Home
ಸುದ್ದಿಜಾಲ

ಇದು ಹ್ಯಾಂಡ್‌ಬ್ಯಾಗ್‌ ಅನ್ಕೋಬೇಡಿ, ಈ ಫೋನ್‌ ಮೂಲಕ ದೈತ್ಯ ಕಂಪೆನಿಗಳಿಗೆ ನಡುಕ ಹುಟ್ಟಿಸಲಿದೆ ಹಾನರ್‌?

ಇತ್ತೀಚಿನ ದಿನಗಳಲ್ಲಿ ಹಲವಾರು ಸ್ಮಾರ್ಟ್‌ಫೋನ್‌(Smartphone) ತಯಾರಿಕಾ ಕಂಪೆನಿಗಳು ತಲೆ ಎತ್ತಿವೆ. ಪರಿಣಾಮ ಹೊಸ ಹೊಸ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆ ಆಳಲು ಬರುತ್ತಲೇ ಇವೆ. ಈ ಮೊದಲು ಹಗುರವಾದ ಫೋನ್‌ಗಳು, ಕರ್ವ್ಡ ಡಿಸ್‌ಪ್ಲೇ ಆಯ್ಕೆ ಫೋನ್‌ಗಳು ಸೇರಿದಂತೆ ಅನೇಕ ರೀತಿಯ ಫೋನ್‌ಗಳು ಮಾರುಕಟ್ಟೆಯಲ್ಲಿ ಸದ್ದು ಮಾಡಿದ್ದವು. ಆದರೆ, ಈಗ ಫೋಲ್ಡಬಲ್‌ ಫೋನ್‌ಗಳ ಕಾಲ ಆರಂಭ ಆಗಿದೆ.

ಹೌದು, ಎಲ್ಲಾ ಸ್ಮಾರ್ಟ್‌ಫೋನ್ ತಯಾರಿಕಾ ಕಂಪೆನಿಗಳು ಭಿನ್ನ ರೀತಿಯಲ್ಲಿ ಫೋಲ್ಡಬಲ್‌ ಫೋನ್‌ಗಳನ್ನು (foldable phone) ಪರಿಚಯಿಸುತ್ತಾ ಬರುತ್ತಿದ್ದು, ಈ ಸಾಲಿಗೆ ಈಗ ಹಾನರ್‌ ಸಹ ಸೇರಿಕೊಳ್ಳಲು ಮುಂದಾದಂತೆ ಕಂಡುಬಂದಿದೆ. ಅದೂ ಸಹ ವಿಶೇಷವಾದ ರೀತಿಯಲ್ಲಿ. ಚೀನಾದ ಸ್ಮಾರ್ಟ್‌ಫೋನ್ ಸಂಸ್ಥೆ ಹಾನರ್ ಹ್ಯಾಂಡ್‌ಬ್ಯಾಗ್‌ನಂತೆ ಕಾಣಿಸುವ ಹಾಗೆಯೇ ಹ್ಯಾಂಡ್‌ಬ್ಯಾಗ್‌ ರೀತಿಯಲ್ಲೇ ಬಳಕೆ ಮಾಡಬಹುದಾದ ಸ್ಮಾರ್ಟ್‌ಫೋನ್ ಅನ್ನು ಪ್ರದರ್ಶನ ಮಾಡಿದೆ. ಹಾಗಿದ್ರೆ ಯಾವುದು ಈ ಫೋನ್‌?, ಇದರ ಫೀಚರ್ಸ್ ಹೇಗಿರಲಿದೆ ಎಂಬಿತ್ಯಾದಿ ಮಾಹಿತಿ ಇಲ್ಲಿದೆ ನೋಡಿ.

ಈ ಫೋನ್‌ ಮೂಲಕ ದೈತ್ಯ ಕಂಪೆನಿಗಳಿಗೆ ನಡುಕ ಹುಟ್ಟಿಸಲಿದೆ ಹಾನರ್‌?

ಜಾಗತಿಕ ಮಾರುಕಟ್ಟೆಯಲ್ಲಿ ಹಾನರ್‌ ನಿಂದ ಬಿರುಗಾಳಿ : ಹಾನರ್ ವಿ ಪರ್ಸ್ (Honor V Purse) ಎಂದು ಕರೆಯಲ್ಪಡುವ ಈ ಡಿವೈಸ್ ಕ್ಯಾಮೆರಾವನ್ನು ಹೊಂದಿರುವ ಟಾಪ್ ಸ್ಟ್ರಿಪ್‌ನೊಂದಿಗೆ ಹೊರಕ್ಕೆ ಮಡಚಿಕೊಳ್ಳುವ ಸ್ಮಾರ್ಟ್‌ಫೋನ್ ಆಗಿದೆ. ಜೊತೆಗೆ ಹ್ಯಾಂಡ್‌ಬ್ಯಾಗ್‌ನಲ್ಲಿ ಇರುವಂತೆ ಕೊಕ್ಕೆಗಳ ಆಯ್ಕೆ ಸಹ ಇದ್ದು, ಇದಕ್ಕೆ ದಾರ ಅಥವಾ ಚೈನ್‌ ಬಳಕೆ ಮಾಡಿಕೊಂಡು ಹ್ಯಾಂಡ್‌ಬ್ಯಾಗ್‌ ರೂಪ ನೀಡಲಾಗಿದೆ.

ಇನ್ನು ಚೀನೀ ಸ್ಮಾರ್ಟ್‌ಫೋನ್ ದೈತ್ಯ ಹಾನರ್ ಬರ್ಲಿನ್‌ನಲ್ಲಿ ನಡೆದ ಐಎಫ್‌ಎ ತಂತ್ರಜ್ಞಾನ ಪ್ರದರ್ಶನದಲ್ಲಿ ಈ ಪರಿಕಲ್ಪನೆಯ ಡಿವೈಸ್‌ ಅನ್ನು ಪ್ರದರ್ಶಿಸಿದೆ. ಈ ಮೂಲಕ ಹೊಸ ಆವಿಷ್ಕಾರಕ್ಕೆ ದೊಡ್ಡ ಹೆಜ್ಜೆ ಇರಿಸಿದ್ದು, ಜಾಗತಿಕವಾಗಿ ಸ್ಮಾರ್ಟ್‌ಫೋನ್‌ಗಳ ಮೂಲಕ ಮಾರುಕಟ್ಟೆ ವಿಸ್ತರಣೆ ಮಾಡಿರುವ ಸ್ಯಾಮ್‌ಸಂಗ್‌ ಹಾಗೂ ಆಪಲ್‌ ಫೋನ್‌ಗಳಿಗೆ ತನ್ನದೇ ಆದ ರೀತಿಯಲ್ಲಿ ಈ ಫೋನ್ ಸ್ಪರ್ಧೆ ನೀಡಲು ಮುಂದಾದಂತಿದೆ.

ಇನ್ನು ಈ ಫೋನ್‌ ಅನ್ನು ಹ್ಯಾಂಡ್‌ಬ್ಯಾಗ್‌ (handbag) ಆಧಾರದಲ್ಲಿ ತಯಾರಿ ಮಾಡಿರುವುದರಿಂದ ನಿಮ್ಮಿಷ್ಟದ ಬ್ಯಾಗ್‌ ಕಲರ್‌ ಹಾಗೂ ಶೈಲಿಗಳನ್ನು ಇದಕ್ಕೆ ನೀಡಬಹುದು. ಅಂದರೆ ವಿವಿಧ ರೀತಿಯ ಗ್ಯಾಂಡ್‌ಬ್ಯಾಕ್‌ ಧರಿಸಿರುವಂತೆ ಮಾಡಲು ಡಿಸ್‌ಪ್ಲೇಯನ್ನು ಕಸ್ಟಮೈಸ್ ಮಾಡಬಹುದಾಗಿದೆಯಂತೆ. ಜೊತೆಗೆ ಬ್ಯಾಗ್‌ ಪಟ್ಟಿಯನ್ನು ಸಹ ಬದಲಾಯಿಸಬಹುದು ಎಂದು ತಿಳಿದುಬಂದಿದೆ. ಇದರೊಂದಿಗೆ ಬಳಕೆದಾರರು ಕ್ಯಾಮರಾ ಚಾರ್ಮ್ ಅನ್ನು ಒತ್ತಿದರೆ, ಅದು ಫೋಟೋಗಳಿಗಾಗಿ ಕ್ಯಾಮರಾ ಆಪ್‌ ಅನ್ನು ಓಪನ್‌ ಮಾಡುತ್ತದೆ ಎಂದು ಹೇಳಲಾಗಿದೆ.

ಪ್ರಮುಖವಾಗಿ ಬ್ಯಾಗ್‌ನಂತೆ ಕಾಣುವ ಈ ಫೋನ್‌ಗೆ ಜಾಗತಿಕವಾಗಿ ಯಾವ ರೀತಿ ಬೇಡಿಕೆ ಇರಲಿದೆ ಎಂಬುದು ಅಸ್ಪಷ್ಟವಾಗಿದೆ. ಸಾರ್ವಜನಿಕವಾಗಿ ದುಬಾರಿ ಡಿವೈಸ್‌ ಅನ್ನು ಬಳಕೆ ಮಾಡುವುದು ಮತ್ತು ಅದನ್ನು ಹೆಚ್ಚು ಗೋಚರಿಸುವಂತೆ ಮಾಡುವುದು ಹಲವು ಜನರಿಗೆ ಇಷ್ಟವಾಗುವುದಿಲ್ಲ. ಹಾಗೆಯೇ ದೊಡ್ಡ ಡಿಸ್‌ಪ್ಲೇ ಆಯ್ಕೆ ಇರುವ ಫೋನ್‌ ಅನ್ನು ನೇತುಹಾಕಿಕೊಳ್ಳುವುದು ಕೆಳಗೆ ಬೀಳಿಸಲು ಅಥವಾ ಒಡೆದುಹೋಗುವಂತೆ ಮಾಡಲು ಅನುಕೂಲ ಮಾಡಿಕೊಟ್ಟಂತೆ.

ಅದಾಗ್ಯೂ ಇತ್ತೀಚಿನ ದಿನಗಳಲ್ಲಿ ಫ್ಯಾಶನ್ ಮತ್ತು ತಂತ್ರಜ್ಞಾನ (Fashion and Technology ಒಂದಕ್ಕೊಂದು ತಮ್ಮ ಸಂಬಂಧವನ್ನು ಹೆಚ್ಚು ಮಾಡಿಕೊಳ್ಳುತ್ತಿವೆ. ಸ್ಮಾರ್ಟ್ ವಾಚ್‌ಗಳು ಇದಕ್ಕೆ ದೊಡ್ಡ ಉದಾಹರಣೆ. ಇದರೊಂದಿಗೆ ಆಪಲ್‌ ಹಾಗೂ ಸ್ಯಾಮ್‌ಸಂಗ್‌ ನಂತಹ ಸ್ಮಾರ್ಟ್‌ ಡಿವೈಸ್‌ ತಯಾರಕರು ಗ್ರಾಹಕೀಯಗೊಳಿಸಬಹುದಾದ ಲಿಸ್ಟ್‌ಗಳನ್ನು ಮತ್ತು ಡಿವೈಸ್‌ ಫೇಸ್‌ ಅನ್ನು ಬದಲಾಯಿಸುವ ಸಾಮರ್ಥ್ಯದ ಆಯ್ಕೆ ನೀಡುತ್ತಿದ್ದಾರೆ. ಹೀಗಾಗಿ ಈ ಫೋನ್‌ ಸಹ ಮುಂದಿನ ದಿನಗಳಲ್ಲಿ ಸದ್ದು ಮಾಡಬಹುದು ಎನ್ನಲಾಗಿದೆ.

ಈ ಫೋನ್‌ ಮೂಲಕ ದೈತ್ಯ ಕಂಪೆನಿಗಳಿಗೆ ನಡುಕ ಹುಟ್ಟಿಸಲಿದೆ ಹಾನರ್‌?

ವಿಶೇಷ ಏನೆಂದರೆ ಹಾನರ್ ಈ ಫೋನ್ ಅನ್ನು ಲಾಂಚ್‌ ಮಾಡುವ ಬಗ್ಗೆ ಎಂದಿಗೂ ಮಾಹಿತಿ ನೀಡಿಲ್ಲ. ಆದರೆ ಒಂದು ವಿಷಯವನ್ನು ಮಾತ್ರ ಜಗತ್ತಿಗೆ ತೋರಿಸಲು ಪ್ರಯತ್ನಿಸುತ್ತಿದೆ ಎಂಬುದು ಗೊತ್ತಾಗಿದೆ. ಅಂದರೆ ಆಪಲ್ ಮತ್ತು ಸ್ಯಾಮ್‌ಸಂಗ್ ಜೊತೆಗೆ ಮಾರುಕಟ್ಟೆಯ ಪ್ರೀಮಿಯಂ ಡಿವೈಸ್‌ಗಳ ವಿಭಾಗದಲ್ಲಿ ತಾನೇನು ಕಡಿಮೆ ಇಲ್ಲ ಎಂದು ಎಚ್ಚರಿಕೆ ಕೊಟ್ಟಂತೆ ಕಾಣುತ್ತಿದೆ. ಇದರೊಂದಿಗೆ ತಾನೂ ಸಹ ಉತ್ತಮವಾದ ಫೋನ್‌ಗಳನ್ನು ತಯಾರಿಸಲು ಅರ್ಹ ಎಂಬುದನ್ನು ತೋರಿಸಿದಂತೆ ಇದೆ.

Best Mobiles in India

English summary
Honor has showcased a smartphone that looks like a handbag and can also be used as a handbag.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+