Home
ಸುದ್ದಿಜಾಲ

ಆನ್‌ಲೈನ್‌ನಲ್ಲಿ ಗೇಮ್‌ ಆಡುವಾಗ ಎಚ್ಚರ... 58 ಕೋಟಿ ಕಳೆದುಕೊಂಡ ವ್ಯಕ್ತಿ, ಸುರಕ್ಷಿತವಾಗಿರೋದು ಹೇಗೆ?

ಆನ್‌ಲೈನ್‌ ಗೇಮ್‌(Online Gaming) ವಿರುದ್ಧ ಸರ್ಕಾರ ಹಾಗೂ ಸಂಬಂಧಪಟ್ಟವರು ಆಗಾಗ್ಗೆ ಕಟ್ಟು ನಿಟ್ಟಿನ ಕ್ರಮಗಳನ್ನು ಜಾರಿ ಮಾಡುತ್ತಲೇ ಇದ್ದಾರೆ. ಅದರಲ್ಲೂ ಸರ್ಕಾರ ಆನ್‌ಲೈನ್‌ ಗೇಮಿಂಗ್‌ ಸಂಬಂಧ ತೆರಿಗೆಯನ್ನೂ ಸಹ ಹೆಚ್ಚಿಗೆ ಮಾಡಲು ಮುಂದಾಗಿದೆ. ಇಷ್ಟೆಲ್ಲಾ ಆದರೂ ಆನ್‌ಲೈನ್‌ಗೇಮ್‌ ಗೀಳು ಮಾತ್ರ ಜನರಿಗೆ ಕಡಿಮೆ ಆಗುವುದಿಲ್ಲ. ಅದರಂತೆ ನಾಗ್ಪುರದಲ್ಲಿ 58 ಕೋಟಿ ರೂ.ಗಳ ಆನ್‌ಲೈನ್ ಗೇಮಿಂಗ್ ಹಗರಣ ಬೆಳಕಿಗೆ ಬಂದಿದೆ.

ಹೌದು, ನಾಗ್ಪುರ ಮೂಲದ ಉದ್ಯಮಿಯೊಬ್ಬರು ಆನ್‌ಲೈನ್ ಗೇಮಿಂಗ್ ಪ್ಲಾಟ್‌ಫಾರ್ಮ್ ಮೂಲಕ ತನ್ನ ಸ್ನೇಹಿತನಿಂದಲೇ ವಂಚನೆಗೊಳಗಾಗಿದ್ದಾರೆ. ಇದೇನು ಸಣ್ಣ ಮೊತ್ತದ ಹಣದ ವಂಚನೆಯಲ್ಲ, ಬದಲಾಗಿ ಬರೋಬ್ಬರಿ 58 ಕೋಟಿ. ಹಾಗಿದ್ರೆ, ಏನಿದು ಘಟನೆ?, ಆನ್‌ಲೈನ್‌ ಗೇಮಿಂಗ್‌ನಲ್ಲಿ ಹೇಗೆ ವಂಚನೆ ಮಾಡಲಾಗುತ್ತದೆ?, ಇದರಿಂದ ಎಚ್ಚರಿಕೆ ವಹಿಸುವುದು ಹೇಗೆ ಎಂಬ ಪ್ರಮುಖ ಮಾಹಿತಿಯನ್ನು ಇಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಆನ್‌ಲೈನ್‌ನಲ್ಲಿ ಗೇಮ್‌ ಆಡುವಾಗ ಎಚ್ಚರ... 58 ಕೋಟಿ ಕಳೆದುಕೊಂಡ ವ್ಯಕ್ತಿ

ಏನಿದು ಆನ್‌ಲೈನ್ ಗೇಮಿಂಗ್ ವಂಚನೆ?: ಜನರು ಹೆಚ್ಚಾಗಿ ಸ್ಮಾರ್ಟ್‌ಫೋನ್‌ಗಳನ್ನು ಬಳಕೆ ಮಾಡುತ್ತಿದ್ದಂತೆ, ಭಾರತದಲ್ಲಿ ಆನ್‌ಲೈನ್ ಗೇಮಿಂಗ್ ಪ್ರವೃತ್ತಿಯು ಹೆಚ್ಚಾಗಿದೆ. ಸ್ಮಾರ್ಟ್‌ಫೋನ್(Smartphone) ಮತ್ತು ಇಂಟರ್ನೆಟ್ (Internet) ಸಂಪರ್ಕ ಹೊಂದಿರುವ ಪ್ರತಿಯೊಬ್ಬರೂ ಹಲವಾರು ಆಟಗಳನ್ನು ಆಡಬಹುದಾಗಿದ್ದು, ಇವುಗಳಲ್ಲಿ ಕೆಲವರು ಹಣ ಗಳಿಸಿದರೆ, ಹಲವರು ಭಾರೀ ಮೊತ್ತದ ಹಣ ಕಳೆದುಕೊಳ್ಳುತ್ತಿದ್ದಾರೆ.

ಅದರಲ್ಲೂ ಈ ಆನ್‌ಲೈನ್ ಗೇಮಿಂಗ್ ಪ್ರವೃತ್ತಿಯು ಭಾರತದಲ್ಲಿ ಗಗನಕ್ಕೇರುತ್ತಿದ್ದು, ಕಳೆದ ವರ್ಷ 421 ಮಿಲಿಯನ್ ಆನ್‌ಲೈನ್ ಗೇಮರುಗಳನ್ನು ದಾಖಲಿಸಲಾಗಿದೆ. ಈ ಮೂಲಕ ಭಾರತೀಯರು ಆನ್‌ಲೈನ್ ಆಟಗಳಿಗೆ ಹೆಚ್ಚು ತೊಡಗಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಇದರೊಂದಿಗೆ ಗೇಮಿಂಗ್ ಮಾರುಕಟ್ಟೆಯು ಸಹ ಬೃಹದಾಕಾರವಾಗಿ ಬೆಳೆಯುತ್ತಿದೆ. ಆದರೆ ಈ ನಡುವೆ ಹೊಸ ರೀತಿಯ ವಂಚನೆಗಳಿಗೂ ಇದು ಕಾರಣವಾಗುತ್ತಿದೆ.

ಮೋಸ ಹೋದವರು ಯಾರು?; ಮಹಾರಾಷ್ಟ್ರದ ನಾಗ್ಪುರ ಮೂಲದ ಉದ್ಯಮಿಯೊಬ್ಬರು ಆನ್‌ಲೈನ್‌ನಲ್ಲಿ ಆಟ ಆಡಲು ಪ್ರಯತ್ನಿಸಿದಾಗ ಸುಮಾರು 58 ಕೋಟಿ ರೂ.ಗಳನ್ನು ಕಳೆದುಕೊಂಡಿದ್ದಾರೆ. ದೂರು ದಾಖಲಾದ ಬಳಿಕ ಪೊಲೀಸರು ಶಂಕಿತ ವ್ಯಕ್ತಿಯ ಮನೆಯ ಮೇಲೆ ದಾಳಿ ಮಾಡಿದ್ದು, ಈ ವೇಳೆ 14 ಕೋಟಿ ನಗದು ಹಾಗೂ ಚಿನ್ನಾಭರಣವನ್ನು ವಶಕ್ಕೆ ಪಡೆದಿದ್ದಾರೆ.

ಆರೋಪಿಯನ್ನು ಅನಂತ್ ಅಲಿಯಾಸ್ ಸೊಂತು ನವರತನ್ ಜೈನ್ ಎಂದು ಗುರುತಿಸಲಾಗಿದೆ. ನಾಗ್ಪುರದಿಂದ 160 ಕಿಮೀ ದೂರದಲ್ಲಿರುವ ಗೊಂಡಿಯಾ ಸಿಟಿಯಲ್ಲಿರುವ ಆತನ ನಿವಾಸದ ಮೇಲೆ ಪೊಲೀಸರು ದಾಳಿ ನಡೆಸುವ ಮುನ್ನವೇ ಪರಾರಿಯಾಗಿದ್ದಾನೆ. ಹಾಗೆಯೇ ಆತ ದುಬೈಗೆ ಪರಾರಿಯಾಗಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ. ಇನ್ನು ಆರೋಪಿ ಜೈನ್ ಉದ್ಯಮಿಯನ್ನು ಆನ್‌ಲೈನ್ ಜೂಜಾಟಕ್ಕೆ ಇಳಿಸಿ ಆರಂಭದಲ್ಲಿ 8 ಲಕ್ಷ ಪಡೆದಿದ್ದನಂತೆ.

ಬಳಿಕ ಆನ್‌ಲೈನ್ ಜೂಜಿನ ಖಾತೆಯನ್ನು ತೆರೆಯಲು ಜೈನ್ ಉದ್ಯಮಿಗೆ ವಾಟ್ಸಾಪ್‌ನಲ್ಲಿ ಲಿಂಕ್ ಒಂದನ್ನು ಕಳುಹಿಸಿದ್ದಾನೆ. ಆರಂಭದಲ್ಲಿ ಕೆಲವು ಲಾಭದಾಯಕ ಮಾರ್ಗಗಳನ್ನು ನೀಡಿ ಉದ್ಯಮಿಯನ್ನು ಮರಳು ಮಾಡಿದ್ದಾನೆ. ಆರಂಭಿಕ ಯಶಸ್ಸಿನ ನಂತರ, ಉದ್ಯಮಿ ನಷ್ಟ ಅನುಭವಿಸಿದ್ದಾರೆ. ಯಾಕೆಂದರೆ ಹಣ ಇನ್ನೂ ಹೆಚ್ಚಾಗಿ ಬರುತ್ತದೆ ಎಂದು 5 ಕೋಟಿ ಗೆಲ್ಲುವ ಆಸೆಯನ್ನು ತೋರಿಸಿ ವಂಚಕ 58 ಕೋಟಿ ದೋಚಿದ್ದಾನೆ. ನೀವು ಈ ರೀತಿಯ ವಂಚನೆಯಿಂದ ಪಾರಾಗಲು ಈ ಸಲಹೆ ಅನುಸರಿಸಿ.

ಅಪರಿಚಿತರನ್ನು ಎಂದಿಗೂ ನಂಬಬೇಡಿ: ತ್ವರಿತ ಹಣವನ್ನು ಗೆಲ್ಲಲು ನಿಮಗೆ ಸ್ಕೀಮ್‌ಗಳು, ಟಾಸ್ಕ್‌ಗಳು ಎಂದು ಹೇಳುವ ಅನೇಕ ಅಪರಿಚಿತರನ್ನು ನೀವು ವರ್ಚುವಲ್ ಜಗತ್ತಿನಲ್ಲಿ ಪರಿಚಯ ಆಗಿರಬಹುದು. ಆದರೆ ಅವರು ಎಂದಿಗೂ ನೇರವಾಗಿ ತ್ವರಿತ ಹಣ ಸಿಗಲಿದೆ ಎಂದು ಹೇಳುವುದಿಲ್ಲ. ಅಂತಹ ಜನರ ಬಗ್ಗೆ ಯಾವಾಗಲೂ ಜಾಗರೂಕರಾಗಿರಿ. ನೀವು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಎಂದಿಗೂ ಅಪರಿಚಿತರನ್ನು ನಂಬಿ ಕಳೆದುಕೊಳ್ಳಬೇಡಿ. ಈ ಮೂಲಕ ಎಲ್ಲಿಯೂ ಹೂಡಿಕೆ ಮಾಡಬೇಡಿ.

ಆನ್‌ಲೈನ್‌ನಲ್ಲಿ ಗೇಮ್‌ ಆಡುವಾಗ ಎಚ್ಚರ... 58 ಕೋಟಿ ಕಳೆದುಕೊಂಡ ವ್ಯಕ್ತಿ

ಗೇಮ್‌ಗಾಗಿ ಹಣ ಪಾವತಿ ಮಾಡುವಾಗ ಎಚ್ಚರ: ವಿವಿಧ ಗೇಮ್‌ಗಳು ಖರೀದಿ ಆಯ್ಕೆಯನ್ನು ಹೊಂದಿವೆ. ಅದರಂತೆ ಖರೀದಿ ಮಾಡಬೇಕೋ ಅಥವಾ ಬೇಡವೋ ಎಂಬುದು ಬಳಕೆದಾರರ ಆಯ್ಕೆಗೆ ಬಿಟ್ಟ ವಿಚಾರವಾಗಿದೆ. ಆದಾಗ್ಯೂ, ವಿಶೇಷ ವಸ್ತುಗಳನ್ನು ಪಡೆಯುವ ನೆಪದಲ್ಲಿ ನಿಮ್ಮನ್ನು ವಂಚಿಸಲು ಪ್ರಯತ್ನಿಸಬಹುದು.ಜೊತೆಗೆ ಆಪ್‌ ಬಳಕೆ ಮಾಡುವಾಗ ಆಪ್ ಮೂಲಕವೇ ಖರೀದಿ ಮಾಡಲು ಮುಂದಾಗಿ, ಬದಲಾಗಿ ಯಾರಿಗೂ ಹಣ ನೀಡಬೇಡಿ.

ಅಪಾಯಗಳಬಗ್ಗೆ ತಿಳಿದಿರಿ: ರಮ್ಮಿ ಮತ್ತು ಪೋಕರ್‌ನಂತಹ ಆನ್‌ಲೈನ್ ಜೂಜಾಟವು ಕೆಲವು ಅಪಾಯಗಳನ್ನು ಹೊಂದಿರುತ್ತದೆ ಮತ್ತು ನೀವು ಖಚಿತವಾಗಿ ಗೆಲ್ಲುವಿರಿ ಎಂಬ ಭರವಸೆಯನ್ನ ಎಂದಿಗೂ ನೀಡುವುದಿಲ್ಲ. ಈ ಕಾರಣಕ್ಕೆ ಆಟವನ್ನು ಆಡುವ ಮೊದಲು ಆಟಗಳ ನಿಯಮಗಳು ಮತ್ತು ಷರತ್ತುಗಳನ್ನು ಸರಿಯಾಗಿ ಓದಿಕೊಳ್ಳಿ.

ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳಬೇಡಿ: ಆನ್‌ಲೈನ್‌ನಲ್ಲಿ ಗೇಮ್‌ ಆಡುವಾಗ ಹಲವಾರು ಅಪರಿಚಿತರು ನಿಮಗೆ ಪರಿಚಯ ಆಗಬಹುದು. ಇವರೆಲ್ಲರೂ ಸಹ ಒಳ್ಳೆಯ ಉದ್ದೇಶವನ್ನೇ ಹೊಂದಿರುತ್ತಾರೆ ಎಂದು ನಂಬಬೇಡಿ. ಭವಿಷ್ಯದಲ್ಲಿ ಅವರು ನಿಮಗೆ ಹೇಗೆ ಹಾನಿಮಾಡಬಹುದು. ಈ ಕಾರಣಕ್ಕೆ ನೀವು ಎಂದಿಗೂ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳಬೇಡಿ.

Best Mobiles in India

English summary
A Nagpur-based businessman was duped by his friend through an online gaming platform. he lost 58 crores.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+