online scam: ಆನ್‌ಲೈನ್ ಕ್ಲಾಸ್ ಹೆಸರಲ್ಲಿ ಭಾರೀ ವಂಚನೆ! 64 ಲಕ್ಷ ರೂ. ಕಳೆದುಕೊಂಡ ವ್ಯಕ್ತಿ... ಆಗಿದ್ದೇನು?
ಆನ್‌ಲೈನ್ ವಂಚನೆಗಳು (online scam) ದಿನದಿನಕ್ಕೂ ಹೆಚ್ಚುತ್ತಲೆ ಇವೆ. ಈಗಾಗಲೇ ಭಾರತ ಸರ್ಕಾರ ಆನ್‌ಲೈನ್ ಸ್ಕ್ಯಾಮ್‌ಗಳನ್ನು ಕಡಿಮೆ ಮಾಡಲು ಸಾಕಷ್ಟು ನಿಯಮಗಳನ್ನು ಜಾರಿ ಮಾಡಿದೆಯಾದರೂ ಸ್ಕ್ಯಾಮರ್‌ಗಳು ರಂಗೋಲಿ ಕೆಳಗೆ ನುಸುಳುವ ಯತ್ನ ಮಾಡುತ್ತಿದ್ದಾರೆ. ಅದರಂತೆ ಈಗ ವ್ಯಕ್ತಿಯೋರ್ವರು 64 ಲಕ್ಷ ರೂ. ಕಳೆದುಕೊಂಡಿದ್ದಾರೆ.
ಹೌದು, ಆನ್‌ಲೈನ್ ವಂಚನೆಯಿಂದಾಗಿ ವ್ಯಕ್ತಿಯೊಬ್ಬರು 64 ಲಕ್ಷ ರೂಪಾಯಿಗಳಷ್ಟು ಹಣ ಕಳೆದುಕೊಂಡಿದ್ದಾರೆ. ಅಪರಿಚಿತ ವ್ಯಕ್ತಿಯ ಕೋರಿಕೆಯ ಮೇರೆಗೆ ಆನ್‌ಲೈನ್ ಮೂಲಕ ಕ್ಲಾಸ್ ಮಾಡುವ ವಾಟ್ಸಾಪ್ ಗ್ರೂಪ್‌ಗೆ ಸೇರಿದ್ದೇ ಈ ಘಟನೆಗೆ ಕಾರಣವಾಗಿದೆ. ಹಾಗಿದ್ರೆ, ಈ ವ್ಯಕ್ತಿಗೆ ಸ್ಕ್ಯಾಮರ್ ಗಳು ಹೇಗೆ ಮೋಸ ಮಾಡಿದ್ದಾರೆ?, ಈ ರೀತಿಯ ಘಟನೆಗಳಿಂದ ಎಚ್ಚರಿಕೆ ವಹಿಸುವುದು ಹೇಗೆ ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ಆನ್‌ಲೈನ್ ವಂಚನೆಗೆ ಒಳಗಾದ ವ್ಯಕ್ತಿ: ಈ ಘಟನೆ ವಿಶಾಲಾಕ್ಷಿ ನಗರದಿಂದ ವರದಿಯಾಗಿದೆ. ಸ್ಥಳೀಯ ಕಾನೂನು ಜಾರಿ ಅಧಿಕಾರಿಗಳು ಮಾಹಿತಿ ನೀಡಿದಂತೆ, ವ್ಯಕ್ತಿಯೋರ್ವ ಅಪರಿಚಿತ ವ್ಯಕ್ತಿಯ ಕೋರಿಕೆಯ ಮೇರೆಗೆ ಸ್ಟಾಕ್ ಎಕ್ಸ್‌ಚೇಂಜ್ (Stock Exchange) ಎಂಬ ಹೆಸರಿನ ವಾಟ್ಸಾಪ್ ಗ್ರೂಪ್‌ಗೆ ಆನ್‌ಲೈನ್ ಕ್ಲಾಸ್‌ಗಾಗಿ ಸೇರಿಕೊಂಡಿದ್ದಾರೆ. ಈ ವೇಳೆ ಕಡಿಮೆ ಹಣ ಹಾಕಿ ಹೆಚ್ಚು ಸಂಪಾದನೆ ಮಾಡಬಹುದು ಎಂದು ಬಲಿಪಶುವಿಗೆ ಮನವೊಲಿಸಲಾಗಿದೆ. ಇದು ಅವರಲ್ಲಿ ಷೇರು ಹೂಡಿಕೆಗೆ ಕಾರಣವಾಗಿದೆ.
ಕೆಲವೇ ಸಮಯದ ಅವಧಿಯಲ್ಲಿ, ಈ ವ್ಯಕ್ತಿ ಹಲವಾರು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು ಮತ್ತು ಬ್ಯಾಂಕಿಂಗ್ ಮೂಲಕ ಒಟ್ಟು 64 ಲಕ್ಷ ರೂ.ಗಳ ಗಮನಾರ್ಹ ಮೊತ್ತವನ್ನು ಠೇವಣಿ ಮಾಡಿದ್ದಾರೆ. ಆದರೆ, ಯಾವ ಹೆಚ್ಚಿನ ಹಣವೂ ಸಹ ಇವರಿಗೆ ಬಂದಿಲ್ಲ. ಅಷ್ಟೇ ಯಾಕೆ ಹೂಡಿಕೆ ಮಾಡಿದ ಹಣವೂ ಸಹ ಇವರ ಕೈ ತಪ್ಪಿ ಹೋಗಿದೆ. ಇದರಿಂದ ಎಚ್ಚೆತ್ತು ತಾನು ಮೋಸ ಹೋಗುತ್ತಿದ್ದೇನೆ ಎಂದು ಅರಿತುಕೊಂಡಿದ್ದಾರೆ. ತಕ್ಷಣವೇ ಸ್ಥಳೀಯ ಕಾನೂನು ಜಾರಿ ಸಂಸ್ಥೆಗಳಿಗೆ ಔಪಚಾರಿಕ ದೂರು ಸಲ್ಲಿಸಲಾಗಿದ್ದು, ಈ ಸಂಬಂಧ ಐವರನ್ನು ಬಂಧಿಸಲಾಗಿದೆ.

ಈ ರೀತಿಯ ಘಟನೆಗಳು ಪದೇ ಪದೇ ಆಗುತ್ತಿದ್ದರೂ ಸಹ ಜನರು ಎಚ್ಚೆತ್ತುಕೊಂಡತೆ ಕಾಣುತ್ತಿಲ್ಲ. ಸ್ಕ್ಯಾಮರ್‌ಗಳು ತೋಡಿರುವ ಹಳ್ಳಕ್ಕೆ ನಾಮುಂದು ನಾಮುಂದು ಎಂಬಂತೆ ಬೀಳುತ್ತಿದ್ದಾರೆ. ಆದ ಕಾರಣ, ಯಾವುದೇ ಅಪೇಕ್ಷಿಸದ ಮೆಸೆಜ್‌ಗಳು ಅಥವಾ ಪರಿಚಯವಿಲ್ಲದ ಆನ್‌ಲೈನ್ ಗ್ರೂಪ್‌ಗಳಿಗೆ ಎಂಟ್ರಿ ಆಗುವುದು ಅಥವಾ ಹೂಡಿಕೆಯ ಅವಕಾಶಗಳಿಗೆ ತಲೆಬಾಗುವ ಕೆಲಸ ಮಾಡಬೇಡಿ.
ಅದರಲ್ಲೂ ಯಾವುದೇ ಹಣಕಾಸಿನ ವಹಿವಾಟುಗಳು ಅಥವಾ ಹೂಡಿಕೆ ಯೋಜನೆಗಳಲ್ಲಿ ಭಾಗಿಯಾಗುವ ಮುನ್ನ ಮೊದಲು ಮೂಲಗಳ ವಿಶ್ವಾಸಾರ್ಹತೆಯನ್ನು ಪರಿಶೀಲಿಸುವುದು ಅತ್ಯಗತ್ಯ. ಇದರೊಂದಿಗೆ ವೈಯಕ್ತಿಕ ಮತ್ತು ಹಣಕಾಸಿನ ಮಾಹಿತಿಯನ್ನು ಸಂರಕ್ಷಿಸಲು ಸಂವಹನ ಮಾರ್ಗಗಳನ್ನು ಸುರಕ್ಷಿತಗೊಳಿಸುವುದು ಅತ್ಯಗತ್ಯವಾಗ ಮಾರ್ಗವಾಗಿದೆ. ಅಂದರೆ ಮೆಸೆಜ್ ಅಥವಾ ಕರೆ ಮೂಲಕ ಯಾವುದೇ ಮಾಹಿತಿ ಹಂಚಿಕೊಳ್ಳಬೇಡಿ.

ಇನ್ನು ಮೆಸೇಜಿಂಗ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಶೇರ್ ಮಾಡಲಾದ ಲಿಂಕ್‌ಗಳು ಅಥವಾ ಫೈಲ್‌ಗಳ ಮೇಲೆ ಕ್ಲಿಕ್ ಮಾಡುವಾಗ ಎಚ್ಚರಿಕೆ ವಹಿಸುವುದು ಸಹ ಅಗತ್ಯವಾದ ವಿಷಯವಾಗಿದೆ. ಈ ಮೂಲಕ ಫಿಶಿಂಗ್ ಪ್ರಯತ್ನಗಳು ಅಥವಾ ಮಾಲ್‌ವೇರ್‌ಗೆ ಬಲಿಯಾಗುವುದನ್ನು ತಡೆಯಬಹುದು. ಇದರ ಜೊತೆಗೆ ಆನ್‌ಲೈನ್‌ನಲ್ಲಿ ಎದುರಾಗುವ ಯಾವುದೇ ಅನುಮಾನಾಸ್ಪದ ಅಥವಾ ಮೋಸದ ಚಟುವಟಿಕೆಯನ್ನು ಸಂಬಂಧಿತ ಅಧಿಕಾರಿಗಳು ಅಥವಾ ಸೈಬರ್ ಸೆಕ್ಯುರಿಟಿ ಏಜೆನ್ಸಿಗಳಿಗೆ ವರದಿ ಮಾಡುವುದು ಪ್ರಮುಖವಾದ ಕೆಲಸವಾಗಿದೆ.
ಸ್ಕ್ಯಾಮರ್‌ಗಳಿಂದ ಆಗುವ ಹೆಚ್ಚಿನ ಶೋಷಣೆಯನ್ನು ತಡೆಯಲು ಮತ್ತು ಇತರರನ್ನು ಇದೇ ರೀತಿಯ ವಂಚನೆಗಳಿಗೆ ಬಲಿಯಾಗದಂತೆ ರಕ್ಷಣೆ ಮಾಡಲು ಸೈಬರ್ ಕ್ರೈಮ್ ಬಗ್ಗೆ ತಿಳಿಯುವುದು ನಿಮ್ಮೆಲ್ಲರ ಪ್ರಮುಖ ಕರ್ತವ್ಯವಾಗಿದೆ. ಅಂದರೆ ಈ ಮೂಲಕ ನಿಮ್ಮನ್ನು ನಿಮ್ಮ ಕುಟುಂಬವನ್ನು ಸಹ ರಕ್ಷಣೆ ಮಾಡಬಹುದಾಗಿದೆ. ಈ ರೀತಿ ಮಾಡಿದ್ದೇ ಆದರೆ ಆನ್‌ಲೈನ್ ವಂಚನೆಗಳಿಗೆ ಒಳಗಾಗುವಿಕೆಯನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು ಜೊತೆಗೆ ಆರ್ಥಿಕ ಸುರಕ್ಷತೆ ಹೆಚ್ಚಿಗೆ ಮಾಡಿಕೊಳ್ಳಬಹುದು.


Click it and Unblock the Notifications








