ಆಪಲ್ ಐಫೋನ್ ಭಯಾನಕ ಸ್ಟೋಟ: ಸಿಸಿಟಿವಿಯಲ್ಲಿ ದೃಶ್ಯ ಸೆರೆ..!
ಚೀನಾದಲ್ಲಿ ಆಪಲ್ ಬಿಡುಗಡೆ ಮಾಡಿರುವ ಐಫೋನ್‌ವೊಂದು ಬ್ಲಾಸ್ಟ್ ಆಗಿದೆ ಎನ್ನಲಾಗಿದ್ದು, ಸದ್ಯ ಆಪಲ್ ತನ್ನ ಹಳೇಯ ಐಫೋನ್‌ಗಳ ಬ್ಯಾಟರಿಯನ್ನು ಬದಲಾವಣೆ ಮಾಡಿಕೊಡಲು ಮುಂದಾಗಿದ್ದು, ಇದೇ ಮಾದರಿಯಲ್ಲಿ ಮಳಿಗೆಯೊಂದರೆ ಆಪಲ್ ಐಫೋನ್ ಬ್ಯಾಟರಿ ಬದಲಾವಣೆ ಮಾಡುವ ಸಂದರ್ಭದಲ್ಲಿ ಬ್ಲಾಸ್ಟ್ ಆಗಿದೆ ಎನ್ನಲಾಗಿದೆ. ಈ ಮೂಲಕ ಐಫೋನ್‌ಗಳು ಸಹ ಒಂದರ ಹಿಂದೆ ಒಂದರಂತೆ ಬ್ಲಾಸ್ಟ್ ಆಗುತ್ತಿರುವ ಪ್ರಕರಣಗಳು ವರದಿಯಾಗುತ್ತಿದೆ.

ಬ್ಯಾಟರಿ ಬದಲಾವಣೆ ಮಾಡುವ ಸಂದರ್ಭದಲ್ಲಿ ಐಫೋನ್ ಬ್ಲಾಸ್ಟ್ ಆಗಿರುವ ವಿಡಿಯೋ ಅಂಗಡಿಯಲ್ಲಿ ಹಾಕಲಾಗಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ವಿಡಿಯೋ ಸದ್ಯ ಜಾಗತಿಕವಾಗಿ ವೈರಲ್ ಆಗಿದೆ ಎನ್ನಲಾಗಿದೆ. ಐಫೋನ್ ಬ್ಲಾಸ್ಟ್ ಆಗುವ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಇಬ್ಬರು ವ್ಯಕ್ತಿಗಳಿಗೆ ಗಾಯಗಳಾಗಿದ್ದು, ಬ್ಯಾಟರಿ ಬದಲಾಯಿಸುವುದನ್ನು ನೋಡುತ್ತಿದ್ದ ಇಬ್ಬರ ಮುಖದ ಮುಂದೆಯೇ ಫೋನ್ ಬ್ಲಾಸ್ಟ್ ಆಗಿದೆ.
ಈ ಘಟನೆಯೂ ಜನವರಿ 20 ರಂದು ನಡೆದಿದೆ ಎನ್ನಲಾಗಿದೆ. ಐಪೋನ್ ಬ್ಲಾಸ್ಟ್ ಆಗುವ ಸಂದರ್ಭದಲ್ಲಿ ಅಂಗಡಿಯಲ್ಲಿ ಸಾಕಷ್ಟು ಜನರಿದ್ದರೂ ಎನ್ನಲಾಗಿದೆ. ಘಟನೆಗೆ ಬ್ಯಾಟರಿ ಹೆಚ್ಚಿನ ಪ್ರಮಾಣದಲ್ಲಿ ಬಿಸಿಯಾಗಿದ್ದೇ ಪ್ರಮುಖ ಕಾರಣ ಎನ್ನಲಾಗಿದೆ. ಈ ಕುರಿತು ಆಪಲ್ ಯಾವುದೇ ಹೇಳಿಕೆಯನ್ನು ನೀಡಿಲ್ಲವಾದರೂ ಚೀನಾ ಮಾಧ್ಯಮಗಳು ಐಫೋನ್ ಬ್ಲಾಸ್ಟ್ ಬಗ್ಗೆ ವರದಿ ಮಾಡಿವೆ.
ಓದಿರಿ: ಬಿಗ್ ಬಜಾರ್ ಮುಂದೆ ಜನಸಾಗರ: ರೂ.4000ಕ್ಕೆ ರೆಡ್‌ಮಿ 5A ಸ್ಮಾರ್ಟ್‌ಫೋನ್ ಮಾರಾಟ..!
ಸ್ಟೋಟದ ಪ್ರಮಾಣವು ದೊಡ್ಡದಾಗಿದ್ದು, ಕ್ಯಾಮೆರಾದಲ್ಲಿ ನೋಡಬಹುದಾಗಿದೆ ಎಷ್ಟು ಪ್ರಮಾಣದಲ್ಲಿ ಬ್ಲಾಸ್ಟ್ ಆಗಿದೆ ಎನ್ನುವುದನ್ನು. ಈ ಹಿಂದೆ ಜ್ಯೂರಿಕ್‌ನಲ್ಲಿ ಇದೇ ಮಾದರಿಯಲ್ಲಿ ಆಪಲ್ ಸ್ಟೋರಿನಲ್ಲಿ ಬ್ಯಾಟರಿ ಬದಲಾವಣೆಯ ಸಮಯದಲ್ಲ ಆಪಲ್ ಐಪೋನ್ ಬ್ಲಾಸ್ಟ್ ಆಗಿ ಒಬ್ಬ ವ್ಯಕ್ತಿ ಗಾಯಗೊಂಡಿದ್ದ ಘಟನೆಯನ್ನು ಸ್ಮರಿಸಬಹುದಾಗಿದೆ.
ವಿಡಿಯೋ ನೋಡಿ:


Click it and Unblock the Notifications