8 ಗಂಟೆ ಬೆಳಕು ನೀಡುವ ಉಪ್ಪುನೀರಿನ ಲ್ಯಾಂಪ್ ಆವಿಷ್ಕಾರ
ಬೆಳಕು ಎಷ್ಟೊಂದು ಮುಖ್ಯ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಮೊನ್ನೆ ಮೊನ್ನೆ ತಾನೆ ಬೆಂಗಳೂರು ನಗರದ ಕಾಲೇಜೊಂದರಲ್ಲಿ ವಿದ್ಯುತ್ ಇಲ್ಲದ ಕಾರಣ ಹಾಗೂ ಮೋಡ ಮುಸುಕಿದ ಕಾರಣ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಆಗದೆ ಪರೀಕ್ಷೆಯನ್ನು ಅರ್ಧಕ್ಕೆ ಸ್ಥಗಿತಗೊಳಿಸಲಾಯಿತು. ಇನ್ನು ಸರ್ಕಾರ ವಿದ್ಯುತ್ ಸಮಸ್ಯೆ ನೀಗಿಸಲು ಹಲವು ಯೋಜನೆಗಳನ್ನು ಕೈಗೊಳ್ಳುತ್ತಿರುವುದು ಗೊತ್ತೇ ಇದೆ. ಆದ್ರೆ ಬೆಳಕಿನ ಬಗ್ಗೆ ಇಷ್ಟೊಂದು ವಿಚಾರ ಯಾಕಪ್ಪಾ ಹೇಳ್ತಿದ್ದೀವಿ ಅಂದ್ರೆ ಇಂದು ಬೆಳಕಿನ ಕ್ಷೇತ್ರಕ್ಕೆ ಹೊಸ ಆವಿಷ್ಕಾರ ಒಂದು ಕಾಲಿಟ್ಟಿದೆ.
ಓದಿರಿ :12 ವರ್ಷದ ಹುಡುಗಿಯಿಂದ ನೀರು ಉಳಿಸಲು ಹೊಸ ಟೆಕ್ನಾಲಜಿ
ಹೌದು, ಗಿಜ್‌ಬಾಟ್ ಇಷ್ಟುದಿನ ನಿಮಗೆಲ್ಲಾ ಗಾಳಿ, ನೀರು, ಸೋಲಾರ್‌ನಿಂದ ಮಾತ್ರ ವಿದ್ಯುತ್ ಉತ್ಪಾದನೆ ಬಗ್ಗೆ ಹಲವು ರೀತಿಯ ಹೊಸ ವಿಧಾನಗಳನ್ನು ಪರಿಚಯಿಸಿತ್ತು. ಆದರೆ ಇಂದಿನ ಲೇಖನದಲ್ಲಿ ಉಪ್ಪು ಮತ್ತು ನೀರಿನ ಮಿಶ್ರಣದಿಂದ ತಯಾರಿಸಿದ ಲ್ಯಾಂಪ್ ಒಂದು 8 ಗಂಟೆಗಳ ಕಾಲ ಬೆಳಕು ನೀಡುವ ಬಗ್ಗೆ ಹೇಳುತ್ತಿದೆ. ಈ ವಿಶೇಷ ಲ್ಯಾಂಪ್ ಆವಿಷ್ಕಾರದ ಬಗ್ಗೆ ಕೆಳಗಿನ ಸ್ಲೈಡರ್‌ಗಳನ್ನು ಓದಿ ತಿಳಿಯಿರಿ.

Saltlight ಏನಿದು?
Saltlight ಇದು ತೋಜೋದೀಪ ಲ್ಯಾಂಪ್ ಆಗಿದ್ದು ಇದು ಕೇವಲ ನೀರು ಮತ್ತು ಉಪ್ಪಿನ ಮಿಶ್ರಣದಿಂದ ಬೆಳಕು ನೀಡುತ್ತದೆ.

Joeffrey Firas
Saltlight ಲ್ಯಾಂಪ್ ಅನ್ನು ಕಂಡುಹಿಡಿದವರು ಇಂಜಿನಿಯರ್‌ಗಳಾದ ರಾಲ್ಫ್ ಮಿಜೆನೊ ಮತ್ತು ಜೆಫರಿ ಫಿರಾಸ್. ಇವರು ಈ ಲ್ಯಾಂಪ್‌ಅನ್ನು ವಿದ್ಯುತ್ ಸಮಸ್ಯೆಯನ್ನು ಅರಿತು Saltlight ಅನ್ನು ಕಂಡುಹಿಡಿದಿದ್ದಾರೆ.

Saltlight
ಈ ಲ್ಯಾಂಪ್ ತುರ್ತು ಮತ್ತು ಪೋರ್ಟೆಬಲ್ ಲೈಟಿಂಗ್ ಉದ್ಯಮ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತರಲಿದೆ.

8 ಗಂಟೆಗಳ ಕಾಲ ಬೆಳಕು
ಯಾವುದೇ ಇತರ ಪದಾರ್ಥಗಳನ್ನು ಬಳಸದೇ ಉಪ್ಪು ಮತ್ತು ನೀರಿನಿಂದ ತಯಾರಿಸಿರುವ ಈ ಲ್ಯಾಂಪ್ 8 ಗಂಟೆಗಳ ಕಾಲ ಬೆಳಕು ನೀಡಲಿದೆ.

ಹೇಗೆ ಕಾರ್ಯನಿರ್ವಹಿಸುತ್ತದೆ.
ಒಂದು ಲೋಟ ನೀರು ಮತ್ತು 2 ಟೇಬಲ್‌ಚಮಚ ಉಪ್ಪಿನ ಮಿಶ್ರಣದಿಂದ ಈ ಬೆಳಕನ್ನು ತಯಾರಿಸಬಹುದು. ಇದು 8 ಗಂಟೆಗಳ ಕಾಲ ಬೆಳಕನ್ನು ನೀಡುತ್ತದೆ. ಹಾಗೆಯೇ ಸ್ವಲ್ಪ ಸಮುದ್ರ ನೀರನ್ನು ಬಳಸಬಹುದಾಗಿದೆ.

ಯಾರಿಗೆ ಉಪಯೋಗ
ಹೆಚ್ಚು ದೂರದ ಪ್ರದೇಶಗಳು ಹಾಗೂ ಯಾವುದೇ ಇಂಧನದ ಪೂರೈಕೆ ಇಲ್ಲದ ಪ್ರದೇಶಗಳು ಈ ಲ್ಯಾಂಪ್ ಉಪಯೋಗ ಪಡೆಯ ಬಹುದಾಗಿದೆ.

ಕಡಿಮೆ ವೆಚ್ಚ
ಕೋಟ್ಯಾಂತರ ಜನರು ಬ್ಯಾಟರಿ ಆಪರೇಟೆಡ್ ಟ್ಯೂಬ್ ಲೈಟ್, ಲ್ಯಾಂಪ್ ಹಾಗೂ ಇತರೆ ಬೆಳಕಿನ ಗ್ಯಾಜೆಟ್ಸ್‌ಗಳಿಗಾಗಿ ಹೆಚ್ಚು ಹಣ ವೆಚ್ಚ ಮಾಡುತ್ತಾರೆ. ಆದರೆ ಇದು ವೆಚ್ಚವೇ ಇಲ್ಲದೇ ತುರ್ತು ಸಂದರ್ಭಗಳಿಗಾಗಿ ಬಳಸಬಹುದಾದ ಲ್ಯಾಂಪ್ ಆಗಿದೆ.

ಸರಳ ಟೆಕ್ನಾಲಜಿ
ಈ ಸೂಪರ್ ಟೆಕ್ನಾಲಜಿ ವಯಕ್ತಿಕವಾಗಿ ಯಾರಾದರೂ ಯಾವುದೇ ತೊಂದರೆ ಇಲ್ಲದೇ ಬಳಸಬಹುದಾಗಿದ್ದು, ಇದನ್ನು ಫಿಲಿಪೈನ್ಸ್‌ನ ಸ್ಥಳೀಯರು ಕೆರೋಸಿನ್ ಆಧಾರಿತ ಲ್ಯಾಂಪ್ ಬಳಸುತ್ತಾರೆ.

ಉಪ್ಪು ನೀರಿನ ಲ್ಯಾಂಪ್
ಯಾವುದೇ ಉರಿಯುವ ವಸ್ತುಗಳನ್ನು ಇದಕ್ಕೆ ಬಳಸಿಕೊಂಡಿಲ್ಲ.
ಉಪ್ಪು ನೀರಿನ ಲ್ಯಾಂಪ್
ವಿದ್ಯುತ್ ಬಿಲ್ ಕಡಿಮೆಗೊಳಿಸಲು ಇದನ್ನು ಬಳಸಬಹುದಾಗಿದೆ.

ಗಿಜ್‌ಬಾಟ್

ಗಿಜ್‌ಬಾಟ್
ಗಿಜ್‌ಬಾಟ್‌ನ ಲೇಖನಗಳನ್ನು ಫೇಸ್‌ಬುಕ್‌ನಲ್ಲಿ ಓದಲು ಲೈಕ್ ಮಾಡಿ ಫೇಸ್‌ಬುಕ್ ಪೇಜ್ ಮತ್ತು ಓದಿರಿ ವೆಬ್‌ಸೈಟ್ ಗಿಜ್‌ಬಾಟ್.ಕನ್ನಡ.ಕಾಂ


Click it and Unblock the Notifications








