Home
ಸುದ್ದಿಜಾಲ

150ರೂ.ಗಳ ಆಸೆಗೆ 40 ಲಕ್ಷ ಕಳೆದುಕೊಂಡ ವ್ಯಕ್ತಿ: ಏನಿದು ಯೂಟ್ಯೂಬ್ ವಿಡಿಯೋ ಲೈಕ್‌ ಸ್ಕ್ಯಾಮ್‌?

ಯೂಟ್ಯೂಬ್‌ ಇಂದು ಮಾಹಿತಿ ಹಾಗೂ ಮನರಂಜನೆಗೆ ಸುಲಭವಾಗಿ ಲಭ್ಯ ಇರುವ ಫ್ಲಾಟ್‌ಫಾರ್ಮ್‌ ಆಗಿದೆ. ಆದರೆ, ಇದನ್ನೂ ಕೂಡ ಬಿಡದ ಸ್ಕ್ಯಾಮರ್ಸ್‌ ಇಲ್ಲೂ ಸಹ ಜನರನ್ನು ವಂಚನೆ ಮಾಡಲು ಮುಂದಾಗಿದ್ದಾರೆ. ಅದರಂತೆ ಇಲ್ಲೋರ್ವ ವ್ಯಕ್ತಿಗೆ ಬರೋಬ್ಬರಿ 40 ಲಕ್ಷ ರೂಪಾಯಿಗಳನ್ನು ವಂಚನೆ ಮಾಡಲಾಗಿದೆ.

ಹೌದು, ಇಲ್ಲೋರ್ವ ವ್ಯಕ್ತಿ ಯೂಟ್ಯೂಬ್ ವಿಡಿಯೋಗಳಿಗೆ ಲೈಕ್ ಮಾಡುವ ಮೂಲಕ 150 ರೂಪಾಯಿಗಳನ್ನು ಗಳಿಕೆ ಮಾಡಿದ್ದಾರೆ. ಅಷ್ಟು ಮಾತ್ರವಲ್ಲದೆ ಯೂಟ್ಯೂಬ್ ವಿಡಿಯೋಗಳನ್ನು ಲೈಕ್ ಮಾಡಿಕೊಂಡೇ ಇಷ್ಟು ಸಂಪಾದನೆ ಮಾಡಬಹುದುದೇ ಎಂಬ ಖುಷಿಯಲ್ಲಿ ತೇಲಾಡಿದ್ದಾರೆ. ಆದರೆ, ಆ ಖುಷಿ ಕೆಲವೇ ಸಮಯ ಮಾತ್ರ ಇತ್ತು. ಯಾಕೆಂದರೆ ನೂರಾರು ರುಪಾಯಿ ಆಸೆಗೆ ಈಗ ಈಗ ನಲ್ವತ್ತು ಲಕ್ಷ ಹಣ ಕಳೆದುಕೊಂಡಿದ್ದಾರೆ. ಹಾಗಿದ್ರೆ, ಏನಿದು ಮಹಾಮೋಸ?, ಘಟನೆ ಯಾವ ರಾಜ್ಯದ್ದು ಎಂಬ ಮಾಹಿತಿ ಇಲ್ಲಿದೆ ನೋಡಿ.

150ರೂ.ಗಳ ಆಸೆಗೆ 40 ಲಕ್ಷ ಕಳೆದುಕೊಂಡ ವ್ಯಕ್ತಿ...

ಉದ್ಯೋಗ ಹುಡುಕುವವರೇ ಟಾರ್ಗೆಟ್‌: ಮನೆಯಿಂದ ಕೆಲಸ ಮಾಡುವ ಹಗರಣವು ಇತ್ತೀಚೆಗೆ ಹೆಚ್ಚಾಗುತ್ತಿದೆ. ಅದರಂತೆ ಮನೆಯಿಂದ ಕೆಲಸ ಮಾಡುವ ಮತ್ತು ಹೆಚ್ಚುವರಿ ಹಣವನ್ನು ಗಳಿಸುವ ಲಾಭದಾಯಕ ಆಫರ್‌ಗೆ ಬಿದ್ದ ಸಾವಿರಾರು ಜನರು ಲಕ್ಷಗಟ್ಟಲೆ ಹಣ ಕಳೆದುಕೊಂಡಿದ್ದಾರೆ. ದೇಶಾದ್ಯಂತ ಈ ರೀತಿಯ ಪ್ರಕರಣಗಳು ವರದಿ ಆಗುತ್ತಲೇ ಇದ್ದರೂ ಸಹ ಜನ ಮಾತ್ರ ಎಚ್ಚೆತ್ತುಕೊಳ್ಳುತ್ತಿಲ್ಲ. ಈ ನಡುವೆ ಅಹಮದಾಬಾದ್‌ನ ಮೊರೈಯಾ ಮೂಲದ ವ್ಯಕ್ತಿಯೊಬ್ಬರು ಈ ಆನ್‌ಲೈನ್ ವಂಚನೆಗೆ ಬಲಿಯಾಗಿ 40 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ.

ಏನಿದು ಘಟನೆ?: ದೇವಾಂಗ್ ಚೌಹಾಣ್ ಎಂಬುವರು 3D ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದರು. ಆದರೆ, ಸುಲಭವಾಗಿ ಹಣ ಗಳಿಸುವ ನಕಲಿ ಆಫರ್‌ಗೆ ಬಿದ್ದು ಈಗ 40 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಅಂದರೆ ಏಪ್ರಿಲ್ 21 ರಂದು ಚೌಹಾಣ್ ವಾಟ್ಸಾಪ್‌ನಲ್ಲಿ ಅರೆಕಾಲಿಕ ಉದ್ಯೋಗದ ಕುರಿತು ಅಪರಿಚಿತ ಸಂಖ್ಯೆಯಿಂದ ಒಂದು ಮೆಸೆಜ್‌ ಬಂದಿದೆ. ಅದರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು, ಅವರು ತಕ್ಷಣವೇ ನೀಡಿದ ಸಂಖ್ಯೆಗೆ ಕರೆ ಮಾಡಿದ್ದಾರೆ.

ಆ ವೇಳೆ ಇವರಿಗೆ ಯೂಟ್ಯೂಬ್‌ ವಿಡಿಯೋಗಳಿಗೆ ಲೈಕ್‌ ಮಾಡುವ ಕೆಲಸ ನೀಡಿದ್ದಾರೆ. ಇದರಿಂದ ಸಂತಸಗೊಂಡ ಚೌಹಾಣ್ ಅವರು ಕಳುಹಿಸಿದ್ದ ವಿಡಿಯೋಗಳನ್ನು ಲೈಕ್‌ ಮಾಡಿಕೊಂಡು ಬಂದಿದ್ದಾರೆ. ಜೊತೆಗೆ ಪ್ರತಿ ಗಂಟೆಗೆ ಮೂರು ವಿಡಿಯೋಗಳನ್ನು ಲೈಕ್ ಮಾಡಲು ಮತ್ತು ಆಯಾ ಯೂಟ್ಯೂಬ್ ಚಾನೆಲ್‌ಗಳಿಗೆ ಚಂದಾದಾರಾಗುವಂತೆ ಸ್ಕ್ಯಾಮರ್‌ಗಳು ಮತ್ತೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಇದಿಷ್ಟು ಮಾತ್ರವಲ್ಲದೆ ಮೂರು ಚಾನಲ್‌ನಿಂದ 150ರೂ.ಗಳನ್ನು ಸ್ವೀಕಾರ ಮಾಡಿದ್ದಾರೆ.

ಈ ಸಂಬಂಧ ತಮ್ಮ ನೋವು ತೋಡಿಕೊಂಡಿರುವ ಚೌಹಾಣ್, 'ನಾನು ನನ್ನ ಖಾತೆಯಲ್ಲಿ 150 ರೂಪಾಯಿಗಳ ಮೊದಲ ಪಾವತಿಯನ್ನು ಸ್ವೀಕರಿಸಿದೆ. ಇದಾದ ಬಳಿಕ ನನ್ನನ್ನು ಸುಮಾರು 166 ವ್ಯಕ್ತಿಗಳು ಇರುವ ಟೆಲಿಗ್ರಾಮ್ ಗುಂಪಿಗೆ ಸೇರಿಸಲಾಯಿತು. ಅಲ್ಲಿ ಎಲ್ಲರೂ ಸುಲಭವಾಗಿ ಹಣವನ್ನು ಗಳಿಸುವ ಬಗ್ಗೆ ಮಾತನಾಡುತ್ತಿದ್ದರು. ಜೊತೆಗೆ ಈ ಕೆಲಸ ಪ್ರಾರಂಭಿಸುವ ಮೊದಲು, 1,500 ರೂ.ಗಳ ಪ್ರಿಪೇಯ್ಡ್ ಶುಲ್ಕವನ್ನು ಪಾವತಿಸಲು ಕೇಳಲಾಯಿತು' ಎಂದು ತಿಳಿಸಿದ್ದಾರೆ.

ನಂತರದಲ್ಲಿ '400 ರೂ.ಗಳ ಹೆಚ್ಚುವರಿ ಹಣದೊಂದಿಗೆ ಒಟ್ಟಾರೆ 1,900 ರೂ.ಗಳನ್ನು ಮತ್ತೆ ನಮಗೆ ಮರಳಿ ಪಾವತಿ ಮಾಡಲಾಯಿತು. ಇದರಿಂದ ಮತ್ತೆ ಇನ್ನಷ್ಟು ಹಣವನ್ನು ಗಳಿಸುವ ಆಸೆಯಿಂದ ಮತ್ತೊಂದು ಟಾಸ್ಕ್‌ಗೆ ಎಂಟ್ರಿಯಾದೆ. ಅದರಲ್ಲಿ 2,050 ರೂ.ಗಳನ್ನು ಪಾವತಿ ಮಾಡಬೇಕಿತ್ತು. ಆದರೆ, ಈ ಟಾಸ್ಕ್‌ನಲ್ಲಿ ಒಂದು ರೂ. ಸಹ ವಾಪಸ್‌ ಬರಲಿಲ್ಲ. ಆದರೂ ಸಹ ಕೆಲವು ವಿಡಿಯೋ ಇಷ್ಟಪಡುವ ಟಾಸ್ಕ್‌ ಪೂರ್ಣಗೊಳಿಸಿದ ನಂತರ ಹೆಚ್ಚಿನ ಗಳಿಕೆ ಮಾಡಬಹುದುದೆಂದು ಅವರು ಭರವಸೆ ನೀಡಿದ್ದರು' ಎಂದು ಹೇಳಿದ್ದಾರೆ.

ನಂತರದಲ್ಲಿ 'ಜಹಾನ್ವಿ ಸಿಂಗ್, ಮೋನಾ, ರೋಸಾನಾ ಮತ್ತು ಲೂಸಿ ಎಂಬುವರು ನನ್ನನ್ನು ಸಂಪರ್ಕಿಸಿ ದೊಡ್ಡ ಟಾಸ್ಕ್‌ ತೆಗೆದುಕೊಳ್ಳಲು ಪ್ರೋತ್ಸಾಹಿಸಿದರು. ಜೊತೆಗೆ ಅವರ ಕಂಪನಿಗಾಗಿ ವೆಬ್‌ಸೈಟ್ ಅನ್ನು ಸಹ ಕ್ರಿಯೇಟ್‌ ಮಾಡಿದ್ದರು. ಅಲ್ಲಿ ಅವರು ನಾನು ಪೂರ್ಣಗೊಳಿಸಿದ ಕಾರ್ಯಗಳನ್ನು ಎಂಟ್ರಿ ಮಾಡಿದ್ದರು. ಜೊತೆಗೆ ನನ್ನ ಪಾವತಿ ವಿವರಗಳನ್ನು ನವೀಕರಿಸಿದ್ದರು. ಇದು ನ್ಯಾಯಸಮ್ಮತವಾಗಿದೆ ಎಂದು ನಂಬಿ 30 ಲಕ್ಷ ರೂಪಾಯಿಗಳನ್ನು ಪಾವತಿ ಮಾಡಿದೆ' ಎಂದು ಮೋಸದ ಬಗ್ಗೆ ವಿವರಿಸಿದ್ದಾರೆ.

ಇಲ್ಲಿಂದ ಆರಂಭ ಆಯ್ತು ನೋಡಿ ಮೋಸಗಾರರ ಆಟ. ಅಂದರೆ ಚೌಹಾಣ್ ಅವರು ತಾವು ಹಾಕಿದ್ದ 30 ಲಕ್ಷ ರೂಪಾಯಿಗಳನ್ನು ವಾಪಸ್‌ ತೆಗೆದುಕೊಳ್ಳಲು ನೋಡಿದ್ದಾರೆ. ಆದರೆ ಅದು ಸಾಧ್ಯವಾಗಿಲ್ಲ. ಯಾಕೆಂದರೆ ವಂಚಕರು ಅವರ ಖಾತೆಯನ್ನು ನಿರ್ಬಂಧಿಸಿದ್ದರಂತೆ. ಅಷ್ಟು ಮಾತ್ರವಲ್ಲದೆ ಕ್ರಿಪ್ಟೋ ಕರೆನ್ಸಿ ಸಂಸ್ಥೆಯನ್ನು ಪರಿಶೀಲಿಸುವ ಅಂತಿಮ ಟಾಸ್ಕ್‌ ಅನ್ನು ಅವರಿಗೆ ನೀಡಲಾಗಿದೆ. ಈ ಎಲ್ಲಾ ಸಮಸ್ಯೆಗಳಿಂದ ಬೇಸತ್ತು ಅವರು 'ಥಂಬ್ಸ್ ಡೌನ್' ಐಕಾನ್ ಮೇಲೆ ಕ್ಲಿಕ್‌ ಮಾಡಿದ್ದರಂತೆ.

ಆದರೆ ಇದನ್ನೇ ಆಧಾರವಾಗಿರಿಸಿಕೊಂಡ ಮೋಸಗಾರರು ಅದು ನಕಾರಾತ್ಮಕ ವಿಮರ್ಶೆಯಾಗಿದೆ ಮತ್ತು ಆದ್ದರಿಂದ ನನ್ನ ಪಾವತಿಯನ್ನು ನಿರ್ಬಂಧಿಸಲಾಗಿದೆ ಎಂದು ಹೇಳಿದ್ದಾರೆ. ಅಷ್ಟು ಮಾತ್ರವಲ್ಲದೆ ಈ ಲಾಕ್‌ ಅನ್ನು ಅನ್‌ಲಾಕ್‌ ಮಾಡಲು ಹಾಗೂ ಈಗಿರುವ ಹಣವನ್ನು ಮರಳಿ ಪಡೆದುಕೊಳ್ಳಲು ತೆರಿಗೆ ಕಟ್ಟುವಂತೆ ಮತ್ತಷ್ಟು ಬ್ಲಾಕ್ ಮೇಲ್ ಮಾಡಿದ್ದಾರೆ. ಇದಕ್ಕಾಗಿ 11 ಲಕ್ಷ ರೂ.ಗಳನ್ನು ಕೇಳಿದ್ದಾರೆ. ಇಷ್ಟೆಲ್ಲಾ ಆದ ಮೇಲೆ ತಾವು ವಂಚನೆಗೆ ಒಳಗಾಗಿದ್ದೇನೆ ಎಂದು ಅರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.

Best Mobiles in India

English summary
A person earned 150 rupees by liking YouTube videos and after that he lost forty lakhs.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+