Home
ಸುದ್ದಿಜಾಲ

ಅಂಗಡಿಯಿಂದ ಐಫೋನ್ 15 ಲೂಟಿ, ಆದ್ರೆ ಅವುಗಳನ್ನು ಯಾರಿಗೂ ಬಳಕೆ ಮಾಡಲಾಗಲಿಲ್ಲ! ಯಾಕಂದ್ರೆ?

ಐಫೋನ್ 15 ಫೋನ್‌ಗಳು (iPhone 15) ಇಂದು ಎಲ್ಲಡೆ ಭಾರೀ ಸದ್ದು ಮಾಡುತ್ತಿವೆ. ಈಗಾಗಲೇ ಸಾಕಷ್ಟು ಜನರು ಈ ಫೋನ್‌ಗಳಿಗೆ ಅಪ್‌ಗ್ರೇಡ್‌ ಆಗಿದ್ದಾರೆ. ಈ ನಡುವ ಈ ಫೋನ್‌ಗಳ ಸಂಬಂಧ ವಿಚಿತ್ರ ಘಟನೆಯೊಂದು ನಡೆದಿದೆ. ಈ ವಿಷಯ ಈಗ ಎಲ್ಲೆಡೆ ವೈರಲ್‌ ಆಗಿದೆ.

ಹೌದು, ಐಫೋನ್ ಅಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ. ಆದರೆ ಇಷ್ಟದ ಫೋನ್‌ಗಳನ್ನು ಹಣ ಕೊಟ್ಟು ಖರೀದಿ ಮಾಡಿದ್ರೆ ಯಾವುದೇ ಸಮಸ್ಯೆ ಇಲ್ಲ. ಆದರೆ ಬೇರೆ ಮಾರ್ಗದಲ್ಲಿ ಖರೀದಿ ಮಾಡಿದ್ರೆ ತಪ್ಪು. ಆದರೆ ಅಮೆರಿಕದ ಫಿಲಡೆಲ್ಫಿಯಾದಲ್ಲಿ ಜನರ ಗುಂಪೊಂದು ಆಪಲ್ ವಾಲ್‌ನಟ್ ಸ್ಟೋರ್‌ನಿಂದ ಐಫೋನ್‌ಗಳನ್ನು ಲೂಟಿ ಮಾಡಿದೆ. ದುರಂತ ಏನೆಂದರೆ ಈ ಫೋನ್‌ಗಳನ್ನು ಅವರಿಗೆ ಬಳಕೆ ಮಾಡಲು ಸಾಧ್ಯವಾಗಿಲ್ಲ. ಹಾಗಿದ್ರೆ, ಏನಿದು ಘಟನೆ?, ಯಾಕೆ ಫೋನ್‌ ಬಳಕೆ ಮಾಡಲು ಸಾಧ್ಯ ಆಗಲಿಲ್ಲ ಎಂಬ ಮಾಹಿತಿಯನ್ನು ತಿಳಿಸಿಕೊಡಲಾಗಿದೆ ಓದಿರಿ.

ಅಂಗಡಿಯಿಂದ ಐಫೋನ್ 15 ಲೂಟಿ, ಆದ್ರೆ ಅವುಗಳನ್ನು ಯಾರಿಗೂ ಬಳಕೆ ಮಾಡಲಾಗಲಿಲ್ಲ!

ಐಫೋನ್‌ ಲೂಟಿ: ಆಪಲ್ ಸ್ಟೋರ್‌ಗೆ ಕಾಲಿಡುವುದು ತಂತ್ರಜ್ಞಾನದ ಉತ್ಸಾಹಿಗಳಿಗೆ ಕ್ಯಾಂಡಿ ಅಂಗಡಿಯನ್ನು ಪ್ರವೇಶಿಸಿದಂತಿದೆ. ಇಷ್ಟವಾದ ವಸ್ತುವನ್ನು ಹೇಗಾದರೂ ಪಡೆಯಬೇಕು ಎಂಬ ಹಠದಲ್ಲಿ ಕೆಲವರು ಕಳ್ಳತನಕ್ಕೆ ಇಳಿಯುತ್ತಾರೆ. ಈ ಮೂಲಕ ಯಾರಿಗೂ ತಿಳಿಯದ ಹಾಗೆ ಜೇಬಿಗೆ ಆ ವಸ್ತುವನ್ನು ಇಳಿಸುತ್ತಾರೆ. ಇಂತಹುದೇ ಘಟನೆ ಫಿಲಡೆಲ್ಫಿಯಾದಲ್ಲಿನ ಒಂದು ಗುಂಪು ಮಾಡಿದೆ. ಈ ಗುಂಪು ಆಪಲ್ ಸ್ಟೋರ್‌ನಿಂದ ಡಿವೈಸ್‌ಗಳನ್ನು ಲೂಟಿ ಮಾಡಿದೆಯಾದರೂ ಸಹ ವಾಸ್ತವಿಕವಾಗಿ ಆ ಎಲ್ಲಾ ಡಿವೈಸ್‌ಗಳು ನಿಷ್ಪ್ರಯೋಜಕವಾಗಿದೆ.

ಯಾಕೆ ಡಿವೈಸ್ ನಿಷ್ಪ್ರಯೋಜಕ?: ಸಾಮಾನ್ಯವಾಗಿ ಐಫೋನ್‌ ಅನ್ನು ಅಂಗಡಿಗಳಿಂದ ಕದಿಯುವುದು ಅಷ್ಟು ಸಾಮಾನ್ಯವಾದ ವಿಷಯವಲ್ಲ. ಐಫೋನ್‌ಗಳು ಅಂಗಡಿಯ ಹೊಸ್ತಿಲನ್ನು ದಾಟಿದ ಕ್ಷಣದಲ್ಲಿ ಕಾರ್ಯನಿರ್ವಹಿಸುವುದನ್ನೇ ನಿಲ್ಲಿಸುತ್ತವೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಅವರು ಬಾಗಿಲಿನಿಂದ ಹೊರಬಂದ ನಂತರ ಆ ಫೋನ್‌ಗಳನ್ನು ಬಳಕೆ ಮಾಡಲು ಮುಂದಾಗಿದ್ದಾರೆ. ಆದರೆ ಅವು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ವಿಷಯ ಏನೆಂದರೆ ಅನಧೀಕೃತಾಗಿ ಎಗರಿಸಿಕೊಂಡು ಬಂದ ಈ ಫೋನ್‌ಗಳು ಅಂಗಡಿಯಿಂದ ಆಚೆಗೆ ತಂದಾಕ್ಷಣ ಸ್ಥಳ ಟ್ರ್ಯಾಕಿಂಗ್ ಅನ್ನು ಸಹ ಸಕ್ರಿಯಗೊಳಿಕೊಳ್ಳುತ್ತವೆ. ಈ ಮೂಲಕ ಕಳ್ಳರನ್ನು ಪತ್ತೆಹಚ್ಚಲು ಪೊಲೀಸರಿಗೆ ಸಹಾಯ ಮಾಡುತ್ತವೆ.

ಅಮೆರಿಕದ ಫಿಲಡೆಲ್ಫಿಯಾದಲ್ಲಿ ಯುವಕರ ಗುಂಪೊಂದು ಆಪಲ್ ವಾಲ್‌ನಟ್ ಸ್ಟೋರ್‌ನಿಂದ ಐಫೋನ್‌ಗಳನ್ನು ಲೂಟಿ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿದೆ. ವೀಡಿಯೊದಲ್ಲಿ, ಅವರು ಉಚಿತ ಐಫೋನ್ ಎಂದು ಕೂಗುವುದನ್ನು ಕಾಣಬಹುದು. ದುರಂತ ಏನೆಂದರೆ ಅವರು ಕದ್ದ ಐಫೋನ್‌ಗಳು ಕಂಪನಿಯ ವಿಶೇಷ ಎಂಟರ್‌ಪ್ರೈಸ್-ಗ್ರೇಡ್ ಆಪರೇಟಿಂಗ್ ಸಿಸ್ಟಮ್ ಅನ್ನು ಒಳಗೊಂಡಿರುವ ಡೆಮೊ ವೇರಿಯಂಟ್ ಆಗಿವೆ.

ಅಂದರೆ ಲೂಟಿಕೋರರು ಕದ್ದ ಐಫೋನ್‌ಗಳನ್ನು ಅಂಗಡಿಯ ಹೊರಗೆ ತೆಗೆದುಕೊಂಡ ತಕ್ಷಣ, ಈ ಡಿವೈಸ್‌ಗಳು ನಿಷ್ಪ್ರಯೋಜಕವಾಗುತ್ತವೆ. ಈ ಡೆಮೊ ಐಫೋನ್ ಯೂನಿಟ್‌ಗಳನ್ನು ರಿಮೋಟ್‌ನಿಂದ ಲಾಕ್ ಮಾಡಲಾಗುತ್ತದೆ ಹಾಗೂ ಕದ್ದಿದ್ದರೆ ಆಟೋಮ್ಯಾಟಿಕ್‌ ಆಗಿ ಸ್ಥಳ ಟ್ರ್ಯಾಕಿಂಗ್‌ ಮಾಹಿತಿಯನ್ನು ನೀಡುವ ಸಾಮರ್ಥ್ಯ ಪಡೆದುಕೊಂಡಿವೆ. ಆದರೆ, ಈ ಪೆದ್ದ ಕಳ್ಳರು ಈ ಫೋನ್‌ಗಳನ್ನು ಕದ್ದು ಸಿಕ್ಕಿಬಿದ್ದಿದ್ದು, ಮುಜುಗರಕ್ಕೆ ಒಳಗಾಗಿದ್ದಾರೆ.

ಇನ್ನು ಕಳ್ಳರು ಐಫೋನ್‌ಗಳನ್ನು ಆಫ್ ಮಾಡಿದರ ಸಹ ಅವರು ಇರುವ ಸ್ಥಳವನ್ನು ಟ್ರ್ಯಾಕ್ ಮಾಡಬಹುದಾಗಿದೆ. ಜೊತೆಗೆ ಅವು ಎಲ್ಲಿವೆ ಎಂಬುದನ್ನು ಕಂಡು ಹಿಡಿಯಬಹುದು.ಅಷ್ಟೇ ಅಲ್ಲದೆ ಈ ಈ ರೀತಿಯ ಸಮಸ್ಯೆಗಳು ಎದುರಾದಾಗ ಸಹಾಯಕ್ಕೆ ಬರಲಿ ಎಂದು ಸೆಲ್ಫಿ ಕ್ಯಾಮೆರಾವನ್ನು ಆಟೋಮ್ಯಾಟಿಕ್‌ ಆಗಿ ಸಕ್ರಿಯಗೊಳಿಸಲಾಗುತ್ತೆ. ಈ ಮೂಲಕ ಈ ಫೋನ್‌ ಅನ್ನು ಕದ್ದಿದ್ದು ಯಾರು?, ಹೇಗೆಲ್ಲಾ ಕದ್ದಿದ್ದಾರೆ ಎಂಬ ಮಾಹಿತಿಯನ್ನು ರೆಕಾರ್ಡ್‌ ಮಾಡಲಾಗುತ್ತದೆ.

ಕದ್ದ ಐಫೋನ್‌ಗಳ ವಿಡಿಯೋ ಕುರಿತು ಪ್ರತಿಕ್ರಿಯಿಸಿದ ಟೆಕ್ ತಜ್ಞ ಇಯಾನ್ ಝೆಲ್ಬೊ, ಕದ್ದ ಐಫೋನ್‌ಗಳು ವಾಸ್ತವವಾಗಿ ಪ್ರದರ್ಶನಕ್ಕಾಗಿ ಬಳಸಲಾಗುವ ಡೆಮೋ ಘಟಕಗಳಾಗಿವೆ ಎಂದು ಗಮನಿಸಿದ್ದಾರೆ. ಈ ಐಫೋನ್‌ಗಳು ಇನ್‌ಬಿಲ್ಟ್‌ ಭದ್ರತಾ ಫೀಚರ್ಸ್ ಹೊಂದಿದ್ದು, ಆಪಲ್ ಅವುಗಳನ್ನು ದೂರದಿಂದಲೇ ನಿಷ್ಕ್ರಿಯಗೊಳಿಸಲು ಮತ್ತು ಅವುಗಳ ಸ್ಥಳವನ್ನು ಟ್ರ್ಯಾಕ್ ಮಾಡಲು ಅನುಮತಿಸುತ್ತದೆ ಎಂದು ಬರೆದಿದ್ದಾರೆ. ಆದ್ದರಿಂದ ಈ ಐಫೋನ್‌ಗಳನ್ನು ಕದಿಯುವುದು ಅಷ್ಟು ಸುಲಭದ ಮಾತಲ್ಲ. ಇನ್ನು ತಮ್ಮ ಮೂರ್ಖತನವನ್ನು ಅರಿತುಕೊಂಡ ತಕ್ಷಣ ಕದ್ದ ಕೆಲವು ಐಫೋನ್‌ಗಳನ್ನು ಬೀದಿಗೆ ಎಸೆಯಲಾಗಿದೆ.

Best Mobiles in India

English summary
Here a group broke into the premises and stole iPhones but could not use them.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+