ಬಿಗ್ ಬಜಾರ್ ಮುಂದೆ ಜನಸಾಗರ: ರೂ.4000ಕ್ಕೆ ರೆಡ್‌ಮಿ 5A ಸ್ಮಾರ್ಟ್‌ಫೋನ್ ಮಾರಾಟ..!

Written By:

ಭಾರತೀಯ ಮಾರುಕಟ್ಟೆಯಲ್ಲಿ ಶಿಯೋಮಿ ಬಿಡುಗಡೆ ಮಾಡಿರುವ ರೆಡ್‌ಮಿ 5A ಸ್ಮಾರ್ಟ್‌ಫೋನ್ ಅತೀ ಕಡಿಮೆ ಬೆಲೆಗೆ ದೊರೆಯುತ್ತಿರುವ ಬೆಸ್ಟ್ ಸ್ಮಾರ್ಟ್‌ಫೋನ್ ಎನ್ನುವ ಖ್ಯಾತಿಯನ್ನು ಪಡೆದುಕೊಂಡಿದ್ದು, ಈ ಸ್ಮಾರ್ಟ್‌ಫೋನ್ ಆಲ್‌ಲೈನ್ ಸೇರಿದಂತೆ ಆಫ್ ಲೈನ್ ಮಾರುಕಟ್ಟೆಯಲ್ಲಿಯೂ ಕಾಣಿಸಿಕೊಂಡಿತ್ತು, ಬಿಗ್ ಬಜಾರ್ ನಲ್ಲಿಯೂ ಈ ಸ್ಮಾರ್ಟ್‌ಫೋನ್ ಮಾರಾಟವಾಗುತ್ತಿತ್ತು. ಈ ಬಾರಿ ಬಿಗ್‌ ಬಜಾರ್ ಈ ಸ್ಮಾರ್ಟ್‌ಫೋನ್ ಅನ್ನು ರೂ.4000ಕ್ಕೆ ಮಾರಾಟ ಮಾಡುತ್ತಿದ್ದು, ಗ್ರಾಹಕರು ಮುಗಿ ಬಿದ್ದು ಈ ಸ್ಮಾರ್ಟ್‌ಫೋನ್ ಅನ್ನು ಖರೀದಿಸುತ್ತಿದ್ದಾರೆ ಎನ್ನಲಾಗಿದೆ.

ಬಿಗ್ ಬಜಾರ್ ಮುಂದೆ ಜನಸಾಗರ: ರೂ.4000ಕ್ಕೆ ರೆಡ್‌ಮಿ 5A ಸ್ಮಾರ್ಟ್‌ಫೋನ್ ಮಾರಾಟ..!

ಬಿಗ್ ಬಜಾರ್ ಗಣರಾಜ್ಯೋತ್ಸವದ ಅಂಗವಾಗಿ ಗ್ರಾಹಕರಿಗೆ ಭರ್ಜರಿ ಆಫರ್ ಗಳನ್ನು ಘೋಷಣೆ ಮಾಡಿದ್ದು, ಈ ಸೇಲ್‌ನಲ್ಲಿ ರೂ.5,499ಕ್ಕೆ ಮಾರಾಟವಾಗುತ್ತಿರುವ ರೆಡ್‌ಮಿ 5A ಸ್ಮಾರ್ಟ್‌ಫೋನ್ ಅನ್ನು ಅತೀ ಕಡಿಮೆ ಬೆಲೆ ಅಂದರೆ ರೂ.4000ಕ್ಕೆ ಮಾರಾಟ ಮಾಡುತ್ತಿದೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಹೆಚ್ಚಿನ ಗ್ರಾಹಕರು ಈ ಸ್ಮಾರ್ಟ್‌ಫೋನ್ ಕೊಳ್ಳಲು ಬಿಗ್‌ ಬಜಾರ್ ಗೆ ಮುತ್ತಿಗೆ ಹಾಕುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಈ ಸ್ಮಾರ್ಟ್‌ಫೋನ್ ಹೆಚ್ಚಿನ ಬೇಡಿಕೆಯನ್ನು ಉಳಿಸಿಕೊಂಡಿದೆ. ಈ ಹಿನ್ನಲೆಯಲ್ಲಿ ಈ ಸ್ಮಾರ್ಟ್‌ಫೋನ್ ಮಾರಾಟವನ್ನು ಬಿಗ್ ಬಜಾರ್ ಆಯೋಜಿಸಿದೆ.

ಓದಿರಿ: ಜಿಯೋಗಿಂತಲೂ ಮೊದಲೇ ಗಣರಾಜ್ಯೋತ್ಸವ ಆಫರ್ ಕೊಟ್ಟ ಏರ್‌ಟೆಲ್: ನಿತ್ಯ 1.4GB ಡೇಟಾ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Redmi 5A ದೇಶ್‌ ಕಾ ಸ್ಮಾರ್ಟ್‌ಫೋನ್ ಸೇಲ್ ಶುರು: ಇಲ್ಲಿದೇ ನೋಡಿ ಕಂಪ್ಲೀಟ್ ಡಿಟೈಲ್ಸ್..!
ರೆಡ್‌ಮಿ 5A ಸ್ಮಾರ್ಟ್‌ಫೋನ್:

ರೆಡ್‌ಮಿ 5A ಸ್ಮಾರ್ಟ್‌ಫೋನ್:

ಭಾರತೀಯ ಮಾರುಕಟ್ಟೆಯಲ್ಲಿ ಒಟ್ಟು ಎರಡು ಆವೃತ್ತಿಯಲ್ಲಿ ಈ ಸ್ಮಾರ್ಟ್‌ಫೋನ್ ಲಭ್ಯವಿದ್ದು, 2GB RAM ಮತ್ತು 3GB RAM ಆವೃತ್ತಿಯಲ್ಲಿ ದೊರೆಯುತ್ತಿದ್ದು, ಇದರಲ್ಲಿ ಸದ್ಯ ಬಿಗ್ ಬಜಾರ್ ಸೇಲ್‌ಗೆ ಇಟ್ಟಿರುವರು 2GB/16GB ಇಂಟರ್ನಲ್ ಮೆಮೊರಿಯ ಆವೃತ್ತಿಯಾಗಿದ್ದು, ರೂ.4000ಕ್ಕೆ ಮಾರಾಟ ಮಾಡುತ್ತಿದೆ.

ಬೆಲೆ ಹೇಗೆ..?

ಬೆಲೆ ಹೇಗೆ..?

ಬಿಗ್‌ಬಜಾರ್‌ನಲ್ಲಿ ರೆಡ್‌ಮಿ 5A ಸ್ಮಾರ್ಟ್‌ಫೋನ್ ರೂ.5,499ಕ್ಕೆ ಮಾರಾಟವಾಗುತ್ತಿದ್ದು, ಸದ್ಯ ಗಣರಾಜ್ಯೋತ್ಸವ ಸೇಲ್‌ ಅಂಗವಾಗಿ ರೂ.1000 ಫೀಚರ್ ಪೇ ಆಪ್ ಕ್ಯಾಷ್ ಬ್ಯಾಕ್‌ ಆಗಿ ದೊರೆಯಲಿದ್ದು, ಇದಲ್ಲದೇ ಆಕ್ಸಿಸ್‌ ಬ್ಯಾಂಕ್ ಕಾರ್ಡ್‌ ಮೂಲಕ ಖರೀದಿಸಿದರೆ ರೂ.500 ಡಿಸ್‌ಕೌಂಟ್ ದೊರೆಯಲಿದೆ ಎನ್ನಲಾಗಿದೆ. ಹೀಗಾಗಿ ಈ ಸ್ಮಾರ್ಟ್‌ಫೋನ್ ರೂ.4000ಕ್ಕೆ ದೊರೆಯಲಿದೆ.

ಎಷ್ಟು ದಿನ ಆಫರ್:

ಎಷ್ಟು ದಿನ ಆಫರ್:

ರೆಡ್‌ಮಿ 5A ಸ್ಮಾರ್ಟ್‌ಫೋನ್ ಗಣರಾಜ್ಯೋತ್ಸವದ ಅಂಗವಾಗಿ ಮಾರಾಟವಾಗುತ್ತಿದ್ದು, ಜನವರಿ 22 ರಿಂದ ಸೇಲ್ ಆರಂಭವಾಗಲಿದ್ದು, ಜನವರಿ 28ರ ವರೆಗೆ ಸೇಲ್ ನಡೆಯಲಿದೆ. ಸ್ಟಾಕ್ ಇದ್ದರೇ ಇನ್ನು ಹಲವು ದಿನ ಈ ಫೋನ್ ಆಫರ್ ಬೆಲೆಯಲ್ಲಿ ದೊರೆಯಲಿದೆ ಎನ್ನಲಾಗಿದೆ.

ರೆಡ್‌ಮಿ 5A ಸ್ಮಾರ್ಟ್‌ಫೋನ್

ರೆಡ್‌ಮಿ 5A ಸ್ಮಾರ್ಟ್‌ಫೋನ್

5 ಇಂಚಿನ HD+ ಡಿಸ್‌ಪ್ಲೇಯನ್ನು ಅಳವಡಿಸಲಾಗಿದ್ದು, ಕ್ವಾಲ್ಕಮ್ ಸ್ನಾಪ್‌ಡ್ರಾಗನ್ 425 ಪ್ರೋಸೆಸರ್ ಅನ್ನು ಇದರಲ್ಲಿ ಕಾಣಬಹುದಾಗಿದೆ. ವೇಗವಾಗಿ ಕಾರ್ಯನಿರ್ವಹಿಸಲು ಶಕ್ತವಾಗಿದೆ. 2GB/3GB RAM ಮತ್ತು 16GB/32GB ಇಂಟರ್‌ನಲ್ ಮೆಮೊರಿಯೊಂದಿಗೆ ದೊರೆಯಲಿದೆ.

ವಿಶೇಷತೆ:

ವಿಶೇಷತೆ:

ಶಿಯೋಮಿ ರೆಡ್‌ಮಿ 5A ಫೋನ್ 3000mAh ಬ್ಯಾಟರಿಯನ್ನು ಹೊಂದಿದೆ. ಫಿಂಗರ್‌ಪ್ರಿಂಟ್ ಫೀಚರ್‌ ಅನ್ನು ನೀಡಿಲ್ಲ. ಈ ಫೋನ್ ಡ್ಯುಯಲ್ ಸಿಮ್, ಬ್ಲೂ ಟೂತ್, 4G VoLTE ಸಪೋರ್ಟ್ ಹಾಗೂ USB OTG ಯಂತಹ ಎಲ್ಲಾ ಫೀಚರ್ಸ್‌ಗಳನ್ನು ಕಾಣಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Xiaomi Redmi 5A Available at Rs. 4,000 in Big Bazaar. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot