Home
ಸುದ್ದಿಜಾಲ

ರೈಲ್ವೇ ಪ್ರಯಾಣಿಕರೇ ಎಚ್ಚರ... ರೈಲು ಟಿಕೆಟ್ ರದ್ದು ಮಾಡಲು ಹೋಗಿ 4 ಲಕ್ಷ ಕಳೆದುಕೊಂಡ ವ್ಯಕ್ತಿ!

ಆನ್‌ಲೈನ್‌ ವಂಚನೆ (Online fraud) ವ್ಯಾಪಕವಾಗಿದ್ದು, ಸ್ಕ್ಯಾಮರ್‌ಗಳು ಲಕ್ಷ ಲಕ್ಷ ಹಣವನ್ನು ಕೆಟ್ಟ ಮಾರ್ಗದ ಮೂಲಕ ಸಂಪಾದನೆ ಮಾಡುತ್ತಿದ್ದಾರೆ. ಈ ನಡುವೆ ಸಾರ್ವಜನಿಕರಿಗೆ ಎಷ್ಟೇ ಎಚ್ಚರಿಕೆಯ ಸಂದೇಶ ನೀಡಿದರೂ ಸಹ ಮೋಸ ಹೋಗುತ್ತಲೇ ಇದ್ದಾರೆ. ಅದರಂತೆ ಈಗ ಇಲ್ಲೋರ್ವ ಹಿರಿಯ ವ್ಯಕ್ತಿ ಟ್ರೈನ್‌ ಟಿಕೆಟ್‌(Train ticket) ರದ್ದು ಮಾಡಲು ಹೋಗಿ ಬರೋಬ್ಬರಿ 4 ಲಕ್ಷ ಹಣ ಕಳೆದುಕೊಂಡಿದ್ದಾರೆ.

ಹೌದು, 78 ವರ್ಷದ ವ್ಯಕ್ತಿ IRCTC ವೆಬ್‌ಸೈಟ್‌ನಲ್ಲಿ ರೈಲು ಟಿಕೆಟ್‌ಗಳನ್ನು ರದ್ದುಗೊಳಿಸಲು(Cancellation of train tickets) ಮುಂದಾಗಿದ್ದಾಗ ಆನ್‌ಲೈನ್ ಹಗರಣಕ್ಕೆ ಬಿದ್ದು 4 ಲಕ್ಷ ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ. ಅಷ್ಟುಕ್ಕೂ ಇದು ಹೇಗೆ ಸಾಧ್ಯ?. ರೈಲ್ವೇ ಅಧಿಕಾರಿ ಎಂದು ಹೇಳಿದ್ದ ಆ ವ್ಯಕ್ತಿ ಮೋಸ ಮಾಡಲು ಏನೆಲ್ಲ ಮಾಡಿದ್ದಾನೆ? ಎಂಬಿತ್ಯಾದಿ ಮಾಹಿತಿ ಇಲ್ಲಿದೆ ನೋಡಿ.

ರೈಲು ಟಿಕೆಟ್ ರದ್ದು ಮಾಡಲು ಹೋಗಿ 4 ಲಕ್ಷ ಕಳೆದುಕೊಂಡ ವ್ಯಕ್ತಿ! ...

ರೈಲ್ವೇ ಪ್ರಯಾಣಿಕನಿಗೆ ಮೋಸ: 78 ವರ್ಷದ ವ್ಯಕ್ತಿಯೊಬ್ಬರಿಗೆ ನಕಲಿ ವೆಬ್‌ಸೈಟ್ ಬಳಕೆ ಮಾಡಿಕೊಂಡು ರೈಲ್ವೇ ಉದ್ಯೋಗಿಯಂತೆ ನಟಿಸಿ ಪಂಗನಾಮ ಹಾಕಿದ್ದಾನೆ. ಅಂದರೆ ವಂಚಕನು ಈ ವ್ಯಕ್ತಿಯ ಡಿವೈಸ್‌ ಅನ್ನು ಕಂಟ್ರೋಲ್‌ಗೆ ತೆಗೆದುಕೊಂಡು ಈ ಕೃತ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ. ಈ ವೇಳೆ ಆತ ಸೂಕ್ಷ್ಮ ಮಾಹಿತಿಯನ್ನು ಕದಿಯಲು ರಿಮೋಟ್ ಆಕ್ಸೆಸ್ ಟ್ರೋಜನ್‌ಗಳು ಮತ್ತು ಕೀಲಾಗರ್‌ಗಳಂತಹ ಮಾಲ್‌ವೇರ್ ಅನ್ನು ಬಳಕೆ ಮಾಡಿಕೊಂಡಿದ್ದಾನೆ.

ಮೋಸ ಹೋಗಿದ್ದು ಯಾರು?: ಈ ಘಟನೆಯಲ್ಲಿ ಕೋಝಿಕ್ಕೋಡ್ ವಂಡಿಪೆಟ್ಟಾದ ಎಂ. ಮೊಹಮ್ಮದ್ ಬಶೀರ್ ಎಂಬ 78 ವರ್ಷದ ವ್ಯಕ್ತಿ IRCTC ವೆಬ್‌ಸೈಟ್ ಬಳಸಿ ತನ್ನ ರೈಲು ಟಿಕೆಟ್ ರದ್ದುಗೊಳಿಸಲು ಮುಂದಾಗಿದ್ದಾರೆ. ಈ ವೇಳೆ ಅವರಿಗೆ ನಕಲಿ ವೆಬ್‌ಸೈಟ್‌ ಕಾಣಿಸಿಕೊಂಡಿದೆ. ಅದನ್ನು ಓಪನ್ ಮಾಡಿ ಪ್ರಕ್ರಿಯೆ ಆರಂಭಿಸಿದ್ದಾರೆ. ಆದರೆ ರೈಲ್ವೆ ಉದ್ಯೋಗಿ ಎಂದು ಹೇಳಿಕೊಳ್ಳುವ ಅನಾಮಿಕ ಫೋನ್ ಮೂಲಕ ಬಶೀರ್ ಅವರನ್ನು ಸ್ಕ್ಯಾಮರ್‌ ಸಂಪರ್ಕ ಮಾಡಿದ್ದಾನೆ.

ಆ ವಂಚಕ ಇಂಗ್ಲಿಷ್ ಮತ್ತು ಹಿಂದಿ ಎರಡರಲ್ಲೂ ಮಾತನಾಡಿ ಬಶೀರ್‌ಗೆ ಸೂಚನೆ ನೀಡಿದ್ದು, ಆತ ನೀಡಿದ ಎಲ್ಲಾ ಸೂಚನೆಗಳನ್ನು ಬಶೀರ್ ಪಾಲನೆ ಮಾಡಿದ್ದಾರೆ. ಇದಾದ ನಂತರದಲ್ಲಿ ಬಶೀರ್‌ಗೆ ಡಿವೈಸ್‌ನಲ್ಲಿ ನೀಲಿ ಲೋಗೋವೊಂದು ಕಾಣಿಸಿಕೊಂಡಿದೆಯಂತೆ. ನಂತರದಲ್ಲಿ ಬಶೀರ್ ಡಿವೈಸ್‌ ಅನ್ನು ಸಂಪೂರ್ಣವಾಗಿ ವಂಚಕ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾನೆ. ಇದಕ್ಕೂ ಮೊದಲು ಬಶೀರ್ ತನ್ನ ಬ್ಯಾಂಕ್ ಖಾತೆ ವಿವರ ಮತ್ತು ಎಟಿಎಂ ಕಾರ್ಡ್ ಸಂಖ್ಯೆಯನ್ನು ಸಹ ಆತನಿಗೆ ನೀಡಿದ್ದರು.

ಈ ರೀತಿಯ ವಂಚನೆ ಹೇಗೆ ಸಾಧ್ಯ?: ಡಿವೈಸ್‌ನ ಮೇಲೆ ಕಾಣಿಸಿಕೊಳ್ಳುವ ನೀಲಿ ಲೋಗೋ ಡಿವೈಸ್‌ನಲ್ಲಿ ಮಾಲ್‌ವೇರ್ ಇನ್‌ಸ್ಟಾಲ್‌ ಆಗಿರುವುದನ್ನು ಸೂಚಿಸುತ್ತದೆ. ಅಂದರೆ ವಂಚನೆ ಮಾಡಲು ವಂಚಕರು ಸಾಮಾನ್ಯವಾಗಿ ವಿವಿಧ ರೀತಿಯ ಮಾಲ್‌ವೇರ್‌ಗಳನ್ನು ಈ ವೇಳೆ ಬಳಕೆ ಮಾಡುತ್ತಾರೆ ಅದರಲ್ಲೂ ಪ್ರಮುಖವಾಗಿ ರಿಮೋಟ್ ಆಕ್ಸೆಸ್ ಟ್ರೋಜನ್ಸ್ (RATs), ಇದು ಸ್ಕ್ಯಾಮರ್‌ಗಳಿಗೆ ಬಲಿಪಶುವಿನ ಡಿವೈಸ್‌ ಅನ್ನು ದೂರದಿಂದಲೇ ಕಂಟ್ರೋಲ್ ಮಾಡಲು ಅನುವು ಮಾಡಿಕೊಡುತ್ತದೆ.

ಇದರೊಂದಿಗೆ ಬಶೀರ್ ಬಲಿಪಶುವಿನ ಡಿವೈಸ್‌ನಲ್ಲಿ ಮಾಡಿದ ಪ್ರತಿಯೊಂದು ಕೀಸ್ಟ್ರೋಕ್ ಅನ್ನು ರೆಕಾರ್ಡ್ ಮಾಡುವ ಕೀಲಾಗರ್‌ಗಳು ಅವರ ಆರ್ಸೆನಲ್‌ನಲ್ಲಿರುವ ಮತ್ತೊಂದು ಡಿವೈಸ್‌ ಆಗಿರಬಹುದು. ಇದರರ್ಥ ಪಾಸ್‌ವರ್ಡ್‌ಗಳು ಮತ್ತು ಬ್ಯಾಂಕಿಂಗ್ ರುಜುವಾತುಗಳಂತಹ ಸೂಕ್ಷ್ಮ ಮಾಹಿತಿಯನ್ನು ಸ್ಕ್ಯಾಮರ್ ಕೀಲಾಗರ್ ಬಳಕೆ ಮಾಡಿಕೊಂಡು ಸೆರೆಹಿಡಿದುಕೊಳ್ಳುತ್ತಾರೆ. ಇದರೊಂದಿಗೆ ವಂಚಕನು ಸ್ಪೈವೇರ್ ಅನ್ನು ಬಳಸಿಕೊಂಡಿರಬಹುದು ಎಂದು ಹೇಳಲಾಗಿದೆ.

ರೈಲು ಟಿಕೆಟ್ ರದ್ದು ಮಾಡಲು ಹೋಗಿ 4 ಲಕ್ಷ ಕಳೆದುಕೊಂಡ ವ್ಯಕ್ತಿ! ...

ಬಶೀರ್ ಅವರ ಚಟುವಟಿಕೆಗಳನ್ನು ರಹಸ್ಯವಾಗಿ ಮೇಲ್ವಿಚಾರಣೆ ಮಾಡಲು ಮತ್ತು ಅವರಿಗೆ ಅರಿವಿಲ್ಲದೆ ಡೇಟಾವನ್ನು ಸಂಗ್ರಹಿಸಲು ವಿನ್ಯಾಸಗೊಳಿಸಲಾದ ಒಂದು ರೀತಿಯ ಮಾಲ್ವೇರ್ ಇದಾಗಿದೆ. ಇನ್ನು ತನ್ನ ಉಳಿತಾಯ ಖಾತೆಯಿಂದ ಹಣ ತೆಗೆಯಲಾಗಿದೆ ಎಂಬ ಮೆಸೆಜ್‌ ಅನ್ನು ಬಶೀರ್‌ ಸ್ವೀಕಾರ ಮಾಡಿದಾಗಲೇ ತಾನು ವಂಚನೆಗೆ ಒಳಗಾಗಿದ್ದೇನೆ ಎಂದು ಕಂಡುಕೊಂಡಿದ್ದಾರೆ. ತಕ್ಷಣವೇ ಅವರು ತಮ್ಮ ಬ್ಯಾಂಕಿನ YMCA ಶಾಖೆಗೆ ಭೇಟಿ ನೀಡಿದರಾದರೂ ಅಷ್ಟೊತ್ತಿಗಾಗಲೇ ಅವರ ಫಿಕ್ಸೆಡ್ ಡೆಪಾಸಿಟ್‌ನಿಂದ 4 ಲಕ್ಷ ರೂ.ಅನ್ನು ಗುಳುಂ ಮಾಡಲಾಗಿದೆ.

ಇನ್ನು ಆನ್‌ಲೈನ್‌ ವಂಚನೆ ಬಗ್ಗೆ ಹೆಚ್ಚಿನ ಅರಿವಿಲ್ಲದ ಬಶೀರ್‌ 'ರೆಸ್ಟ್ ಡೆಸ್ಕ್' ಹೆಸರಿನ ಆಪ್‌ ಡೌನ್‌ಲೋಡ್ ಮಾಡಿದ್ದಾರೆ. ವಂಚಕರು ಬಶೀರ್ ಅವರ ಫೋನ್ ಅನ್ನು ಪ್ರವೇಶಿಸಲು ಇದು ಅವಕಾಶ ಮಾಡಿಕೊಟ್ಟಿದೆ ಎಂದು ಪೊಲೀಸರ ಸೈಬರ್ ಸೆಲ್ ತನಿಖೆಯಿಂದ ತಿಳಿದುಬಂದಿದೆ. ಇದಾದ ನಂತರ ಕೋಲ್ಕತ್ತಾದಿಂದ 4,05,919 ರೂ.ಗಳನ್ನು ಡೆಬಿಟ್ ಮಾಡಿಕೊಳ್ಳಲಾಗಿದೆ ಹಾಗೆಯೇ ಬಶೀರ್ ಅವರನ್ನು ಸಂಪರ್ಕಿಸಲು ಬಳಸಿದ ಫೋನ್ ಸಂಖ್ಯೆಗಳು ಬಂಗಾಳ ಮತ್ತು ಬಿಹಾರದ ಜನರಿಗೆ ಸಂಪರ್ಕ ಹೊಂದಿವೆ ಎಂದು ಪೊಲೀಸರು ಶಂಕಿಸಿದ್ದಾರೆ.

Best Mobiles in India

English summary
A 78-year-old man lost Rs 4 lakh to an online scam when he tried to cancel train tickets on the IRCTC website.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+