಜನರು ಭುಜ ಮತ್ತು ಸೊಂಟ ನಡುವಿನಿಂದ ಬೀಳಿಸುತ್ತಾರೆ ಎಂದು ಕಂಪನಿ ಹೇಳಿದ್ದು, ಆದರೆ ಇಂತಹ ಸನ್ನಿವೇಶಗಳಲ್ಲಿ 'ಗೊರಿಲ್ಲಾ ಗ್ಲಾಸ್‌ 5' ಡಬಲ್‌ ಸುರಕ್ಷತೆ ನೀಡುತ್ತದೆ ಎಂದು ಹೇಳಿದ್ದಾರೆ.

rn

ಗೊರಿಲ್ಲಾ ಗ್ಲಾಸ್ 5

'ಗೊರಿಲ್ಲಾ ಗ್ಲಾಸ್ 5', 'ಗೊರಿಲ್ಲಾ ಗ್ಲಾಸ್ ೪' ಗೆ ಸುರಕ್ಷತೆಗೆ ಹೋಲಿಸಿದರೆ ಎರಡು ಪಟ್ಟು ಸುರಕ್ಷತೆಯನ್ನು ಹೊಂದುವಂತೆ ಅಭಿವೃದ್ದಿಪಡಿಸಿದ್ದು, ಗೊರಿಲ್ಲಾ ಗ್ಲಾಸ್ 4 ಗಿಂತ 1.8 ಪಟ್ಟಿನ ಅಭಿವೃದ್ದಿ ಹೊಂದಿದೆ. ಗೊರಿಲ್ಲಾ ಗ್ಲಾಸ್ 5 ಡಿವೈಸ್‌ಗಳನ್ನು ಬಿಡುಗಡೆ ಮಾಡುವ ದಿನಾಂಕವು ಇನ್ನೂ ಸಹ ನಿರ್ಧಿಷ್ಟವಾಗಿಲ್ಲ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
New Gorilla Glass 5 Will Survive Smartphone Drops Of More Than 5 Feet. Read more about this in kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot