Home
ಸುದ್ದಿಜಾಲ

ಫೋನ್ ಕಿತ್ತುಕೊಂಡ ತಂದೆ, ಆತ್ಮಹತ್ಯೆ ಮಾಡಿಕೊಂಡ 16 ವರ್ಷದ ಮಗ! ಮೊಬೈಲ್‌ ಗೀಳು ಕಡಿಮೆ ಮಾಡೋದೇಗೆ?

ಸ್ಮಾರ್ಟ್‌ಫೋನ್‌ಗಳು (Smartphone) ಇಂದು ಎಷ್ಟು ಅಗತ್ಯವೋ ಅಷ್ಟೇ ಪ್ರಮಾಣದಲ್ಲಿ ಮಾರಕವೂ ಹೌದು. ಸ್ಮಾರ್ಟ್‌ಫೋನ್‌ಗಳಿಂದ ಬರುವ ವಿಕಿರಣಗಳ ಸಮಸ್ಯೆ ಒಂದು ಕಡೆಯಾದರೆ ಸ್ಮಾರ್ಟ್‌ಫೋನ್‌ಗಳ ಮೇಲಿನ ಗೀಳು ಮತ್ತೊಂದು ಸಮಸ್ಯೆ ಆಗಿದೆ. ಅದರಲ್ಲೂ ಮಕ್ಕಳು ಫೋನ್‌ಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ವ್ಯಸನಿಯಾಗಿಬಿಟ್ಟಿದ್ದಾರೆ (Addicted). ಫೋನ್‌ ಇಲ್ಲದೆ ಯಾವ ಕೆಲಸವನ್ನೂ ಮಾಡಲಾರೆ ಎನ್ನುವ ಹಂತಕ್ಕೆ ಬಂದು ನಿಂತಿದ್ದಾರೆ.

ಹೌದು, ಸ್ಮಾರ್ಟ್‌ಫೋನ್ ಅನ್ನು ಕೆಲವು ಮಕ್ಕಳು ಸಾಮಾನ್ಯವಾಗಿ ತಂದೆ ತಾಯಿ ಮೇಲ್ವಿಚಾರಣೆಯಲ್ಲಿ ಬಳಕೆ ಮಾಡುತ್ತವೆ. ಇನ್ನೂ ಕೆಲವು ಮಕ್ಕಳು ಸನಿಹದಲ್ಲಿ ಯಾರೇ ಇದ್ದರು ಸಹ ಏನನ್ನೂ ಗಮನಕ್ಕೆ ತೆಗೆದುಕೊಳ್ಳದೆ ಫೋನ್‌ನಲ್ಲಿ ಮುಳುಗಿರುತ್ತವೆ. ಅಂತಹ ಮಕ್ಕಳು ಮುಂದಿನ ದಿನಗಳಲ್ಲಿ ವಿವಿಧ ರೀತಿಯಲ್ಲಿ ಸಮಸ್ಯೆ ಎದುರಿಸುವುದಂತೂ ಪಕ್ಕಾ. ಈ ಎಲ್ಲಾ ಪೀಠಿಕೆ ಯಾಕೆ ಎಂದರೆ ಇಲ್ಲೊಂದು ಘಟನೆಯಲ್ಲಿ ತಂದೆಯೋರ್ವ ಮಗನ ಬಳಿ ಇದ್ದ ಫೋನ್‌ ತೆಗೆದುಕೊಂಡಿದ್ದಕ್ಕೆ ಆತ್ಮಹತ್ಯೆಯನ್ನೇ ಮಾಡಿಕೊಂಡಿದ್ದಾನೆ. ಹಾಗಿದ್ರೆ, ಈ ಘಟನೆ ಹಿನ್ನೆಲೆ ಏನು?, ಮಕ್ಕಳ ಫೋನ್‌ ಗೀಳನ್ನು ಕಡಿಮೆ ಮಾಡುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ಫೋನ್ ಕಿತ್ತುಕೊಂಡ ತಂದೆ, ಆತ್ಮಹತ್ಯೆ ಮಾಡಿಕೊಂಡ 16 ವರ್ಷದ ಮಗ!

ಫೋನ್‌ ಕಿತ್ತುಕೊಂಡಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ 16 ರ ಬಾಲಕ: ಮುಂಬೈನಲ್ಲಿ 16 ವರ್ಷದ ಹುಡುಗನೊಬ್ಬ ತನ್ನ ತಂದೆ ತನ್ನ ಸ್ಮಾರ್ಟ್‌ಫೋನ್ ಅನ್ನು ಪಡೆದ ಹಿನ್ನೆಲೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಘಟನೆಯು ಹದಿಹರೆಯದವರಲ್ಲಿ ಮೊಬೈಲ್ ವ್ಯಸನ ಸಮಸ್ಯೆ ಮತ್ತು ಈ ಸಮಸ್ಯೆಯನ್ನು ಹೇಗೆ ಪರಿಹರಿಸುವುದು ಎಂಬುದರ ಕುರಿತು ಕಳವಳವನ್ನು ಹುಟ್ಟುಹಾಕಿದೆ.

ಇನ್ನು ಫೋನ್‌ ತನ್ನ ಬಳಿ ಇದ್ರೆ ಸಾಕು ಈ ಬಾಲಕ ಯಾವಾಗಲೂ ಗೇಮಿಂಗ್‌ನಲ್ಲಿ ತಲ್ಲೀನವಾಗುತ್ತಿದ್ದನಂತೆ. ಇದರಿಂದ ಬೇಸತ್ತ ತಂದೆ ಕೋಪಕೊಂಡು ಫೋನ್‌ ಕಸಿದುಕೊಂಡಿದ್ದಾರೆ. ನಂತರ ಬಾಲಕ ಮಲ್ವಾನಿಯಲ್ಲಿ ತನ್ನ ಪ್ರಾಣವನ್ನು ತೆಗೆದುಕೊಂಡಿದ್ದಾನೆ. ಅಪ್ರಾಪ್ತ ವಯಸ್ಕನಾಗಿದ್ದರಿಂದ ಆತನ ಗುರುತನ್ನು ಗೌಪ್ಯವಾಗಿ ಇಡಲಾಗಿದೆ. ನವೆಂಬರ್ 16 ರ ರಾತ್ರಿ ಈ ಮೊಬೈಲ್‌ ಸಂಬಂಧ ಜಗಳ ನಡೆದಿದ್ದು, ಮಾರನೇ ದಿನ ಬಾಲಕ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾನೆ.

ಫೋನ್ ಕಿತ್ತುಕೊಂಡ ತಂದೆ, ಆತ್ಮಹತ್ಯೆ ಮಾಡಿಕೊಂಡ 16 ವರ್ಷದ ಮಗ!

ಅಂದರೆ ನವೆಂಬರ್‌ 17 ರಂದು ಅಡುಗೆ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಆತನ ತಂದೆ ಆ ವೇಳೆ ರಕ್ಷಿಸಲು ಮುಂದಾದರಾದರೂ ಸಹ ಆಸ್ಪತ್ರೆಗೆ ಹೋಗುವ ಮುನ್ನವೇ ಸಾವಿಗೀಡಾಗಿದ್ದಾನೆ. ಮಾಲ್ವಾನಿ ಪೊಲೀಸರು ಪ್ರಕರಣವನ್ನು ಆಕಸ್ಮಿಕ ಸಾವು ಎಂದು ದಾಖಲು ಮಾಡಿಕೊಂಡಿದ್ದು, ಹೆಚ್ಚಿನ ತನಿಖೆಗಾಗಿ ಶವಪರೀಕ್ಷೆ ನಡೆಸಲು ಮುಂದಾಗಿದ್ದಾರೆ. ಈ ರೀತಿಯ ಘಟನೆಗಳು ಅಲ್ಲಲ್ಲಿ ವ್ಯಾಪಕವಾಗಿ ನಡೆಯುತ್ತಲೇ ಇರುತ್ತವೆ. ಆದ,ರೆ ಕೆಲವು ಮಾತ್ರ ಮುನ್ನೆಲೆಗೆ ಬರುತ್ತವೆ. ಹಾಗಿದ್ರೆ ಫೋನ್ ಗೀಳನ್ನು ಹೇಗೆ ಕಡಿಮೆ ಮಾಡುವುದು ಅನ್ನೋದನ್ನು ತಿಳಿದುಕೊಳ್ಳಿ. ಈ ಮೂಲಕ ನಿಮ್ಮ ಮಕ್ಕಳು ಮುಂದಿನ ಉತ್ತಮ ಭವಿಷ್ಯಕ್ಕೆ ಒಳ್ಳೆಯ ದಾರಿ ತೋರಿಸಿ.

-ಸ್ಮಾರ್ಟ್‌ಫೋನ್‌ ಅನ್ನು ಮಕ್ಕಳಿಗೆ ನೀಡುವ ಪೋಷಕರು ಅದನ್ನು ಬಳಕೆ ಮಾಡಲು ಸಮಯವನ್ನು ನಿಗದಿ ಪಡಿಸಬೇಕಿದೆ. ಜೊತೆಗೆ ಫೋನ್ ಬಳಕೆಗೆ ಸ್ಪಷ್ಟ ಮಾರ್ಗಸೂಚಿಗಳನ್ನು ನೀಡಬೇಕಿದೆ. ಇದರೊಂದಿಗೆ ಊಟ, ಕುಟುಂಬದೊಂದಿಗೆ ಇರುವಾಗ ಮತ್ತು ಮಲಗುವ ಸಮಯದಲ್ಲಿ ಫೋನ್‌ ಅನ್ನು ಬಳಕೆ ಮಾಡಬಾರದು ಎಂದು ಸೂಚಿಸಿ. ಈ ಸೂಚನೆ ಪ್ರೀತಿಯಿಂದ ಇರಲಿ, ಪ್ರೀತಿಗೆ ಬಗ್ಗುವುದಿಲ್ಲ ಎಂದರೆ ಸ್ವಲ್ಪ ಕಟುವಾಗೇ ಹೇಳಿ ಅರ್ಥ ಮಾಡಿಸಿ.

- ಈಗಂತೂ ಗಂಡ ಒಂದು ಕಡೆ ಫೋನ್‌ ಹಿಡಿದು ಕುಳಿತರೆ ಹೆಂಡತಿ ಮತ್ತೊಂದು ಕಡೆ ಫೋನ್ ಬಳಕೆ ಮಾಡುತ್ತಾ ಕುಳಿತಿರುತ್ತಾರೆ. ಪರಿಣಾಮ ಒಬ್ಬರಿಗೊಬ್ಬರು ಸರಿಯಾಗಿ ಸಂವಹನವನ್ನೇ ನಡೆಸುವುದಿಲ್ಲ. ಇದನ್ನೆಲ್ಲಾ ಗಮನಿಸುವ ಮಕ್ಕಳು ತಾವೂ ಸಹ ಮೊಬೈಲ್‌ಗೆ ಆಕರ್ಷಿತವಾಗುತ್ತವೆ. ಆದ್ದರಿಂದ ಎಷ್ಟು ಸಾಧ್ಯವೋ ಅಷ್ಟು ಫೋನ್‌ಗಳಿಂದ ನೀವು ದೂರ ಇದ್ದು, ಮಕ್ಕಳೊಂದಿಗೆ ಆಟ ಹಾಗೂ ಇನ್ನಿತರೆ ಚಟುವಟಿಕೆಯಲ್ಲಿ ಭಾಗಿಯಾಗಿ.

- ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಸ್ಮಾರ್ಟ್‌ಫೋನ್‌ ಅಥವಾ ಸ್ಮಾರ್ಟ್‌ಟಿವಿ ಪ್ರಭಾವ ಬೀರುತ್ತದೆ. ಇದರಿಂದಾಗಿ ಎಷ್ಟು ಸಮಯ ಇವುಗಳನ್ನು ಬಳಕೆ ಮಾಡಬೇಕು. ಎಷ್ಟು ದೂರದಲ್ಲಿ ಇವುಗಳನ್ನು ವೀಕ್ಷಣೆ ಮಾಡಬೇಕು ಅನ್ನೋದನ್ನು ಪೋಷಕರು ಆಗಾಗ್ಗೆ ಮಕ್ಕಳಿಗೆ ಮಾಹಿತಿ ನೀಡುತ್ತಲೇ ಇರಬೇಕು. ಇದರೊಂದಿಗೆ ಇವುಗಳಿಂದ ಆಗುವ ನಿದ್ರಾ ಭಂಗ, ಕಣ್ಣಿನ ಆಯಾಸ ಮತ್ತು ಪರಸ್ಪರ ಸಂಬಂಧಗಳ ಮೇಲಿನ ಪ್ರಭಾವದಂತಹ ವಿಷಯಗಳನ್ನು ಚರ್ಚೆ ನಡೆಸಿ.

ಫೋನ್ ಕಿತ್ತುಕೊಂಡ ತಂದೆ, ಆತ್ಮಹತ್ಯೆ ಮಾಡಿಕೊಂಡ 16 ವರ್ಷದ ಮಗ!

- ಇತ್ತೀಚಿನ ಸ್ಮಾರ್ಟ್‌ಫೋನ್‌ಗಳಲ್ಲಿ ಸ್ಮಾರ್ಟ್‌ ಫೀಚರ್ಸ್‌ ಆಯ್ಕೆಯನ್ನೂ ಸಹ ನೀಡಲಾಗಿದೆ. ಅಂದರೆ ನಿರ್ಧಿಷ್ಟ ವಿಭಾಗಗಳಿಗೆ ಮಾತ್ರ ಮಕ್ಕಳು ಎಂಟ್ರಿ ಆಗಲು ಸಾಧ್ಯವಾಗುಂತೆ ಮಾಡಬಹುದು. ಇದನ್ನು ಮೇಲ್ವಿಚಾರಣೆ ಮಾಡಲು ಪೋಷಕರು ಸ್ಮಾರ್ಟ್‌ಫೋನ್‌ಗಳಲ್ಲಿ ಪೋಷಕರ ನಿಯಂತ್ರಣ ಫೀಚರ್ಸ್‌ ಅನ್ನು ಆಕ್ಟಿವ್‌ ಮಾಡಬೇಕಿದೆ. ಇದರಿಂದ ಮಕ್ಕಳ ಮೇಲೆ ಹದ್ದಿನ ಕಣ್ಣಿಡಬಹುದು. ಅಥವಾ ಮಕ್ಕಳು ಫೋನ್‌ ಬಗ್ಗೆ ಗೀಳು ಬೆಳೆಸಿಕೊಳ್ಳುವುದನ್ನು ತಪ್ಪಿಸಬಹುದು.

Best Mobiles in India

English summary
A father took away his son's smartphone because he was using it excessively. But the son committed suicide the next day.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+