ಫೋನ್ ಮಾರಲು ಹೋಗಿ 95,000ರೂ. ಕಳೆದುಕೊಂಡ ಬೆಂಗಳೂರಿನ ಮಹಿಳೆ!
ಇತ್ತೀಚಿಗೆ ಆನ್‌ಲೈನ್‌ನಲ್ಲಿಯೇ ಬಹುತೇಕ ಸೇವೆಗಳು, ಕೆಲಸಗಳು ನಡೆಯುತ್ತಿರುವುದು ಒಂದೆಡೆ ಖುಷಿ ತಂದರೇ, ಹಾಗೆಯೇ ಆನ್‌ಲೈನ್‌ನಲ್ಲಿ ವಂಚನೆಯ ಪ್ರಕರಣಗಳು ಅಧಿಕವಾಗುತ್ತಿರುವುದು ವಿಪರ್ಯಾಸ. ಇದೀಗ ಅಂಥಹದೊಂದು ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಮಹಿಳೆಯೊಬ್ಬರು ಸ್ಮಾರ್ಟ್‌ಫೋನ್ ಮಾರಲು ಹೋಗಿ 'ಸ್ವಿಗ್ಗಿ ಗೋ' ಹೆಲ್ಪ್‌ಲೈನ್‌ನಲ್ಲಿ ಬರೊಬ್ಬರಿ 95 ಸಾವಿರ ಕಳೆದುಕೊಂಡಿದ್ದಾರೆ.

ಹೌದು, ಬೆಂಗಳೂರಿನ ಇಂದ್ರಾನಗರದ ನಿವಾಸಿ 47ವರ್ಷದ ಅಪರ್ಣಾ ಟಕ್ಕರ್ ಸೂರಿ ಎಂಬವರೇ 95,000ರೂ ವಂಚನೆಗೆ ಒಳಗಾದ ಮಹಿಳೆಯಾಗಿದ್ದು, ಇವರು ಓಎಲ್‌ಎಕ್ಸ್‌ನಲ್ಲಿ ತಮ್ಮ ಸ್ಮಾರ್ಟ್‌ಫೋನ್ ಮಾರಾಟ ಮಾಡಲು ಆಡ್ ಫೋಸ್ಟ್ ಮಾಡಿದ್ದಾರೆ. ಅದನ್ನು ಮಹಮ್ಮದ್ ಬಿಲಾಲ್ ಎಂಬವರು ಖರೀದಿಸುವುದಾಗಿ ತಿಳಿಸಿದ್ದು, ಆ ವ್ಯಕ್ತಿಗೆ ಸ್ಮಾರ್ಟ್‌ಫೋನ್ ಅನ್ನು 'ಸ್ವಿಗ್ಗಿ ಗೋ' ಪಾರ್ಸಲ್ ಸೇವೆಯ ಮೂಲಕ ಕಳುಹಿಸಲು ಹೋಗಿ ಹಣ ಕಳೆದುಕೊಂಡಿದ್ದಾರೆ.

ಅಪರ್ಣಾ ಅವರು ಫೋನ್ ಕಳುಹಿಸಲು ಸ್ವಿಗ್ಗಿ ಗೋ ಡೆಲಿವರಿ ಸೇವೆಯಲ್ಲಿ ಆರ್ಡರ್ ಪ್ಲೇಸ್ ಮಾಡಿದ್ದಾರೆ. ಆದರೆ ಫೋನ್ ಮಹಮ್ಮದ್ ಅವರಿಗೆ ತಲುಪಿಲ್ಲ. ಆಗ ಸ್ವಿಗ್ಗಿ ಡೆಲಿವರಿ ಬಾಯ್‌ಗೆ ಕರೆ ಮಾಡಿ ವಿಚಾರಿಸಿದಾಗ ಸರಿಯಾಗಿ ಆರ್ಡರ್ ಪ್ಲೇಸ್ ಮಾಡಿಲ್ಲದ ಕಾರಣ ಆರ್ಡರ್ ಕ್ಯಾನ್ಸ್‌ಲ್ ಆಗಿದ ಎಂದಿದ್ದಾರೆ. ಆಗ ಮತ್ತೆ ಸಿಮ್ ಬದಲಿಸಿ ಸ್ವಿಗ್ಗಿ ಗೊ ಸೇವೆಯಲ್ಲಿ ಆರ್ಡರ್ ಪ್ಲೇಸ್ ಮಾಡಲು ಯತ್ನಿಸಿದ್ದು, ಆದರೆ ಆರ್ಡರ್ ಆಗಿಲ್ಲ.

ಆಗ ಗೂಗಲ್‌ನಲ್ಲಿ ಸ್ವಿಗ್ಗಿ ಗೋ ಹೆಲ್ಪ್‌ಲೈನ್ ಹುಡುಕಿದ್ದು, ನಕಲಿ ಹೆಲ್ಪ್‌ಲೈನ್‌ಗೆ ಕರೆ ಮಾಡಿದ್ದಾರೆ. ಆ ಹೆಲ್ಪ್‌ಲೈನ್‌ನಲ್ಲಿ ಮಾತನಾಡಿದ ಸಿಬ್ಬಂದಿಯು ಲಿಂಕೊಂದನ್ನು ಕಳುಹಿಸುತ್ತೆವೆ ಆ ಲಿಂಕ್ ಬಳಿಸಿ 3ರೂ. ಟ್ರಾನ್ಸ್‌ಫರ್ ಮಾಡಿರಿ ಆರ್ಡರ್ ಪ್ಲೇಸ್ ಮಾಡುತ್ತೆವೆ ಎಂದಿದ್ದಾರೆ. ಅವರು ಹೇಳಿದಂತೆ ಈ ಮಹಿಳೆಯು ಆ ಲಿಂಕ್‌ನಲ್ಲಿ ಕೇಳಿದ ಮಾಹಿತಿಯಂತೆ ಬ್ಯಾಂಕ್ ಡಿಟೈಲ್ಸ್, UPI PIN ನೀಡಿ ಸಬ್ಮಿಟ್ ಮಾಡಿದ್ದಾರೆ. ಆದಾದ ಒಂದು ಕ್ಷಣದಲ್ಲಿ ಖಾತೆಯಿಂದ 95,000ರೂ ಡೆಬಿಟ್ ಆಗಿರುವ ಮೆಸೆಜ್ ಬಂದಿದೆ.

ನಕಲಿ ಸ್ವಿಗ್ಗಿ ಹೆಲ್ಪ್‌ಲೈನ್‌ನಲ್ಲಿ ಮೋಸಹೋಗಿರುವುದು ಗೊತ್ತಾಗುತ್ತಿದ್ದಂತೆ ಅಪರ್ಣಾ ಅವರು ಭಾನುವಾರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆನ್‌ಲೈನ್ ವಂಚನೆಯ ಎಷ್ಟೊಂದು ಘಟನೆಗಳು ಬೆಳಕಿಗೆ ಬಂದರೂ ಮತ್ತು ಆನ್‌ಲೈನ್ ವಂಚನೆಯ ಬಗ್ಗೆ ಜಾಗೃತಿ ಮೂಡಿಸುವ ಕೆಲಸಗಳು ನಡೆಯುತ್ತಿದ್ದರೂ ಸಹ ಮೋಸದ ಪ್ರಕರಣಗಳು ಮಾತ್ರ ಕಡಿಮೆಯಾಗಿಲ್ಲ.


Click it and Unblock the Notifications