Home
ಸುದ್ದಿಜಾಲ

ಅಮೆಜಾನ್‌ಗೆ ಮಕ್ಮಲ್‌ ಟೋಪಿ ಹಾಕಿದ 22 ರ ಯುವಕ, ಬರೋಬ್ಬರಿ 20 ಲಕ್ಷ ನಾಮ!

ಆನ್‌ಲೈನ್‌ ವಂಚನೆ (Online fraud) ಬಗ್ಗೆ ನಾವು ನಿತ್ಯವೂ ಒಂದಲ್ಲಾ ಒಂದು ವರದಿ ನೋಡುತ್ತಲೇ ಇರುತ್ತೇವೆ. ಆದರೆ, ಈ ವಂಚನೆ ಮಾತ್ರ ವಿಭಿನ್ನ ಯಾಕೆಂದರೆ ಪ್ರಮುಖ ಇ-ಕಾಮರ್ಸ್‌ ಸೈಟ್‌ ಆಗಿರುವ ಅಮೆಜಾನ್‌ಗೆ (Amazon) 22 ವಯಸ್ಸಿನ ಯುವಕ ಬರೋಬ್ಬರಿ 20 ಲಕ್ಷ ವಂಚಿಸಿದ್ದಾನೆ. ಈ ವಿಷಯ ಕೆಲವು ದಿನಗಳಿಂದ ಮುನ್ನೆಲೆಗೆ ಬಂದಿದ್ದು, ಈಗ ಈ ಮೋಸ ಹೇಗೆ ಮಾಡಲಾಗಿದೆ ಎಂಬ ವಿವರ ತಿಳಿದುಬಂದಿದೆ.

ಹೌದು, ಅಮೆಜಾನ್‌ ಅಂದಾಕ್ಷಣ ನಮಗೆಲ್ಲರಿಗೂ ನೆನಪಾಗುವುದು ಡಿಸ್ಕೌಂಟ್‌ ಬೆಲೆಯಲ್ಲಿ ಸ್ಮಾರ್ಟ್‌ ಗ್ಯಾಜೆಟ್‌ಗಳನ್ನು ಖರೀದಿ ಮಾಡಬಹುದು ಎಂದು. ಬರೀ ಗ್ಯಾಜೆಟ್‌ ಅಲ್ಲದೆ ಎಲ್ಲಾ ರೀತಿಯ ವಸ್ತುಗಳನ್ನು ಅಗ್ಗದ ಬೆಲೆಗೆ ಖರೀದಿ ಮಾಡಬಹುದು. ಆದರೆ, ಈ ರೀತಿಯ ಆಫರ್‌ ನೀಡುವ ಇ-ಕಾಮರ್ಸ್‌ ಸೈಟ್‌ಗಳೇ ಬೆಚ್ಚಿ ಬೀಳುವಂತೆ ಮಾಡಿದ್ದಾನೆ ಈ ಯುವಕ. ಅಷ್ಟಕ್ಕೂ ಈ ಯುವಕ ಅಮೆಜಾನ್‌ಗೆ ವಂಚಿಸಿದ್ದು ಹೇಗೆ? ಎಂಬ ಸವಿವರ ಇಲ್ಲಿದೆ ನೋಡಿ.

ಅಮೆಜಾನ್‌ಗೆ ಮಕ್ಮಲ್‌ ಟೋಪಿ ಹಾಕಿದ 22 ರ ಯುವಕ, ಬರೋಬ್ಬರಿ 20 ಲಕ್ಷ ನಾಮ!

ಫೋನ್‌ ಖರೀದಿ ಮೂಲಕ ವಂಚನೆ : ಮೊದಲೇ ತಿಳಿಸಿದಂತೆ ಪ್ರತಿದಿನವೂ ಹೊಸ ಹೊಸ ಹಗರಣಗಳು ಬೆಳಕಿಗೆ ಬರುತ್ತಲೇ ಇವೆ. ಜನರು ಲಕ್ಷಗಟ್ಟಲೆ ಹಣವನ್ನು ಈ ಮೂಲಕ ಕಳೆದುಕೊಳ್ಳುತ್ತಲೇ ಇದ್ದಾರೆ. ಆದರೆ, 22 ವರ್ಷದ ಹುಡುಗ ಇತರ ಶಂಕಿತರೊಂದಿಗೆ ಸೇರಿಕೊಂಡು ಅಮೆಜಾನ್‌ಗೆ ದುಬಾರಿ ಐಫೋನ್‌ಗಳನ್ನು ಹಿಂತಿರುಗಿಸಲಾಗಿದೆ ಎಂದು ಉಲ್ಲೇಖಿಸಿ 20 ಲಕ್ಷ ರೂಪಾಯಿಗಳನ್ನು ವಂಚಿಸಿದ್ದಾನೆ.

ಏನಿದು ಘಟನೆ?: ಬೆಂಗಳೂರು ಪೊಲೀಸರು ಈ ಸಂಬಂಧ ಪ್ರಕರಣ ಭೇದಿಸಿದ್ದಾರೆ. ಇದಕ್ಕೆ ಅಮೆಜಾನ್‌ನ ಸ್ಥಳೀಯ ಪ್ರತಿನಿಧಿಗಳ ಸಹಯೋಗ ನೀಡಿದ್ದಾರೆ. ಉತ್ತರ ಬೆಂಗಳೂರಿನಲ್ಲಿ ನೆಲೆಸಿರುವ ಎಂಜಿನಿಯರಿಂಗ್ ವಿದ್ಯಾರ್ಥಿ ಚಿರಾಗ್ ಗುಪ್ತಾ ಎಂಬ ಗ್ರಾಹಕ ಈ ವರ್ಷದ ಮೇ 15 ಮತ್ತು 17 ರ ನಡುವೆ ನಾಲ್ಕು ಆಪಲ್ ಐಫೋನ್‌ಗಳನ್ನು ಖರೀದಿ ಮಾಡಿದ್ದಾನೆ. ಇದನ್ನು ಅಮೆಜಾನ್‌ ಗುಪ್ತಾ ಅವರ ವಿಳಾಸಕ್ಕೆ ಕಳುಹಿಸಿಕೊಡಲಾಗಿದೆ.

ಆದರೆ ಈ ಫೋನ್‌ಗಳನ್ನು ಪಡೆದ ನಂತರ ಆನ್‌ಲೈನ್ ಆಪ್‌ ಮೂಲಕ ಹಿಂತಿರುಗಿಸಿದ್ದಾನೆ. ವಿಷಯ ಇರುವುದೇ ಇಲ್ಲಿ. ಆಪ್‌ನಲ್ಲಿ ಹಿಂದಿರುಗಿಸಲಾಗಿದೆ ಎಂದು ಉಲ್ಲೇಖಿಸಿದರೂ ಸಹ ಆ ಫೋನ್‌ಗಳು ಎಂದಿಗೂ ಅಮೆಜಾನ್ ಸಾರಿಗೆ ಸೇವೆಗಳ ಘಟಕಕ್ಕೆ ತಲುಪಿರಲಿಲ್ಲ. ಅಮೆಜಾನ್‌ನ ಝೋನಲ್ ಮ್ಯಾನೇಜರ್ ಎಚ್.ಡಿ.ಪರಮೇಶ್ ಅವರು ಅದೇ ವಿಳಾಸದಿಂದ ಖರೀದಿ ಮತ್ತು ವಾಪಸಾತಿಗಳನ್ನು ಪರಿಶೀಲನೆ ನಡೆಸಿದಾಗ ಅನುಮಾನ ವ್ಯಕ್ತವಾಗಿದೆ.

ಅಂದರೆ ಖರೀದಿ ಮಾಡಲಾದ ಎಲ್ಲಾ ಫೋನ್‌ಗಳನ್ನು ಆತನೇ ಇರಿಸಿಕೊಂಡಿದ್ದರೂ ಸಹ ಅಮೆಜಾನ್‌ನಲ್ಲಿ ವಾಪಸ್‌ ಮಾಡಲಾಗಿದೆ ಎಂಬ ಮಾಹಿತಿ ಇದ್ದುದ್ದರಿಂದ ಸಿಬ್ಬಂದಿ ಎಲ್ಲರೂ ಗೊಂದಲಕ್ಕೆ ಒಳಗಾಗಿದ್ದಾರೆ. ಈ ಕಾರಣಕ್ಕೆ ಈ ಘಟನೆ ಪೊಲೀಸ್‌ ಮೆಟ್ಟಿಲೇರಿದ್ದು, ಈಗ ಎಲ್ಲಾ ಬಟಾಬಯಲಾಗಿದೆ. ಅಂದರೆ, ಟೆಲಿಗ್ರಾಂ ಮೂಲಕ ಗುಪ್ತಾ ಅವರೊಂದಿಗೆ ಯೋಜನೆ ರೂಪಿಸಿದ ಶಂಕಿತರೊಬ್ಬರು ಅಮೆಜಾನ್‌ಗೆ ಈ ಮೋಸ ಮಾಡಿದ್ದಾರೆ.

ಗ್ಯಾಜೆಟ್‌ಗಳನ್ನು ಶಂಕಿತರೊಬ್ಬರು ಖರೀದಿಸಲು ಈತನಿಗೆ ಕಮಿಷನ್‌ ನೀಡಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ. ಮೋಸದಿಂದ ಪಡೆದ ಡಿವೈಸ್‌ಗಳನ್ನು ಲಾಭಕ್ಕಾಗಿ ಮಾರಾಟ ಮಾಡಲಾಗಿದೆಯಂತೆ. ಅಷ್ಟು ಮಾತ್ರವಲ್ಲದೆ ಪಾವತಿಗಳನ್ನು ಕ್ರಿಪ್ಟೋಕರೆನ್ಸಿಯಲ್ಲಿ ಸ್ವೀಕರಿಸಲಾಗಿದೆ. ಇಷ್ಟೆಲ್ಲಾ ಹಗರಣಕ್ಕೆ ಪ್ರಮುಖ ಕಾರಣ ಆ ಶಂಕಿತ ಬೇರೆ ಯಾರೂ ಅಲ್ಲ ಮಾಜಿ ಅಮೆಜಾನ್ ಉದ್ಯೋಗಿ.

ಈ ಮಾಜಿ ಅಮೆಜಾನ್ ಉದ್ಯೋಗಿ ಪ್ರೊಡಕ್ಟ್‌ಗಳ ರಿಟರ್ನ್ ಡೇಟಾದ ಬಗ್ಗೆ ಎಲ್ಲಾ ಮಾಹಿತಿ ತಿಳಿದಿದ್ದು, ಇದನ್ನು ಅನುಮತಿಸುವ ಪ್ರವೇಶ ಕೋಡ್‌ಗಳನ್ನು ಹೊಂದಿದ್ದ ಎನ್ನಲಾಗಿದೆ. ಇದರಿಂದಾಗಿಯೇ ಆಪ್‌ನಲ್ಲಿ ಹಿಂದಿರುಗಿಸಲಾಗಿದೆ ಎಂಬ ಮಾಹಿತಿ ಸಿಬ್ಬಂದಿಗಳಿಗೆ ಕಂಡುಬಂದಿದೆ. ಈ ತನಿಖೆಯ ಪರಿಣಾಮವಾಗಿ 16 ಐಫೋನ್‌ಗಳು, ಎರಡು ಮ್ಯಾಕ್‌ಬುಕ್‌ಗಳು ಹಾಗೂ ಇತರೆ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ಅಮೆಜಾನ್‌ಗೆ ಮಕ್ಮಲ್‌ ಟೋಪಿ ಹಾಕಿದ 22 ರ ಯುವಕ, ಬರೋಬ್ಬರಿ 20 ಲಕ್ಷ ನಾಮ!

ಈ ಎಲ್ಲಾ ವಸ್ತುಗಳ ಮೌಲ್ಯ 20.34 ಲಕ್ಷ ರೂಪಾಯಿ ಆಗಿದೆ. ಹೆಚ್ಚುವರಿಯಾಗಿ, 2.5 ಲಕ್ಷ ರೂಪಾಯಿ ನಗದು ಮತ್ತು ಪ್ರಮುಖ ಶಂಕಿತನಿಗೆ ಲಿಂಕ್ ಮಾಡಲಾದ ಬಹು ಬ್ಯಾಂಕ್ ಖಾತೆಗಳಿಂದ 30 ಲಕ್ಷ ರೂಪಾಯಿಗಳನ್ನು ಫ್ರೀಜ್ ಮಾಡಲಾಗಿದ್ದು, ಈ ಪ್ರಕರಣವು ಸಕ್ರಿಯ ತನಿಖೆಯಲ್ಲಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ತನ್ನ ವರದಿಯಲ್ಲಿ ಉಲ್ಲೇಖ ಮಾಡಿದೆ.

Best Mobiles in India

English summary
22 year old boy, along with other suspects, defrauded Amazon of Rs 20 lakh by citing expensive iPhones as returns.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+