Home
ಸುದ್ದಿಜಾಲ

ಈ ಕಲೆ ಗೊತ್ತಿದ್ರೆ ಸಾಕು ನೀವು ಸಹ ತಿಂಗಳಿಗೆ 1 ಕೋಟಿ ಗಳಿಸಬಹುದು!

ಬದುಕಲು ಹಣ ತುಂಬಾನೆ ಮುಖ್ಯ. ಇತ್ತೀಚಿನ ಟೆಕ್ನಾಲಜಿ (Technology) ಯುಗದಲ್ಲಿ ಜನರು ಹಣ ಸಂಪಾದನೆ ಮಾಡಲು ಹಲವಾರು ಹೊಸ ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಾರೆ. ಅದರಂತೆ ಇಲ್ಲೋರ್ವ ಒಂದು ತಿಂಗಳಿಗಿಂತ ಕಡಿಮೆ ಅವಧಿಯಲ್ಲಿಯೇ ಬರೋಬ್ಬರಿ 1 ಕೋಟಿ ಹಣ ಗಳಿಸಿದ್ದಾನೆ ಎಂದರೆ ನೀವು ನಂಬಲೇಬೇಕು.

ಹೌದು, ಇಂದಿನ ಟೆಕ್ನಾಲಜಿ ಇದೆಲ್ಲವನ್ನೂ ಸಾಧ್ಯವಾಗಿಸುತ್ತಿದೆ. ಸೈಪ್ರಸ್‌ನ 32 ವರ್ಷದ ಉದ್ಯಮಿ ಓಲೆ ಲೆಹ್ಮನ್ ಅವರು ಕ್ರಿಪ್ಟೋ ಕ್ರ್ಯಾಶ್‌ನಿಂದ ನೊಂದು ಅಭಿವೃದ್ಧಿ ಹೊಂದುತ್ತಿರುವ ಎಐ ಶಿಕ್ಷಣತಜ್ಞರಾಗಿ ಕೆಲಸ ಮಾಡಲು ಮುಂದಾಗಿದ್ದಾರೆ. ಈ ಮೂಲಕ ಅವರು ಸುಮಾರು 1 ಕೋಟಿ ರೂಪಾಯಿಗಳ ಗಣನೀಯ ಆದಾಯವನ್ನು ಗಳಿಸುತ್ತಿದ್ದಾರೆ. ಇದು ಹೇಗೆ ಸಾಧ್ಯ?, ನೀವು ಸಹ ಈ ರೀತಿ ಆದಾಯ ಗಳಿಸುವುದು? ಹೇಗೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ಈ ಕಲೆ ಗೊತ್ತಿದ್ರೆ ಸಾಕು ನೀವು ಸಹ ತಿಂಗಳಿಗೆ 1 ಕೋಟಿ ಗಳಿಸಬಹುದು!

ತಿಂಗಳಿಗೆ ಕೋಟಿ ಸಂಪಾದಿಸುವ ವ್ಯಕ್ತಿ: ಓಲೆ ಲೆಹ್ಮನ್, ಸೈಪ್ರಸ್ ಮೂಲದ 32 ವರ್ಷದ ಉದ್ಯಮಿ ಯಾಗದ್ದು, ಇವರು ಕ್ರಿಪ್ಟೋ ಎಕ್ಸ್‌ಚೇಂಜ್ ಎಫ್‌ಟಿಎಕ್ಸ್‌ನ ಕುಸಿತದ ಸಮಯದಲ್ಲಿ ಜೀವನದಲ್ಲಿ ಏರಿಳಿತವನ್ನು ಕಂಡಿದ್ದಾರೆ. ಇದಾದ ನಂತರ ಇವರ ಜೀವನದಲ್ಲಿ ಅನೇಕ ಅನಿಶ್ಚಿತತೆ ಉಂಟಾಗಿದೆ. ಆದರೆ, ಈ ಎಲ್ಲಾ ಕಷ್ಟಗಳು ಜೀವಂತವಾಗಿ ಇದ್ದದ್ದು ಚಾಟ್‌ಜಿಪಿಟಿಯಲ್ಲಿ (chatGPT) ಎಡವಿ ಬೀಳುವವರೆಗೆ. ಇದೀಗ ಎಐ ತಂತ್ರಜ್ಞಾನವು ಇವರನ್ನು ಶಿಕ್ಷಣತಜ್ಞನಾಗಿ ಯಶಸ್ವಿ ವೃತ್ತಿಜೀವನಕ್ಕೆ ಪ್ರೇರೇಪಿಸಿದೆ.

ಕ್ರಿಪ್ಟೋ ಟ್ರೇಡರ್ ಮತ್ತು ಹೂಡಿಕೆದಾರರಾಗಿ ಆರು ವರ್ಷಗಳ ಕಾಲ ಕೆಲಸ ಮಾಡಿರುವ ಇವರು ತಮ್ಮ ವ್ಯಾಪಾರಕ್ಕಾಗಿ FTX ಅನ್ನು ಹೆಚ್ಚು ಅವಲಂಬಿಸಿದ್ದರು. ದುರದೃಷ್ಟವಶಾತ್, ಅವರ ಹೂಡಿಕೆಗಳು ಕುಸಿತ ಕಂಡವು. ಇದರ ಪರಿಣಾಮವಾಗಿ ಆರ್ಥಿಕ ನಷ್ಟವನ್ನು ಎದುರಬೇಕಾದ ಅನಿವಾರ್ಯತೆ ಉಂಟಾಯಿತು. ಇದಾದ ಬಳಿಕ ಜೀವನ ನಿರ್ವಹಣೆಗೆ ಏನಾದರೂ ಮಾಡಬೇಕಲ್ಲಾ ಎಂದು ಆಲೋಚನೆಗೆ ಮುಂದಾದರು.

ಕ್ರಿಪ್ಟೋ ಕ್ರ್ಯಾಶ್‌ನ ಎರಡು ವಾರಗಳ ನಂತರ ಲೆಹ್‌ಮನ್‌ನ ಜೀವನ ಬದಲಾಗಿದೆ. ಅಂದರೆ ಅವರು ಚಾಟ್‌ಜಿಪಿಟಿ ಕಡೆ ಮುಖ ಮಾಡಿದ್ದಾರೆ. ಇದು ಕ್ರಿಪ್ಟೋಕರೆನ್ಸಿಗಳಲ್ಲಿ ಅವರ ಆಳವಾದ ಆಸಕ್ತಿಯನ್ನು ಈ ಚಾಟ್‌ಜಿಪಿಟಿ ಮತ್ತೊಮ್ಮೆ ನೆನಪು ಮಾಡಿದೆ. ಈ ಮೂಲಕ ಮುಂದಿನ ದಿನಗಳಲ್ಲಿ ಎಐ ಒಂದು ದೊಡ್ಡ ವ್ಯವಹಾರವಾಗಬಹುದು ಎಂದು ಅರಿತುಕೊಂಡಿದ್ದಾರೆ. ಜೊತೆಗೆ ಈ ಬಗ್ಗೆ ಹೆಚ್ಚು ಆಸಕ್ತಿ ಮೂಡಿಸಿಕೊಂಡಿದ್ದಾರೆ.

ಜನವರಿಯಲ್ಲಿ ಲೆಹ್ಮನ್ ಚಾಟ್‌ಜಿಪಿಟಿ ಯೊಂದಿಗೆ ವ್ಯಾಪಕವಾದ ಪ್ರಯೋಗವನ್ನು ನಡೆಸಲು ಆರಂಭ ಮಾಡಿದರು. ಅದೇ ಸಮಯದಲ್ಲಿ ಜನರ ಆಸಕ್ತಿಯನ್ನು ಅಳೆಯಲು ಅವರು ತಮ್ಮ ವೈಯಕ್ತಿಕ ಟ್ವಿಟರ್ ಖಾತೆಯಲ್ಲಿ ಎಐ- ಸಂಬಂಧಿತ ಕಂಟೆಂಟ್‌ ಅನ್ನು ಶೇರ್‌ ಮಾಡಿಕೊಳ್ಳಲು ಮುಂದಾದರು. ನಂತರದ ತಿಂಗಳುಗಳಲ್ಲಿ ಚಾಟ್‌ಜಿಪಿಟಿ ಯೊಂದಿಗಿನ ಅವರ ಕೌಶಲ್ಯಗಳು ಚುರುಕುಗೊಂಡವು ಜೊತೆಗೆ ಎಐ ವಿಷಯದಲ್ಲಿ ಅವರ ಪರಿಣತಿ ಬೆಳೆಯಿತು.

ಏಪ್ರಿಲ್‌ನಲ್ಲಿ ಅವರು ದಿ ಎಐ ಸೊಲೊಪ್ರೆನಿಯರ್ ಅನ್ನು ಆರಂಭ ಮಾಡಿದರು. ಇದು ಎಐ ಅನ್ನು ಬಳಸಿಕೊಂಡು ಉತ್ಪಾದಕತೆಯನ್ನು ಹೆಚ್ಚಿಸಲು ಏಕವ್ಯಕ್ತಿ ಉದ್ಯಮಿಗಳಿಗೆ ಸಲಹೆಗಳನ್ನು ನೀಡುವ ಮೀಸಲಾದ ಟ್ವಿಟರ್ ಖಾತೆಯಾಗಿ ಕೆಲಸ ಮಾಡಲು ಆರಂಭ ಮಾಡಿತು. ಎಐ ಪ್ರಾಂಪ್ಟ್‌ಗಳ ಮೇಲಿನ ಎಳೆಗಳು ಮತ್ತು ವರ್ಧಿತ ಉತ್ಪಾದಕತೆಗಾಗಿ ಟೂಲ್ಸ್‌ಗಳು ಸೇರಿದಂತೆ ಇವರ ಕಂಟೆಂಟ್ ಲಕ್ಷಾಂತರ ವೀಕ್ಷಣೆಗಳನ್ನು ಗಳಿಸಿತು ಮತ್ತು ಅನುಯಾಯಿಗಳಲ್ಲಿ ಗಮನಾರ್ಹ ಬೆಳವಣಿಗೆ ಆಯಿತು. ಅಂದರೆ ಕೇವಲ 65 ದಿನಗಳಲ್ಲಿ ಅವರು 100,000 ಅನುಯಾಯಿಗಳನ್ನು ಪಡೆದರು.

ನಿರಂತರವಾಗಿ ಹೆಚ್ಚಾಗುತ್ತಿರುವ ಫಾಲೋವರ್ಸ್‌ಗಳೊಂದಿಗೆ ಎಐ ತಂತ್ರಗಳ ಒಳನೋಟಗಳ ಬೇಡಿಕೆಗೆ ಲೆಹ್ಮನ್ ಪ್ರತಿಕ್ರಿಯಿಸಿದರು. ಪರಿಣಾಮ ಎಐ ಆಡಿಯನ್ಸ್ ಆಕ್ಸಿಲರೇಟರ್ ಕೋರ್ಸ್ ಅನ್ನು ಆರಂಭ ಮಾಡಲು ಪ್ರೇರೇಪಿಸಿತು. ಇದೂ ಸಹ ಕಂಟೆಂಟ್‌ ಮಾರ್ಕೆಟಿಂಗ್‌ಗಾಗಿ ಎಐ ಅನ್ನು ನಿಯಂತ್ರಿಸುವಲ್ಲಿ ಏಕವ್ಯಕ್ತಿ ಉದ್ಯಮಿಗಳಿಗೆ ಮಾರ್ಗದರ್ಶನ ನೀಡುವ ಗುರಿಯನ್ನು ಇದು ಹೊಂದಿದ್ದು, ಈ ಕೋರ್ಸ್ ಬೆಲೆ $179 (ಸುಮಾರು ರೂ. 14,790) ದಿಂದ ಪ್ರಾರಂಭವಾಯಿತು.

ಈ ಸಂಬಂಧ ಬ್ಯುಸಿನೆಸ್ ಇನ್‌ಸೈಡರ್‌ನ ವರದಿ ಮಾಡಿದ್ದು, ಒಂದು ತಿಂಗಳೊಳಗೆ ಅವರ ಕೋರ್ಸ್‌ಗೆ 1,078 ಆರ್ಡರ್‌ಗಳನ್ನು ಪಡೆದಿದ್ದಾರೆ. ಆರಂಭದಲ್ಲಿ 20 ರ ದಶಕದ ಆರಂಭದಿಂದ 30 ರ ದಶಕದ ಮಧ್ಯಭಾಗದ ಏಕವ್ಯಕ್ತಿ ಉದ್ಯಮಿಗಳು, ಕಂಟೆಂಟ್‌ ಕ್ರಿಯೇಟರ್ಸ್‌ ಮತ್ತು ಕ್ರಿಪ್ಟೋ ಉತ್ಸಾಹಿಗಳಿಂದ ಯುಎಸ್ ಮತ್ತು ಕೆನಡಾದಾದ್ಯಂತ ಮಾರ್ಗದರ್ಶನ ನೀಡಲಾಯಿತು. ಈ ಕ್ಷಿಪ್ರ ಯಶಸ್ಸು ಇವರನ್ನು 1.4 ಕೋಟಿ ರೂ.ಗಳಿಸುವಂತೆ ಮಾಡಿದೆ.

ಈ ಕಲೆ ಗೊತ್ತಿದ್ರೆ ಸಾಕು ನೀವು ಸಹ ತಿಂಗಳಿಗೆ 1 ಕೋಟಿ ಗಳಿಸಬಹುದು!

ನೀವು ಸಹ ಈ ರೀತಿ ಹಣ ಗಳಿಸಬಹುದು: ಭಾರತದಲ್ಲೂ ಸಹ ಎಐ ಬಳಕೆ ವ್ಯಾಪಕವಾಗುತ್ತಿದೆ. ಇದನ್ನೆ ಬಂಡವಾಳ ಮಾಡಿಕೊಂಡು ಎಐ ಟೂಲ್ಸ್‌ಗಳ ಬಗ್ಗೆ ಹಾಗೂ ಎಐ ಬಳಕೆಯನ್ನು ಹೇಗೆಲ್ಲಾ ಮಾಡಬಹುದು ಎಂಬುದರ ಬಗ್ಗೆ ಆನ್‌ಲೈನ್‌ ಕೋರ್ಸ್‌ಗಳನ್ನು ಮಾಡುವ ಮೂಲಕ ಸಂಪಾದನೆ ಮಾಡಬಹುದಾಗಿದೆ. ಇದಕ್ಕೆ ಪೂರ್ವ ಸಿದ್ಧತೆ ಅಗತ್ಯವಾಗಿದೆ. ಜೊತೆಗೆ ನೀವು ಇದಕ್ಕಾಗಿ ಹೆಚ್ಚೇನು ಹಣ ವ್ಯಯ ಮಾಡಬೇಕಾದ ಅವಶ್ಯಕತೆಯೂ ಇಲ್ಲ.

Best Mobiles in India

English summary
Ole Lehmann, a 32-year-old entrepreneur from Cyprus, work as a thriving AI educator. By this he is earning a substantial income of around 1 crore rupees.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+