Home
ಸುದ್ದಿಜಾಲ

19 ಸಾವಿರ ರೂ. ಬೆಲೆಯ ಹೆಡ್‌ಫೋನ್ ಟೂತ್‌ಪೇಸ್ಟ್ ಆಗಿದ್ದು ಹೇಗೆ?: ಇಲ್ಲಿದೆ ನೋಡಿ ವಿಡಿಯೋ

ಇತ್ತೀಚಿನ ದಿನಗಳಲ್ಲಿ ಬಹುಪಾಲು ಮಂದಿ ಆನ್‌ಲೈನ್‌ (Online) ಮೂಲಕವೇ ಅಗತ್ಯ ವಸ್ತುಗಳನ್ನು ಆರ್ಡರ್ ಮಾಡುತ್ತಾರೆ. ಅದರಲ್ಲೂ ಸ್ಮಾರ್ಟ್‌ ಗ್ಯಾಜೆಟ್‌ಗಳನ್ನೇ ಹೆಚ್ಚಾಗಿ ಈ ಮೂಲಕ ಆರ್ಡರ್‌ ಮಾಡಲಾಗುತ್ತದೆ. ಯಾಕೆಂದರೆ ಆಪ್‌ಲೈನ್‌ ಮಾರುಕಟ್ಟೆಗಿಂತ ಇಲ್ಲಿ ಹೆಚ್ಚಿನ ಆಫರ್ ಪಡೆದುಕೊಳ್ಳಬಹುದು ಎಂದು. ಆದರೆ, ಇಲ್ಲೇ ಹೆಚ್ಚಾಗಿ ವಂಚನೆ ಪ್ರಕರಣಗಳು ಸಹ ಜರುಗುತ್ತಿವೆ.

ಹೌದು, ಅನೇಕ ಜನರು ಆನ್‌ಲೈನ್‌ ಮೂಲಕ ವಸ್ತುಗಳನ್ನು ಖರೀದಿ ಮಾಡಲು ಮುಂದಾಗುತ್ತಾರೆ. ಈ ಮೂಲಕ ಆರ್ಡರ್‌ ಮಾಡಿದ ವಸ್ತು ನಿರ್ಧಿಷ್ಟ ಸಮಯದಲ್ಲಿ ಅವರ ಮನೆಯ ಮುಂದೆ ಬರುತ್ತದೆ. ಅದರಂತೆ ಇಲ್ಲೋರ್ವರು ಆರ್ಡರ್‌ ಮಾಡಿದ್ದ 19 ಸಾವಿರ ರೂ. ಬೆಲೆಯ ಹೆಡ್‌ಫೋನ್ ಟೂತ್‌ಪೇಸ್ಟ್ ಆಗಿದ್ದು ಕನ್ವರ್ಟ್‌ ಆಗಿದೆ. ಅಷ್ಟಕ್ಕೂ ಇದು ಹೇಗೆ ಸಾಧ್ಯ?. ಈ ರೀತಿಯ ವಂಚನೆಗಳಿಂದ ಪಾರಾಗುವುದು ಹೇಗೆ ಅನ್ನೋ ಮಾಹಿತಿ ಇಲ್ಲಿದೆ ನೋಡಿ.

19 ಸಾವಿರ ರೂ. ಬೆಲೆಯ ಹೆಡ್‌ಫೋನ್ ಟೂತ್‌ಪೇಸ್ಟ್ ಆಗಿದ್ದು ಹೇಗೆ?..

ಟೂತ್‌ಪೇಸ್ಟ್ ಆದ ಹೆಡ್‌ಫೋನ್‌: ಆನ್‌ಲೈನ್‌ನಲ್ಲಿ ಆರ್ಡರ್‌ಗಳು ಹೆಚ್ಚಾದಂತೆ ಮೋಸದ ವ್ಯವಹಾರ ಸಹ ಹೆಚ್ಚಾಗುತ್ತಿದೆ. ಈ ಮೊದಲು ಸಾಕಷ್ಟು ಜನರು ತಾವು ಆರ್ಡರ್‌ ಮಾಡಿದ ವಸ್ತುವಿನ ಬದಲಾಗಿ ಬೇರೆ ವಸ್ತುವನ್ನು ಸ್ವೀಕರಿಸಿದ ಘಟನೆಯನ್ನು ನಾವು ನೋಡಿದ್ದೆವೆ. ಈ ಕಾರಣಕ್ಕೆ ಆನ್‌ಲೈನ್ ಶಾಪಿಂಗ್ ಯಾವಾಗಲೂ ನೀವು ಭಾವಿಸುವಷ್ಟು ಸುಗಮವಾಗಿರುವುದಿಲ್ಲ ಅನ್ನೋದನ್ನು ಈ ಮೂಲಕ ಸಾಬೀತು ಪಡಿಸುವಂತೆ ಇಲ್ಲೊಂದು ಘಟನೆ ಜರುಗಿದೆ. ಅಂದರೆ, ಇಲ್ಲೋರ್ವರು ಹೆಡ್‌ಫೋನ್‌ ಬದಲಿಗೆ ಟೂತ್‌ಪೇಸ್ಟ್ ಸ್ವೀಕಾರ ಮಾಡಿದ್ದಾರೆ.

ಯಶ್ ಓಜಾ ಎಂಬ ಗ್ರಾಹಕ ಎಕ್ಸ್‌ನಲ್ಲಿ ವಿಡಿಯೋವೊಂದನ್ನು ಶೇರ್‌ ಮಾಡಿಕೊಂಡಿದ್ದಾರೆ. ಅಂದರೆ ಅಮೆಜಾನ್‌ನಿಂದ (amazon) 19,000 ರೂಪಾಯಿ ಮೌಲ್ಯದ ಸೋನಿ XB910N ವೈರ್‌ಲೆಸ್ ಹೆಡ್‌ಫೋನ್‌ ಅನ್ನು ಆರ್ಡರ್ ಮಾಡಲಾಗಿದ್ದು, ಅದನ್ನು ತೆರೆದು ನೋಡಿದಾಗ ಅಲ್ಲಿ ಟೂತ್‌ಪೇಸ್ಟ್ ಕಂಡು ಬಂದಿದೆ. ಇದನ್ನು ನೋಡಿದ ವ್ಯಕ್ತಿ ಆಘಾತಕ್ಕೊಳಗಾಗಿದ್ದಾನೆ. ಜೊತೆಗೆ ವಿಡಿಯೋ ಶೀರ್ಷಿಕೆಯಲ್ಲಿ, ನಾನು ಸೋನಿ XB910N ಅನ್ನು ಆರ್ಡರ್ ಮಾಡಿದ್ದೆ, ಆದರೆ ಕೋಲ್‌ಗೇಟ್‌ ಪಡೆದುಕೊಂಡಿದ್ದೇನೆ ಎಂದು ಬರೆದಿದ್ದಾರೆ.

19 ಸಾವಿರ ರೂ. ಬೆಲೆಯ ಹೆಡ್‌ಫೋನ್ ಟೂತ್‌ಪೇಸ್ಟ್ ಆಗಿದ್ದು ಹೇಗೆ?..

ತಕ್ಷಣ ಸ್ಪಂಧಿಸಿದ ಅಮೆಜಾನ್: ಇನ್ನು ಓಜಾ ಅವರ ದೂರಿಗೆ ಅಮೆಜಾನ್ ತ್ವರಿತವಾಗಿ ಪ್ರತಿಕ್ರಿಯೆ ನೀಡಿದೆ. ನಿಮ್ಮ ಆರ್ಡರ್‌ನ ತಪ್ಪಾದ ಐಟಂಗೆ ಸಂಬಂಧಿಸಿದಂತೆ ನಾವು ಕ್ಷಮೆ ಯಾಚಿಸುತ್ತೇವೆ. ಹಾಗೆಯೇ ನಾವು ನಿಮಗೆ ಸಹಾಯ ಮಾಡಲು ಬಯಸುತ್ತೇವೆ, ದಯವಿಟ್ಟು ನಿಮ್ಮ ಡಿಎಮ್‌ ಸೆಟ್ಟಿಂಗ್‌ಗಳನ್ನು ನವೀಕರಿಸಿ ಮತ್ತು ಡಿಮ್‌ ಮೂಲಕ ನಮ್ಮನ್ನು ಸಂಪರ್ಕಿಸಿ ಎಂದು ಉಲ್ಲೇಖಿಸಿದೆ.

ಈ ರೀತಿಯ ಘಟನೆ ಇದೇ ಮೊದಲಲ್ಲ: ಆನ್‌ಲೈನ್ ಶಾಪಿಂಗ್‌ನಿಂದ ವ್ಯಕ್ತಿಯೊಬ್ಬರು ಈ ತಪ್ಪಾದ ಪ್ರೊಡಕ್ಟ್ ಅನ್ನು ಪಡೆದಿರುವುದು ಇದೇ ಮೊದಲೇನಲ್ಲ. ಈ ಹಿಂದೆ, ಅಮೆಜಾನ್‌ನಿಂದ 90 ಸಾವಿರ ರೂ.ಗಳ ಕ್ಯಾಮೆರಾ ಲೆನ್ಸ್ ಅನ್ನು ಆರ್ಡರ್ ಮಾಡಿದ್ದ ವ್ಯಕ್ತಿಗೆ ಬೇರೆ ಪ್ರೊಡಕ್ಟ್ ಅನ್ನು ನೀಡಲಾಗಿತ್ತು. ಅಂದರೆ, ಅಮೆಜಾನ್‌ನಿಂದ ಕ್ಯಾಮೆರಾ ಲೆನ್ಸ್ ಅನ್ನು ಆರ್ಡರ್ ಮಾಡಿದ್ರೆ ಲೆನ್ಸ್‌ನ ಬದಲಿಗೆ ಕ್ವಿನೋವಾ ಬೀಜಗಳ ಪ್ಯಾಕೆಟ್ ಅನ್ನು ನೀಡಲಾಗಿತ್ತು. ಈ ಸಂಬಂಧ ಎಕ್ಸ್‌ನಲ್ಲಿ ಗ್ರಾಹಕ ನೋವು ತೋಡಿಕೊಂಡಿದ್ದ.

ಅಮೆಜಾನ್ ಈ ಬಗ್ಗೆ ಪ್ರತಿಕ್ರಿಯೆ ನೀಡಿ ಪ್ರಕರಣದ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದೆ. ಅದರೆ, ನೊಂದ ಗ್ರಾಹಕ ಈ ಬಗ್ಗೆ ಬೇಸರ ಹೊರಹಾಕಿದ್ದು, ದಯವಿಟ್ಟು ಅದನ್ನು ಶೀಘ್ರವಾಗಿ ಪರಿಹರಿಸಿ, ನಾನು ಆರ್ಡರ್ ಮಾಡಿದ ಲೆನ್ಸ್ ಅನ್ನು ನನಗೆ ಕಳುಹಿಸಿ ಅಥವಾ ನನ್ನ ಹಣವನ್ನು ಮರುಪಾವತಿಸಿ ಎಂದು ಟ್ವೀಟ್ ಮಾಡಿದ್ದಾರೆ. ಈ ರೀತಿಯ ಘಟನೆಗಳು ನಿರಂತರವಾಗಿ ನಡೆಯುತ್ತಿರುವುದರಿಂದ ಹೆಚ್ಚಿನ ಬೆಲೆಯ ವಸ್ತುಗಳನ್ನು ಆನ್‌ಲೈನ್‌ನಲ್ಲಿ ಆರ್ಡರ್‌ ಮಾಡಲು ಜನ ಹಿಂಜರಿಯುವಂತೆ ಆಗಿದೆ.

ಆನ್‌ಲೈನ್‌ನಲ್ಲಿ ಆರ್ಡರ್‌ ಮಾಡುವಾಗ ಎಚ್ಚರಿಕೆ ಇರಲಿ: ನೀವು ಆನ್‌ಲೈನ್‌ನಲ್ಲಿ ಏನಾದರೂ ಆರ್ಡರ್‌ ಮಾಡಲು ಮುಂದಾದರೆ ಮೊದಲು ಬಳಕೆ ಮಾಡುವ ಪ್ಲಾಟ್‌ಫಾರ್ಮ್ ಅಂದರೆ ಕಾಮರ್ಸ್‌ ಸೈಟ್‌ನ ಸತ್ಯಾಸತ್ಯತೆ ತಿಳಿದುಕೊಳ್ಳಿ. ಇದರೊಂದಿಗೆ ನಿಮ್ಮ ಡಿವೈಸ್‌ ಅನ್ನು ಅಪ್‌ಡೇಟ್‌ ಮಾಡಿಕೊಳ್ಳಿ, ಇದರಿಂದ ನೀವು ಮಾಡುವ ಪಾವತಿ ಪ್ರಕ್ರಿಯೆಗಳು ಹಾಗೂ ಆರ್ಡರ್‌ಗಳು ನಿಮ್ಮ ಕೈ ತಪ್ಪುವುದು ಅಸಾಧ್ಯ. ಅಂದರೆ ನಿಮ್ಮ ಡಿವೈಸ್‌ನಲ್ಲಿ ಏನಾದರೂ ಮಾಲ್‌ವೇರ್‌ ಇದ್ದರೆ ಅವು ನಿಮ್ಮ ಡಿವೈಸ್‌ ಅನ್ನು ಸ್ಕ್ಯಾಮರ್‌ಗಳಿಗೆ ರಿಮೋಟ್‌ ಕಂಟ್ರೋಲ್‌ ನೀಡುತ್ತವೆ.

19 ಸಾವಿರ ರೂ. ಬೆಲೆಯ ಹೆಡ್‌ಫೋನ್ ಟೂತ್‌ಪೇಸ್ಟ್ ಆಗಿದ್ದು ಹೇಗೆ?..

ಅದರಲ್ಲೂ ಅತಿಯಾದ ಕೊಡುಗೆ ಎಂದು ಹೇಳುವ ಸೈಟ್‌ಗಳ ಬಗ್ಗೆ ಯಾವಾಗಲೂ ಎಚ್ಚರಿಕೆ ವಹಿಸಿ. ಅಷ್ಟೇ ಅಲ್ಲದೆ ಕ್ಯಾಶ್‌ ಆನ್‌ ಡೆಲಿವರಿ ಆಯ್ಕೆ ಇಲ್ಲ ಎಂದರೆ ಅದನ್ನು ಅನುಮಾನದಿಂದಲೇ ನೋಡಿ. ಇದರೊಂದಿಗೆ ನೀವು ಇತರೆ ಮೂಲಗಳಿಂದ ಪಡೆಯುವ ಗಿಫ್ಟ್‌ ಕಾರ್ಡ್‌ ಹಾಗೂ ಇನ್ನಿತರೆ ಕಾರ್ಡ್‌ಗಳನ್ನು ಬಳಕೆ ಮಾಡುವಾಗ ಎಚ್ಚರಿಕೆ ವಹಿಸಿ. ಈ ವೇಳೆ ಸಂಪೂರ್ಣ ಬ್ಯಾಂಕ್‌ ವಿವರ ಹಾಗೂ ಇನ್ನಿತರೆ ಖಾಸಗಿ ಮಾಹಿತಿ ನೀಡಬೇಡಿ.

ಆನ್‌ಲೈನ್‌ ಶಾಪಿಂಗ್‌ ವೇಳೆ ಕ್ರೆಡಿಟ್ ಕಾರ್ಡ್ ಅಥವಾ ಪೇಪಾಲ್ ಬಳಕೆ ಮಾಡಿ. ಬದಲಾಗಿ ಡೆಬಿಟ್ ಕಾರ್ಡ್ ಅನ್ನು ಬಳಸಬೇಡಿ. ಯಾಕೆಂದರೆ ಇವುಗಳು ಸುರಕ್ಷತಾ ರಕ್ಷಣೆಗಳನ್ನು ಹೊಂದಿಲ್ಲ. ಕ್ರೆಡಿಟ್‌ ಕಾರ್ಡ್‌ನಲ್ಲಿ ಏನಾದರೂ ಸಮಸ್ಯೆ ಉಂಟಾದರೆ ಬ್ಯಾಂಕ್‌ಗಳು ತಕ್ಷಣವೇ ಎಚ್ಚೆತ್ತುಕೊಳ್ಳುತ್ತವೆ. ನಿಮಗೆ ಇದರಿಂದ ಯಾವುದೇ ಸಮಸ್ಯೆ ಆಗುವುದಿಲ್ಲ. ಇದರೊಂದಿಗೆ ವಿಶ್ವಾಸಾರ್ಹ ಇಂಟರ್ನೆಟ್ ಭದ್ರತಾ ಕಾರ್ಯಕ್ರಮವನ್ನು ಸಹ ಬಳಸಿ.

Best Mobiles in India

English summary
A man had ordered a headphone worth Rs 19,000 in amazon. But toothpaste has been delivered to them.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+